Showing posts with label ಚಿಂತನೆ. Show all posts
Showing posts with label ಚಿಂತನೆ. Show all posts
ವಿನಯ್ ...
ಎಂದಿನಂತೆ ಈ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು ಫಲಿತಾಂಶಗಳು ಹೊರಬಿದ್ದಿವೆ. ವಿದ್ಯಾರ್ಥಿಗಳ ಮುಂದಿನ ಜೀವನದ ಬಾಗಿಲು ಸಹ ತೆರೆದಿದೆ. ಶಿಕ್ಷಕರ ಮುಷ್ಕರ, ಹೆಚ್ಚಿನ ಆನುದಾನದ ಬೇಡಿಕೆ, ಹೋರಾಟಗಳ ನಡುವೆಯೂ ಉತ್ತರಪತ್ರಿಕೆಗಳ ತಿದ್ದುವಿಕೆ ಕಾರ್ಯ ಬೇಗನೆ ಮುಗಿದು ನಿಗದಿಗಿಂತೆ ಮೊದಲೇ ಫಲಿತಾಂಶಗಳು ಹೊರಬಿದ್ದಿವೆ. ಇನ್ನೂ ಪಾಸಾದ ವಿದ್ಯಾರ್ಥಿಗಳ ಸಂಭ್ರಮ ಹೇಳತೀರದು. ಉತ್ತಮ ಕಾಲೇಜ್ ಗಳಲ್ಲಿ ಸೀಟಿಗಾಗಿ ಪ್ರಯತ್ನ, ಅದಕ್ಕಾಗಿ ಕಾಲೇಜ್ ಪ್ರಾಸ್ಪೇಕ್ಟಸ್ ನ ತರುವುದು ಎಲ್ಲಾ ನೆಡೆದೇ ಇದೆ. ಇದೆಲ್ಲದರ ನಡುವೆ ಕಡಿಮೆ ಅಂಕ ತಗೆದ ವಿದ್ಯಾರ್ಥಿಗಳು ರೀವ್ಯಾಲುವೇಷನ್, ರೀಟೋಟಲಿಂಗೆ ಸಹ ಅರ್ಜಿ ಗುಜರಾಯಿಸಿ ಆಗಿದೆ. ಕಾಡುವ ಪ್ರಶ್ನೆ ಯೆಂದರೆ ಫೇಲಾದ ವಿದ್ಯಾರ್ಥಿಗಳು ಮಾಡಿಕೊಳ್ಳುತ್ತಿರುವ ಅತ್ಮಹತ್ಯ ಅಥವ ಸುಸೈಡ್ ಪ್ರವೃತ್ತಿ...

ಪಿ.ಯು / ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶಗಳು ಹೊರಬಂದ ಹಿಂದಿನ ದಿನದಿಂದಲೇ (ಇಂಟರ್ನೆಟ್ ಪ್ರಕಟಣೆ..) ಹೆಚ್ಚಿನ ವಿದ್ಯಾರ್ಥಿಗಳು ತಾವು "ಫೇಲಾದೆ"ವು ಎಂಬ ಒಂದೇ ಕಾರಣಕ್ಕೆ ಅತ್ಮಹತ್ಯೆಯ ಮೂಲಕ ಸಾವಿಗೆ ಶರಣಾಗಿದ್ದಾರೆ. "ಪರೀಕ್ಷೆಯಲ್ಲಿ ಫೇಲ್, ** ವಿದ್ಯಾರ್ಥಿಗಳ ಅತ್ಮಹತ್ಯೆ" ಎಂದು ಪತ್ರಿಕೆ/ಟಿ.ವಿ ಚಾನಲ್ ಗಳಲ್ಲಿ ಬರುವುದ ಕಂಡರೆ ಮನಕ್ಕೆ ದಿಗಿಲಾಗುತ್ತದೆ. ಕೆಲವು ವಿದ್ಯಾರ್ಥಿಗಳಂತೂ ಪರೀಕ್ಷೆ ಬರೆದ ದಿನವೇ "ಪೇಪರ್ ಸರಿಯಾಗಿ ಬರೆದಿಲ್ಲ" ಎಂಬ "ಕ್ಷುಲಕ" ಕಾರಣಕ್ಕೆ ಅತ್ಮಹತ್ಯೆ ಮಾಡಿಕೊಂಡ ಘಟನೆಗಳು/ಸುದ್ಧಿ ಪರೀಕ್ಷೆ ನೆಡೆದ ಸಮಯದಲ್ಲಿ ಬಂದಿದ್ದವು. ಕೆಲವರು "ಹಾಲ್ ಟಿಕೆಟ್" ದೊರೆಯದ ಕಾರಣಕ್ಕೂ ಸಾವಿಗೆ ಶರಣಾದವರು ಇದ್ದಾರೆ...

ಬಹುಶ: ಇಂದಿನ ಜಗತ್ತಿನ "ಕಾಂಪೀಟಿಷನ್" ಯುಗಕ್ಕೋ, ಪೋಷಕರ "ಅಸೆಗಳ" ಭಾರದ ಒತ್ತಡಕ್ಕೋ, ಅಥವ ತಮ್ಮನ್ನೇ "ಉಹೆಗೆ ನಿಲುಕದಷ್ಟು" ಎತ್ತರಕ್ಕೆ ತಲುಪಿಸಿಕೊಳ್ಳುವ ಅಸೆಗೋ ಏನೋ, ಬಹುತೇಕ ವಿದ್ಯಾರ್ಥಿಗಳು ಒಂಬತ್ತನೆ ಕ್ಲಾಸ್ ಪಾಸಾಗುತ್ತಿದಂತೆ "ಜಗದ ಭಾರ" ವನ್ನ ತಮ್ಮ ಮೈಮೇಲೆ ಹೊತ್ತಿಕೊಂಡಿರುತ್ತಾರೆ. "ಸಾಧಿಸಿಯೇ ತೀರಿಸು...", "ಅವನನ್ನ/ಅವಳನ್ನ ಮೀರಿಸು...", "ಫಾಸ್ಟೇ ಬಾ.." ಗಳ ಹೊರೆ ಯಾವ ಕಾಲದವರೆಗೂ ತಾನೇ ಹೊರಬಲ್ಲರು...!. ಕೊನೆಗೆ "ಫಲಿತಾಂಶ" ಎಂಬ "ಪಾನ್ಡೋರಾ" ಪೆಟ್ಟಿಗೆ ತೆರೆದಾಗ, ನಿರೀಕ್ಷೆಯ ಸೌಧ ಕಳಚಿಬಿದ್ದು, ಮನ ನೊಂದು ಅಗುವ ಆನಾಹುತಗಳ ಸರಮಾಲೆ - ಈ ಅತ್ಮಹತ್ಯೆಗಳ ಪ್ರಕರಣ..

ಇಂಟರೆಸ್ಟಿಂಗ್ ಅಂದರೆ ನಮ್ಮ ದಕ್ಷಿಣ ಭಾರತದ ರಾಜ್ಯಗಳು ಈ "ಅತ್ಮಹತ್ಯ ಪ್ರಕರಣ" ಗಳ ಸಾಲಿನಲ್ಲಿ "ಬಹಳ" ಮುಂದಿವೆ..!! www.rediff.com/news/2004/apr/15spec.htm ದಲ್ಲಿರುವ ಮಾಹಿತಿಯಂತೆ ಪ್ರತಿತಿಂಗಳು ೧೫ ಜನ ೧೫ ರಿಂದ ೨೫ ವರ್ಷದ ವಯೋಮಾನದವರು ಅತ್ಮಹತ್ಯೆ ಮಾಡಿಕೊಳ್ಳೂತ್ತಿದ್ದಾರೆ. ೨೦೦೨ ರ ಅಂಕಿಗಳಂತೆ ಕರ್ನಾಟಕವು ೧೦,೯೩೪ ಅತ್ಮಹತ್ಯ ಸಾವುಗಳನ್ನ ಕಂಡಿದೆ.. (ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ಮೇಲಿನ ಲಿಂಕಿನಲ್ಲಿ ಓದಬಹುದು...)

ಇನ್ನೊಂದು ತಾಣ (www.maithrikochi.org/india_suicide_statistics.htm ) ದಲ್ಲಿ ಸೂಚಿಸಿರುವಂತೆ ವಿಶ್ವಕ್ಕೆ ಶೇಕಡ ೧೦% ಅತ್ಮಹತ್ಯ ಸಾವುಗಳ ಕೊಡುಗೆ ನಮ್ಮ ಭಾರತ ದೇಶದಿಂದೇ ಬರುತ್ತಿದೆ. ಅದು ಇನ್ನೂ ಹೆಚ್ಚಾಗಿ ೧೦.೫ ಪ್ರತಿಶತ ತಲುಪಿ (ಪ್ರತಿ ಲಕ್ಷ ಜನಸಂಖ್ಯೆಗೆ..) ೨೦೦೬ ರ ವರ್ಷ ಮತ್ತು ೧೯೮೦ ರ ವರ್ಷಕ್ಕೆ ತುಲನೆ ಮಾಡಿದರೆ ೬೭% ಪ್ರತಿಶತ ಏರಿಕೆಯಾಗಿದೆ... ನಿಜಕ್ಕೂ ಭಯಪಡುವ ಅಂಶವೆಂದರೆ ಇದು ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗುತ್ತಿದೆ...!!

ಸಮಾಜದ ಒತ್ತಡ, ಪೋಷಕರ ಒತ್ತಡ, "ನೆರೆಯವರ" ಒತ್ತಡ... ಒಂದೇ-ಎರಡೇ... ಎಲ್ಲಾ "ಒತ್ತಡ" ಗಳ ನಡುವೆ ಇಂದಿನ ಯುಗದಲ್ಲಿ ಬಾಳುತ್ತಿರುವ ವಿದ್ಯಾರ್ಥಿ/ಯುವ ಸಮೂಹ ತಮ್ಮ ಅಸೆ, ಕೋರಿಕೆ ಗಳ ರೆಕ್ಕೆ ಕತ್ತರಿಸಿಕೊಂಡು, ಪರರ "ಕನಸುಗಳ" ನೊಗವ ಬೆನ್ನ ಮೇಲೆ ಹೊತ್ತು... ತಮ್ಮ ದಾರಿಯ ಬಿಟ್ಟು ಇತರರ "ಕನಸಿನ" ಕತ್ತಲ ದಾರಿಯಲ್ಲಿ ನೆಡೆದುಹೊಗುತ್ತಿದ್ದಾರೆ. ಬಹುಶ: ಅವರ ಮನ ಎಷ್ಟು ನೊಂದಿರುತ್ತವೋ ಏನೋ.., ಕೊನೆಗೆ ಸಾವಿನ ಹೆಗಲ ಮೇಲೆ ತಲೆಯಿಟ್ಟು ಮಲಗಿ ಸಂತೋಷ ಪಟ್ಟುಬಿಡುತ್ತಾರೆ...

ಜೀವನ ಕೇವಲ "ಒಂದು ಪರೀಕ್ಷೆ" ಗೆ ಮಾತ್ರ ಸ್ತೀಮಿತವಲ್ಲಾ, ಮಾರ್ಕ್ಸ್ ಕಡಿಮೆ ಬಂದರೆ ಮತ್ತೆ ಪ್ರಯತ್ನಿಸಲು "ಸಪ್ಪ್ಲೀಮೆಂಟರಿ" ಪರೀಕ್ಷೆಗಳು ಇದ್ದರೂ, ತಮ್ಮನ್ನೂ ಇನ್ನೂ ಉತ್ತಮ ಪಡಿಸಿಕೊಳ್ಳಲು ಮಾರ್ಗವಿದ್ದರೂ ಸಹ ಜೀವನಕ್ಕೆ "ಕೊನೆಹಾಡುವ" ಕಾರ್ಯಗಳು ಮಾತ್ರ ಎಂದಿನಂತೆ ಸುದ್ದಿಮೂಲಗಳಲ್ಲಿ ವಿರಾಜಿಸುತ್ತಲೇ ಇವೆ...

