ವಿನಯ್ ...
ಬೆಂಗಳೂರಿನ ಕಂಟೋನ್ಮೆನ್ಟ್ ರೈಲ್ವೆ ಸ್ಟೇಷನ್ ಹಳಿಯ ಬಳಿ ಒಬ್ಬ ಯುವಕನ ಹೆಣ ಬಿದ್ದಿತ್ತು. ಕಾಲೊಂದು ತುಂಡಾಗಿ, ಮುಖದ ಒಂದು ಪಾರ್ಶ್ವ ಜಜ್ಜಿ ಹೋಗಿತ್ತು... ಅಗಲೇ ಸಾಕಷ್ಟು ಜನ ಅಲ್ಲಿ ಸೇರಿದ್ದರು. ಪಕ್ಕದ ರೋಡಿನಲ್ಲಿ ನೆಡೆದು ಹೋಗುತ್ತಿದ್ದ ನಾನು ನಡೆಯುವುದನ್ನು ನಿಲ್ಲಿಸಿ, ಒಂದು ಕ್ಷಣ ನಿಂತು ಆ ಘಟನೆ ನೆಡೆದ ಸ್ಥಳಕ್ಕೆ ಸಾಗಿದೆ... ಅ ದೇಹದ ಮೇಲಿದ್ದ ಬಣ್ಣದ ಗೆರೆಗಳ ಬಟ್ಟೆ, ಮುಖ ನೋಡಿದಾಗ ನೆನಪಿನ ಸುರುಳಿ ಬಿಚ್ಚುತ್ತಾ ಹೋಯಿತು... 2 ವರ್ಷದ ಹಿಂದೆಗೆ ಜಾರಿ ಹೋಯಿತು ಮನ...

*********************************

ನಾ ಕಂಡ ಪ್ರತಿಭಾವಂತ ಹುಡುಗರಲ್ಲಿ ಅವನೊಬ್ಬ, ಆಗಷ್ಟೆ 2ನೇ ಪಿ.ಯು. ಮುಗಿಸಿದ್ದ. ಕಪ್ಪಗಿದ್ದ ಅನ್ನುವುದ ಬಿಟ್ಟು ಲುಕ್ಸ್ ನಲ್ಲಿ ಓಕೆ. 85 % ಮಾರ್ಕ್ಸ್ ಬಂದಿತ್ತು ಅವನಿಗೆ. ನನ್ನ ಮನೆಯಿಂದ ಕೂಗಳತೆ ದೂರದಲ್ಲಿತ್ತು ಅವನ ಮನೆ... ಅವನ ಅಪ್ಪ-ಅಮ್ಮ ನನ್ನ ತಂದೆ-ತಾಯಿಗೆ ತುಂಬ ಪರಿಚಿತರಾಗಿದ್ದರು. ಈಗಲೂ ಗೊತ್ತು ಅ ದಿನ... ಅವನು ಪಿ.ಏಸ್.ಟಿ ಕಾಲೇಜ್ ಗೆ ಸೇರಿದ ಸಮಯ, ಎಷ್ಟು ಖುಷಿಯಿಂದ ನನ್ನ ಹತ್ತಿರ ಬಂದು ಹೇಳಿದ್ದ ಅವನು... " ಅಣ್ಣ.., ಫಸ್ಟ್ ಲಿಸ್ಟ್ನಲ್ಲೇ ನನ್ನ ಹೆಸರು ಬಂತು ಅಣ್ಣಾ...". ಕಾಲೇಜ್ ಹೋಗಲಿಕೋಸ್ಕರನೇ ಆಗ ತಾನೇ ಬಂದಿದ್ದ ಹೊಸ ಮಾದರಿಯ "ಪಲ್ಸರ್" ಬೈಕ್ ತಗೆದುಕೊಂಡಿದ್ದ ಅವನು...

ನಂತರ ನಾನು ನನ್ನ ಕೆಲಸದಲ್ಲಿ ಮಗ್ನನಾಗಿದ್ದರಿಂದ ಅವನ ಜೊತೆ ಮಾತುಕತೆ ಅಷ್ಟು ಹೆಚ್ಚಾಗಿ ನಡೆಯುತ್ತಿರಲಿಲ್ಲ... ಆದರೂ ಅವನು ಕಂಪ್ಯೂಟರ್ ವಿಷಯವನ್ನು ಪದವಿಯಲ್ಲಿ ಆರಿಸಿ ಕೊಂಡಿದ್ದರಿಂದ ಒಮೊಮ್ಮೆ "ಸಿ ಮತ್ತು ಸಿ++" ವಿಷಯದ ಸಂದೇಹಗಳನ್ನ ನನ್ನ ಹತ್ತಿರ ಕೇಳಲು ಬರುತ್ತಿದ್ದ. ತುಂಬ ಒಳ್ಳೇ ಜ್ಞಾಪಕಶಕ್ತಿ ಹೊಂದಿದ್ದ... ಚುರುಕು ಬೇರೆ... ಏನೇ ವಿಷಯ ಇದ್ರೂ ಹೇಳ್ಕೊಳ್ತಿದ್ದ. ಅದರೆ ಅಷ್ಟೇ ಸೂಕ್ಷ್ಮ ಮನಸ್ಸಿನವನು ಅವನು. ಸಣ್ಣ ಸಣ್ಣ ವಿಷಯಕ್ಕೆಲ್ಲಾ ಸುಮ್ಮನೆ ಬೇಸರ ಮಾಡಿ ಕೊಂಡು ಬಿಡುತ್ತಿದ್ದ. ನಾ ಅವನಿಗೆ ಮುಂಚೆನೇ ಇದರ ಬಗ್ಗೆ ಹೇಳಿದ್ದೆ.., ಅದರೂ ಅವನು ಅಷ್ಟೇ, ನನ್ನ ಮಾತನ್ನ ಕೇಳುತ್ತಿರಲಿಲ್ಲ... ಅವನು ತಾನಾಗಿಯೇ ಮುಂದೆ ಸರಿ ಹೋಗಬಹುದು ಅಂತ ನನ್ನನ್ನ ನಾನೇ ಸಮಾಧಾನ ಪಡಿಸಿಕೊಂಡಿದ್ದೆ....

