ವಿನಯ್ ...
I remember reading the below lines long back:

"Chlorine is the greatest crippler and killer of modern times. It is an insidious poison"

-- Dr. Joseph M. Price, MD, in Moseby's Medical Dictionary


In days when people select hobbies as part of their activity, swimming is also considered one among them. We are seeing the sharp increase of swimmers around our place just to keep them lean, slim and fit. There are booms of swimming classes mushrooming around places especially during summer vacation where children around 4 + are of main stream. Even parents rush to a nearest swimming centre to get their child registered among the few selected names and pay as per their limits. But people in pursue of health and fitness are unknowingly moving themselves towards the hazard… Cancer.


Yes, though sounds strange, it is now a known phenomenon that water causes cancer. Don’t be surprised, but yes, the chemical used to purifying water itself is causing cancer(Trichloroisocyanuric Acid). The high quantities of chlorine content used to ward off water contamination are major concern now a day. As there are no stringent measures to monitor the water and the chlorine content usage, the concerned people/authorities who take up water purifying process just mix chlorine into water and release the water for commercial/personal purposes. The same when used for drinking and cleaning is causing grave concern for human body and health. Though there are many research done on this field, what matters is the effect the high chlorinated water is causing on skin.

Few things to know about Trichloroisocyanuric Acid... (Retrieved from Wikipedia...)

Trichloroisocyanuric acid is the inorganic compound with the formula (C3Cl3N3O3. It is used as an industrial disinfectant, bleaching agent and a reagent in organic synthesis.[1][2] This white crystalline powder, which has a strong "chlorine odour," is sometimes sold in tablet or granule form for domestic and industrial use.


Use in water treatment


The compound is a disinfectant, algicide and bactericide mainly for swimming pools and dyestuffs, and is also used as a bleaching agent in the textile industries.

Applications: It is widely used in civil sanitation, pools and spas, preventing and curing diseases in husbandry and fisheries, fruits and vegetables preservation, wastewater treatment, algaecide for recycling water of industry and air conditioning, anti shrink treatment for woolen, treating seeds, bleaching fabrics, and organic synthesis industry


Benefits of TCCA in Swimming Pool-


Available with 90% chlorine concentration


Due to high chlorine content, handling is easy for large pools.


Reduces chlorine loss during day time. TCCA is stable it does not strip like any other halogen compounds.


Reduces algae growth.


Dissolves slowly in water, allowing for continuously metered dosing of available chlorine, especially when in tablet form.




Drawbacks of TCCA in Swimming Pool-


Cyanuric Acid (CYA) build-up from TCCA use can decrease the effectiveness of Free Active Chlorine (FAC) over time.


Such build up can only be reduced by dilution with water that does not contain CYA.


The economics of this effect can greatly reduce the cost-effectiveness of high chlorine availability in TCCA.


At high CYA concentrations, normal chlorine levels can be rendered ineffective, requiring either dilution by draining and refilling the pool or by adding abnormally high doses of chlorine to overcome this effect.

...So coming back to its effects on human beings...
 
From long time, we know that how the skin darkens if we swim in chlorinated waters of swimming pool for long durations. With the eyes, skin and hair getting direct exposure, the eyes turning red or hair turning dull are common symptoms. The most dangerous is skin which is protective sheet for human body. The skin cancer caused by chlorinated water is fast among young aged than adults as their skin is more sensitive and still under generation. The frequent exposure of children to these waters is more now a days and without suitable precautions, the swimming institutions are gifting “deadly diseases” to future generations. Neither the swimming coach nor the institute are concerned about these ill effects and what matters them is “Money”... But at end, it is children who suffer the consequences. The cause is the effects are not noted at initial stages and when the advance stage reaches, the treatment procedure and cost rise causing severe panic in those families.

Now what matters is we should take precautionary steps to avoid dangerous effects of
chlorinated water. The parents must take initiative into this and avoid children joining the swimming courses in places where there are alarming levels of chlorine content. The probable usage of removing chlorine and its odor problems is to filter the water with granular activated carbon (GAC) or by using suitable chemical-removing filter media, such as KDF which are available with many manufacturers now.