ಇದೆಲ್ಲದರ ನಡುವೆ ಮನವು "ಥ್ರೀ ಈಡಿಯಟ್ಸ್" ಚಿತ್ರದ ಹಾಡನ್ನು ನೆನೆದು ಕೊರಗುತ್ತದೆ:

ಸಾರಿ ಊಮ್ರ್ ಹಮ್,
ಮರ್ ಮರ್ ಕೆ ಜೀ ಲಿಯೆ..
ಎಕ್ ಪಲ್ ತೊ ಅಬ್ ಹಮೇ
ಜೀನೇ ದೋ ಜೀನೇ ದೋ..

Give me some Sunshine
give me some rain
Give me another chance
wana grow up once again

ವಿದ್ಯಾರ್ಥಿಗಳ/ಯುವ ಮನಸ್ಸಿನಲ್ಲಿ ಮೂಡಿಬರುವ ನೋವು, ದುಗುಡಗಳು ಶಮನವಾಗಿ, ಅವರಿಗೆ ಭವಿಷ್ಯದಲ್ಲಿ ಉತ್ತಮ ಫಲಗಳು ಸಿಕ್ಕಿ, ಅವರ ಎಲ್ಲಾ ಕನಸುಗಳು ಸಾಕರವಾಗುವ ದಿನಗಳು ಮುಂದೆ ಬಂದೇ ಬರುತ್ತವೆ ಎಂಬ ಆಶಯ, ಪೋಷಕರು ಸಹ ತಮ್ಮ "ಕನಸುಗಳ" ಒತ್ತಡವನ್ನು ತಮ್ಮ ಮಕ್ಕಳ ಮೇಲೆ ಹೇರದೆ ಅವರ ಕನಸಿಗೂ ಬೆಲೆ ಕೊಟ್ಟು ಮುಂದಿನ ಉತ್ತಮ-ಸ್ವಾಸ್ಥ ಜನಾಂಗಕ್ಕೆ ಮಾದರಿಯಾಗುವರು ಎಂಬ ಸಣ್ಣ ಬಯಕೆಯೊಂದಿಗೆ ಈ ಲೇಖನ..
ವಿನಯ್ ...
ಅವರಿಬ್ಬರು ಒಂದು ಪುಣ್ಯಭೂಮಿಯಲ್ಲಿ ಹುಟ್ಟಿದ ಸಹೋದರರು....

ಅವರ ಭಾವನೆ, ಗುಣಗಳು... ಎಲ್ಲವು ಒಂದೇ ಆಗಿದ್ದವು....

ಬಿಡಿಸಲಾರದ ಪ್ರೀತಿ ಅವರದು...

ಆದರೆ,

ಅವರಿಬ್ಬರಲ್ಲಿ ತಮ್ಮನಿಗೆ ಸಲ್ಪ ಸಿಡುಕುಬುದ್ಧಿ..

ಇಲ್ಲ-ಸಲ್ಲದವರ ಮಾತನ್ನು ಹೆಚ್ಚು ನಂಬತೊಡಗಿದ...

ನಂತರ ಜೀವಕ್ಕೆ ಜೀವವಾದ ತನ್ನ ಸೋದರನನ್ನು ಬಿಟ್ಟು ಹೊರಟ..

ಅವನ ಪಾಲಿಗೆ ಕಂಟಕನಾಗುತ್ತಾ ಅವನ ಮನೆಗೆ ಕನ್ನ ಕೊರಯಲು ದೂರಾಲೋಚಿಸಿದ...

ಸತತ ಸೋಲುಂಡರೂ ಮತ್ತೆ-ಮತ್ತೆ ಪ್ರಯತ್ನ ಪಟ್ಟ...


.........


ಸಿನಿಮದ ಕಥೆಯಂತಿರುವ ಈ ಮೇಲಿನ ಸಾಲುಗಳು ಇಂದು ನಮ್ಮ ದೇಶವಾದ ಭಾರತ ಮತ್ತು ನಮ್ಮಿಂದಲೇ ಹುಟ್ಟಿಬಂದ ನೆರೆ ರಾಷ್ಟ್ರವಾದ ಪಾಕಿಸ್ಥಾನದ ನಡುವೆ ನೆಡೆಯುತ್ತಿರುವ ನೈಜ ಸ್ಥಿತಿಯ ದೃಶ್ಯ... ಸಿನಿಮಾ ಕೇವಲ ಎರಡುವರೆ ಗಂಟೆಗಳ ಅವಧಿಗೆ ನೆಡೆದರೆ ಈ ಎರಡು ದೇಶಗಳ ನಡುವೆ ನೆಡೆಯುತ್ತಿರುವ ಕಥಾಸಾರಾಂಶ ೬೩ ವರ್ಷಗಳಾದರೂ ನಿಲ್ಲುವ ಸೂಚನೆ ಇಲ್ಲ...! ಇಂಡಿಯನ್ ಇಂಡಿಪೆಂಡೆಂಸ್ ಆಕ್ಟ್ ೧೯೪೭ ರ ಮುಖಂತರ ಅಧಿಕೃತವಾಗಿ ವಿಭಾಜನೆಗೊಂಡ ಭಾರತ-ಪಾಕ್ ನಂತರ ಸರಿಸುಮಾರು ೫೦೦,೦೦೦ ರಿಂದ ೧,೦೦೦,೦೦೦ ಸಾವುಗಳ ನಡುವೆ ಇಲ್ಲಿನ ಮತ್ತು ಅಲ್ಲಿನ ಜನರು ತಮ್ಮ ಮೂಲನೆಲೆ ಕಳೆದುಕೊಂಡು ಬೇರೆಡೆ ಬಂದು ಇರುವಂತಾಯಿತು.

ದೇಶ ವಿಭಾಜನೆಯಾದರೂ ಇನ್ನೂ ಕಾಶ್ಮೀರ ಹಾಗೇ ಉಳಿದಿತ್ತು. ಅಲ್ಲಿ ಅನೇಕ ಮುಸ್ಲಿಮ್ ಬಾಂಧವರು ಮತ್ತು ಹಿಂದು ಬಾಂಧವರು ಸಮರಸದಿಂದ ಬಾಳ್ವೆ ಮಾಡುತ್ತಿದ್ದರು. ಪಂಜಾಬಿನ ಬಹುತೇಕ ಭಾಗವನ್ನು ಭಾರತ ವಿಭಾಜನೆಯಲ್ಲಿ ಕಳೆದುಕೊಂದರೂ ಕಾಶ್ಮೀರದ ಮೇಲಿಟ್ಟಿದ್ದ ಕಣ್ಣನ್ನು ಪಾಕ್ ಇನ್ನೂ ತಗೆದಿರಲಿಲ್ಲ... ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಕಾಶ್ಮೀರದ ರಾಜಸಂಸ್ಥಾನದವರು ಭಾರತದೊಡನೆ ಸೇರಲು ಇಶ್ಚಿಸಿದಾಗ ಅರಂಭವಾದ ಕಾಶ್ಮೀರ ಕದನ ಅಂದಿನಿಂದ ಇನ್ನೂ ಹಾಗೆ ಎಡಬಿಡದೆ ಮುಂದುವರಿದಿದೆ...

೮೦ ರ ನಂತರದ ದಶಕದವರೆಗೂ ಬೂದಿ ಮುಚ್ಚಿದ ಕೆಂಡಂತಿದ್ದ ಎರಡು ದೇಶಗಳ ನಡುವಿನ ವಾತಾವರಣ ೮೫ ರ ಹತ್ತಿರ ಬರುತ್ತಿದ್ದಂತೆ ಕಾಶ್ಮೀರ ಕಣುವೆಯ ಸೀಮಾಲೋನ್ಘನೆ ಮುಖಂತರ ಇನ್ನಷ್ಟು ಬಿಗಡಾಯಿಸತೊಡಗಿತು. ನೆರೆಯ ರಾಷ್ಟ್ರದ ಮೇಲಿನ ಗೂಮಾನಿ ಆಗಾಗ ಕಾಡುತ್ತಿದ್ದರೂ ಅದು ಆಗಷ್ಟೆ ಅಫ್ಘಾನಿಸ್ಥಾನ್ ಯುದ್ಧ ಮುಗಿಸಿದ್ದ ಮುಜಾಹಿದ್ದೀನ್ ಯೋಧರ ಕಾಶ್ಮೀರ ಗಡಿಯೊಳಗಿನ ನುಸುಳುವಿಕೆಯೊಂದಿಗೆ ತಾರಕವೇರತೊಡಗಿತು. ಇದರೊಂದಿಗೆ ಪ್ರತ್ಯೇಕತವಾದಿಗಳ ಸಮಾಗಮ ಅದಕ್ಕೆ ಇನ್ನಷ್ಟು ಬಲ ದೊರಕಿಸಿತು.

ಜಮ್ಮು ಕಾಶ್ಮೀರ ಅಸ್ಸೆಂಬ್ಲಿಯ ಅಧಿಕೃತ ಮಾಹಿತಿ ಪ್ರಕಾರ ಇವರೆಗೂ (ಜುಲೈ ೨೦೦೯ ರ ತನಕ...) ಸರಿಸುಮಾರು ೩,೪೦೦ ಕಾಣೆಯಾಗಿರುವ ಪ್ರಕರಣ ಮತ್ತು ೪೭,೦೦೦ ಜನರ ಸಾವು ಸಂಭವಿಸಿವೆ ಎಂದು ಹೇಳಿದೆ. (ಹೆಚ್ಚಿನ ಮಾಹಿತಿ: http://en.wikipedia.org/wiki/Jammu_and_Kashmir ರಲ್ಲಿ ಇದೆ...). ಭೂಲೋಕದ ಸ್ವರ್ಗದಂತಿರುವ ಕಾಶ್ಮೀರವು ಹೆಚ್ಚು-ಕಮ್ಮಿ ಆ ಕಾಲದಿಂದ ತನ್ನ ನೆಮ್ಮದಿ ಕಳೆದುಕೊಳ್ಳತೊಡಗಿತು. ಹಲವಾರು ಸಾವು-ನೋವುಗಳು ಈ ಕಣವೆಯ ಮುಖ್ಯಭಾಗವಾಗತೊಡಗಿದವು.

ನಮ್ಮ ಜನ ಹಾಗೂ ಪಾಕ್ ನ ಸಹೃದಯ ಬಂಧುಗಳು ಇವೆಲ್ಲಾ ಬಯಸದಿದ್ದರೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಜಾಹಿದ್ದೀನ್ ಮತ್ತು ಪ್ರತ್ಯೇಕತವಾದಿಗಳ ಹೂಡಿರುವ ತಂತ್ರ ಇವರಿಬ್ಬರ ನಡುವಿನಲ್ಲಿ ಬಹುದೊಡ್ಡ ಕಂದಕ ಸೃಷ್ಠಿಸಿದೆ. ಎರಡು ಗಡಿಗಳ ನಡುವೆ ನೆಡೆಯುತ್ತಿದ್ದ ವ್ಯಾಪಾರ ವಹಿವಾಟಿಗೆ ಇದು ಭಾರಿ ದಕ್ಕೆ ತಂದಿದ್ದರೂ ಇನ್ನೂ ಸಂಸ್ಕೃತಿಕ ಮತ್ತು ಕ್ರೀಡೆಯ ದಿಕ್ಕಿನಲ್ಲಿ ನೋಡಿದರೆ ಭಾರಿ ಬದಲಾವಣೆಯೇನೂ ಆಗಿಲ್ಲ. ವೀಸಾ ತೊಂದರೆ, ಪರಸ್ಪರ ವಿಚಾರವಿನಿಮಯಗಳಲ್ಲಿನ ತೊಂದರೆ, ಸಮರ್ಪಕ ಮಾಹಿತಿ ವಿನಿಮಯ ಇಲ್ಲದಿರುವುದು ಈ ಎರಡು ದೇಶದಲ್ಲಿರುವ ಪ್ರಜೆಗಳಿಗೆ ವಿನ:ಕಾರಣ ತೊಂದರೆ ಅನುಭವಿಸುವಂತೆ ಮಾಡುತ್ತಿವೆ. ಕ್ರೀಡಾ ಕಾರ್ಯಕ್ರಮಗಳು ರದ್ದಾಗುವುದು, ಸಂಸ್ಕೃತಿಕ ಕಾರ್ಯಕ್ರಮ ನೆಡೆಸುವುದಕ್ಕೆ ಪರವಾನಿಗೆ ಸಿಗದಿರುವುದು ಎಲ್ಲಾ ಇದರ ಕಾರಣವೆನ್ನಬಹುದು...