*********************************

ಯಾಕೋ ಕೆಲವು ದಿನದಿಂದ ತುಂಬಾ ಬೇಜಾರು ಮಾಡಿಕೊಂಡಿದ್ದ ಅವನು. ಏನು ಕೇಳಿದರೂ ಬಾಯಿ ಬಿಡುತಿರಲಿಲ್ಲ... ನಾನು ಸಹಾ ಹೇಳುವಂತೆ ಒತ್ತಡ ಹೇರಲು ಹೋಗಲಿಲ್ಲ... ಒಂದು ದಿನ ತುರ್ತು ಕೆಲಸದ ನಿಮಿತ್ತ ನಾನು ನೆಡೆದು ಹೋಗುತ್ತಿದ್ದಾಗ ಹತ್ತಿರದಲ್ಲೇ ಇದ್ದ ಪಾರ್ಕ್ ನಲ್ಲಿ ಅವನು ಒಂದು ಹುಡುಗಿಯ ಜೊತೆ ಮಾತನಾಡುವುದನ್ನ ನೋಡಿದೆ. ಅವಳು ಹೋಗುವ ಅವಸರದಲ್ಲಿದ್ದಳು, ಅವನು ಅವಳನ್ನು ನಿಲ್ಲಿಸುವ ಅವಸರದಲ್ಲಿ..., ಅವನು ಅವಳನ್ನು ಪರಿ-ಪರಿಯಾಗಿ ಬೇಡುತಿದ್ದ ದೃಶ್ಯ ಕಂಡಿತು... ಅದರೂ ಅವಳು ಅಲ್ಲಿಂದ ಅವನನ್ನು ಹಿಂದಿರುಗಿ ನೋಡದೆ ಹೊರಟುಹೋದಳು. ಅವನ ಕಣ್ಣು ಕಣ್ಣೀರಿನಿಂದ ತುಂಬಿ ಹೋದದ್ದು ಕಾಣಿಸಿತು. ಅಳುತ್ತಾ ನಿಂತಿದ್ದ ಅವನು... ನನ್ನ ಮಿತ್ರ ಅಗಲೇ ಬಂದಿದ್ದರಿಂದ ಅವನ ಬಳಿ ಸಾಗಿ ಏನು ಅಯಿತೆಂದು ಕೇಳುವ ನನ್ನ ಪ್ರಯತ್ನ ಅಂದು ಸಾಧ್ಯವಾಗಲಿಲ್ಲ...

*********************************

ಇಷ್ಟರಲ್ಲೇ ನನಗೆ ಕೆಲಸದ ಸಲುವಾಗಿ ಮೈಸೂರಿಗೆ ಹೋಗುವ ಸಂದರ್ಭ ಬಂದಿತು. ಅಲ್ಲಿಂದ ನಾ ನನ್ನ ಮನೆಗೆ ಫೋನ್ ಮಾಡಿದಾಗಲೆಲ್ಲ ನನ್ನ ತಾಯಿ " ಲೋ ಪ್ರತಾಪ, ಮಂಜು ಗೆ ನೀನು ಓಂದ್ಸಲ ಫೋನ್ ಮಾಡಿ ಕೇಳೋ, ಯಾವಾಗಲೂ ತುಂಬ ಬೇಜಾರ್ ಮಾಡಿಕೊಂಡು ಕೂತಿರ್ತಾನೆ ಅವನು.., ಅವನ್ ತಾಯಿ ಅಂತೂ ಇದರ ಬಗ್ಗೇನೆ ತುಂಬಾನೇ ಮನಸ್ಸಿಗೆ ಹಚ್ಕೊಂಡಿದ್ದಾರೆ ಕಣೋ... ಏನಾದ್ರೂ ಹೇಳಪ್ಪಾ ಅವನಿಗೆ...." ಅಂತ ಹೇಳ್ತಾನೆ ಇದ್ರೂ. ನಾ ಅವನ ಸೆಲ್ ಗೆ ಟ್ರೈ ಮಾಡಿದ್ರೆ ಬೇಕಂತಲೇ ನನ್ನ ನಂಬರ್ ಬಂದ ತಕ್ಷಣ ಕಟ್ ಮಾಡಿಬಿಡುತ್ತಿದ್ದ. ನಾ ನಂತರ ಅವನಿಗೆ ಕಾಲ್ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ..

*********************************

ಮನಸ್ಸು ಪುನ: ವಾಸ್ತವಕ್ಕೆ ಜಾರಿ ಬಂತು. ರೈಲು ಹಳಿಯ ಬಳಿ ಬಿದ್ದಿದ ಆ ಹೆಣವನ್ನು ಮತ್ತೊಮ್ಮೆ ನಾ ನೋಡಿದೆ. ಅಗಲೇ ಅವನ ತಂದೆ-ತಾಯಿ ಅಲ್ಲಿ ಬಂದಾಗಿತ್ತು. ಅವರನ್ನು ಸಂತೈಸಲು ಅಲ್ಲಿ ಯಾರಿಗೂ ಸಾಧ್ಯವಾಗಲೇ ಇಲ್ಲ. ಪೊಲೀಸ್ ಪಂಚಾನಾಮೆ, ವಿಚಾರಣೆಯೆಲ್ಲಾ ಮುಗಿದು ದೇಹ ಕೊಟ್ಟ ನಂತರ ಅವನ ಅಂತ್ಯ ಸಂಸ್ಕಾರದ ಕಾರ್ಯ ಮುಗಿಯಿತು... ಅವನ ಮನೆಯಲ್ಲಿ ಸೂತಕದ ಛಾಯೆ... 12ನೇ ದಿನದ ಕಾರ್ಯಕ್ರಮಕ್ಕೆ ನಾ ಹೋದಾಗ ಅವನ ಅಮ್ಮ ಅಳುತ್ತ ನನ್ನ ಕೈಗೆ ಒಂದು ಕವರ್ ಕೊಟ್ಟು... " ಪ್ರತಾಪ್.. ಇದನ್ನು ಅವನು ನಿನಗೆ ಕೊಡಲು ಹೇಳಿದ್ದ ಪಾ... " ಅಂತ ಹೇಳುತ್ತಾ ಒಳಗಡೆ ಹೊರಟು ಹೋದರು.... ನಾ ಇನ್ನೂ ಹೆಚ್ಚು ಮಾತನಾಡದೆ ಮನೆಗೆ ಬಂದು ಮೆಲ್ಲನೆ ಕವರ್ ಒಡೆದು ಆ ಪತ್ರವ ಓದತೊಡಗಿದೆ...

