ಕಣ್ಣಸನ್ನೆಯಿಂದ ನೀ ನನ್ನ ನೋಡಿದ ಕ್ಷಣ,
ಮಾತಿಲ್ಲದೆ ಎನ್ನ ಕರೆದೆ ಆ ದಿನ...
ನಗುವಿನ ಮುತ್ತಿನ ಮಳೆಯ ಸುರಿಸಿ ಸೆಳೆದೆ..
ನೆನಪಿದೆಯಾ...?
ಕೈಹಿಡಿದು ಒಟ್ಟಾಗಿ ನೆಡೆದು...
ಬಹುಕಾಲ ಪ್ರೇಮದ ಗುಂಗಲ್ಲೇ ಕಳೆದು..
ಅಣೆ-ಪ್ರಮಾಣವ ಮಾಡಿ ಒಂದಾದೆವು
ಅಂದು ನೀಲಿ ಆಗಸದ ಕೆಳಗೆ..
ನೆನಪಿದೆಯಾ..?
ಇರುವೆನು ನಿನ್ನೊಂದಿಗೆ ಎಂದೂ ಜೊತೆ,
ಇಡುವೆನು ಮುಳ್ಳಿನ ಹಾದಿಯಲ್ಲೂ ಹೆಜ್ಜೆ..
ನನ್ನ ಜೀವ ನೀನು ನಲ್ಲ ಎಂದು ಕೂಗಿ-ಕೂಗಿ ಹೇಳಿದೆಯಲ್ಲ..
ನೆನಪಿದೆಯಾ..?
ಕಾರಣವಲ್ಲದ ಕಾರಣಕ್ಕೆ ತೋರಿದೆ ಮುನಿಸು,
ನಿನಗಿಂತ ನನ್ನ ಕುಟುಂಬವೇ ಹೆಚ್ಚು..
ಇಂದೇ ಮರೆತು ಬಿಡು ನಮ್ಮ ಪ್ರೀತಿಯನ್ನು ಎಂದ್ಹೇಳಿ..
ಕಣ್ಣೀರ್ ಹಾಕಿಸಿ ನಡೆದುಬಿಟ್ಟೆಯೆಲ್ಲಾ..
ನೆನಪಿದೆಯಾ..?
ಕಳೆದ ಒಂದು ಸಂವತ್ಸರ, ನೀನಿಲ್ಲದ ಅ ಸಾವಿರ ಕ್ಷಣ..
ಇನ್ನು ಮರೆಯದ ನನ್ನ ಮನ.. ನೋವು ಪ್ರತಿ ದಿನ...
ಆದರೂ ಹೇಳುವುದಿಲ್ಲ ನಾ.. ನೀ ಏಕೆ ತೊರೆದೆ ಯೆನ್ನ..
ಏಕೆಂದರೆ ನಾ ತಿಳಿದೆ.. ಹೆಚ್ಚು ಬಯಸಿದ ವಸ್ತುವೇ ನೋಯಿಸುವುದು ನನ್ನ..