Also, the swimming institutes must monitor the water supplied and take measures to decrease chlorine levels by installing suitable equipments in their places and put details of chlorine content used in water, how safe the water is by pasting details of chlorine and purity levels of water.

Though the step may not be feasible in terms of monetary gains to these institutes, but still, a proper precaution can be taken or initiated from both parents and institutes where it will be beneficial to both child and parents, creating a healthy and stronger society with well grown and stronger children.



--- This post is written for the 'NO TO CHLORINE' contest by Bejon Mishra of 'HealthyYouFoundation' by Indiblogger. Please vote and support the campaign against Trichloroisocyanuric Acid...
ವಿನಯ್ ...



ಸಾಕಷ್ಟು ಕಾಲದಿಂದ ಅದೇ "ಫಾರೀನ್ ಔಟ್ ಡೋರ್ ಲೋಕೇಶನ್" ಲವ್ ಸ್ಟೋರಿ, ಅದೇ ಮಚ್ಚು-ಲಾಂಗ್ ಗಳ ಅರ್ಭಟದಲ್ಲಿ ನಲುಗಿಹೋಗಿದ್ದ ಕನ್ನಡ ಚಿತ್ರರಂಗಕ್ಕೆ ನಾಗಶೇಖರ್ ರವರ "ಸಂಜು ವೆಡ್ಸ್ ಗೀತಾ" ಚಿತ್ರ ಒಳ್ಳೇ ಹಿತಾನುಭವ ತರಿಸಿದೆ. ೨ ಗಂಟೆ ೧೫ ನಿಮಿಷದ ಉದ್ದಕ್ಕೂ ಮುದನೀಡುವ ಕಥೆ ಪ್ರೇಕ್ಷಕರನ್ನ ಮತ್ತೆ ಚಿತ್ರಮಂದಿರಗಳತ್ತ ಬರುವಂತೆ ಮಾಡಿದೆ. ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ವಿಮರ್ಶೆ ನಿಮಗಾಗಿ...


ಇಂಜಿನಿಯರಿಂಗ್ ಪದವಿಯನ್ನ ಪಡೆದು ಆಗಷ್ಟೇ ಊರಿಗೆ ಮರಳಿರುವ ನಾಯಕ, ಹೀಗೆ ಅಂಗಡಿಯೊಂದರ ಬಳಿ ನಿಂತು ಮಾತನಾಡುತ್ತಿರುವಾಗ ನಾಯಕಿಯ ಪ್ರವೇಶ. ಮಾಮೂಲಿಗಿಂತ ಭಿನ್ನವಾದ ಇಂಟ್ರೋಡಕ್ಷನ್...(ನಾಯಕಿಯು ದಾರಿಯಲ್ಲಿ ನಿಂತಿದ್ದ ನಿರ್ಗತಿಕ ಹೆಂಗಸಿಗೆ ಬ್ರೆಡ್, ಹಣ ಕೊಡುವದು, ಯಾರೋ ಗೊತ್ತಿಲ್ಲದ ವ್ಯಕ್ತಿಯನ್ನ ಇಷ್ಟು ಪ್ರೀತಿಸುವ/ಆದರಿಸುವ ನಾಯಕಿಯ ನಡುವಳಿಕೆ ನಾಯಕನನ್ನ ಸೆಳೆಯುತ್ತದೆ... "ಬ್ಯೂಟಿ"... ಪದ ಮೆಚ್ಚುಗೆ ಸೂಸುವಂತೆ ಅವನ ಬಾಯಿಯಿಂದ ಹೊರಬರುತ್ತದೆ...). ನಂತರ ನಾಯಕನು ತನ್ನ ಮಾವನನ್ನ ಪುಸಲಾಯಿಸಿ ನಾಯಕಿಯ ಹಿಂದೆ ಹೋಗುವುದು, ಅವಳ ಮನಸನ್ನ ಗೆಲ್ಲುವುದು (ಆಟೋಪ್ರಯಾಣದ ಸಂದರ್ಭ...), ಅವಳನ್ನ ಮದುವೆಯಾಗುವಂತೆ ಒಪ್ಪಿಸುವುದು ಎಲ್ಲ ನೆಡೆಯುತ್ತದೆ. ಅದರೆ ಇಲ್ಲಿ ಟ್ವಿಸ್ಟ್ ನೀಡಿರುವ ನಿರ್ದೇಶಕರು ನಾಯಕಿಯ ಮಾವ ಬಾಲ್ಯದಲ್ಲಿ ಮಾಡಿದ ಶೋಷಣೆ ಮತ್ತು ಅದೇ ಹುಚ್ಚಿನಿಂದ ಅವನು ನಾಯಕಿಯ ಮೇಲೆ ಮಾಡುವ ಬಲತ್ಕಾರ (ನಾಯಕ-ನಾಯಕಿ ಅಂದು ಮದುವೆಯಾಗುವ ತಯಾರಿಯಲ್ಲಿರುತ್ತಾರೆ...) ಇಬ್ಬರು ಪ್ರೇಮಿಗಳ ಸುಂದರ ಕನಸನ್ನ ನುಚ್ಚುನೂರುಮಾಡಿಬಿಡುತ್ತದೆ. ನಾಯಕನು ಅವನನ್ನ ಕೊಲೆಮಾಡುವ ಸನ್ನಿವೇಶದೊಂದಿಗೆ ಚಿತ್ರ ವಿರಾಮಕ್ಕೆ ಬರುತ್ತದೆ.