*********************************

" ಅಣ್ಣಾ, ನಿನ್ನ ಹತ್ರ ಒಂದು ಮಾತು ಹೇಳೋದಿತ್ತು. ಕ್ಷಮಿಸು, ಇಷ್ಟು ತಡವಾಗಿ ನಾ ಇದನ್ನ ನಿನಗೆ ಹೇಳ್ತಾಯಿದ್ದೀನಿ... ನನಗೇಕೊ ಇಂದು ಬದುಕುವ ಅಸೆಯೇ ಇಲ್ಲವಾಗಿದೆ... ನಾನು ಪ್ರೀತಿಸಿದ ಹುಡುಗಿ ಪೂರ್ವಿಯನ್ನು ನಂಬಿ ನಾ ಕೆಟ್ಟೆ ಅಣ್ಣಾ. ಇರುವವರೆಗೂ ನನ್ನ ಬಳಿ ಇದ್ದು, ಈಗ ನೀನು ನನ್ನ ಮಾತನಾಡಿಸಬೇಡ, ನಿನ್ನ ಹತ್ರಾ ಅದಿಲ್ಲ, ಇದಿಲ್ಲ ಅಂತಾ ಹೇಳಿ ನನ್ನ ಮನಸ್ಸನ್ನು ನೋಯಿಸ್ತಾ ಇದ್ದಾಳೆ ಅವಳು. ನಾನು ಅವಳನ್ನು ಅಷ್ಟು ಹಚ್ಚಿಕೊಂಡಿದ್ದೇ ತಪ್ಪಾ??. ಇಲ್ಲಾ ಈ ಹುಡುಗಿರೇ ಇಷ್ಟೇನಾ...? ಫೋನ್ ಕಾಲ್ ರಿಸೀವ್ ಮಾಡೋದು ಬಿಟ್ಟು ತುಂಬ ಟೈಮ್ ಅಯ್ತು ಅಣ್ಣಾ. ಏನಂತಾ ಕೇಳದ್ರೆ ಸರಿಯಾಗಿ ಉತ್ರಾನೂ ಕೊಡೋಲ್ಲಾ... ಅದು ಈಗ ಇನ್ನೋ ಯಾರನ್ನೋ ಹುಡುಕಿ ಕೊಂಡಿದ್ದಾಳೆ, ಅವಳ ಸ್ನೇಹಿತರ ಹತ್ರ ನನ್ನ ಬಗ್ಗೆ ಇಲ್ಲದಿದ್ದನನ್ನೆಲ್ಲಾ ಹೇಳಿದ್ದಾಳೆ ಅವಳು... ಯಾಕಣ್ಣ ಇಂತಾ ಕೆಟ್ಟ ಮನಸ್ಸು ಬಂತು ಅವಳಿಗೆ??? ಹುಡುಗರ ಕಂಡ್ರೇನೆ ಚೇಂಜ್ ಆಗ್ಬಿಡುವ ಇವರನ್ನಾ ಏನಂತಾ ಕರೀಲಿ ನಾನು... ನನ್ನ ಪ್ರೀತಿನಾ ತಿಂದ್ ಹಾಕಿ ಬಿಟ್ಲಾಣ್ಣ....!, ನನಗೆ ಈ ಜೀವನವೇ ಸಾಕಾಗಿದೆ ಅಣ್ಣಾ..."

*********************************

ಓದಿ ಮನಸು ಭಾರವಾಯಿತು... ಈ ಮಾತನ್ನು ಅವನು ಸಲ್ಪ ಸಮಯದ ಮುಂಚೆಯೇ ನನಗೆ ತಿಳಿಸಿದ್ದರೆ ನಾ ಸಲ್ಪ ಟ್ರೈ ಮಾಡಿ ಅದ್ರೂ ಅವನನ್ನ ಸರಿ ದಾರಿಗೆ ತರಬಹುದಿತ್ತು.. ಒಬ್ಬಳ ಮನಸ್ಸನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ತನ್ನ ಜೀವನವನ್ನೇ ಮುಗಿಸಿಕೊಂಡಿದ್ದ ಅವನು. ಕೇವಲ ಒಂದು ಪ್ರೀತಿಗೋಸ್ಕರ...! ಅದು ಇತ್ತೋ, ಇಲ್ಲವೋ, ಇಲ್ಲಾ ಬರಿ ಒನ್ ಸೈಡೋ!!! ಈ ಹುಡುಗರೇ ಇಷ್ಟೇ.. ಎಲ್ಲೋ ಹುಡುಗಿ ಮಾತನಾಡಿಸಿದಳೆಂಬ ಕಾರಣಕ್ಕೆ ಅದನ್ನೇ ಪ್ರೀತಿಯೆಂದು ನಂಬಿ ಅವಳ ಹಿಂದೆ ಬಿದ್ದ್ ಬಿಡೋ ಕೆಲಸ ಮಾಡ್ಕೊಳ್ಬಿಡ್ತಾರೆ... ನಿಜ ವಿಷಯ ಗೊತ್ತಾದ ಮೇಲೆ ಪ್ರಾಣ ಕಳ್ಕೋಳ್ಳೋ ಕೆಲಸ ಮಾಡುತ್ತಾರೆ. ಮಂಜು ಈ ರೀತಿ ಮಾಡಿಕೊಂಡು ಬಿಟ್ಟನಲ್ಲಾ...! ತಾನೇನೋ ಹೋದ, ಅದರೆ ಮನೆಯವರನ್ನೆಲ್ಲಾ ಕಣ್ಣೀರಿನಲ್ಲಿ ಮುಳುಗಿಸಿ ಹೋಗಿದ್ದ ಅವನು. ಹುಂ, ಪತ್ರವನ್ನ ಪೂರ್ತಿ ಓದಿ ಮುಗಿಸಿದೆ.... ಪತ್ರ ನನ್ನ ಮೇಜಿನ ಒಳಗೆ ಸೇರಿತು... ಮನಸ್ಸು ಕೇಳತೊಡಗಿತು....: ಈ ಹುಡುಗರೇ ಇಷ್ಟೇನಾ..? ಎಲ್ಲಾನೂ ತಮ್ಮ ಮನಸ್ಸಿಗೆ ಬಂದ ಹಾಗೇ ತೋಚಿಕೊಂಡು ಮಾಡಿಕೊಳ್ಳೋದು, ನಂತರ ಏನಾದರೂ ಆಯಿತೆಂದರೆ ಜೀವ ಕಳೆದುಕೊಳ್ಳೋಕೆ ಹೋಗೋದು...! ತಮ್ಮ ನಂಬಿದ ಎಲ್ಲರನ್ನ ನಡು ನೀರಿನಲ್ಲಿ ಬಿಟ್ಟುಹೋಗೋ ಜನಾ ಆಗೋಗ್ತಾರಲ್ಲಾ ಇವರು...!. .

ಮನಸ್ಸು ಭಾರವಾಗಿ ಅವನ ನೆನಪುಗಳು ಇನ್ನೂ ಬಿಡದೇ ಕಾಡುತಿದ್ದವು... ದೂರದಲ್ಲಿ ಮೊಹಮ್ಮದ್ ರಫಿಯವರ " ನೀ ಏಲ್ಲಿ ನಡೆವೇ ದೂರ...ಏಲ್ಲೆಲ್ಲೂ ಶೋಕವೇ..." ಹಾಡು ಕೇಳಿ ಬಂದು ನನ್ನ ಮನಸ್ಸು ಹಾಗೇ ಯೋಚನೆಯ ಅಲೆಯಲ್ಲಿ ತೇಲಿ-ತೇಲಿ ಸಾಗಿ ಹೋಯಿತು...
ವಿನಯ್ ...
"ಸವಿ ಸವಿ ನೆನಪು ಸಾವಿರ ನೆನಪುಸಾವಿರ ಕಾಲಕೂ ಸವೆಯದ ನೆನಪುಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪುಏನೋ ಒಂದು ತೊರೆದ ಹಾಗೆ, ಯಾವುದೊ ಒಂದು ಪಡೆದ ಹಾಗೆ,ಅಮ್ಮನ ಮಡಿಲ ಅಪ್ಪಿದ ಹಾಗೆ, ಕಣ್ಣಂಚಲ್ಲಿ ಕಣ್ಣೀರ ನೆನಪು...."