ನಾವು ಎರಡು ದೇಶಗಳ ಪ್ರಜೆಗಳ ವಿಷಯ ಬಿಟ್ಟು ಯೋಚಿಸತೊಡಗಿದರೆ ನಮಗೆ ಕಾಡುವ ಮತ್ತೊಂದು ವಿಚಾರ: ಭಯೋತ್ಪಾದನೆ. ದೇಶವಿಭಾಜನೆಯಾದ ನಂತರ ೧೯೪೭-೪೮, ೧೯೬೫ ಮತ್ತು ೧೯೭೧ ರಲ್ಲಿ ಕದನವೆರ್ಪಟ್ಟರೂ, ಜನರ ಮನಸ್ಸಿನಲ್ಲಿ ನಿರಂತರ ಭಯ ಮೂಡಿಸಲು ಭಯೋತ್ಪಾದನೆ ಎಂಬ "ಭೂತ" ಮತ್ತಷ್ಟು ಸಹಕರಿಸಿದೆ. ದೇಶದ ಅಂತರಿಕ ಭದ್ರತೆ, ವ್ಯಾಪಾರ-ಹಣಕಾಸು ಕಾರ್ಯಗಳಲ್ಲಿ ಏರು-ಪೇರು ಮಾಡಲು ಭಯೋತ್ಪಾದನ ಗುಂಪುಗಳು ಮತ್ತು ಅದರ "ಮಾಲೀಕರು" ಬಹಳಷ್ಟು ಶ್ರಮಿಸುತ್ತಲೇ ಇದ್ದಾರೆ. ಕಾಶ್ಮೀರದಿಂದ ಪ್ರಾರಂಭವಾದ ಈ "ಕಾರ್ಯ" ನಂತರ ವ್ಯವಸ್ಥಿತವಾಗಿ ಭಾರತ ದೇಶದೊಳಗೆಲ್ಲಾ ಹರಡುವಂತೆ ಮಾಡುವಲ್ಲಿ ಕೆಲಮಟ್ಟಿನ ಸಫಲತೆ ಈ ಭಯೋತ್ಪಾದನ ಸಂಘಟನೆಗಳು ಪಡೆದವು. ನಮ್ಮ ರಾಷ್ಟ್ರದ ಯುವಕರನ್ನೇ ಅಲ್ಲಿಗೆ ಕರೆದುಕೊಂಡು ಹೋಗಿ, ಯುದ್ಧ ತರಬೇತಿ ನೀಡಿ ಮತ್ತೆ ನಮ್ಮಲ್ಲಿಗೆ ಕಳುಹಿಸಿ, ನಮ್ಮ ಜನರನ್ನೇ ಸಾಯಿಸುವ "ಷಡ್ಯಂತ್ರ"...! ಎಂತಹ ದುರಾದೃಷ್ಟ ನೋಡಿ ನಮ್ಮ ತಾಯಿ ಭಾರತಮಾತೆಗೆ. ತನ್ನದೇ ಭಾಗವಾಗಿದ್ದ ನೆರೆರಾಷ್ಟ್ರದ "ಗುಂಪುಗಳು" ತನಗೆ ಬೆಂಕಿಯಿಡಲು ಬರುತ್ತಿರುವುದು ಭಾರತಕ್ಕೆ ಸಿಕ್ಕ ಶಾಪವೆನ್ನಬಹುದು.

ನಮ್ಮ ದೇಶದ ಸುರಕ್ಷತ ವ್ಯವಸ್ಥೆ ಎಷ್ಟೇ ಬಿಗಿಯಾಗಿದ್ದರೂ ಹಲವು "ಮೂಲ" ಗಳನ್ನು ಹೊಂದಿರುವ ಈ "ಗುಂಪುಗಳು" ಎಂತಹ ಚತುರತೆಯಿಂದ ಕಾರ್ಯನಿರ್ವಹಿಸುತ್ತಿದೆ ಅಂದರೆ ವರ್ಷದ ಹಿಂದೆ ನೆಡೆದ ಮುಂಬಯಿ ಉಗ್ರರ ಅಟ್ಟಹಾಸ ಮತ್ತು ಇತ್ತೀಚಿಗಿನ ಪುಣೆ ಬಾಂಬ್ ಸ್ಪೋಟಗಳೇ ಉದಾಹರಣೆ. ಮುಂಬಯಿ ಉಗ್ರರ ಅಟ್ಟಹಾಸವಂತೂ ಕೆಲವು ವರ್ಷಗಳ "ಪ್ಲಾನಿಂಗ್" ಯೊಂದಿಗೆ ಒಂದು ಬಹಳ ರಹಸ್ಯಮಯ ಕಾರ್ಯಚರಣೆಯೂ ಸಹ ಆಗಿತ್ತು. ನಮ್ಮಲ್ಲಿನ ಎನ್.ಎಸ್.ಜಿ ಕಾಮಾಂಡೋಗಳಿಗಿದ್ದ ಜಾಗದ ಮಾಹಿತಿಗಿಂತ ಹೆಚ್ಚು ಮಾಹಿತಿ ಅವರ ಬಳಿ ಅಂದು ಇತ್ತು. ಅದರ ಸಹಾಯದಿಂದ "ಕಂಟ್ರೋಲರ್ಸ್" ಹೇಗೆ ಕಾರ್ಯನಿರ್ವಹಿಸಿದೆಂದರೆ ಅವರು ಮಾಡಿದ "ಸಂಶೋಧನೆ" ಬಗ್ಗೆ ನೀವೇ ಒಮ್ಮೆ ಯೋಚಿಸಿ...!!!.


ದಿಗಿಲಾಗುತ್ತದೆಯಲ್ಲವೇ...?


ನಮ್ಮ ಭಾರತದ ಬಳಿ ಎಂತಹ ಶಕ್ತಿಯಿದ್ದರೂ "ಹೊರ ದೇಶ" ಗಳ "ಒತ್ತಡ" ದಿಂದ ಪ್ರತಿಕಾರ್ಯಚರಣೆ ಮಾಡದೆ ಸುಮ್ಮನಿರಬೇಕಾಗಿದೆ. ಇದರಿಂದ ನಮ್ಮ ಜನ ಇನ್ನಷ್ಟು ಸಾವು-ನೋವುಗಳನ್ನ ನೋಡಬೇಕಾಗಿದೆ.... ಬಾಂಧವ್ಯದ ಬಗ್ಗೆ ಅಲ್ಲದಿದ್ದರೂ ದೇಶ ರಕ್ಷಣೆಗೋಸ್ಕರವಾದರೂ ನಮ್ಮ ಭಾರತವು ಎಂದು ತಿರುಗಿ ಉತ್ತರಕೊಡುವುದೋ ಎಂಬುದು ಆ ಕಾಲವೇ ನಿರ್ಣಯಿಸಬೇಕು...! ಏಕೆಂದರೆ ದೂರದ ಅಫ್ಘಾನಿಸ್ಥಾನದಲ್ಲಿ ನೆಡೆದ ಸಂಚಿಗೆ ಅಮೆರಿಕ ಭೂಮಿ ಕದುಲಿದಾಗ ಅವರು "ತಾಲಿಬಾನಿ"ಗಳನ್ನು ಮೆಟ್ಟಿ ನಿಂತಂತೆ ನಾವು ನಮ್ಮ ನೆರೆಯ ದೇಶದಲ್ಲಿ ಬೀಡು ಬಿಟ್ಟಿರುವ ಆ "ಗುಂಪುಗಳ" ವಿರುದ್ಧ ಕಾರ್ಯಚರಣೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಅಲ್ಲಿಯವರೆಗೂ ನಾವೆಲ್ಲ ಇನ್ನೆಷ್ಟು ದಿನ ಭೀತಿಯ ನೆರಳಿನಲ್ಲಿ ಇರಬೇಕೋ ಆ ದೇವರೇ ಬಲ್ಲ...!!
ವಿನಯ್ ...
ನೆನ್ನೆ ( 21 ಅಕ್ಟೋಬರ್ 2009) ೨೪ ಗಂಟೆ ನಿರಂತರ ಪ್ರಸಾರವಾಗುವ ಸುದ್ಧಿ ಚಾನಲೊಂದನ್ನು ವೀಕ್ಷಿಸುತ್ತಿದ್ದಾಗ ಟಿ.ವಿ ಸುದ್ಧಿ ಸ್ಕ್ರೊಲ್ ನಲ್ಲಿ "ಭಗ್ನ ಪ್ರೇಮಿಗಳ ದಿನ.." ಅಂತ ಸುದ್ಧಿ ಸಾಲು ಕಾಣಿಸಿಕೊಳ್ಳಲು, ಕುತೂಹಲಗೊಂಡ ನಾನು ಚಾತಕ ಪಕ್ಷಿಯಂತೆ ಆ ಸುದ್ಧಿಗಾಗಿ ಕೆಲ ಹೊತ್ತು ಕಾದು ನೋಡಿ, ಕೊನೆಗೂ ನನ್ನ ಕಾಯುವಿಕೆ ಕೊನೆಗೊಂಡು ಆ ಟಿ.ವಿ ವಾಚಕ ಕೊಟ್ಟ (ಓದಿದ) ಮಾಹಿತಿಯೇ ಈ ಕೆಳಗಿನ ಕಿರು ಲೇಖನ...

....................

ಬನ್ನೇರುಘಟ್ಟದ ಪಾಲಿಟೆಕ್ನಿಕ್ ಕಾಲೇಜೊಂದರ ವಿದ್ಯಾರ್ಥಿಗಳು ಅಚರಿಸಿದ ಈ "ಭಗ್ನ ಪ್ರೇಮಿಗಳ" ದಿನ ಪ್ರಾರಂಭವಾದದ್ದೇ ಅವರದೇ ಒಬ್ಬ ಸ್ನೇಹಿತನಿಂದ ವಂತೆ. ಅವನು ಯಾರೋ ಒಬ್ಬಳನ್ನು ಪ್ರೀತಿಸಿ... ಅವಳು ಕೈಕೊಟ್ಟು... ಅವನಿಗೆ ಅದು ತಿಳಿದು... ಅವನ ಹೃದಯ ಭಗ್ನವಾಗಿ... ಈ ವಿಷಯವನ್ನು ಅವನ ಮಿತ್ರರಿಗೆ ಹೇಳಿದಾಗ ಅವರು ಈ ದಿನವೇ ನಿನಗೆ ಜೀವನದ ಹೊಸ ದಿನ ( ಅಂದರೆ 21 ಅಕ್ಟೋಬರ್...) ಎಂದು ಪಾರ್ಟಿ ಕೊಟ್ಟು ಪ್ರೇಮ ವೈಫಲ್ಯವನ್ನು ಆಚರಿಸಿದರಂತೆ. ಅಂದಿನಿಂದ ಎಲ್ಲಾ ವರ್ಷ ಅಕ್ಟೋಬರ್ 21 ರಂದು ಅವರಿಗೆ ( ಅಂದರೆ ಪ್ರೇಮ ಭಗ್ನಗೊಂಡವರಿಗೆ...! ) " ಭಗ್ನ ಪ್ರೇಮಿಗಳ ದಿನ "!!

