ಚಿತ್ರ: ರೋಬೋಟ್ - ತೆಲುಗು ಅವೃತಿ ( ತಮಿಳಿನ "ಎಂಧೀರನ್" ಡಬ್)
ತಾರಾಗಣ: ರಜನಿ, ಐಶ್ವರ್ಯ, ಡ್ಯಾನಿ, ಕಲಾಭವನ್ ಮಣಿ ಮುಂತಾದವರು
ಸಂಗೀತ: ಎ.ಅರ್.ರೆಹ್ಮಾನ್
ನಿರ್ದೇಶನ: ಶಂಕರ್
ಅನೇಕ ದಿನಗಳಿಂದ ಭಾರತದ್ಯಾಂತ (ವಿಶ್ವಾದ್ಯಂತ..) ಕುತೂಹಲ ಮೂಡಿಸಿದ್ದ ಕನ್ನಡಿಗ ರಜನಿಯವರ ಚಿತ್ರ "ರೋಬೋಟ್". ತನ್ನ ಪ್ರಚಾರ ತಂತ್ರಗಳಿಂದಲೇ ಜನರ ನಿರೀಕ್ಷೆ ಗಳಿಸಿದ್ದ ಈ ಚಿತ್ರ (ಒಟ್ಟು ಬಜೆಟ್ ೧೬೦ ಕೋಟಿ... ಗ್ರಾಫಿಕ್ಸ್ ಗೆ ಶೇಕಡ ೪೦ % ವ್ಯಯಿಸಲಾಗಿದೆ (೬೦ ಕೋಟಿ ಅಂದಾಜು..), ೧ ಅಕ್ಟೋಬರ್ ರಂದು ತೆರೆಕಂಡಿದೆ. ಉಳಿದ ಜನರಂತೆ ಕೇವಲ "ಕುತೂಹಲ" ದ ಆಧಾರದ ಮೇಲೆ ಚಿತ್ರ ನೋಡಹೊರಟ ನಾನು, ಅದನ್ನು ಮುಗಿಸಿ ಬಂದಾಗ ಚಿತ್ರದ ತುಂಬ "ಗ್ರಾಫಿಕ್ಸ್" ಮತ್ತು ಹೆಜ್ಜೆಗೊಂದು "ಹಾಡು".., ಇವೆಲ್ಲದರ ಮುಂದೆ ಕಥಾ ಭಾಗ ಏಕೋ "ಡಲ್" ಹೊಡೆದಂಗಿತ್ತು..!!!
ಡಾ || ವಶಿ (ರಜನಿ) ಒಬ್ಬ ವಿಜ್ಹಾನಿ. ಹ್ಯುಮಾನೊಯಿಡ್ ರೋಬೋಟ್ ತಯಾರಕ. ತನ್ನ ಸ್ವಾರ್ಥಸಾಧನೆಗಲ್ಲದ, ದೇಶದ ಸೈನ್ಯದ ನೆರೆವಿಗೆ ಬರುವಂತಹ ರೋಬೋಟ್ ತಯಾರಿಕೆಯಲ್ಲಿರುತ್ತಾನೆ. ಚಿತ್ರದ ಅರಂಭವೂ ಅದೇ. ತಾನು ತಯಾರಿಸಿದ ರೋಬೋಟ್ ( ಅದರ ಹೆಸರು "ಚಿಟ್ಟಿ" - ಇದನ್ನೂ ರಜನಿ ಯವರೇ ನಿರ್ವಹಿಸಿದ್ದಾರೆ..) ತನ್ನ ಅಣತಿಯಂತೆ ಆಡುವುದು, ಮಾತನಾಡುವುದು, ಕುಣಿಯುವುದು ಎಲ್ಲಾ ಮಾಡುವುದ ಅರಿತು ಅವನು ಅದನ್ನು ಒಂದು ಸಭೆಯ ಮುಂದೆ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸುತ್ತಾನೆ. ತನ್ನ ಡಾಕ್ಟರ್ ಗೆಳತಿ ಸನಾ ( ಐಶ್ವರ್ಯ ರೈ) ಸಹ ಅದರ ಕಾರ್ಯದಕ್ಷತೆಗೆ ಮರುಳಾಗಿ ತನ್ನ exam preparations ಗೆ ಸಹಾಯ ಪಡೆಯಲು ತನ್ನ ಹಾಸ್ಟಲ್ ಗೆ ಕರೆದ್ಯೊಯುತ್ತಾಳೆ. ಅಲ್ಲಿ ಎಲ್ಲರ ಮೆಚ್ಚುಗೆ ಗಳಿಸುವ "ಚಿಟ್ಟಿ" ಸನಾಳನ್ನು ತನ್ನ ವಿವಿಧ ಕರಾಮತ್ತುಗಳಿಂದ ಅಶ್ಚರ್ಯಗೊಳಿಸುತ್ತದೆ. ಇದರಲ್ಲಿ ಟ್ರೈನ್ sequence ಸಹ ಒಂದು. ಅದ್ಭುತ ಗ್ರಾಫಿಕ್ಸ್ ಮತ್ತು ಹೊಡೆದಾಟಗಳ ಹೊಂದಿರುವ ಈ ಸನ್ನಿವೇಶ ನೋಡಲು ಚನ್ನ. ಅಲ್ಲಿಂದ ಅವಳನ್ನು ಪಾರುಮಾಡುವ ಚಿಟ್ಟಿ ನಂತರ ಸನಾಳು ವೈದ್ಯಕೀಯ ಪರೀಕ್ಷೆ ಬರೆಯುವಾಗ ಸಹಾಯ ಮಾಡುವ ಪರಿಯಿದೆಯಲ್ಲಾ, ಅದನ್ನು ಬಹುಶ: ಚಿತ್ರ ನೋಡಿಯೇ ತಿಳಿಯಬೇಕು ( ಮುನ್ನ ಭಾಯಿ MBBS ನಲ್ಲಿರುವ exam ಸಂದರ್ಭಕ್ಕಿಂತ ಭರ್ಜರಿಯಾಗಿದೆ...!!).
ಮತ್ತೊಂದು ಸನ್ನಿವೇಶ ಚಿಟ್ಟಿ ಸನಾಳ ಗೆಳತಿಯ ಹೆರಿಗೆ ಮಾಡಿಸುವ ಸಂದರ್ಭ. ಇದಂತೂ ಅಚ್ಚರಿಯ ಪರಮಾವಧಿ!!. ಯಾವ ಅಂಗ್ಲ ಚಿತ್ರಗಳಲ್ಲೂ ಕಾಣದ example ಅನ್ನ ಇಲ್ಲಿ ಉಪಯೋಗಿಸಿದ್ದಾರೆ ಶಂಕರ್. ಸಸೂತ್ರವಾಗಿ ಹೆರಿಗೆ ಮಾಡಿಸುವ ಚಿಟ್ಟಿ ಅಪರೇಷನ್ ಕೊಠಡಿಯಿಂದ ಹೊರಬಂದಾಗ ಸನಾ ಅವನ ಕೆನ್ನೆಗೆ ಖುಷಿಯಿಂದ ಕೊಡುವ "ಮುತ್ತು" ಒಂದು ರೋಬೋಟ್ ಮನವ ಸ್ತ್ರೀ ಯನ್ನು ಪ್ರೀತಿಸುವಂತೆ ಪ್ರೇರೇಪಿಸುತ್ತದೆ. ( ಬಹುಶ: ರೋಬೋಟ್ ನಲ್ಲಿ ಮನವ ಗುಣಗಳನ್ನ ತುಂಬಿದ್ದ ಪರಿಣಾಮಕ್ಕೇನೋ..!!)