ಚಿತ್ರ: ಮೈ ಅಟೋಗ್ರಾಫ್, ಭಾರಧ್ವಜ್ ರವರು ಸಂಗೀತ ಕೊಟ್ಟು, ಕಲ್ಯಾಣ್ ಬರೆದ ಈ ಇಂಪಾದ ಸಾಲುಗಳು.... ನೆನಪಿನ ಆ ವರ್ಣನೆಯನ್ನು ಮಧುರವಾಗಿ ನಮ್ಮ ಮನಸ್ಸಿನ ಆಳದಿಂದ ಕಣ್ಗಳ ಮುಂದಿಳಿಸುವ ಪರಿ... ಅಹಾ! ಎಂತಾ ಮಧುರ ಅನುಭವ ಅಲ್ಲವೇ? ಯಾರಿದ್ದಾರೆ ಹೇಳಿ ನೆನಪಿನ ದೋಣಿಯಲ್ಲಿ ತಮ್ಮ ಜೀವನವನ್ನ ತೇಲದೆ ಸಾಗಿಸದವರು? ನೆನಪು ನಾವು ಆಡುತ್ತಿರುವ ಉಸಿರಿನಷ್ಟೇ ಸತ್ಯ... ಅದು ಸೂರ್ಯನ ಬೆಳಕಿನಷ್ಟೆ ನಿಜವಲ್ಲವೇ?
....
...................................................
"ನೂರೊಂದು ನೆನಪು ಎದೆಯಾಳದಿಂದ, ಹಾಡಾಗಿ ಬಂತು ಆನಂದದಿಂದ....."

ನೆನಪು ಆ ದಿನ, ಆ ಗಳಿಗೆ, ಆ ಕ್ಷಣದ್ದು.... ನಾವು ಹೊರಟ ಆ ಜೀವನದ ಪಯಣದೆಡೆಗೆ..... ನೆನಪು ನಾವ್ ಕಂಡ ಆ ಹುಡುಗ/ ಆ ಹುಡುಗಿಯದು... ಅವರ ಕಣ್ಣೋಟಕ್ಕೆ ನಾವು ಸೆರೆಯಾದದ್ದು...! ಕಾಲೇಜ್ ನಲ್ಲಿ ಓದುವಾಗ ಮೊದಲ ಪ್ರೀತಿಯ ನೆನಪು... ನಮ್ಮ ಸುಖ-ದುಃಖವ ಹಂಚಿಕೊಂಡ ಆ ಮಿತ್ರರ ನೆನಪು... ಕೊನೆಗೆ ಮರೆಯಾಗಿ ಮತ್ತೆ ಸಿಕ್ಕಿದವರು, ಮತ್ತೆ-ಮತ್ತೆ ಗಲಾಟೆ ಮಾಡಿಕೊಂಡು, ಈ ಜನುಮದಲ್ಲಿ ಮುಖವನ್ನು ಕಾಣಲು ಇಷ್ಟಪಡದೆ ಮುಂದೆಂದೋ ಸಿಕ್ಕಾಗ ಮಾತಾಡಿಸಿ, ಎಲ್ಲಾ ಮರೆತು ಜೀವದ ಗೆಳೆಯರಾದ ಮಧುರ ನೆನಪು..? ಹುಂ ಹೇಳಿ, ಓಂದೇ, ಎರಡೇ.....!

ದೂರದ ಊರಿನಲ್ಲಿ ಓದುತ್ತಿದ್ದಾಗ, ಇಲ್ಲಾ ಕೆಲಸ ಮಾಡುತ್ತಿದ್ದಾಗ ಮನೆಗೆ ಅದಷ್ಟು ಬೇಗ ತಲುಪುವ ಹಂಬಲ... ಕಣ್ಣಾಲಿಗಳಲ್ಲಿ ನೀರು ತುಂಬಿ, ಹೊರಬರಿಸಲು ಇಷ್ಟಪಡದೆ/ಆಗದೆ ಚಡಪಡಿಸಿದ ಆ ನೆನಪು, ಮಿತ್ರರ ಹಿಂದೆ ಸುತ್ತಲೂ ಹೋದ, ಅವರ ಜೊತೆ ಕಾಲ ಕಳೆದ ಅ ಒಂದೊಂದು ಮಧುರ ಕ್ಷಣ... ಅ ಮಧುರ ದಿನದ ಕ್ಷಣ, ನಾವು ಒಬ್ಬ ಅಪರಿಚಿತ ಜೀವದೊಂದಿಗೆ ಬಂಧಿಯಾದದ್ದು, ಮತ್ತು ಅವರೇ ನಮ್ಮ ಜೀವನದ ಎಂದೂ ಬಿಡಿಸದ ಬಾಳಿನ ಬಂಧನವಾದದ್ದು....ಎಲ್ಲಾ ಮಧುರ ನೆನಪೇ ಅಲ್ಲವೆ..?

ತಂದೆ-ತಾಯಿಯ ಮಾತು ಕೇಳದೆ ಹಟಮಾಡಿ, ದೂರದೂರಿಗೆ ಹೋಗಿ..., ನಂತರ ಅವರಿಬ್ಬರು ನೆನಪಾಗಿ ಕಾಡಿದಾಗ ಕುಟುಂಬದೊಡನೆ ಇದ್ದ ಆ ಕ್ಷಣ... ನಮ್ಮ ಮನದ ಮಾತೆಲ್ಲವ ನಾವು ನಂಬಿದ ಮಿತ್ರನಿಗೆ ಹೇಳಿದ್ದು, ಅವನು ಇನ್ನ್ಯಾರಿಗೋ ಹೇಳಿ ನಾವು ಪೇಚಾಡುವಂತೆ ಮಾಡಿದ್ದು... ಕಾಲೇಜಿನ ಆ ಹಾಸ್ಟೆಲ್ ರೂಮ್, ಅಲ್ಲಿ ಮಾಡಿದ ಚಿತ್ರ-ವಿಚಿತ್ರ ಕಿಟಲೆ... ಜೂನಿಯರ್ಸ್ ನ ಹುಡುಕಿದ ಪರಿ, ಅವರಿಗೆ ಬಿಡದೆ ಕೊಟ್ಟ "ಸ್ಪೆಷಲ್. ಟ್ರೀಟ್ಮೆಂಟ್"...! ಪ್ರೀತಿಗಾಗಿ ನಾವ್ ಹುಡುಕಿದ ಆ ಹುಡುಗ/ಹುಡುಗಿ..., ಅವರಿಗೆ ತನ್ನ ಮನದ ಭಾವವ ಹೇಳಿ ಅವರು ನೀಡಿದ ಮಾತು/ಪ್ರತಿಕ್ರಿಯೆ ಜೀವನದ ದಿಕ್ಕನ್ನು ಬದಲಾಯಿಸಿದ್ದು... ಯಾರು ನಮಗೆ ತುಂಬ ಬೇಕಾಗಿದ್ದರೋ ಅವರೇ ಮುಂದೊಂದು ದಿನ ಎಲ್ಲದಕ್ಕೂ ಕಡೆಯವರಾಗಿ ಹೋದದ್ದು.... ನೆನಪಿನ ವಿಸ್ಮಯವೇ ಅದು....!