ಆ ಸುದ್ಧಿಯಲ್ಲೇ ತೋರಿಸಿದಂತೆ ಅವರೊಂದು ಡೊಡ್ಡ ಕೇಕ್ ಕತ್ತರಿಸಿ, ಎಲ್ಲರಿಗೂ ಹಂಚಿ (ಕೊನೆಗೆ ಉಳಿದ ಚೂರುಗಳನ್ನು ಮುಖಕ್ಕೆ ಬಳಿದು...!. ಟಿ.ವಿ ಯಲ್ಲಿ ನೋಡಿದಂತೆ ಅವರದೇ ಒಂದು ಡೊಡ್ಡ ಸಂಘ ಇತ್ತು ಅನ್ನಿ! ) ನಂತರ ಒಬ್ಬೊಬ್ಬ ಯುವಕನು ಟಿ.ವಿ ಯ ಪ್ರತಿನಿಧಿಗೆ " ಓದುವ ಸಮಯದಲ್ಲಿ ಪ್ರೀತಿ ಮಾಡಬೇಡಿ, ಅದನ್ನು ನಂಬಿ ಹಾಳಾಗಬೇಡಿ..." "ಪ್ರೀತಿಯಿಂದ ನಿಮ್ಮ ಜೀವನದ ಅಮೂಲ್ಯ ಸಮಯ ವ್ಯರ್ಥಮಾಡಿಕೊಳ್ಳಬೇಡಿ.." ಅಂತ ತನ್ನದೇ ಧಾಟಿಯಲ್ಲಿ ಹೇಳುತ್ತಿದ್ದಾಗ ನಿಜಕ್ಕೂ ಸೋಜಿಗ ಅನಿಸಿದ್ದು ಅವರು ಇದನ್ನ ಮೊದಲೇ ಯೋಚಿಸಬಾರದಿತ್ತೇ ಎಂದು...?. ಅವರ ಮುಖದ ಮೇಲಿದ್ದ ಕುರುಚಲು ಗಡ್ಡ, ಪಟಾಕಿ ಹೊಡೆದು ಸಂಭ್ರಮಿಸಿದ ಪರಿ, ಪರಸ್ಪರ ಸಿಹಿ ಹಂಚುತ್ತಿದ್ದಾಗ ಇದ್ದ ಉತ್ಸಾಹ ಪ್ರೀತಿ ಮಾಡುವ ಮೊದಲು ಇದ್ದಿದ್ದರೆ ಬಹುಶ: ಈ ದಿನ ಅವರು ಅಚರಿಸುವ ಅಗತ್ಯವೇ ಬರುತ್ತಿರಲಿಲ್ಲವೇನೋ...!

ಸುಮ್ಮನೆ ಕನಸುಗಳನ್ನು ಹೊತ್ತು (!?!) ಪ್ರೀತಿಯೆಂಬ ಕಾಣದ ಮಾಯಾಜಿಂಕೆಯ ಹಿಂದೆ ಓಡುವ ನಮ್ಮ ಯುವಕರು ನಂತರ ಪ್ರೇಮ ವೈಫಲ್ಯದಲ್ಲಿ ಸಿಲುಕಿ ನೊಂದು, ಬೆಂದು, ಜೀವನವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಸಲ್ಪ ಯೋಚಿಸಿ ಹೆಜ್ಜೆ ಇಡುವುದು ಒಳಿತಲ್ಲವೇ...?
ವಿನಯ್ ...
ಐದನೆ ವರ್ಷಕ್ಕೆ ಅವನ ಕಿವಿ ಮಂದವಾಗತೊಡಗಿದವು...,

ಒಂಬತ್ತನೆ ವರ್ಷಕ್ಕೆ ಪೂರ್ತಿ ಕಿವುಡು....!

ಬಾಲಕನ ತಂದೆ-ತಾಯಿ ಇಬ್ಬರು ಅನಕ್ಷರಸ್ಥರು... ತಮ್ಮ ಮಗನಿಗೆ ಏನೂ ಮಾಡಲು ಆಗದ ಪರಿಸ್ಥಿತಿ.. ಬಾಲಕನ ಅತ್ಮಸ್ಥೈರ್ಯ ಮಾತ್ರ ಮಂಡಿಉರಲಿಲ್ಲ. ಐದು ಕಿ.ಮಿ. ದೂರದ ಶಾಲೆಯಲ್ಲಿ ಪ್ರಾಥಮಿಕ ವಿದ್ಯಭ್ಯಾಸ, ಅದೂ ಅತ್ಯುತ್ತಮ ಅಂಕಗಳೊಂದಿಗೆ ರಾಜ್ಯ ಮಂಡಳಿಯ ೭ನೇ ತರಗತಿ ಪರೀಕ್ಷೆಯಲ್ಲಿ ಐದನೇ ರಾಂಕ್. ಇನ್ನೂ ಶ್ರಮಪಟ್ಟು ಓದಿ ೧೨ನೇ ತರಗತಿಯಲ್ಲಿ ರಾಜ್ಯಕ್ಕೆ ೭ನೇ ರಾಂಕ್....

ಕಾಲೇಜಿನ ೨ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅರ್.ಪಿ.ಎಸ್.ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿ ಕ್ಲೆರ್ಕ್-ಕಮ್-ಟೈಪಿಸ್ಟ್ ಹುದ್ದೆ ಪಡೆದು ತನ್ನ ವಿದ್ಯಭ್ಯಾಸದ ಜೊತೆಗೆ ಕೆಲಸವನ್ನು ಮಾಡಿ ಫೊಲಿಟಿಕಲ್ ಸೈನ್ಸ್ ನಲ್ಲಿ ವಿಶ್ವವಿದ್ಯಾಲಕ್ಕೆ ಪ್ರಥಮ ಸ್ಥಾನ... ಮುಂದೆ ಎನ್.ಇ.ಟಿ ಪರೀಕ್ಷೆಯಲ್ಲೂ ತೇರ್ಗಡೆ....

ಪಿ.ಎಚ್.ಡಿ ಮಾಡುವ ಸಂದರ್ಭದಲ್ಲೂ ಎಮ್.ಫಿಲ್ ಮತ್ತು ಎಮ್.ಎ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕಾರ್ಯ... ಅರ್.ಎ.ಎಸ್ ನಲ್ಲಿ ಕಾರ್ಯನಿರ್ವಹಿಸುತ್ತಲೇ ಯು.ಪಿ.ಎಸ್.ಸಿ ಗೆ ಪ್ರಯತ್ನ...

೧೫ ವರ್ಷಗಳ ನಿರಂತರ ಹೋರಾಟ.., ಎಲ್ಲಾ ಅಡೆತಡೆಗಳನ್ನು ಮೀರಿ ಕೊನೆಗೂ ಸಂದಿತು ಜಯ....

ಮಣಿರಾಮ್...

ಮಣಿರಾಮ್ ಶರ್ಮ...

ಇದೇ ಗುರುವಾರ, ತಾ: ೮-೧೦-೨೦೦೯ ರಂದು ತಮ್ಮನ್ನು ರಾಷ್ಟ್ರ ಸೇವೆಗೆ ಸೇರಿಸಿಕೊಳ್ಳಲಾಗಿದೆ ಎಂಬ ವರ್ತಮಾನ ತಿಳಿದಾಗ ಅದು ಅವರೊಬ್ಬರಿಗೆ ಸಿಕ್ಕ ಜಯವಾಗಿರಲಿಲ್ಲ... ಅದು ಇಡೀ ಅಂಗವಿಕಲ ಕುಲಕ್ಕೆ ಸಂದ ಜಯ ಸಹ ಅಗಿತ್ತು... ತಮ್ಮಂತಹವರನ್ನು ಸರ್ಕಾರದ ಅತ್ಯುನ್ನತ ಸೇವೆಗಳಲ್ಲಿ ಸೇರುವ ಅವಕಾಶದಿಂದ ವಿನಾ: ಕಾರಣ ದೂರ ಇಟ್ಟಿದಕ್ಕೆ/ತಡೆದಕ್ಕೆ ಸಂದ ಜಯ...

ಪತ್ರಿಕೆಗಳಲ್ಲಿ ನಿರಂತರ ಸುದ್ಧಿಯಾಗುತ್ತಿದ್ದರೂ ಕಾಣದ ಕಾರಣಗಳಿಂದ ಅವರ ಹೆಸರು ಅಯ್ಕೆ ಪ್ರಕ್ರಿಯೆಯಲ್ಲಿ ಬರುತ್ತಿರಲಿಲ್ಲ. ಇದಕ್ಕೆ ಮೂಲ ಕಾರಣ... ಅವರ ಕಿವುಡುತನ...!

ಎಲ್ಲಾ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೂ ಇದೇ ವರ್ಷದ ಆಗಸ್ಟ್ ತಿಂಗಳ ಮಧ್ಯ ವಾರದಲ್ಲಿ ಕರೆ ಬಂದಿದ್ದರೆ, ಮಣಿರಾಮ್ ಶರ್ಮ ರವರಿಗೆ ಸೆಪ್ಟೆಂಬರನಲ್ಲಿ ಈ ಸಂತಸದ ಸುದ್ಧಿ ಬಂದಾಗ ಇನ್ನೂ ಸುಮಾರು ೧ ತಿಂಗಳ ವರೆಗೂ ನೀವು ಅಪ್ಪೊಇಂಟ್ಮೆನ್ಟ್ ಗೆ ಕಾಯಬೇಕು ಎಂಬ ಕಹಿ ಸತ್ಯ... ಅದರೂ ಮಣಿರಾಮ್ ಇದರಿಂದ ನಿರಾಶರಾಗಿಲ್ಲ.

೧೯೯೫ ರಲ್ಲೇ ಅವರ ಐ.ಎ.ಎಸ್ ಪಯಣ ಪ್ರಾರಂಭವಾದರೂ, ಸೀಟ್ ಅಲಾಟ್ಮೆಂಟ್ ಅಗದಿರಲು ಒಂದೇ ಕಾರಣ... ಅವರ ಅಂಗವಿಕಲತೆಃ ಕಿವುಡುತನ... ಭಾಗಶ: ಕಿವುಡುತನ ಇದ್ದವರಿಗೆ ಮಾತ್ರ ಅವಕಾಶ ಇತ್ತೇ ಹೊರತು ಇವರಂತೆ ಪೂರ್ಣ ಕಿವುಡುತನ ಇದ್ದವರಿಗೆ ಅಲ್ಲಿ ಪ್ರಮುಖ್ಯತೆ ಇರಲಿಲ್ಲ..

ಅಂತೂ ಸುಮಾರು ೭.೫ ಲಕ್ಷ ರೂ. ವೆಚ್ಚದ ಶಸ್ತ್ರಚಿಕಿತ್ಸೆಯ ಸಹಾಯದಿಂದ ಅವರ ಕಿವಿಗಳು ಭಾಗಶ: ಕೇಳತೊಡಗಿದಾಗ ಇದರ ಸಹಾಯದಿಂದಲೇ ಅವರು ಒರಲ್ ಪ್ರಶ್ನೆ-ಉತ್ತರಗಳ ಸಂದರ್ಶನ ಎದುರಿಸಿದರು.