Intervel ಮುಗಿದ ನಂತರದ ಕಥೆ "ಚಿಟ್ಟಿ" ಸನಾಳ ಪ್ರೀತಿ ದಕ್ಕಿಸಿಕೊಳ್ಳಲು ಮಾಡುವ ಕೆಲಸ, ತನ್ನ ತಯಾರಿಸಿದ ಡಾ || ವಶಿಗೂ ಹೊಟ್ಟೆಯುರಿ ತರಿಸುವ ಮಟ್ಟಕ್ಕೆ ಹೋಗುತ್ತದೆ. ಇದೆಲ್ಲದರ ನಡುವೆ ಡಾ || ವಶಿಯ ಬಾಸ್ "ಬೋರ" (ಡ್ಯಾನಿ) ತನ್ನ ಜ್ಯೂನಿಯರ್ ತನ್ನನ್ನು ಮೀರಿಸುವ ಕಾರ್ಯ ಮಾಡಿಬಿಟ್ಟನೆಂಬ ಕ್ರೋಧ ಬೇರೆ. ಹೇಗಾದರೂ ಮಾಡಿ ಚಿಟ್ಟಿಯಲ್ಲಿ ಅಳವಡಿಸಿರುವ "neural module" ಪಡೆದೇ ತೀರಬೇಕು ಎಂಬ ಬಯಕೆ.. (ಇದಕ್ಕೆ ಕಾರಣ ತಾನು ಇತರರೊಡನೆ ಮಾಡಿಕೊಂಡಿದ್ದ ವ್ಯವಹಾರಿಕ ಒಪ್ಪಂದ...). ಇದು ಡಾ || ವಶಿಯ "ಚಿಟ್ಟಿ" ಯನ್ನು ಧ್ವಂಸಗೊಳಿಸಿ ಕಸಕ್ಕೆ ಬಿಸಾಕಿದಾಗ ಕೈಗೂಡುತ್ತದೆ.!!. ಕಸದ ಗೋದಾಮಿನಿಂದ ತುಂಡಾದ/ಮುರಿದುಹೋದ "ಚಿಟ್ಟಿ" ತನ್ನ ಲ್ಯಾಬಿಗೆ ಹೊತ್ತುತರುವ ಬೋರ ತಾನು ಅನ್ವೇಷಿಸಿದ destructive program ಅಳವಡಿಸಿ self developable and self destructive type robot ಮಾಡಿಬಿಡುತ್ತಾನೆ. ಇದು ಮುಂದೆ ಬೋರನ ಸಾವಿಗೂ ಕಾರಣವಾಗುತ್ತದೆ. ಲ್ಯಾಬಿನಿಂದ ಹೊರಬಂದ "ಚಿಟ್ಟಿ" ಡಾ
ವಶಿ ಯ ಬಾಳಸಂಗಾತಿಯಾಗಬೇಕಿದ್ದ ಸನಾಳನ್ನ ಅಪಹರಿಸಿ ಒತ್ತೆಯಿಟ್ಟುಕೊಂಡಾಗ ಡಾ || ವಶಿ ತನ್ನ ಗೆಳತಿಯನ್ನು ಬಿಡಿಸುವ ಸಂದರ್ಭದಲ್ಲಿ ಮಾಡುವ ಪ್ಲಾನೇ ಚಿತ್ರದ ಕ್ಲೈಮಾಕ್ಸ್.
ಕೊನೆಯ ೨೫-೩೦ ನಿಮಿಷದ ಈ "ಕ್ಲೈಮಾಕ್ಸ್" ಎಲ್ಲೂ ಕಾಣದ, ಯಾವ ಹಾಲಿವುಡ್ ಚಿತ್ರವನ್ನು ಮೀರಿಸುವಂತ ಮಟ್ಟದಲ್ಲಿ ಇದೆ. "ಚಿಟ್ಟಿ" ಯ ವಿವಿಧ "ಅವತಾರ" ಗಳ ನೋಡುವ ಭಾಗ್ಯ ರಜನಿಯ ಪಕ್ಕ ಅಭಿಮಾನಿಗಳಿಗೆ ದೊರೆಯುತ್ತದೆ. ಹೇಗೋ ಮಾಡಿ "ಚಿಟ್ಟಿ" ಯನ್ನು ನಿಯಂತ್ರಿಸುವ ಡಾ || ವಶಿ, ಇದಾದ ನಂತರ "ಚಿಟ್ಟಿ" ಯ ಅಂತ್ಯವೇನಾಗುತ್ತದೆ ಎಂಬುದರ ಬಗ್ಗೆ ತಿಳಿಯಬೇಕೆಂದರೆ ನೀವು ಚಿತ್ರವನ್ನ ನೋಡಬೇಕು...