"ನಿನದೇ ನೆನಪು ದಿನವು ಮನದಲ್ಲಿ...,ನೋಡುವ ಅಸೆಯು ತುಂಬಿದೆ ನನ್ನಲಿ...,ನನ್ನಲಿ...."

ನೆನಪು ಬರುತ್ತದೆ, ಹಾಗೇ ಹೋಗುತ್ತದೆ ಸಹ... ಆದರೂ ಕೆಲವೊಂದು ಸಲ ಅ ನೆನಪೇ ನಮ್ಮ ಜೀವನವನ್ನ ಸುಂದರಗೊಳಿಸೋದು ಅಲ್ಲವೇ? ಅವುಗಳ ಮರೆತರೆ ಎಂದಾದರೂ ಊಹಿಸಿದ್ದೀರಾ...! ಉಹುಂ, ಬೇಡ ಬಿಡಿ... ಈ ಲೋಕದಲ್ಲಿ ಕೆಲವು ಮಿತ್ರರು ಮತ್ತು ಕೆಲವು ಆಪ್ತರು ನಮ್ಮ ಪ್ರಾತಃ ಸ್ಮರಣೀಯರೇ ಅಗಿರುತ್ತಾರೆ. ಅವರಿಂದಲ್ಲವೇ ನಮ್ಮ ಬಾಳು ಇಷ್ಟು ಬೆಳೆದದ್ದು ಮತ್ತು ನಾವು ಸಮೃದ್ಧಿ ಹೊಂದದ್ದು... ಮರೆಯದೆ ಹೊಂದಿಸಿಕೊಂಡು ಹೋಗಬೇಕಾದ ಬಂಧದ ನೆನಪಿನ ಸಾಲುಗಳು ಅವು...!

"ಜೀವನ ಉಲ್ಲಾಸ ಪಯಣ, ಜೀವನ ಸಂಗೀತ ಕವನ..."

- "ಮಿಥಿಲೆಯ ಸೀತೆಯರು" ಚಿತ್ರದ ಹಾಡಿನ ಸಾಲಿನಂತೆ ನಾವು ಜೀವನದ ಈ "ನಾಲ್ಕು ದಿನಗಳ" ಪಯಣವನ್ನ ಪ್ರತಿದಿನ ಉಲ್ಲಾಸದಿಂದ ಸಾಗಿಸಲೇ ಬೇಕು... ಕೆಲವೊಮ್ಮೆ ಎಂಥಾ ಕಷ್ಟಗಳು ಬಂದರೂ ಸಹ... ಎಕೆಂದರೆ ಜೀವನ ಮರುಳಿನ ಹಾಗೇ, ಕೈಯಿಂದ ಜಾರುತ್ತಲೇ ಹೋಗುತ್ತದೆ... ಪ್ರತಿ ಕ್ಷಣವು....! ನಾವು ಅದನ್ನು ಅರಿಯಲು ಹೋದರೆ ಕೊನೆಗೆ ನಾವು ಕಳೆದ ಕ್ಷಣಕ್ಕೆ ಕೊರಗ ಬೇಕು ಅಷ್ಟೆ.. ಇದ್ದ ಜೀವನವನ್ನೇ ಸುಂದರವಾಗಿ ಕಳೆದರೆ ಅದು ಮುಂದೊಂದು ದಿನ ಸುಂದರ ನೆನಪಾಗಿ ಬರುತ್ತೆ ತಾನೇ...! ನೀವೇ ಹೇಳಿ...

ಈ ಜೀವನವೇ ಅಷ್ಟೇ... ನಿಮ್ಮನ್ನು ಮನಸಾರೆ ಪ್ರೀತಿಸಿದವರ ಮನ ನೋಯಿಸದೆ ಇನ್ನು ಹೆಚ್ಚು ಪ್ರೀತಿಸಿ... ಕಾಲ ಯಾರಿಗೂ ಕಾಯುವುದಿಲ್ಲ.. ನಿಮಗೂ ಸಹ... ಇದೆಲ್ಲರ ಮಧ್ಯದಲ್ಲಿ ದ್ವೇಷದ ಜೀವನ ಎಕೆ..? ಯಾರೇ ಬಂದರೂ ಸರಿ, ಅವರು ನಿಮ್ಮ ಮಿತ್ರರೇ ಅಗಿರಬಹುದು, ಇಲ್ಲಾ ಅಪರಿಚಿತರೇ ಅಗಿರಬಹುದು... ನಿಮ್ಮ ಧ್ಯೇಯ ಅದಷ್ಟು ನಗುವ ಹಂಚುವುದು... ನಂಬಿ ನನ್ನನ್ನ....ಕೊನೆಯಲ್ಲಿ ಅದು ಸಹ ಒಂದು ಸುಮಧುರ ನೆನಪಾಗಿ ನೀವು ಈ ಜಗವ ಬಿಟ್ಟು ಹೋದ ಮೇಲೂ ನಿಮ್ಮ ಪ್ರೀತಿ-ಪಾತ್ರರ ಮನದಲ್ಲಿ ಇದ್ದು ಅವರ ಜೀವನವನ್ನು ಒಂದು ಒಳ್ಳೆಯ ಆದರ್ಶವಾಗಿ ಮುಂದುವರಿಸುವುದು. ಅಲ್ವಾ?
ವಿನಯ್ ...
ನನ್ನ ಪ್ರೀತಿಯ ನಮಿ,

ಪೆಗ್ ಮೇಲೆ ಪೆಗ್ ಒಂದೊಂದಾಗಿ ಹೊಟ್ಟೆಯೊಳಗೆ ಇಳಿಯುತ್ತಲೇ ಇದೆ... ಕಿಕ್ ಏರುತಿಲ್ಲ... ಆದರೆ ನಿನ್ನ ಪ್ರೀತಿಯ ನಶೆ ಒಂಚೂರು ಇಳಿಯುತಿರುವಂತೆಯೂ ಕಾಣುತಿಲ್ಲ..! ನಾ ನಿನ್ನ ಲವ್ ಮಾಡಿದ ಕರ್ಮಕ್ಕೇನೋ, ಇಂದು ನಾನು ಇಲ್ಲೊಬ್ಬನೇ ಏಕಾಂಗಿಯಾಗಿ ಕೂತು ಅನುಭವಿಸುತ್ತಿರೋದು...! ನೀ ಹೇಳು ನಾ ಮಾಡಿದ ತಪ್ಪಾದರೂ ಏನು?

