Showing posts with label ಕವನ. Show all posts
Showing posts with label ಕವನ. Show all posts
ವಿನಯ್ ...
ಚಿತ್ರ ಕೃಪೆ:  Dreamstime.com


ಅಂದು ಹೋಂ ವರ್ಕ್ ಜಾಸ್ತಿ ಅನಿಸುತಿತ್ತು,
ಬರೆದು ಬರೆದು ಕೈ ನೋವುತ್ತಿತ್ತು,
ಮಿಸ್ ಮತ್ತೆ ಅಮ್ಮನ ಒದೆ ಹದವಾಗಿ ಬೀಳುತಿತ್ತು,
ಅದೆಲ್ಲ ತಪ್ಪಲು ಸ್ಕೂಲ್ ಮುಗಿಯಬೇಕಿತ್ತು..!!

ಆಡಲು ಸಮಯ ಕಮ್ಮಿ ಅನಿಸುತಿತ್ತು,
ಹೆಚ್ಚು ಆಡಲು ಓದು ಬಾ ಎಂದು ಅಪ್ಪನ ಬೈಗುಳ ಕೇಳುತಿತ್ತು..
ಊರೆಲ್ಲ ಸುತ್ತಲೂ ಮನಸು ಕೊಗುತಿತ್ತು,
ಅದೆಲ್ಲ ಸಿಕ್ಕಲು ಸ್ಕೂಲ್ ಮುಗಿಯಬೇಕಿತ್ತು..!!

ಇಂದು ಸ್ಕೂಲು ಮುಗಿದಿದೆ, ಓದಿ ಡಿಗ್ರಿಯೂ ಪಡೆದಾಗಿದೆ,
ಆದರೆ ಹಣದ ಹಿಂದೆ ಓಡುವ ಆಟದೆ,
ಬಾಲ್ಯವ ಕಳೆದುದೇ ಬೇಸರವೆನಿಸುತ್ತಿದೆ,
ಎಲ್ಲರು ಅವರ ಪಾಡು, ಎಲ್ಲರಿಗು ಅವರವರದೇ ಗೋಳು..!!
ಇದನ ನೋಡಿ ಮನಸ್ಸು ಈಗ ಹೇಳುತಿದೆ,
ದೊಡ್ಡವನಾದದ್ದೇ ದೊಡ್ಡ ಸಾಧನೆಯೇ?
ಅಥವಾ ಅಂದು ಹಕ್ಕಿಯಂತೆ ಇರಲು ಬಯಸಿದ್ದೆ ತಪ್ಪಾಯಿತೇ..?
ಅದಕೆ ಈಗ ಅನಿಸುತಿದೆ... ಸ್ಕೂಲ್ ಎಂದೂ ಮುಗಿಯ ಬಾರದಿತ್ತು...!!
ಎಂದೆಂದೂ ಮುಗಿಯ ಬಾರದಿತ್ತು...!!!
ವಿನಯ್ ...
ಕಣ್ಣಸನ್ನೆಯಿಂದ ನೀ ನನ್ನ ನೋಡಿದ ಕ್ಷಣ,
ಮಾತಿಲ್ಲದೆ ಎನ್ನ ಕರೆದೆ ಆ ದಿನ...
ನಗುವಿನ ಮುತ್ತಿನ ಮಳೆಯ ಸುರಿಸಿ ಸೆಳೆದೆ..
ನೆನಪಿದೆಯಾ...?

ಕೈಹಿಡಿದು ಒಟ್ಟಾಗಿ ನೆಡೆದು...
ಬಹುಕಾಲ ಪ್ರೇಮದ ಗುಂಗಲ್ಲೇ ಕಳೆದು..
ಅಣೆ-ಪ್ರಮಾಣವ ಮಾಡಿ ಒಂದಾದೆವು
ಅಂದು ನೀಲಿ ಆಗಸದ ಕೆಳಗೆ..
ನೆನಪಿದೆಯಾ..?