ಕೊನೆಗೂ ಜಯ ದಕ್ಕಿಸಿಕೊಂಡಿರುವ ಮಣಿರಾಮ್ ಶರ್ಮರವರು ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಸ್ಫೂರ್ತಿಯ ಸೆಲೆಯಾಗುತ್ತಾರೆ. ಅವರ ನಿಶ್ಚಲವಾದ ಪ್ರಯತ್ನದ ಫಲವೇ ಇಂದು ಅವರ ಐ.ಎ.ಎಸ್ ನಲ್ಲಿ ಇಂತಹ ಮಹತ್ತರವಾದ ಸಾಧನೆ ಮಾಡಲು ಸಾಧ್ಯವಾಗಿದ್ದು. ಸಾಧನೆ ಎಲ್ಲರಿಂದಲೂ ಸಾಧ್ಯ ಎಂಬುದೇ ನಾವು ಶರ್ಮರವರಿಂದ ಕಲಿಯಬೇಕಾದ ಸಾರಂಶ... ದೈಹಿಕ ವಿಕಲತೆ ಇದ್ದರೂ ತಮ್ಮ ಅತ್ಮಬಲದಿಂದಲೇ ಮಹತ್ಕಾರ್ಯಗಳಲ್ಲಿ ವಿಜಯಿಸುವ ಬಲ ಮಣಿರಾಮ್ ಶರ್ಮರವರಿಗೆ ಇರಬೇಕಾದರೆ ನಾವೇಕೆ ಹಿಂದುಳಿಯಬೇಕು...?

ಅದಕ್ಕೆ ಹೇಳುವುದಲ್ಲವೇ - "ಕೈ ಕೆಸರಾದರೆ ಬಾಯಿ ಮೊಸರು" ಅಂತ...
ವಿನಯ್ ...
ಹೀಗೊಂದು ಸನ್ನಿವೇಶ....

ಗಣಿತದ ತರಗತಿ ಆಗಲೇ ಮುಗಿದಿತ್ತು. ಮುಂದಿನ ಪಿರಿಯಡ್ ಅಟೆಂಡ್ ಮಾಡಲು ಪಕ್ಕದಲ್ಲೇ ಇದ್ದ ಇನ್ನೊಂದು ಕ್ಲಾಸ್ ಗೆ ಹೋಗಲು ಇನ್ನೇನು ಎಳಬೇಕು... ಅಷ್ಟರಲ್ಲೇ ಮೂವರು ಹುಡುಗರ ಗುಂಪು ತರಗತಿಯ ಬಾಗಿಲಿನ ಎದುರು ಪ್ರತ್ಯಕ್ಷ...! ಅದರಲ್ಲಿ ಕಪ್ಪಗಿದ್ದವನು - " ಎಲ್ಲರೂ ಕುತ್ ಕೊಳ್ಳಿ.." ಎಂದು ಹೇಳಿದ. ನಂತರ 25 ನಿಮಿಷ ಹೆಸರು, ಓದಿದ ಶಾಲೆ ಎಲ್ಲದರ ಎನ್ಕ್ವಯಿರಿ....! ಕೊನೆಗೆ ಹೊರಗಿದ್ದ ಇನ್ನೊಬ್ಬನ ಸಿಗ್ನಲ್ "ಯೆ... ಆರ್.ಆರ್ ( ಒಬ್ಬ ಲೆಕ್ಚರರ್ ಹೆಸರು) ಬಂದ ಕಣೋ..". ಇದನು ಕೇಳಿದ ಕೂಡಲೇ ಒಟ್ಟಿಗೆ ಮೂವರು ಮಾಯ!!!

-- ಇದು ಯಾವುದೋ ಸಿನಿಮಾ ಸನ್ನಿವೇಶ ಅಲ್ಲ... ನಾನು ಪ್ರಥಮ ಪಿ.ಯು ತರಗತಿಗೆ ಸೇರಿ 2ನೆ ದಿನಕ್ಕೆ ನೆಡೆದ ಘಟನೆ ಇದು..! ಅಂದು ನಾವು ಒಬ್ಬ ಲೆಕ್ಚರರ್ ಅಗಮನದಿಂದ ಹೇಗೋ ಮುಂದಿನ "ಎನ್ಕ್ವೈರಿ" ಇಂದ ತಪ್ಪಿಸಿಕೊಂಡಿದ್ದವು.... ಅದು ಒಂದು ಸಣ್ಣ "ರಾಗಿಂಗ್" ದೊಡ್ಡದಾಗದೇ ಅಲ್ಲೇ ಅಂತ್ಯ ಕಂಡಿತ್ತು... ನಂತರ ಅವರು ಮತ್ತೆ ಎಂದೂ ಬರದಿದ್ದರೂ ನಮಗೆ ಅವರ ಭಯ ಸಲ್ಪ ದಿನದ ವರೆಗೆ ಇತ್ತು ಎನ್ನಿ.

ಹೀಗೆ ಇದೆಲ್ಲಾ ನೆನಪಿಗೆ ಬಂದದ್ದು ಸಲ್ಪ ದಿನದ ಹಿಂದೆ ನೆಡೆದ ಶಿಮ್ಲಾದ ಒಂದು ಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿಗಳ ಮೇಲೆ ನೆಡೆದ ಹೀನ ದೌರ್ಜನ್ಯದಿಂದ - ಇದು ಒಂದು ಉನ್ನತ ಮಟ್ಟದ "ರಾಗಿಂಗ್". ಎಲ್ಲಿಯವರೆಗೂ ಅಂದರೆ ಕೆಲವು ವಿದ್ಯಾರ್ಥಿಗಳ ಕಿವಿ ಟಮಟೆ ಹರಿದು ಹೋಗುವ ತನಕ!!!. ನಂತರದ ಬೆಳವಣಿಗೆಯಲ್ಲಿ ಅಷ್ಟು ಜನ ಶಾಲೆಯಿಂದ ಹೊರದಬ್ಬಿಸಿಕೊಂಡಿದ್ದರೂ ಸಹ ತಮಗಿರುವ "ಉನ್ನತ ಸಂಪರ್ಕ" ಗಳನ್ನು ಬಳಸಿ ಆ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಖ್ಯ ಪ್ರಾಧ್ಯಾಪಕರ ಮೇಲೆ ಒತ್ತಡ ತಂದು ತಮ್ಮ ಮಕ್ಕಳನ್ನು ಪುನ: ಸೇರಿಸಿಕೊಳ್ಳಲು ಮಾಡುತಿರುವ ಪ್ರಯತ್ನ... ( ಪುಣ್ಯಕ್ಕೆ ಆ ಮುಖ್ಯ ಪ್ರಾಧ್ಯಾಪಕರು ತಮ್ಮ ಸ್ಥಾನ ಹೋದರೂ ಚಿಂತೆ ಇಲ್ಲ ಅವರನ್ನು ಮತ್ತೆ ಶಾಲೆಗೆ ಸೇರಿಸಿಕೊಳ್ಳುವ ಮಾತೇ ಇಲ್ಲಾ ಎಂಬ ಅಶ್ವಾಸನೆ ಕೊಟ್ಟಿದ್ದಾರೆ... 1ನೇ ಮೇ ರ ಪತ್ರಿಕ ವಿವರ.. ) ಎಲ್ಲಾ ಈ "ರಾಗಿಂಗ್" ಪಿಡುಗಿಗೆ ಅ ವಿದ್ಯಾರ್ಥಿಗಳ ಕೊಡುಗೆ, ಅವರ ಪೋಷಕರ ನಿರಂತರ ಪ್ರೋತ್ಸಾಹ...! ಎಲ್ಲಾ ಈ "ರಾಗಿಂಗ್" ಪಿಡುಗನ್ನು ಇಷ್ಟು ಎತ್ತರಕ್ಕೆ ಬೆಳೆಯಲು ಮಾಡಿ ಅದೇ ಇಂದು ಹಲವು ಇತರ ವಿದ್ಯಾರ್ಥಿಗಳಿಗೆ ಕಂಟಕವಾಗಿ ಕಾಡುತಿದೆ. ಕೇವಲ ಹೊಸ ವಿದ್ಯಾರ್ಥಿಗಳ ಪರಿಚಯದ ಸಮಯದಲ್ಲಿ ಹಿರಿಯ ವಿದ್ಯಾರ್ಥಿಗಳ ನಡುವೆ ನೆಡೆಯುತ್ತಿದ್ದ ಮಾತುಕತೆ, ಕಾಲ ಕಳೆದಂತೆ ವಿಕೃತ ರೂಪ ತಾಳಿ ಇತರ ಜೀವಕ್ಕೆ ಮಾರಕವಾಗುವಂತ ಹಂತ ತಲುಪಿಬಿಟ್ಟಿದೆ. ಹಿರಿಯ ವಿದ್ಯಾರ್ಥಿಗಳು ತಮ್ಮ "ಶೋಕಿ" ಯ ತೆವಲಿಗೆ ತಮಗೆ ಕಿರಿಯರಾದ ಇತರ ವಿದ್ಯಾರ್ಥಿಗಳ ಗೋಳು ಹೊಯ್ದುಕೊಂಡು, ನಾನ ರೀತಿಯ ಕಾಟ ಕೊಟ್ಟು, ನಂತರ ಪ್ರಾಣ ತಗೆಯುವ ( ಇಲ್ಲವೆ ಪೀಡನೆಗೊಳಪಟ್ಟ ಅ ವಿದ್ಯಾರ್ಥಿ ಅತ್ಮಹತ್ಯ ಮಾಡಿಕೊಳ್ಳುವರೆಗೂ...) ಕೀಳು ಅಭಿರುಚಿಯಿಂದ ಯಾರಿಗೆ ಲಾಭ ಹೇಳಿ?

---ರಾಗಿಂಗ್ ಮಾಡಿದ ಆ ಹಿರಿಯ ವಿದ್ಯಾರ್ಥಿಗೋ?
--- ರಾಗಿಂಗ್ ಮಾಡಿಸಿಕೊಂಡು ನೊಂದ ಆ ಕಿರಿಯ ವಿದ್ಯಾರ್ಥಿಗೋ?
--- ಈ ಎಲ್ಲದಕ್ಕೂ ಸುಮನಿದ್ದು ಪ್ರೋತ್ಸಾಹಿಸಿದ ವಿದ್ಯಾಲಯಕ್ಕೋ??


ಉತ್ತರ ಖಂಡಿತವಾಗಿಯೂ ಎಲ್ಲೂ ಸಿಗುವುದಿಲ್ಲ. ಹಾಗೇ ನೊಂದ ವಿದ್ಯಾರ್ಥಿಗೆ ಎಷ್ಟೇ ಸಂತೈಸಿದರೂ ಮನಕ್ಕೆ ಆದ ನೋವು ಎಂದೂ ಮಾಯುವುದಿಲ್ಲ. ನಮ್ಮ ದೇಶದ ಉನ್ನತ ಕಾನೂನು ವ್ಯವಸ್ಥೆ ಎನಲ್ಲಾ ಕಾನೂನು ಸೌಕರ್ಯ ಕೊಟ್ಟರೂ ಸಹ ಅದರ ಮರೆಯಲ್ಲೇ ನಡೆಯುವ ಈ ಹೀನ ಕಾರ್ಯ, ಮಾಡಿದ ಮೇಲೆ ಕಾನೂನ ಪರಿಧಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ... ಹುಂ ಈ ಎಲ್ಲಾ ಬೆಳವಣಿಗೆ ನಮ್ಮ ವಿದ್ಯಾರ್ಥಿ ಸಮೂಹಕ್ಕೆ ಇಲ್ಲದ ತೊಂದರೆಯನ್ನ ಕೊಡುಗೆ ನೀಡುತ್ತಿದೆ. ಈ ಹಿಂದೆ ಎಷ್ಟೇ ಪ್ರಕರಣಗಳು ಬೆಳಕಿಗೆ ಬಂದಿದ್ದರೂ ಸಹ ಮತ್ತೊಂದು ದಿನ ಹಿಂದಿನದು ಸಲ್ಪ ಹಳೆಯದಾಯಿತೇನೋ ಎನ್ನುವಂತೆ ಹೊಸತರದ "ರಾಗಿಂಗ್" ವಿಧಾನ... ಹೆಚ್ಚುತ್ತಾ ಹೋಗುತ್ತವೇ ಹೊರತು ಇಳಿಯುವ ಸೂಚನೆಯೇ ಇಲ್ಲ!!!. ಹಾಗೇ ಈ ಪಿಡುಗು ಹಲವು ಮುಗ್ಧ ಮನಸ್ಸುಗಳ ಮೊರಟುವಿಕೆಯನ್ನ ತಡೆಯಲು ಸಾಧ್ಯವೂ ಇಲ್ಲ!