*************************

ಮೂರು ವರ್ಷದ ಹಿಂದೆ... ನನ್ನ ಪಾಡಿಗೆ ನಾನಿದ್ದೆ. ಯಾವ ತಲೆನೋವು ಇರಲಿಲ್ಲ....ತಲೆ ಕೆಡಿಸಿಕೊಳ್ಳುವ ಯಾವ ಜವಬ್ದಾರಿಯೂ ನನಗೆ ಇರಲಿಲ್ಲ. ಒಬ್ಬನೇ ಮಗ ನಾನು, ನನ್ನ ತಂದೆ-ತಾಯಿ ಯಾವುದರಲ್ಲೂ ಏನು ಕಡಿಮೆ ಮಾಡಿರಲಿಲ್ಲ. ಕೇಳಿದೆಲ್ಲಾ ಚಿಟಿಕೆ ಹೊಡೆದಂಗೆ ಸಿಕ್ತಾಯಿತ್ತು. ನಾ ಕೇಳಿದ 45 ಸಾವಿರದ ಬೈಕನ್ನಾ ನನ್ನ ಅಪ್ಪ ಕೇವಲ 5 ದಿನದಲ್ಲಿ ನನ್ನೆದುರಿಗೆ ತಂದು ನಿಲ್ಲಿಸಿದ್ದರು. ಪ್ರತಿ ವರ್ಷ ನಾನು ಪರೀಕ್ಷೆ ಪಾಸ್ ಆದಾಗಲಂತೂ ಏನು ಸಡಗರ ಅವರಿಬ್ಬರಿಗೆ... ಇಂಜಿನಿಯರಿಂಗ್ ಗೆ ಓದಲು ಸೇರಿದ ಮುಹೂರ್ತವೇ ತಪ್ಪಾಯಿತೇನೋ, ನನ್ನ ಇಡೀ ಜೀವನವೇ ಅದು ಹಾಳು ಮಾಡಿ ಬಿಟ್ಟಿತು....!

------------------------------

ಎಸ್.ಕೆ ಇಂಜಿನಿಯರಿಂಗ್ ಕಾಲೇಜ್, ಮಾಲ್ಗುಡಿ...

ಸಿ.ಇ.ಟಿ ನಲ್ಲಿ 125ನೇ ರಾಂಕ್ ಬಂದಿತ್ತು, ಎಲ್ಲಾ ಫ್ರೆಂಡ್ಸ್ ಗಿಂತ ಮುಂದೆ. ಅದೂ, ಆಗ ಈ ಕಾಲೇಜ್ ಸಕ್ಕತ್ ೞೇಮಸ್ ಇಡೀ ಕರ್ನಾಟಕದಲ್ಲಿ. ಸೋ, ಮೊದಲನೆ ಅಪ್ಷನ್ ನಲ್ಲೇ ಸೆಲೆಕ್ಟ್ ಮಾಡ್ಕೊಂಡ್ಬಿಟ್ಟೆ. ಇನ್ನೇನು, ಜೋರಾಗಿ ಕಾಲೇಜ್ ಗೆ ಹೋಗಿದ್ದೇ ಹೋಗಿದ್ದು... ಹೀಗೆ ಸಣ್ಣ ಮಾತುಕಥೆ, ಗುರುತು ಪರಿಚಯವೂ ಆಯಿತು. ಮಿತ್ರರು ಆದರು... ಅದ್ರೆ, ನೀನು ನಮಿ.. ನಮಿತಾ, ಅದೆಲ್ಲಿದ್ದೋ ನಾ ಕಾಣೆ... ನೀನು "ಸಿ" ಸೆಕ್ಷನ್ನವಳು ಅಲ್ವಾ?. ನಮ್ಮ ಕ್ಲಾಸ್ ಗಿಂತ ಸಲ್ಪ ದೂರದಲ್ಲಿತ್ತು ನಿನ್ನ ಕ್ಲಾಸ್ ರೂಮ್. ದಿನ ಹೋಗುತ್ತಾ ನಿನ್ನ ಕಣ್ಣ ನೋಟ ನನ್ನ ನೋಡುತ್ತಿತದ್ದು, ಹುಂ, ಸಲ್ಪ ದಿನ ತಿಳಿಯದಿದ್ದರೂ, ಹಾಗೇ ಮುಂದುವರಿಯಲಿಲ್ಲ.. ನಿನ್ನ ಕಣ್ಣ ನೋಟವೇನೋ ಮಾಡಿದ ಮ್ಯಾಜಿಕ್ ಅನ್ಸುತ್ತೆ... ನನ್ನ ಮನಸ್ಸು, ನನ್ನ ಕಾಲುಗಳು ತಾನಾಗೆ ನಿನ್ನ ಬಳಿ ಬಂದವು... ಒಂದು "ಹಾಯ್" ಯಿಂದ ಅಂತೂ ನಮ್ಮಿಬ್ಬರ ಮಾತುಕತೆ ಶುರುವಾಯ್ತನ್ನು. ನಿನ್ನ ಮಾತನಾಡಿಸುವ ಸಮಯದಲ್ಲೇ ನನಗೆ ತಿಳಿದಿದ್ದು... ನೀನು ನನ್ನ ಸ್ನೇಹಕ್ಕೋಸ್ಕರ ಕಾಯುತ್ತಲಿದ್ದೆ ಎಂದು..! ಆದರೂ ನಿನ್ನ ಹುಚ್ಚು ನನಗೆ ಏರುತ್ತಾ ಹೋದದ್ದು ನನಗೆ ತಿಳಿಯಲೇ ಇಲ್ಲ... ನಿನ್ನ ಒಂದೊಂದೂ ಸವಿ ಮಾತಿಗೆ ಕಾಯುವ ಚಾತಕ ಪಕ್ಷಿಯಾದೆ ನಾನು. ನೀನೋ ಬಿಡು, ಅದೆಲ್ಲಿಂದಲೋ ನನಗೋಸ್ಕರ ಅಂತ ರೆಡಿಯಾಗಿ ಬಂದವಳಂತೆ ನನ್ನನ್ನೇ ಇಡಿ ಹೊತ್ತು ಕಾಯುತ್ತಾ, ನಾನು ಎಷ್ಟೇ ಸತಾಯಿಸಿದರೂ ಸಹಾ ಕೊಂಚವು ಬೇಸರಗೊಳ್ಳದೇ ನಗುಮೊಗದಿಂದ ಮಾತನಾಡಿಸುತಲಿದ್ದೆ. ಅಂತೂ ಬಹಳ ದಿನದಿಂದ ಕಳೆದು ಹೋದ ವಸ್ತು ಸಿಕ್ಕಾಗ ಎಷ್ಟು ಸಂತೋಷದಿಂದ ನಾವು ಅ ವಸ್ತುವನ್ನು ಪ್ರೀತಿಸುತ್ತೇವೆಯೋ ಅದಕ್ಕಿಂತ ಹೆಚ್ಚು ನಮ್ಮ ಪ್ರೀತಿಯಾಗಿತ್ತನ್ನು...!