ಇರುವೆನು ನಿನ್ನೊಂದಿಗೆ ಎಂದೂ ಜೊತೆ,
ಇಡುವೆನು ಮುಳ್ಳಿನ ಹಾದಿಯಲ್ಲೂ ಹೆಜ್ಜೆ..
ನನ್ನ ಜೀವ ನೀನು ನಲ್ಲ ಎಂದು ಕೂಗಿ-ಕೂಗಿ ಹೇಳಿದೆಯಲ್ಲ..
ನೆನಪಿದೆಯಾ..?

ಕಾರಣವಲ್ಲದ ಕಾರಣಕ್ಕೆ ತೋರಿದೆ ಮುನಿಸು,
ನಿನಗಿಂತ ನನ್ನ ಕುಟುಂಬವೇ ಹೆಚ್ಚು..
ಇಂದೇ ಮರೆತು ಬಿಡು ನಮ್ಮ ಪ್ರೀತಿಯನ್ನು ಎಂದ್ಹೇಳಿ..
ಕಣ್ಣೀರ್ ಹಾಕಿಸಿ ನಡೆದುಬಿಟ್ಟೆಯೆಲ್ಲಾ..
ನೆನಪಿದೆಯಾ..?

ಕಳೆದ ಒಂದು ಸಂವತ್ಸರ, ನೀನಿಲ್ಲದ ಅ ಸಾವಿರ ಕ್ಷಣ..
ಇನ್ನು ಮರೆಯದ ನನ್ನ ಮನ.. ನೋವು ಪ್ರತಿ ದಿನ...
ಆದರೂ ಹೇಳುವುದಿಲ್ಲ ನಾ.. ನೀ ಏಕೆ ತೊರೆದೆ ಯೆನ್ನ..
ಏಕೆಂದರೆ ನಾ ತಿಳಿದೆ.. ಹೆಚ್ಚು ಬಯಸಿದ ವಸ್ತುವೇ ನೋಯಿಸುವುದು ನನ್ನ..

ನೆನಪಿದೆಯಾ..?
ವಿನಯ್ ...
(ಈ ಕವನವನ್ನು "ವೇದಾಂತಿ ಹೇಳಿದನು.." - ಮಾನಸ ಸರೋವರ ಚಿತ್ರದ ಹಾಡಿನ ಧಾಟಿಯಲ್ಲಿ ಓದಿಕೊಂಡು ಹೋಗಬೇಕಾಗಿ ವಿನಂತಿ...)



ನನ್ನ ಮಿತ್ರ ಹೇಳಿದನು... ಉ...

ಈ software ಬರಿ ಜಡಿ ಮಣ್ಣು... ಮಣ್ಣು...

ಇನ್ನೊಬ್ಬ ಹಾಡಿದನು...

increment ಎಲ್ಲಾ ಸುಳ್ಳು...ಟೊಳ್ಳು...

ನನ್ನ ಗೆಳತಿ ಕೂಗಿದಳು... ಈ ಕೆಲಸ ಮಾಯೆ-ಮಾಯೇ..

ಇನ್ನೊಬ್ಬಳು ಕನವರಿಸಿದಳು... ಓ... ಇದು ಅತಿಡೊಡ್ಡ ಮಾಯೆ...

ಕೆಲಸ ಕಳೆದ ದಿನವೇ... ಬರೆಲಿದೆಯೋ ಚಿಂತೆ..

installments ನ ಕಂತೆ...!!
ವಿನಯ್ ...
ಜೀವನವೆಂಬ ಝರಿಯಲ್ಲಿ

ಹರಿದ ನೀರೆಷ್ಟೋ...,

ಸವೆದ ಕಲ್ಲೆಷ್ಟೋ...,

ಸಾಗಿದ ದಾರಿಯೆಷ್ಟೋ...,

ನೋಡಿದ ತಿರುವೆಷ್ಟೋ...!

ತುಂಬಿ ಹರಿದಾಗ ಅನಂದಿಸಿದವರು ಹಲವರು,

ಸೊರಗಿದಾಗ ಕಂಡು ಹಲುಬಿದವರು ಇನ್ನುಳಿದವರು...

ನೀರ ಹರಿವು ನೋಡಲು ಸೊಗಸು,

ಅದರ ಝುಳು-ಝುಳು ನಾದವ ಕೇಳಲು

ಮನಕೆ ಹುರುಪು...