ನಾವೇನೋ ಹೇಳಬಹುದು - "ಕಾಲೇಜ್ನಿಂದ ಇಂತವರ್ನ್ನ ಹೊರಗೆ ಎಸೆಯಬೇಕು.... " "ಪೋಲೀಸ್ ಸ್ಟೇಶನ್ ನಲ್ಲಿ ಹಾಕಿ ಚೆನ್ನಾಗಿ ಒದಿಸಬೇಕು..." "ಜೈಲ್ನಲ್ಲಿ ಕೊಳೆಯೋಕೆ ಬಿಡ್ಬೇಕು...". ಅದರೆ ಇದೆಲ್ಲಾ ಎಷ್ಟು ದಿನ/ಎಷ್ಟು ಕಾಲ... ಪುನ: ಸಜೆ ಮುಗಿಸಿ ಹೊರ ಬಂದ ಈ ವಿದ್ಯಾರ್ಥಿಗಳು ಇನ್ನೆಷ್ಟು ಕಂಟಕರಾಗಬಹುದೋ ದೇವರೆ ಬಲ್ಲ!!! ಇತ್ತೀಚೆಗೆ ಕಾಣಬಂದಂತೆ "ರಾಗಿಂಗ್" ಪಿಡುಗು ಕೆಲ ಕಾಲೇಜ್ ನ ವಿದ್ಯಾರ್ಥಿಗಳಿಗೆ "ಸ್ವಯಂ ಪ್ರತಿಷ್ಟೆ" ಯ ವಿಚಾರವೇ ಆಗಿಹೋಗಿದೆಯೆನೋ. "ರಾಗಿಂಗ್" ಮಾಡದಿದ್ದರೆ ನಾವು ಕಾಲೇಜ್ ನಲ್ಲಿ ಇದುದ್ದಾದರೂ ಎತಕ್ಕೆಂದು ತಿಳಿಯುವ ಹುಂಬು ಧೈರ್ಯ/ಮಾನಸಿಕೆ ಕಾಯಿಲೆಗೆ ಯಾರು ಮದ್ದು ಕೊಡುವರು? ಹೆಚ್ಚೇನು ಕೇಳಿದರೆ - " ಅಯ್ಯೋ, ನಮಗೂ ಜೂನಿಯರ್ ಅಗಿರುವಾಗ ನಮ್ಮ್ ಸೀನಿಯರ್ಸ್ ಇದೇ ಮಾಡಿದರಲ್ಲಾ, ನಾವೇನು ಈಗ ಇಲ್ಲ್ವೆನೋ?" ಎಂಬ ಉತ್ತರ ಬರುತ್ತದೆ... ಅಂದರೆ ಅರ್ಥ... ಇನ್ನೂ ಹೆಚ್ಚಾಗಿ, ಇನ್ನೂ "ರಸವತ್ತಾಗಿ" ಪರ ವಿದ್ಯಾರ್ಥಿಯ ಹಿಂಸಿಸಿ ಅವರು ಪಡುವ ನೋವಿನಲ್ಲಿ ತಾವು ವಿಕೃತ ಅನಂದ ಪಡಬೇಕೆಂದು...! ಎಂತಹ ಹುಚ್ಚಲ್ಲವೇ ಇದು...

ನಮ್ಮ ಕಾನೂನಿನ ಬಗ್ಗೆ ಹೇಳುವುದಾದರೆ ನಮ್ಮ ರಾಷ್ಟ್ರದ ಸಂವಿಧಾನ ಪ್ರಪಂಚದ ಒಂದು ಬಲಿಷ್ಟ ಸಂವಿಧಾನಗಳಲ್ಲಿ ಒಂದು. ಆದರೂ ಇನ್ನಷ್ಟು ಮಾರ್ಪಾಡುಗಳನ್ನ ತರದೆ ಹಾಗೇ ಬಿಟ್ಟರೆ ಕೊನೆಗೆ ಬಲಿ ಹೆಚ್ಚಾಗುತೇ ಹೊರತು ಸಮಾಧಾನ ಸಿಗುವ ಲಕ್ಷಣಗಳು ಕಾಣುವಂತೆ ಇಲ್ಲ. ಅದರೂ ಒಂದು ಒಳ್ಳೆಯ ಅಶಾಭಾವನೆಯೊಂದಿಗೆ ನಾವು ಬಯಸುವುದು ಒಂದೇ-- " ರಾಗಿಂಗ್ ಪಿಡುಗು ಸಂಪೂರ್ಣ ನಿರ್ಮೂಲನೆ ಅಗಲಿ, ವಿದ್ಯಾರ್ಥಿ ಸಮುದಾಯಕ್ಕೆ ವಿಜಯ ಸಿಗಲಿ..."
ವಿನಯ್ ...
ಡಾ||ರಾಜಣ್ಣನವರ "ಪ್ರೇಮದ ಕಾಣಿಕೆ" ಚಿತ್ರದ ಒಂದು ಹಾಡು....

"ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ..."

ಅದೇ ಹಾಡಲ್ಲಿ ಬರುವ ಎರಡು ಸಾಲು:

"ಆಸೆಯೆಂಬ ಬಿಸಿಲ ಕುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ..."
"ಅವನ ನಿಯಮ ಮೀರಿ ಇಲ್ಲಿ ಏನು ಸಾಗದು, ನಾವು ನೆನೆಸಿದಂತೆ ಬಾಳ ಏನು ನಡೆಯದು..."


ಈ ಎರಡು ಸಾಲುಗಳ ಅರ್ಥ ತುಂಬ ಅರ್ಥಗರ್ಭಿತವಾಗಿದೆ ಅಲ್ಲವೆ.... ತುಂಬ ಅಸೆ ಪಟ್ಟ ವಸ್ತು, ವ್ಯಕ್ತಿ ಏಕೋ ತಿಳಿಯದೆ ಬಿಟ್ಟು ಹೋದಾಗ/ಕೈ ತಪ್ಪಿದಾಗನಮ್ಮ ಮನಸ್ಸು ಎಲ್ಲೊ ಕೊರಗಿ, "ಇದು ನನ್ನದಾಗಿರಲಿಲ್ಲ..." ಅನ್ನೋ ಮಾತು ನಮ್ಮ - ನಿಮ್ಮ ಜೀವನದಲ್ಲಿ ಎಂದಾದರೂ ಬಂದೇ ಇತ್ತು ಅಲ್ಲವೇ (ಬಂದಿಲ್ಲ ಅಂದರೆ ಒಳ್ಳೆದಾಯ್ತು ಬಿಡಿ.. ). ನಾವು ನಮ್ಮ ಜೀವನದ ವಿವಿಧ ಘಟ್ಟಗಳಲ್ಲಿ ವಿವಿಧ ಹಂತವ ದಾಟಿ ಮುಂದಿನಹಂತ ತಲುಪುತ್ತೇವೆ. ನಾವು ಈ ಮೇಲಿನ ಸಾಲುಗಳನ್ನು ನಮ್ಮ ಈ ಜೀವನದ ವಿವಿಧ ಹಂತಕ್ಕೆ ಸೇರಿಸುವ ಪುಟ್ಟ ಪ್ರಯತ್ನವೇ ಈ ಲೇಖನ...

ದೃಶ್ಯ 1 : ಶಾಲೆ....

ನಾವು ಶಾಲಾ ಹಂತದಲ್ಲಿರುವಾಗ ಇತರರನ್ನು ಕಂಡು ನಾವು ಅದನು ಪಡೆಯಬೇಕೆಂಬ ಕನಸು, ಉತ್ಕ್ರುಷ್ಟ ಬಯಕೆ ನನ್ನನ್ನು/ನಿಮ್ಮನ್ನು ಸದಾ ಕಾಡದೆ ಇರದೆ ಇರಲಿಲ್ಲವೆನೋ?. ಫ್ರಂಡ್ಸ್ ತಂದ ಬಾಕ್ಸ್, ಪೆನ್, ವಿಚಿತ್ರ ಅವತಾರದ ಪೆನ್ಸಿಲ್ ಎಲ್ಲಾ ನಮ್ಮ ಕಣ್ಣು ಕುಕ್ಕದೇ ಇರುತ್ತಿದ್ದವೇ? ಆದರೆ ನೀವೇ ಯೋಚಿಸಿ..., ಮನೆಯಲ್ಲಿ ತಗೆದುಕೊಡುವುದು ಬಿಡಿ, ಅದರ ಬಗ್ಗೆ ಹೇಳುವಾಗಲೇ ನಮ್ಮ ಪೋಷಕರು " ಇಲ್ಲಾ ಪುಟ್ಟ/ಪುಟ್ಟಿ... ಈಗ ಕಾಸಿಲ್ಲಾ..." ಅಥವಾ " ಪುಟ್ಟ/ಪುಟ್ಟಿ ಇದು ನಮ್ಮಂತಹವರು ತರುವ ವಸ್ತುವಲ್ಲಾ..." ಎಂಬ ಉತ್ತರ ಹಲವಾರು ಸಲ ನಾವು ಕೇಳಿಯೇ ತೀರುತ್ತೇವೆ... ಹಟ ಮಾಡಿದ್ದೆ ಆದರೆ ಕೊನೆಗೆ ಒದೆ ತಿಂದು ಕೊನೆಮಾಡಿಕೊಂಡಿರುತ್ತೇವೆ... ಹಾಗೇ ನಮ್ಮ ಜೀವನದ ಮೊದಲ ನಿರ್ಬಂಧ (ರೆಸ್ಟ್ರಿಕ್ಷನ್ - restriction) ನಮ್ಮ ಮೇಲೆ ನಮಗೆ ಗೊತ್ತಿಲ್ಲದೆ ಬೀಳಲು ಪ್ರಾರಂಭಿಸುತ್ತದೆ. ಕೆಲವರು ಹಟ ಹಿಡಿದು ಆ ವಸ್ತುವ ಪಡೆದು ಬಿಟ್ಟರೆ, ನಮ್ಮ ನಿಮ್ಮಂತಹವರು ಬರಿ ಅಸೆಯ ಜೊತೆಯಷ್ಟೇ ತೃಪ್ತಿ ಹೊಂದು ಸುಮ್ಮನಾಗಬೇಕಾಗುತ್ತದೆ!!! ಇದು ನಿಜ ಅಲ್ಲವೇ???

ದೃಶ್ಯ 2 : ಹೈ ಸ್ಕೂಲ್....