ಮೊದಲಿನಿಂದಲೂ ನೀನು ಕೊಂಚ ಪೋಸೆಸಿವ್, ಹೌದು... ಅದರಲ್ಲೂ ಇಷ್ಟಪಟ್ಟರೆ ಏನನ್ನು ಬೇಕಾದರೂ ಪಡೆಯುವವಳು ಅಂತ ನಿನ್ನನ್ನು ಪ್ರೀತಿ ಮಾಡುವ ಸಮಯದಲ್ಲೇ ಗೊತ್ತಾಗಿತ್ತು ನನಗೆ. ಅದರೆ ಆ ಪೋಸೆಸಿವ್ನೆಸ್ಸ್ ಒಂದು ದಿನ ನಮ್ಮ ಪ್ರೀತಿಗೆ ಎರವಾಗುತ್ತೆ ಅಂತ ನನಗೆ ಅಂದು ಗೊತ್ತಾಗಲಿಲ್ಲ. ನಿನಗೂ ಗೊತ್ತಿತ್ತು ನನಗೆ ರಿಯಾ ಎಂಬ ಬಾಲ್ಯದ ಗೆಳತಿ ಇದ್ದಳಂತ. ನಾವಿಬ್ಬರು ಶಾಲೆಯ ಸಮಯದಿಂದಲೂ ಕ್ಲೋಸ್ ಫ್ರಂಡ್ಸ್. ಹೀಗೆ ನಮ್ಮ ಮಾತುಕಥೆ ಯಾವಗಲೂ ಜಾಸ್ತಿನೇ ಇರ್ತಾಯಿತ್ತು. ಮೊದಲು ಏನು ಕೇಳದಿದ್ದ ನೀನು ಯಾಕೋ ನಾವು ಮಾತನಾಡೋ ಸಮಯದಲ್ಲಿ ರಿಯಾಳ ವಿಷಯ ಬಂದಾಗ ಸಿಡಿಮಿಡಿಗೊಳ್ಳತೊಡಗಿದೆ. ನಾನೇನೋ ಒಂದು ಹುಡುಗಿಯ ಮುಂದೆ ಇನ್ನೊಬ್ಬ ಹುಡುಗಿಯ ಮಾತು ಬಂದಾಗ ಕೋಪಗೊಳ್ಳುವಂತೆ ಇದೆಲ್ಲಾ ಮಾಮುಲಿ ಅಂದ್ಕೊಂಡಿದ್ದೆ. ಅದರೆ ದಿನ-ದಿನ ನೀನು ಅವಳ ಮೇಲೆ ಪಡುತ್ತಿದ್ದ ಅಸೂಯೆ ಜಾಸ್ತಿಯಾಗುತ್ತಲೇ ಇತ್ತು. ಎಲ್ಲಿಯವರೆಗೂ ಅಂದರೆ ಕೊನೆಗೆ "ನೀನು ಯಾಕೆ ಅವಳ ಹತ್ರ ಇಡೀ ಹೊತ್ತು ಇರ್ತಿಯಾ?", " ನಿನಗೆ ಅವಳ ಹತ್ರ ಏನು ಕೆಲಸ?" ವರೆಗೂ ಬಂದ್ಬಿಡ್ತು. ನಾನು ಇದ್ದನೆಲ್ಲಾ ಮನಸ್ಸಿಗೆ ಹಾಕಿಕೊಳ್ಳದೆ ಎಲ್ಲಾ ತಾನಾಗೇ ಸರಿಹೋಗಬಹುದು ಎಂದು ಭ್ರಮಿಸಿದ್ದೆ....! ಅದೇ ನಾ ಮಾಡಿದ ದೊಡ್ಡ ತಪ್ಪು, ಅದು ನನ್ನ ಪ್ರೀತಿಯನ್ನ ನುಂಗುತ್ತೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ಅದರೂ ಆ ದಿನ ಬಂದುಬಿಟ್ಟಿತು...