ನೀರು ನಿಂತರೆ ಇಲ್ಲದು ಸೊಬಗು..,

ಕಾಣಸಿಗದು ಜೀವ ವೈವಿಧ್ಯದ ಅನಂದವು...

ಹೋಲಿಸಿದರೆ ಇವರಿಬ್ಬರಿಗಿರುವ ಸೌಮ್ಯತೆ,

ಕಾಣುವುದು ಉದಾಹರಣೆ ನಮಗೆ ಹಲವೆಡೆ...

ತಾನು ಹರಿಯುತ, ಹಾದಿ ಸವಿಸುತಾ,

ಝರಿ ಸೇರುವುದು ನೀಲ ಕಡಲು...

ಹಾಗೆ ತಾನು ಸವೆಸುವ ಹಾದಿಯಲಿ,

ಮನುಜ ಕಾಣುವನು ಹಲವಾರು ತಿರುವು...

ಸ್ವಲ್ಪ ನಲಿವು, ಹೆಚ್ಚು ನೋವು...

ಕ್ಷಣ-ಕ್ಷಣಕ್ಕೂ ನಿರೀಕ್ಷಿಸದ ಕುತೂಹಲ-ನಿಗೂಢತನವು....!

ಜೀವನ ಎಷ್ಟು ದಿನ ಸಾಗಿ ಉರುಳಿತು ಎಂಬುದಕ್ಕೆ ಇರದು ಸಂಬಂಧ...,

ತಾನು ಇಲ್ಲಿ ಇದ್ದ ದಿನದೊಳು ಪರರು ತನ್ನಿಂದ ಪಡೆದ ಸುಖವ, ನೆನೆದ ಸಂತೋಷವಷ್ಟೆ ಸಾಕು..,

ಅವನ ಜೀವನವಾಗಲು ಪಾವನ...
ವಿನಯ್ ...
ಹನಿಯಲಿ ಮೂಡಿದೆ ಒಂದು ಕವಿತೆ,

ಚಿಗುರೆಲೆಯ ಮೇಲೆ....

ಮರಿ ಸೂರ್ಯನಂತೆ ಪಳ-ಪಳನೆ ಹೊಳೆಯುತಿದೆ,

ತಾವರೆ ಪುಷ್ಪದ ಮೇಲೆ....

ನಮ್ಮ ಮನೆಯ ಮಗುವಿನ ಮುಗ್ಧ ನಗುವಿನಲ್ಲಿ,

ಸಣ್ಣಗೆ ಅಡಗಿ ಕುಳಿತಿದೆ....

ಅಣ್ಣನ ತುಂಬು ಪ್ರೀತಿಯಲ್ಲಿ,

ನಿಶ್ಕಲ್ಮಶ ವಾಗಿ ಬೆಳಗುತಿದೆ....

ತಂದೆ-ತಾಯಿಯ ಆರೈಕೆಯಲ್ಲಿ,

ತೇಲಿ ಸಾಗುತಿದೆ....

ಗೆಳೆಯರ ಜೀವದ ಗೆಳೆತನದಲ್ಲಿ,

ಬಂಧವಾಗಿ ಕೂಡಿದೆ....

ನಲ್ಲೆಯ ಸವಿ ಪಿಸುಮಾತಿನಲ್ಲಿ,

ಹೃದಯದ ವೀಣೆ ಮೀಟುತಿದೆ....

ಅಂತೂ ಈ ಎಲ್ಲಾ ವಿಶ್ವವೇ,

ಒಂದು ಸುಂದರ ಕವಿತೆಯಂತೆ ಅನಿಸುತಿದೆ....
ವಿನಯ್ ...
ಬರೆಯದೆ ಮೂಡಿದ ಕವಿತೆಯೊಂದು

ಮನದಲ್ಲಿ ಮನೆ ಮಾಡಿ ಕೂತಿದೆ....

ಭಾವನೆಗಳ ತಂತಿ ಮೇಟುತ

ಅಕ್ಷರವಾಗಿ ಹೊರ ಬರಲು ಕಾದಿದೆ....