"ಹೈ ಸ್ಕೂಲ್"... ಈ ಹಂತ ನನಗೆ ಯಾಕೋ ವಿಚಿತ್ರವೇ ಅಂತ ಅನಿಸದೇ ಬಿಡುವುದಿಲ್ಲ ( ನಿಮ್ಮ ಈ ಹಂತ ಬೇರೆಯದೇ ರೀತಿ ಇದ್ದಿರಬಹುದು ಅನ್ನಿ...!). ಹುಡುಗಾಟದ ಹಂತ ಇನ್ನೂ ಪೂರ್ಣಗೊಳಿಸದ ಸ್ಥಿತಿ. ಅಲ್ಲಿ ಬರುವ/ಸಿಗುವ ಮಿತ್ರರು ಮತ್ತು ಇತರರ ಸ್ಥಿತಿಯೂ ಬೇರೆ... ಹೈ ಸ್ಕೂಲ್ ಹೆಚ್ಚು ಕಮ್ಮಿ "ಕಾಂಪಿಟಿಷನ್" ಗಳನ್ನು ಪ್ರಾರಂಭಿಸೋ ವಯಸ್ಸು. ಅವನು ಅದು ಸೇರಿದ/ ಇದು ಮಾಡಿದ/ ಇದು ತಗೊಂಡ...! ಅವೇ ಜಾಸ್ತಿ... ಇಲ್ಲೂ ನಮ್ಮ ಹಾಡಿನ ಸಾಲುಗಳು ನಮ್ಮನ್ನು ಬಿಡದೆ ಕೆಲಸ ಮಾಡಿ ತೋರಿಸುತ್ತವೆ... ಒಬ್ಬನು ಕರಾಟೆ ಕ್ಲಾಸ್ ಸೇರಿದ ಎಂದೋ/ ಡ್ರಾಯಿಂಗ್ ಕ್ಲಾಸ್ ಸೇರಿದ ಎಂದೋ ನಾವು ಬಯಸಿ ನಮ್ಮ ಪೋಷಕರ ಬಳಿ ಹೋದಾಗ - "ಮುಂದಿನ ಸಲ ನೋಡೋಣ..." ಇಲ್ಲಾ "ಅದಕ್ಕೆ ಫಿಸ್ ಜಾಸ್ತಿ ಕಾಣೋ, ಈಗ ಸೇರ್ಸೋಕೆ ಅಗಲ್ಲಾ..." ಎಂಬ ಮಾತೇ ನೀವು ಅದರ ಬಗ್ಗೆ ಯೋಚಿಸುವುದನ್ನ ಮರೆಯಲು ಮಾಡಿಬಿಡುತ್ತದೆ. ಹುಂ..., ಮರಳಿ ಮತ್ತೆ ಅದೇ ಸ್ಥಿತಿ - "ಕಾಸಿದ್ದಾಗ... " ಇಲ್ಲಾ " ಕಾಸು ಅಡ್ಜಸ್ಟ್ ಮಾಡಿ ನೆಕ್ಷ್ಟ್ ಕ್ಲಾಸ್ ಶುರುವಾಗೋ ಟಾಯಿಮ್ಗೆ ಸೇರೋಣ ಬಿಡು...!!"

ದೃಶ್ಯ 3 : ಕಾಲೇಜ್....

ಇದು ನಮ್ಮ ಜೀವನದ ಇನ್ನಷ್ಟು ವಿಚಿತ್ರ ಹಂತದ ಭಾಗ ಎನ್ನಬಹುದು. ಅದೂ "ಲವ್" ಯಂಬ ಇನ್ನೊಂದು ವಿಚಿತ್ರ ಕಾಯಿಲೆ ಅಂಟಿಕೊಂಡರೆ ನಾವು ಯಾವ ದಿಕ್ಕಿಗೆ ಹೋಗಿ ಸೇರುತ್ತೇವೆ ಎಂಬ ಸಣ್ಣ ಸುಳಿವು ಕೊಡದ ಸಮಯ. ಇಲ್ಲಿ ಫ್ರಂಡ್ಸ್.... ಅದು ಅದಷ್ಟು ಹೆಚ್ಚು ಫ್ರಂಡ್ಸ್/ಫ್ರಂಡ್ಸ್ ಸರ್ಕಲ್ ಪಡೆಯಬೇಕೆಂಬ ಹಂಬಲವೇ ನಮ್ಮನ್ನು ಇನ್ನೂ "ಅಟ್ಟೆರ್ ಕಾಂಪಿಟಿಟಿವ್" ಸ್ಟೇಟ್ ಗೆ ತಳ್ಳಿಸಿಕೊಳ್ಳೂವ ಸ್ಥಿತಿ ಮಾಡಿಕೊಳ್ಳೂತ್ತೇವೆ. ನಾವು ಆ ಹಂತದಲ್ಲಿ ಯಾವ ಸ್ಥಿತಿ ತಲಪುತ್ತೇವೆ ಅಂದರೆ ಬೇಡ-ಬೇಡವೆಂದರೂ ಮಾಡೇ ತೀರಬೇಕೆಂಬ ಹುಚ್ಚು ಹಂಬಲ. ಆಗ ಮೇಲಿನ ಸಾಲು " ನಾವು ನೆನೆಸಿದಂತೆ..." ತಿಳಿಸದೆ ಕೆಲಸವನ್ನು ಪ್ರಾರಂಭಿಸಿರುತ್ತದೆ. ಇತರರು ನಮ್ಮ ಎದುರಿಗೆ "ಫ್ರೆಂಡ್ಸ್" ಆಗಿ ವರ್ತಿಸಿದರೂ, ಹಿಂದೆ ಇಂದ ಪರಮ ಶತ್ರುವಿಗಿಂತ ಕೆಟ್ಟದಾಗಿ ವರ್ತಿಸಿ ನೋವು ಉಂಟುಮಾಡುವುದರಲ್ಲೋ ಅಥವಾ "ಲವ್" ಮಾಡಿದ್ದರೆ ನೀವು ಇಷ್ಟಪಟ್ಟ ( ಅದು ಕೇವಲ ಮನಸ್ಸಿನಲ್ಲಿ ಮಾತ್ರ ...!) ಇನ್ನೊಬ್ಬನ ಹಿಂದೆ ಸುತ್ತಿ ನಿಮ್ಮ ಮನಸ್ಸನ್ನು ಚುcಚಿ ನೋವಿಸುವ ಹಂತದಲ್ಲೋ ಕೊನೆಗೆ " ಐ ಲವ್ ಊ..." ಎಂದು ಕೊನೆಗೆ ಕಾಣದೆ ಮಾಯವಾಗುವ ಮಾಯಮ್ರಗದಂತೆ ಹುಡುಗ/ಹುಡುಗಿ ನಿಮ್ಮ ಈ ಹಂತದಲ್ಲಿ ಕಾಣಿಸದೇ ಇರರು... ಆಗ ನಿಮಗೆ ಉಳಿದಿರುವುದು ಒಂದೇ ಒಪ್ಷನ್ - "ಹೋಗಲಿ ಬಿಡು... ನನ್ನ ನಸೀಬ್ ಚೆನ್ನಾಗಿ ಇರಲಿಲ್ಲ...!!!" ಅಥವಾ " ನನ್ನ ಅದೃಷ್ಟ ಚೆನ್ನಾಗಿರಲಿಲ್ಲ.."

ದೃಶ್ಯ 4 : ಕೆಲಸ (ಪ್ರೊಫೆಷನ್)....

ಇಲ್ಲಿ ಕೆಲವರು ಗ್ರಾಡ್ಜ್ಯುಯೇಟ್, ಪಿ.ಜಿ ಹಂತ ಯೆಲ್ಲ ಮಾಡಿ ಮುಗಿಸುತ್ತಾರೆ ಬಿಡಿ. ಅಲ್ಲಿಗೆ ನಾವೆಲ್ಲ ಹೋಗುವುದು ಬೇಡ. ಅದರೆ ಪ್ರತಿಯೊಬ್ಬ ತಾನು ಸಂಪಾದಿಸಬೇಕು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂಬ ಹಂಬಲ ಮೇಲಿನ ಕಾಲೇಜ್ ಹಂತದಲ್ಲೇ ಇದ್ದೇ ಇರುತ್ತದೆ... ನಮ್ಮ-ನಿಮ್ಮೆಲ್ಲರ ಹಾಗೇ. ಹಾಗೆ ನಾವು ನೀವು ಯೋಚಿಸುವ/ಮಾಡುವ ಮೊದಲ ಕಾರ್ಯ - "ಕೆಲಸ ಹುಡುಕುವುದು"...!. ಅದಕ್ಕಾಗಿ ನಾನು ಕೂಡ ಈ ಹಂತಕ್ಕೆ ಡೈರೆಕ್ಟ್ ಆಗಿ ಬರುತ್ತೇನೆ. ಕೆಲಸ ಸೇರಿದ ಹೊಸತರಲ್ಲಿ ದುಡಿದೇ ತೀರಬೇಕೆಂಬ ತವಕ/ಶಹಭಾಷಗಿರಿ ಪಡೆಯಬೇಕೆಂಬ ನಾವು ನೀವು ಸಾಮಾನ್ಯವಾಗಿ ಹೊಂದೇ ಇರುತ್ತೇವೆ. ಅದರೂ ಕೆಲವೇ ಅಯ್ದ ಜನ ( ನನ್ನ ಪ್ರಕಾರ "ಎಗ್ಸಾಮ್ಪಲ್ಸ್ (examples)" ) ಬಿಟ್ಟು ಬೇರೆ ಯಾರಿಗಿದೆ ಈ ಸೌಭಾಗ್ಯ...!?!. ನೀವು ನೆಟ್ಟಗೆ ಕೆಲಸ ಮಾಡಿದರೂ ಕೊಂಕು ಹುಡುಕುವ ನಿಮ್ಮ "ಸೀನಿಯರ್ಸ್", ಕೆದಕಿ ಕಾಲೆಳೆದಿ, "ಫಿಟ್ಟಿಂಗ್" ಇಟ್ಟು ಮಜಾ ಮಾಡುವ ಸಹೋದ್ಯೋಗಿ...! ಇದು ಲೇಟ್ ಮಾಡಿದೆ, "ಪೆರ್ಫಮೆನ್ಸೆ" ಸರಿ ಇಲ್ಲಾ... ಎನ್ನುವ ಲೇಡರ್/ಹೆಚ್.ಆರ್ ಗಳ ಸಂತೆಯೇ ತುಂಬಿ ನೀವು ಇಗೋರಿಗು ಮಾಡಿರುವುದು "ಕತ್ತೆ ಹೊರುವ" ಕೆಲಸ ಎಂದು ನಿಮ್ಮ ಮನಸ್ಸು ರೇಕಾರ್ಡ್ ಮಾಡಿಕೊಳ್ಳುತ್ತದೆ. ಬೇಡ ಎಂದರೂ "ಇದು ಇಷ್ಟೇನಾ..!" ಎಂಬ ಪ್ರಶ್ನ-ಚಿನ್ಹೆ ಮನದಲ್ಲಿ ಅcಚು ಬಿದ್ದುಬಿಡುವ ಸ್ತಿತಿ.... ಹುಂ... ಮತ್ತೆ ಅದೇ ಯೋಚನೆ... ಅದೇ ಕೊರಗು - " ನಮಗೆ ಅದ್ರುಷ್ಟವೇ ಇಲ್ಲವೆನೋ.... " ಇಲ್ಲ "ಹಣೆಯಲ್ಲಿ ಇಷ್ಟೆ ಇರೋದು ನನಗೆ...!". ಮೇಲಿನ ಸಾಲು ಕಾಡುವ ( ನಾವು ನೆನೆಸಿದಂತೆ...) ಸಮಯ...!