ಚಿತ್ರದ ನಂತರದ ಭಾಗ ನಾಯಕನ ಹೋರಾಟ, ಮಾನಸಿಕ ಸ್ಥಿಮಿತ ಕಳೆದುಕೊಂಡ ನಾಯಕಿ ದಿಕ್ಕುತಪ್ಪಿ ಕಳೆದುಹೋಗಿ ಬೆಂಗಳೂರಿಗೆ ಬರುವುದು, ನಾಯಕ ಜೈಲಿನಿಂದ ಹೊರಬರುವ ಪ್ರಯತ್ನಕ್ಕೆ ಜೈಲಿನ ಹಳೆಯ ಕೈದಿ ಸಾಥ್ ನೀಡುವುದು, ಪರಾರಿಯಾಗುವ ಸನ್ನಿವೇಶ... ಇವೆಲ್ಲದರ ನಡುವೆ ನಾಯಕ-ನಾಯಕಿ ಮತ್ತೆ ಒಂದಾಗುವರೆ ಎಂಬುದನ್ನ ತಿಳಿಯುವುದಕ್ಕೆ ನೀವು ಈ ಚಿತ್ರವನ್ನ ನೋಡಬೇಕು..

"ಅರಮನೆ" ಚಿತ್ರದ ನಂತರ ನಾಗಶೇಖರ್ ರವರ ಪ್ರಯತ್ನ ನಿಜಕ್ಕೂ ಮೆಚ್ಚುವಂತದ್ದೆ. ಜೆಸ್ಸಿ ಗಿಫ್ಟ್ ಅವರ ಸಂಗೀತದಲ್ಲಿ ಮೂಡಿಬಂದ ಎರಡು ಹಾಡುಗಳು "ಸಂಜು ಮತ್ತು ಗೀತಾ..." ಹಾಗೂ "ಗಗನವೇ ಬಾಗಿ.." ನಿಜಕ್ಕೂ ಇಂಪಾಗಿವೆ. ಕವಿರಾಜ್ ಮತ್ತು ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಸತ್ಯರವರ ಕೊಡಗಿನ ಸೌಂದರ್ಯದ ಮನೋಹರ ಛಾಯಾಗ್ರಹಣಕ್ಕೆ ಹಾಟ್ಸ್ ಆಫ್..