ಸ್ಪೂರ್ತಿಯ ಸೆಲೆಯೊಂದು ಎದೆಯಾಳದಲ್ಲಿ ಮೊಳೆತು

ಕವನದ ಸಾಲಾಗಿ ಹುಟ್ಟಲು ಹೊರಟಿದೆ....

ನನಗೇನು ತಿಳಿಯದು ನನ ಗೆಳೆಯ.... ನಿನ್ನ ಮಧುರ ಹೊಗುಟ್ಟುವಿಕೆಗೆ ಈ ನನ್ನ ಹೃದಯ ಕಾದಿದೆ....
ವಿನಯ್ ...
ನನ್ನ ಪ್ರೇಯಸಿಗೆ..,

ನಿನ್ನ ಕಣ್ಣಿನಲಿ ಕಾಣುವುದು ಏನಗೆ,
ಆ ಸುಂದರ ಹೊಳಪಿನ ಕಾಂತಿ...
ಕಣ್ಣ್ ಮುಚ್ಚಿ ಕುಳಿತರೂ ಕೂಡ,
ಇದ್ದೇ ಇರುವುದು ನಿನ್ನ ಇರುವಿಕೆಯ ಅನುಭೂತಿ...
ಈ ಇಹಲೋಕದ ಅಷ್ಟೈಶ್ವರ್ಯವೂ ಬೇಡ,
ನಿನ್ನ ನೋಟವೊಂದೇ ಸಾಕು ಏನಗೆ...
ಸದಾ ಇರುವುದು ನನ್ನ ನಿಷ್ಕಲ್ಮಷ ಪ್ರೀತಿ,
ಕೊಂಚವು ಕಮ್ಮಿಯಾಗದೇ ನಿನ್ನೆಡೆಗೆ...

ನಿನ್ನ ದೈವಂಶ ಕಣ್ಣುಗಳ
ಆ ದಿವ್ಯವಾದ ಬೆಳಕು...
ಬೇಡುವುದು ನನ್ನ ಹ್ರದಯ,
ಸದ ತುಂಬಿರಲಿ ಎಂದೆಂದು...
ನೀ ಸ್ಪರ್ಶಿಸು ಎನ್ನ ಕೊನೆಬಾರಿಗೊಮ್ಮೆ,
ವಿನಯ್ ...
ದುಂಬಿಯ ತಳಮಳವು ಹೂವಿಗೇಕೆ ತಿಳಿಯದು,
ದುಂಬಿಯ ತಳಮಳವು ಹೂವಿಗೇಕೆ ತಿಳಿಯದು....?
ಹೂ ತಿಳಿಯದಿದ್ದರೆ ಏನಂತೆ, ಇದ್ದಾನಲ್ಲಾ ಋತುಗಳ ರಾಜ ವಸಂತ,
ನಾವ್ ಅವನಿಗೆ ಹೇಳಿ ಕಳಿಸೋಣ... ದುಂಬಿಯ ಮನದ ಆಸೆ,
-- ಹೇಳಲಿಕ್ಕೆ ಆ ಚಂದದ ಹೂವಿಗೆ....!

ಅರ್ಪಣೆಃ ನನ್ನ ಮಿತ್ರನಿಗೆ
ವಿನಯ್ ...
ಅಂದು ನೀ ಇದ್ದಾಗ ನನ್ ಎದುರಲ್ಲಿ,

ಜೀವನವಾಗಿತ್ತು ಸುಂದರ ಕನಸ್ಸು, ಉಲ್ಲಸದ ಸಾಗರ....

ನನಗೆ ಜೀವನವೆನಿಸುತಿತ್ತು ಧನ್ಯ....

ಅದರೆ ಇಂದು ಹೇಳದೆ ನೀ ಬಿಟ್ಟು ಹೋದ ಮೇಲೆ....

ಎಕೆ ಚೂರಾಗಿದೆ ಒಡೆದು ಮನಸ್ಸು, ಜೀವನವೆಲ್ಲಾ....???
ವಿನಯ್ ...
ಸೀತೆಗೂ ಶಾಕುಂತಲೆಗೂ ಸಿಕ್ಕಿತೇನು

ಪ್ರೀತಿಯಿಂದ??