ಹೇಗೆ ನಾವು ಎಲ್ಲದಕ್ಕು "ಕಂಪ್ರೋಮೈಸ್" ಆಗಿ ಕಾಲ ತಳ್ಳುತ್ತ ಇರಲು.. ಹೆಂಡತಿ/ಗಂಡ... ಮನೆ/ಮಕ್ಕಳು... ಅಸ್ತಿ/ಹಣ ಏಲ್ಲ ಹಂತ ಸದ್ದಿಲ್ಲದೆ ದಾತಿ ಹೋಗುತ್ತೇವೆ... ಕೆಲವು ವಸ್ತು ಒದಗಿ ಬಂದರೆ ನಮ್ಮ ಅದೃಷ್ಟವೆಂದು, ಜಾಸ್ತಿ ನಮ್ಮ ಕೈಯಿಂದ "ಮಿಸ್" ಅಯ್ತೆಂದರೆ ನಮ್ಮ ಹಣೆ ಬರಹ ನೆಟ್ಟಗೆ ಇಲ್ಲವೆಂದೋ... ಹೇಗೆ ಎಲ್ಲದಕ್ಕು ಕೊರಗಿ/ನೊಂದಿ... "ಫೈನಲ್" ಸೀನ್ - ಸಾವಿಗೂ ಸೆಟಲ್ ಮಾಡಿಕೊಳ್ಳುವ ಜನ ನಾವು... ಎಲ್ಲಾ ಭೂಮಿಯ ಮೇಲೆ ಬಿಟ್ಟು ಬರಿಗೈ ದಾಸರಾಗಿ ಹೋಗುವಾಗ...!

ಇದು ಕೇವಲ ನನ್ನ ಅನಿಸಿಕೆ ಮಾತ್ರ... ನಿಮ್ಮ ಪ್ರಕಾರ ಜೀವನ ಬೇರೆ ರೀತಿಯೇ ಇರಬಹುದು... ಈ ಲೇಖನ "negative thinking" ಸರಕು ಅಲ್ಲಾ... ಅದರೂ ಈ ಜೀವನ ನಮಗೆ ಕೆಲವೊಮ್ಮೆ ಉತ್ತರಿಸಲಾಗದ ಪ್ರಶ್ನೆಗಳನ್ನು ಎದುರಿಗೆ ಇಡುತ್ತದೆ... ನೀವು ಎಷ್ಟೇ ಪ್ರಯತ್ನಿಸಿದರೂ ಆ ಪ್ರಯತ್ನಕ್ಕೂ ಮೀರಿ ಅಗದ ಕೆಲಸ, ಕಾರ್ಯ ನಿಮ್ಮ ಮನದಲ್ಲಿ ಒಮ್ಮೆ ಸಂಶಯ/ಸೋಲಿನ ಭಾವನೆ ತಂದಿರಬಹುದು.. ಇವಕ್ಕೆ ಎನು ಕಾರಣ ಎಂದು ನೀವು ಹೇಳಬಲ್ಲಿರಾ...!
ವಿನಯ್ ...
ಒಬ್ಬ ಮನುಷ್ಯ ತನ್ನ ಕಷ್ಟಗಳ ಸರಮಾಲೆಯಿಂದ ಬಹಳ ಬೇಸತ್ತಿದ್ದನು. ಅವನು ದಿನವು ದೇವರನ್ನು ಬೇಡುತ್ತಿರಲು: " ನಾನೇ ಏಕೆ? ಎಲ್ಲರೂ ಖುಷಿಯಿಂದಿರುವಾಗ ನಾನೊಬ್ಬನೇ ಏಕೆ ಇಷ್ಟು ನರಳುತ್ತಾ ಇದ್ದೀನಿ...?" . ಒಂದು ದಿನ, ತುಂಬ ಸಂಕಟದಿಂದ ದೇವರನ್ನು ಅವನು ಬೇಡಲು - "ಬೇಕಾದರೆ ಬೇರೆಯವರ ಕಷ್ಟವನ್ನು ನನಗೆ ಕೊಡು, ನನ್ನ ಕಷ್ಟಗಳನ್ನು ಮಾತ್ರ ತಗೆದುಕೊಂಡು ಬಿಡು!". ಅದೇ ದಿನದ ರಾತ್ರಿ ಅವನಿಗೆ ಒಂದು ಕನಸು ಬಿದ್ದಿತು....

.............................

ಪ್ರಕಾಶಮಾನವಾದ ಜ್ಯೋತಿ ಆಕಾಶದಲ್ಲಿ.... ಆ ಬೆಳಕಿನಿಂದ ದೇವರು ಹೊರಬರಲು, ಅಲ್ಲಿ ನೆರೆದಿದ್ದವರನ್ನು ಕೇಳಿದನು - "ನಿಮ್ಮ ಒಬ್ಬೊಬ್ಬರ ಕಷ್ಟಗಳನ್ನು ಇಲ್ಲಿ ತನ್ನಿ...". ಎಲ್ಲರೂ ತಮ್ಮ ಕಷ್ಟಗಳಿಂದ ಅಗಲೇ ಸಾಕಷ್ಟು ಬಳಲಿದ್ದರು. ಆ ಮನುಷ್ಯನಂತೆ ಇವರು ಸಹ "ಬೇಕಾದರೆ ಬೇರೆಯವರ ಕಷ್ಟವನ್ನು ನನಗೆ ಕೊಡು, ನನ್ನ ಕಷ್ಟಗಳನ್ನು ಮಾತ್ರ ತಗೆದುಕೊಂಡು ಬಿಡು!" ಎಂಬ ನಿರ್ಧಾರಕ್ಕೆ ಬಂದಿದ್ದರು. ಹೇಗಾದರೂ ಮಾಡಿ ಅದರಿಂದ ಕೈ ತೊಳೆದು ಕೊಳ್ಳಬೇಕೆಂಬ ಹೆಬ್ಬಯಕೆ ಅಲ್ಲಿದ್ದವರದು...! ತಮ್ಮ ಕಷ್ಟಗಳ ಮೂಟೆಗಳ ಸಮೇತ ಅಲ್ಲಿ ನೆರೆದಿದ್ದರು. ಕೊನೆಗೂ ಅವರು ಕೋರಿದ ಬಯಕೆ ತೀರಿತೆಂಬ ಭಾವ ಅವರೆಲ್ಲರಲ್ಲಿತ್ತು.....

........................

ಕೊನೆಗೆ ದೇವರು "ನಿಮ್ಮೆಲ್ಲರ ಮೂಟೆಗಳನ್ನು ಆ ಗೋಡೆಯ ಮೇಲೆ ನೇತು ಹಾಕಿ...". ಎಲ್ಲಾ ಮೂಟೆಗಳನ್ನು ಗೋಡೆಯ ಮೇಲೆ ನೇತು ಹಾಕಲಾಯಿತು.
ನಂತರ ದೇವರು ಘೋಷಣೆ ಮಾಡಿದನು: " ನೀವು ಈಗ ನಿಮಗೆ ಇಷ್ಟವಾದದ್ದನ್ನ ಅಯ್ದುಕೊಳ್ಳಬಹುದು... ಯಾರು ಬೇಕಾದರೂ ತಮಗೆ ಇಷ್ಟವಾದ ಮೂಟೆ ತಗೆದುಕೊಳ್ಳಬಹುದು..."

........

ಅಶ್ಚರ್ಯವಾದ ಘಟನೆ ಅಲ್ಲಿ ನೆಡೆಯಿತು.... ಯಾವ ಮನುಷ್ಯ ತನ್ನ ಕಷ್ಟಗಳು ಬೇಗ ತೊಲಗಿಹೋಗಲಿ ಎಂದು ಬೇಡುತ್ತಾ ಅಲ್ಲಿ ತನ್ನ ಮೂಟೆಯನ್ನು ಇಟ್ಟಿದನೋ ಅವನೇ ಮೊದಲು ಹೋಗಿ ತಾನೆ ನೇತು ಹಾಕಿದ್ದ ಮೂಟೆಯನ್ನೆ ಎತ್ತುಕೊಂಡನು....!

ನೋಡುತ್ತಿದ್ದಂತೆ ಎಲ್ಲರೂ ಗೋಡೆಯ ಕಡೆಗೆ ಧಾವಿಸಲು... ತಮ್ಮ ಮೂಟೆಗಳನ್ನು ಮಾತ್ರ ಎತ್ತಿಕೊಂಡು ಬಂದರು...! ಎಲ್ಲರೂ ತಮ್ಮ ಮೂಟೆಗಳನ್ನು ಅಷ್ಟೇ ಇಷ್ಟದಿಂದ ವಾಪಸ್ ತೆಗೆದುಕೊಂಡರು... ಎಕೆಂದರೆ ಮೊದಲ ಬಾರಿ ಅವರೆಲ್ಲರೂ ಇತರರ ಕಷ್ಟ ನೋಡಿದ್ದರು. ಅಷ್ಟು ದಿನದಿಂದ ಆ ಜನ ಬೇಡಿದ್ದು ಇದಕ್ಕೇನಾ ಎಂಬ ಭಾವನೆ ಅಲ್ಲಿ ಬಂದಿತ್ತು....!

......................

ಇನ್ನೊಂದು ತೊಂದರೆ ಏನಾಗಿತ್ತೆಂದರೆ ಎಲ್ಲರೂ ತಮ್ಮ ತಮ್ಮ ಕಷ್ಟಗಳಿಗೆ ಆಗಲೇ ಹೊಂದಿಕೊಳ್ಳಲು ತೊಡಗಿದ್ದರು, ಅದರಿಂದ ಅವರಿಗೆ ತಮ್ಮ ಕಷ್ಟಗಳು ಎನೆಂಬುದರ ಸ್ಪಷ್ಟ ಅರಿವಿತ್ತು. ಬೇರೆ ಯಾರದೋ ಕಷ್ಟ ತಗೆದುಕೊಳ್ಳುವ ಬದಲು ತಮ್ಮ ಕಷ್ಟಗಳೇ ಮೇಲೆಂಬ ಭಾವನೆ ಅವರಲ್ಲಿ ಬಂದಿತ್ತು...!

......................

ಎಲ್ಲರು ಸಂತೋಷದಿಂದ ತಮ್ಮ ಮನೆಯೆಡೆಗೆ ನಡೆದರು... ಏನು ಅಂದು ಬದಲಾಗಲಿಲ್ಲ... ಎಲ್ಲrU ತಮ್ಮ ಕಷ್ಟಗಳನ್ನೇ ಮರಳಿ ತಮ್ಮ ಮನೆಗೆ ತಂದಿದ್ದರು... ಆದರೂ ಎಲ್ಲರ ಮುಖದಲ್ಲಿ ತಮ್ಮ ಮೂಟೆಯೆ ತಮಗೆ ಸಿಕ್ಕಿತೆಂಬ ಸಂತಸದ ಭಾವನೆ ಇತ್ತು!

..................

ಮರುದಿನ ಆ ಮನುಷ್ಯನು ಪುನಃ ದೇವರನ್ನು ಬೇಡಿದನು....

"ಆ ಕನಸಿನ ಮುಖಾಂತರ ನನಗೆ ತಿಳುವಳಿಕೆ ಮೂಡಿಸಿದ್ದಕ್ಕೆ ಧನ್ಯವಾದಗಳು... ನಾನೆಂದು ಮತ್ತೆ ನಿನ್ನನ್ನು ಈ ರೀತಿ ಬೇಡುವುದಿಲ್ಲ... ನನಗಾಗಿ ನೀನು ಏನು ಕೊಟ್ಟಿರುವೆಯೋ ಅದೇ ಚೆನ್ನ ನನಗೆ... ಅದೇ ಚೆನ್ನಾಗಿದೆ ಎಂದು ನಾ ನಂಬುವೆ... ಅದಕ್ಕಾಗೇ ಅಲ್ಲವೇ ನೀನು ನನಗೆ ಅವನ್ನು ಕೊಟ್ಟಿದ್ದು....!"