ಡ್ಯಾನಿ ಅವರದು ದುರಾಸೆಗೆ ಬಿದ್ದ ಬಾಸಿನ ಪಾತ್ರ. ಐಶ್ವರ್ಯ-ರಜನಿ-ರೋಬೋಟ್ ರೂಪಿ "ರಜನಿ" ಯ ಪ್ರಭೆಯಲ್ಲಿ ಅವರ ಪಾತ್ರ ಮಸುಕಾಗಿದೆ. ಕಲಾಭವನ್ ಮಣಿಯವರ ಪಾತ್ರವಂತೂ ಇದ್ದು ಇಲ್ಲದಂತಿದೆ.. ಎಲ್ಲಾ "ರಜನಿ" ಮಹಿಮೆ!!!. ಎ.ಅರ್.ರೆಹ್ಮಾನ್ ಸಂಗೀತವಿರುವ ೭ ಹಾಡುಗಳು ಚಿತ್ರದ ಅಡಿ-ಅಡಿಗೂ ಇದ್ದು ಸುಮಧುರವಾದರೂ ಸಂಖ್ಯೆ ಹೆಚ್ಚಾಯಿತು ಅನಿಸುವಷ್ಟಿದೆ. ರತ್ನವೇಲು ರವರ ಕ್ಯಾಮರ ವರ್ಕ್ ಮತ್ತೊಂದು ಪ್ರಮುಖ ಅಂಶ. ಚಿತ್ರ ೯ ರೀಲ್ ಉದ್ದದಷ್ಟು ಇರುವುದರಿಂದ ೨ ಗಂತೆ ೫೦ ನಿಮಿಷದಷ್ಟು ಸಮಯಕ್ಕೆ ಹೋಗುತ್ತದೆ ( ಹಾಡಿನ ಪರಿಣಾಮ..). ಸೌಂಡ್ ಇಂಜಿನೀಯರಿಂಗ್ -- ರಸೂಲ್ ಪೂಕುಟ್ಟಿ -- ನಮ್ಮ ಬೆಂಗಳೂರಿನ ಟೇಟರ್ ಗಳಿಗೆ ಹಿಡಿಸುವುದಿಲ್ಲ ( ಸರಿಯಾಗಿ ಡಿ.ಟಿ.ಎಸ್ ಸೌಲಭ್ಯವಿರದ ಚಿತ್ರಮಂದಿರದಲ್ಲಿ ಸೌಂಡ್ ಇಂಜಿನೀಯರಿಂಗ್ ಇರುವ ಚಿತ್ರ ರಿಲೀಸ್ ಮಾಡಿದರೆ ಏನು ಫಲ..???). ಡ್ಯಾನ್ಸ್ ಮತ್ತು ಫೈಟ್ಸ್ ಚೆನ್ನಾಗಿವೆ ( ಡ್ಯಾನ್ಸ್: ಪ್ರಭುದೇವಾ, ರಾಜು ಮತ್ತು ರೇಮೋ...)
ಉತ್ತರಾರ್ಧದ ಕಥೆಯ ಭಾಗ ಬಿಗಿಯಿಲ್ಲದಿದ್ದರೂ ಶಂಕರ್ ಮತ್ತು ರಜನಿ ಯವರ ಪ್ರತಿಭೆಯು ಇದನ್ನು ಮಸುಕಾಗಿಸುತ್ತದೆ. ಎಕೆಂದರೆ Intervel ನಂತರದ ಭಾಗದಲ್ಲಿ ಕಥೆ ಮಾಯವಾಗಿ "ಲವ್ ಎಂಡ್ ರೋಮ್ಯಾನ್ಸ್" ತುಣುಕುಗಳೇ ತುಂಬಿದೆ..!!. ಕ್ಲೈಮಾಕ್ಸ್ ನ ದೃಶ್ಯವೈಭವದಲ್ಲಿ ಶಂಕರ್ ಗೆದ್ದಿದ್ದಾರೆ. ಇದಕ್ಕೆ ಅವರಿಗೆ ಫುಲ್ ಮಾರ್ಕ್ಸ್...
ಪಕ್ಕ ರಜನಿ ಅಭಿಮಾನಿಗಳಿಗೆ ಮತ್ತು logic ಇಲ್ಲದೆ ಮನೋರಂಜನೆ ಪಡೆಯಬಯಸುವವರಿಗೆ ಈ ಚಿತ್ರ ಸರಿಯಾದ ಅಯ್ಕೆ. ರಜನಿ ಏನೇ ಮಾಡಿದರೂ ನೀವು ತರ್ಕವಿಲ್ಲದೇ ಒಪ್ಪಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಚಿತ್ರವು ನಿಮಗೆ ಖುಷಿ ಕೊಡುವುದು. ಇದಕ್ಕಾಗೆ ತಾನೇ ರಜನಿ ಇಷ್ಟು ವರ್ಷಗಳಿಂದ ಅಭಿಮಾನಿಗಳ ಹೃದಯ ಅಲಂಕರಿಸಿರುವುದು... ನನ್ನ ಪ್ರಕಾರ entertainment - logic ಚಿತ್ರವೇ ಈ "ರೋಬೋಟ್"...
ನನ್ನ ರೇಟಿಂಗ್ : * * *