ಪಡುವಂತಾಯಿತೇ ಇಲ್ಲದ ನೋವಿನ ಉರಿ...

ಪತಿ ರಾಮ - ದ್ಯುಷಂತರು ಏನು ಕಳೆದರು ಇದರಿಂದ?

ಕಳೆದುದು ಎಲ್ಲಾ ಈ ಎರಡು ಹೆಣ್ಣಿಗೆ...

ಪತಿಯ ಮಾತನ್ನು ಮನ್ನಿಸಿ ನೆಡೆದಳು

ಒಬ್ಬಳು,

ಪತಿಯು ಬಿಟ್ಟು ಹೋದ ಪ್ರೇಮದ ನೆನಪಲಿ ಕಾಲವ ಕಳೆದಳು

ಮತ್ತೊಬ್ಬಳು...

ಪತಿಯ ಏಲ್ಲಾ ಕಷ್ಟಗಳಿಗೆ ಹೆಗಲಾದಳು ಒಬ್ಬಳು,

ಪತಿಯ ಪ್ರೇಮಕ್ಕಾಗಿ ಹಾತೊರೆದಳು ಇನ್ನೊಬ್ಬಳು...

ಅಂತು ಕೊನೆ ಬಂದಾಗ, ಒಳಪಟ್ಟರು ಇಬ್ಬರು ಕಾಲದ ಸತ್ವಪರೀಕ್ಷೆಗೆ,

ಪರೀಕ್ಷೆಯೇನೋ ಗೆದ್ದು ಬಂದರು, ಅದರೂ ಏನಾಯಿತು ಇದರಿಂದ ಅವರ ಪತಿದೇವರಿಗೆ!!!

ಒಬ್ಬಳ ಪತಿ ತನ್ನ ಮರೆವನ್ನು ಬಿಟ್ಟು, ಬಂದು ಒಪ್ಪಿದ ಮರಳಿ ಇವಳನ್ನು...

ಅದರೆ... ಮತ್ತೊಬ್ಬಳ ಪತಿ, ಇನ್ನೊಮ್ಮೆ ಇವಳನ್ನು ಬಿಟ್ಟನು... ಹೋಗಲು ಕಾಡಿಗೆ,

ಮತ್ತೊಬ್ಬನ ಇಲ್ಲ-ಸಲ್ಲದ ಮಾತು ಕೇಳಿ....!

ಹೋಗಿ ಸೇರಿದಳೊಬ್ಬಳು ತನ್ನ ಪತಿಯ ತೋಳ ತಕ್ಕೆಯಲ್ಲಿ,

ಮತ್ತೊಬ್ಬಳು ಸೇರಿದಳು ಬೇಸರಹೊಂದಿ ತನ್ನ ತಾಯಿ ಭೂದೇವಿಯ ಒಡಲಿನಲ್ಲಿ...

ಹೀಗೆ ಕೊನೆಯಾಯಿತು ಇಬ್ಬರ ಕಥೆ,

ಒಬ್ಬಳಿಗೆ ದಕ್ಕಿತು ಪ್ರೇಮ...,

ಮತ್ತೊಬ್ಬಳಿಗೆ ದಕ್ಕಿ, ನಂತರ ಇಲ್ಲದೆ ದೊರವಾಯಿತು ಪ್ರೇಮ...!
ವಿನಯ್ ...
ಮನಸ್ಸೆಂಬ ಕೊಳದಲ್ಲಿ ಬಿದ್ದಿದೆ,

ಒಂದು ಸಣ್ಣ ಹನಿ...!

ಆ ಹನಿಯೆಂಬುದು ಸಂಶಯ, ಖುಷಿ, ಅಳು, ನಗು ಎಂಬ ಚಿಕ್ಕ ಹನಿ...!

ಹನಿ ಎಷ್ಟೇ ಗಾತ್ರವಿದ್ದರೂ ಸರಿ,

ಬಿದ್ದ ಕೊಳದಲಿ ಮೂಡದೆ ಬಿಡದು ಅಲೆಗಳ ಸುರಳಿ...