ಮಳೆ ಹನಿ, ನಾಯಕ ಮತ್ತು ನಾಯಕಿಯ ಬಿಟ್ಟರೆ ಇತರ ಪೋಷಕ ಪಾತ್ರಗಳು ಪಾತ್ರಕ್ಕಣುಗುಣವಂತೆ ಬಂದು ಹೋಗುತ್ತವೆ. ಚರಣ ರವರ ನಾಯಕನ ಮಾವನ ಪಾತ್ರ ಗಮನ ಸೆಳೆಯುತ್ತದೆ. ಇನ್ನುಳಿದಂತೆ ಸುಹಾಸಿನಿ, ಜೈಜಗದೀಶ್, ಶರತ್ ಲೋಹಿತಶ್ವ, ಅರುಣ್ ಸಾಗರ್, ರಂಗಾಯಣ ರಘು ರವರ ಪಾತ್ರಗಳು ದೀರ್ಘವಲ್ಲದಿದ್ದರೂ ಸಂದರ್ಭಕ್ಕೆ ಅನುಗುಣವಾಗಿವೆ...
ಉತ್ತಮ ಚಿತ್ರಗಳ ಬರವಿರುವ ನಮ್ಮ ಸಿನೆಮಾ ರಂಗಕ್ಕೆ ನಿಜಕ್ಕೂ "ಸಂಜು ವೆಡ್ಸ್ ಗೀತಾ..." ಹೊಸಚೈತನ್ಯ ನೀಡುವ ಟಾನಿಕಿನಂತೆ ಬಂದಿದೆ. ಕನ್ನಡ ಚಿತ್ರಾಭಿಮಾನಿಗಳು ಎಂದಿನಂತೆ ತಮ್ಮ ಪ್ರೋತ್ಸಾಹ ನೀಡಿ ಚಿತ್ರದ ಯಶಸ್ಸಿಗೆ ಕಾರಣರಾಗುತ್ತಾರೆ ಎಂಬ ಅಶಯಯೊಂದಿಗೆ ಚಿತ್ರ ಶತದಿನೋತ್ಸವ ಪೂರೈಸಲಿ ಎಂದು ಈ ಕನ್ನಡಿಗನ ಬಯಕೆ...

Keyword(s): ಸಂಜು ವೆಡ್ಸ್ ಗೀತಾ ಚಿತ್ರ ವಿಮರ್ಶೆ, Sanju weds Geetha film review, Sanju weds Geetha movie review
ವಿನಯ್ ...
ಹೀಗೆ ಇಂದಿನ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದ ನನಗೆ ಒಂದು ಸುದ್ದಿ ಕುತೂಹಲ ಕೆರಳಿಸಿತು. ಅದು ನಮ್ಮ ರಾಜಸ್ಥಾನದ ಜೈಪುರ್ ಜಿಲ್ಲೆಯ ವಿದ್ಯಾರ್ಥಿಗಳು ಪಡೆದ ನಾಸಾ ಪ್ರಶಸ್ತಿ. ಅವರ "ಹ್ಯುಮನ್ ಸೆಟ್ಟಲ್ಮೆಂಟ್ ಅನ್ ಸ್ಪೇಸ್" ವಿಷಯದ ಬಗ್ಗೆ ಮಾಡಿದ ಪ್ರೋಜೆಕ್ಟ್ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪುರಸ್ಕ್ರುತವಾಗಿದೆ. ಹೆಮ್ಮೆಯ ವಿಷಯವೆನೆಂದರೆ ಅದು ಮಾನವ ಅಂತರಿಕ್ಷಕ್ಕೆ ಕಾಲಿಟ್ಟು ೫೦ ವರ್ಷ ಕಳೆದ ಸುಸಂದರ್ಭಕ್ಕೆ ದೊರೆತ ಮನ್ನಣೆಯೆನ್ನಬಹುದು...