ಸುರಳಿ ಅದಷ್ಟು ದೊಡ್ಡದು,

ಕಲಕುವುದು ಕೊಳದ ನೀರು ಹೆಚ್ಚು-ಹೆಚ್ಚು!

ಹಾಗೇ ನಮ್ಮ ಮನದ ಕೊಳದಲಿ ಬಿದ್ದರೆ ದುಃಖದ/ಕಷ್ಟದ ಹನಿ...

ಆಗ ಏಳುವವವು ನೋವಿನ ಬ್ರುಹತ್ ಅಲೆಗಳು ಏತ್ತರದಿ ಏರಿ..ಏರಿ.!

ಇಲ್ಲದೆ ಕೊರಗುವುದು ಈ ಮನಸ್ಸು...ಸಲ್ಲದ ನೋವಿನ ದುಗದಿಯಲಿ.

ಆದರೂ...

ಎಂದಾದರೂ ಇರದಿರುವುದೇ ಈ ಬಾಳಿನಲ್ಲಿ ಸವಿ ಕ್ಷಣದ ಸಿಹಿ...

ಕೆಲವೇ ಹನಿ ಬಿದ್ದರೂ ಸಾಕು...

ಅದು ಮಾಡುವುದು ಮನಸ್ಸನ್ನ ತಿಳಿ-ತಿಳಿ....
ವಿನಯ್ ...
ಬರೆದೆ ನಾನು ಒಂದು ಕವಿತೆ,

ನನ್ನ ಹುಡುಗಿಯ ಹೆಸರಿಗೆ...!

ಹೆಸರೆನೆಂದು ತಲೆಗೆ ತಿಳಿಯದೆ,

ಬರೆದೆ ಅವಳ ಮನಸ್ಸಿಗೆ...

ಅವಳ ಮನಸ್ಸಿನ ಭಾವವಾ ಅರಿಯದೆ,

ಬರೆದೆ ಅವಳ ಕಣ್ಣಿಗೆ...

ಅವಳ ಕಣ್ಣನ ದೋಷವ ತಿಳಿದು,

ಬರೆದೆ ಅವಳ ರೂಪಕೆ...

ಅವಳ ರೂಪ ಕಪ್ಪೆಂದು ಅರಿತು,

ಬರೆದೆ ಅವಳ ನಗುವಿಗೆ...

ಅವಳ ನಗು ಬಹಳ ಜುಗ್ಗವೆಂದು ನೆನೆದು,

ಬರೆಯಲು ಹೊರಟೆ, ತಲೆಕೆರೆದು ಯೋಚಿಸುತ ಮತ್ತೊಂದಿಗೆ...!!!

**************

ಹೇಗೆ ಬರೆದು, ಒಡೆದು, ಇನ್ನೊಮ್ಮೆ ಬರೆದು ಹಾಕಿದ ಸಾಲುಗಳೇ ಆಯ್ತು ಹಲವಾರು...!

ನಂತರ ಪತ್ರದ ರೂಪವೇ ಚೆನ್ನಿಲ್ಲವೆಂದು ತಿಳಿದು,

ಹರಿದು ಹಾಕಿ, ಮಾಡಿದೆ ಅದನ.... ಕಸದ ಬುಟ್ಟಿಯ ಪಾಲು....!!!
ವಿನಯ್ ...
ಪಾತರಗತ್ತಿಯು ಹಾರುತಿದೆ,

ಹೂವಿಂದ ಹೂವಿನ ಮೇಲೆ.........

ಬೀಸುತ ರೆಕ್ಕೆಯ, ಕಾಣುತ ಪುಷ್ಪವ,

ಸವಿಯಲು ಮಕರಂದವ ಅದು ಹೊರಟಿದೆ....

ಹೂವು ಯಾವುದಾದರೇನು, ಅದಕೆ ಬೇಕು ಕೇವಲ ಮಕರಂದ,

ಹಾಗೇ ಹೂವಿಗೆ ಕೇವಲ ಸಾಕು ಪತರಗತ್ತಿ ತರುವ ಪರಾಗದ ಸವಿಮಿಲನದ ಅನುಬಂಧ....

ಅಂತು ಒಂದು ಪಾತರ, ಮತ್ತೊಂದು ಹೊವಿನ ಮಧ್ಯ ಇದೆ..,

ಕಾಣದ ಒಂದು ಮಧುರ ಮಿಲನ,

ತಾವಿಬ್ಬರು ಸ್ರುಷ್ಟಿಯಲ್ಲಿ ಬೇರೆ-ಬೇರೆಯಾದರು ಸಹ,

ಒಬ್ಬರ ಬಿಟ್ಟರೆ ಇನ್ನೊಬ್ಬರಿಗಿರದು ಜೀವನ....
ವಿನಯ್ ...
ಬೆಳೆದ ಮಗನೊಬ್ಬನು

ತನ್ನ ಅಮ್ಮನಿಗೆ ಪತ್ರ ಬರೆದು ಕೇಳಲು...:

ನಾ ಮಾಡಿದೆ ಆ ಕೆಲಸ,

ಅದಕಷ್ಟು ರುಪಾಯಿ...

ನಾ ಮಾಡಿದೆ ಈ ಕೆಲಸ,

ಅದಕಿಷ್ಟು ರುಪಾಯಿ...

ನಾ ತಂದೆ ಆ ಕಾಯಿ,

ಅದಕಷ್ಟು ರುಪಾಯಿ...

ನಾ ತಂದೆ ಈ ವಸ್ತು,

ಅದಕ್ಕಾಯಿತಿಷ್ಟು ರುಪಾಯಿ...

ಹೇಳು ನೀ ಕಳಿಸಿ ಕೊಡುವೆಯಾ ನನಗೆ ರುಪಾಯಿ...?

.............................

ಅದಕ್ಕೆ ಬರೆದಳು ಅಮ್ಮ ಉತ್ತರ....:

ನಿನ್ನ ಹೊತ್ತಾ ಆ ಒಂಬತ್ತು ತಿಂಗಳಿಗೆ ಕೊಡುವೆಯಾ ರುಪಾಯಿ...?

ನಿನ್ನ ಸೌಕ್ಯಕೋಸ್ಕರ ದೇವರ ಬೇಡಿದನಲ್ಲಾ,

ಕೊಡುವೆಯಾ ಅದಕೆ ರುಪಾಯಿ...?

ನಿನ್ನ ಏಲ್ಲಾ ಕಷ್ಟಗಳಿಗೆ ಸ್ಪಂದಿಸಿದೆನ್ನಲ್ಲಾ... ಕೊಡುವೆಯಾ

ಅದಕೆ ರುಪಾಯಿ...?

ಊಟ - ಬಟ್ಟೆ, ನಿನಗೊಂದು ಅಸ್ತಿತ್ವ ಕೊಟ್ಟನಲ್ಲಾ,

ಕೊಡುವೆಯಾ ಅದಕೆ ರುಪಾಯಿ...?

ಅದೆಲ್ಲ ಬಿಡು, ನನ್ನ ಅಷ್ಟು ಪ್ರೀತಿಗೆ ಸರಿಯಾಗಿ ಕಟ್ಟಲು ಸಾಧ್Yಅವೇ ನಿನಗೆ ರುಪಾಯಿ...!!!

..............................

ಓದಿ ಮುಗಿಸಿದ ಮಗನಿಗೆ ತಿಳಿಯಿತು ಒಂದು ನಿಜ ಉತ್ತರ...

ಹೋಗಿ ಕಣ್ಣೇರು ಹರಿಸುತಾ ಹೇಳಿದ ಅವನು ಈ ತರಾ...

"ನಿನ್ನ ತುಂಬು ಪ್ರೀತಿಯ ಕಾಣದ ಈ ಕುರುಡು ಕಣ್ಣನ ಕ್ಷಮಿಸು,

ನಾ ಮಾಡಿದ ತಪ್ಪನಾ.... "

ಬೇಸರ ಪಡದೆ ಕ್ಷಮಿಸು ನನ್ನ,

ಓ ನನ್ನ ಮುದ್ದಿನ ಅಮ್ಮ, ನಿನ್ನ ಪ್ರೀತಿ ಇರಲಿ...

ನನ್ನ ಮೇಲೆ ಸದಾ ನಿರಂತರ...