ಈ ಸುದ್ಧಿಯ ಕುರಿತು ಇನ್ನಷ್ಟು ಮಾಹಿತಿ ಹುಡುಕುತ್ತಿದ್ದ ನನಗೆ Ashoka's Secret Society of the "NINE" Unknown Men ವಿಷಯದ ಬಗ್ಗೆ ಚರ್ಚೆಗಳ ಕೊಂಡಿ ಇನ್ನಷ್ಟು ಕುತೂಹಲ ತರಿಸಿತು. ಚಕ್ರವರ್ತಿ ಅಶೋಕನು ತನ್ನ ೯ ಜನ ಪ್ರಖಂಡ ವಿಜ್ಞಾನಿಗಳ ಮೂಲಕ ಬರಿಸಿದ ೯ ಪುಸ್ತಕಗಳು ಅಂದು ದೇಶವು ಹೊಂದಿದ್ದ ಉನ್ನತ ವಿಜ್ಞಾನದ ಬಗ್ಗೆ ತಿಳಿಸುತ್ತದೆ. ಚಕ್ರವರ್ತಿ ಅಶೋಕನು ಈ ಕಾರ್ಯವನ್ನು ಎಷ್ಟು ಗುಪ್ತವಾಗಿ ನೆಡೆಸಿದ್ದನೆಂದರೆ ಬಹುಶ: ಈ ಪುಸ್ತಕದಲ್ಲಿನ ಮಾಹಿತಿಗಳ ಮೂಲಕ ಸಾಕಷ್ಟು ವಿದ್ವಂಸಕಾರಿ ಅಯುಧಗಳು ಸೃಷ್ಠಿಯಾಗಬಹುದು ಎಂಬ ಮುನ್ಸೂಚನೆಯ ಅರಿತು ಅದನ್ನು ಜಗದ ಬೆಳಕಿಗೆ ಬರದಂತೆ ಗುಪ್ತವಾಗಿ ಅಡಗಿಸಿ ಇರಿಸಿದ್ದನು. ಚೀನಿಯರು ಕೆಲವು ಸಮಯದ ಹಿಂದೆ ಲ್ಹಾಸ ಪ್ರಾಂತ್ಯದಲ್ಲಿ ಕಂಡುಹಿಡಿದ ಕೆಲವು ಸಂಸ್ಕೃತ ಗ್ರಂಥಗಳನ್ನ ಅನುವಾದಿಸಲಿಕ್ಕೆ ಚಂಡಿಗಡ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾಗ ಅದರಲ್ಲಿ ಅಂತರಿಕ್ಷನೌಕಯಾನಗಳ ಬಗ್ಗೆ ಬಹಳಷ್ಟು ಮಾಹಿತಿಗಳಿದ್ದವು..!! (ಹೆಚ್ಚಿನ ಮಾಹಿತಿಯನ್ನ ಇಲ್ಲಿ ಪಡೆಯಬಹುದು: http://www.world-mysteries.com/sar_7.htm...)

ಹಾಗೆ ನಮ್ಮ ನಾಡಿನವರಾದ ಶ್ರೀ ಟಿ. ಸುಬ್ಬರಾಯಶಾಸ್ತ್ರಿಗಳ ಸಂಶೋಧನೆಯ ಫಲದಿಂದ ಮೂಡಿಬಂದ "ವಿಮಾನ". ಅದೇ ನಂತರ ರೈಟ್ ಬ್ರದರ್ಸ್ ಹೆಸರ ಪಾಲದದ್ದು ದುರಂತವೋ, ನಮ್ಮ ದೌರ್ಭಗ್ಯವೋ... ಆ ದೇವನೇ ಬಲ್ಲ..!!

ನಮ್ಮ ದೇಶದ ಅನೇಕ ಯುವ ಮನಸ್ಸು ಸೂಕ್ತ ಪ್ರೋತ್ಸಾಹವಿಲ್ಲದೇ ಎಲೆಮರೆಯ ಕಾಯಿಗಳಂತೆ ಕಣ್ಮರೆಯಾಗುತ್ತಿವೆ. ಹಗರಣಗಳಲ್ಲೇ ಕಾಲ ಸವೆಸುವ ಸರ್ಕಾರ, ಅಧಿಕಾರಿಗಳ ಅಸಡ್ಡೆತನ... ಇವೆಲ್ಲ ಇವರಿಗೆ ಮುಳುವಾಗದಿರಲಿ, ರಾಷ್ಟ್ರ ಇಂತಹ "ಯುವ" ಪೀಳಿಗೆಯಿಂದ ಪ್ರೇರಣೆ ಪಡೆದು ಸಂಪತ್ಬರಿತವಾಗಲಿ ಎಂಬ ಸಣ್ಣ ಬಯಕೆಯೊಂದಿಗೆ ಈ ಪುಟ್ಟ ಲೇಖನ...