ಅಂದು ರಿಯಾಳ ಹುಟ್ಟುಹಬ್ಬ, ಪಾರ್ಟಿ ಗೆ ಅಹ್ವಾನ ಎರಡು ದಿನ ಮುಂಚೇನೆ ಬಂದಿತ್ತು. ನಾನು ಮೈಸೂರ್ ಹತ್ತಿರದ ರೆಸಾರ್ಟ್ ಒಂದಕ್ಕೆ ಅದಕ್ಕಾಗಿ ಹೋಗುವುದಿತ್ತು. ಅದರೆ ನೀನು ನನ್ನನ್ನು ಅವತ್ತೇ ಬಾ ಮಂಗಳೊರಿಗೆ ಹೋಗೋಣ ಎಂದು ಕರೆದೆ. ಪೇಚಿಗೆ ಬಿದ್ದವನು ನಾನು, ಅಲ್ಲಿ ಗೆಳತಿಯನ್ನಾ ಬಿಡಲೋ? ಅಥವಾ ಪ್ರೇಯಸಿಯನ್ನು ಬಿಡಲೋ? ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿದ್ದೆ....! ಆದರೂ ರಿಯಾಳಿಗೆ ಕೊಟ್ಟ ಮಾತಂತೆ ನಾ ಅಲ್ಲಿಗೆ ಹೋದೆ. ಆದರೆ ಹಟಬಿದ್ದ ನೀನು ಅಂದು ನಾ ನಿನ್ನ ಮೊಬೈಲಿಗೆ ಮಾಡಿದ ಕಾಲ್ ನ ರಿಸೀವ್ ಮಾಡದೆ ಡಿಸ್ಕನೆಕ್ಟ್ ಮಾಡಲು ಶುರುಮಾಡಿದೆ. ಮೇಸೇಜ್ ಗೆ ಉತ್ತರನೂ ಮಾಡ್ಲಿಲ್ಲಾ... ಹೋಗ್ಲಿ ಹುಡುಗಿ ಕೋಪ ಮಾಡ್ಕೊಂಡಿರ್ಬೆಕು ಅಂತ ಸುಮ್ಮನಿದ್ದೆ. ಅದರೆ ಏದಿರು ಸಿಕ್ಕಾಗ ನೋಡದೆ ಹೋಗುತ್ತಿದ್ದದ್ದು, ನಕ್ಕರೂ ಸುಮ್ಮನಿದ್ದದ್ದು ಇದೆಲ್ಲಾ ನನಗೆ ಕಸಿವಿಸಿ ತರತೊಡಗಿದವು. ಹುಂ:, ಹೋಗಲಿ... ನಾನೇ ಈ ವಿಷಯವನ್ನ ಸರಿ ಮಾಡೋಣ ಅಂತ ನಿನ್ನನ್ನು ಒಂದು ದಿನ ನಾನೇ ತಡೆದು ಮಾತನಾಡಿಸಿದೆ. ನೀನು ನನ್ನಿಂದ ದೂರಹೋಗಲು ಪ್ರಯತ್ನಿಸಿದರೂ ನಾನೇ ತಡೆದು ನಿಲ್ಲಿಸಿ ಎಕೆ ಹೀಗೆ ಮಾಡುತ್ತಿದ್ದೀಯಾ ಅಂತಲೂ ಕೇಳಿದೆ... ನೀ ಹೇಳಿದ ಆ ಮಾತಿಗಲ್ಲವೇ ನಾ ನಿನಗೆ ಮನಸಿಲ್ಲದಿದ್ದರೂ ಕೆನ್ನೆಗೆ ಹೊಡದಿದ್ದು... " ನನಗೆ ಗೊತ್ತು ಕಣೋ ನಿ ಅವಳನ್ನಾ ಇಷ್ಟಪಡ್ತಾಯಿದ್ದಿಯಾ ಅಂತಾ... ನನ್ನ ಫ್ರಂಡ್ಸ್ ಆಗ್ಲಿಂದಲೂ ಇದರ ಬಗ್ಗೆ ಹೇಳ್ತಾಯಿದ್ರು... ನಾ ಅದನ್ನ ನಂಬಿರಲಿಲ್ಲ.. ಅದರೆ ನೀನು ಅವತ್ತು ನನ್ನ ಮಾತು ಕೇಳದೆ ಪಾರ್ಟಿಗೆ ಹೋದಾಗಲೇ ನನಗೆ ಗೊತ್ತಾಗಿ ಹೋಯಿತು ನಿನಗೂ ಅವಳಿಗೂ ಮಧ್ಯ ಎನೋ ಇದೆ ಅಂತಾ..", ಆಗಲೇ ಮಾತಿಗೆ ಮಾತು ಬೆಳೆದು ಹೋಗಿತ್ತು... ನಾ ನಿ ಹೇಳಿದ ಈ ಕೊನೆಯ ಮಾತಿಗೆ ತಲೆ ಕೆಟ್ಟು ಸಿಟ್ಟೇ ಬಂದಿತ್ತು. ಅದಕ್ಕೆ ಕೈ ಎತ್ತಿ ಜೋರಾಗಿ ಬಾರಿಸಿಬಿಟ್ಟಿದೆ. ನಂತರ ನನ್ನಿಂದ ಆದ ತಪ್ಪಿನ ಅರಿವಾಯ್ತು. ಅದರೇನು ಮಾಡಲಿ, ನೀ ಹೇಳಿದ ಮಾತೇ ಹಾಗಿತ್ತು ಚಿನ್ನಾ. ಅಂದಿನಿಂದ ನೀನು ನನ್ನನ್ನ ಮಾತನಾಡಿಸುವುದಿರಲಿ, ನೋಡುವುದಕ್ಕೂ ಸಿಗಲಿಲ್ಲ. ಮೊಬೈಲ್ ಸ್ವಿಚ್ ಅಫ್... ಮಾತನಾಡಿಸುವ ಎಲ್ಲಾ ಪ್ರಯತ್ನ ವಿಫಲ.. ಮಿತ್ರರ ಮೂಲಕವಾದರೂ ಮಾತನಾಡಿಸಿ ನೋಡೋಣ ಅಂದರೆ ನನ್ನ ಬಗ್ಗೆ ಏನೂ ಹೇಳದಂತೆ ಮತ್ತು ಕೇಳದಂತೆ ಹೇಳಿಬಿಟ್ಟಿದ್ದೆ. ನಾ ಎಷ್ಟೇ ಸರಿಪಡಿಸುವ ಯತ್ನ ಮಾಡುತ್ತಿದ್ದರೂ ಒಂದು ದಿನ ನಿನ್ನ ಜೊತೆ ಇನ್ನೊಬ್ಬನನ್ನು ಹುಡುಗನನ್ನು ನೋಡಿದಾಗಲೇ ನನ್ನ ಜೊತೆಯಲ್ಲಿದ್ದ ಮಿತ್ರ - "ನೋಡು ಅವಳ ಹೊಸ ಬಾಯ್ ಫ್ರಂಡ್ ನಾ?" ಅಂದ. ನಾ ಅಂದು ಅಷ್ಟು ತಲೆ ಕೆಡಿಸಿಕೊಳ್ಳದಿದ್ದರೂ ನಂತರದ ದಿನಗಳಲ್ಲಿ ನಿಮ್ಮಿಬ್ಬರ ಸುತ್ತಾಟ ನನಗೆಲ್ಲಾ ವಿಷಯ ತಿಳಿಸಿಬಿಟ್ಟಿತು. ಏನು ಮಾಡೋದು, ಕಾಲ ಕೈಮೀರಿಹೋಗಿತ್ತು, ನೀನು ಕೈಬಿಟ್ಟಿದ್ದೆ.... ಆ ನೋವನ್ನ ಮರೆಯೋಕೆ ನಾ ಕುಡಿಯಲು ಶುರುಮಾಡಿದೆ, ಮನೆಗೆ ಹೋಗುವುದು ಕೂಡ ಅಪರೂಪವಾಗುತ್ತಾ ಹೋಗಿ ಬಾರ್ ಮತ್ತು ರೋಡೇ ನನ್ನ ಸರ್ವಸ್ವವಾಯ್ತು...

ನಿನ್ನನ್ನು ಎಷ್ಟು ಮರೆಯಲು ಪ್ರಯತ್ನಿಸಿದರೂ ಹುಃ....ಇಲ್ಲ... ಉಹುಂ, ಆಗ್ತಾನೆ ಇಲ್ಲಾ ನನಗೆ... ಪ್ರೀತಿ ಮಾಡುವಾಗ ನಿನ್ನ ಮೇಲೆ ಇಲ್ಲದಿದ್ದ ಅಷ್ಟು ಕಾತರ ಇಂದು ವಿರಹದ ನೋವಾಗಿ ನನ್ನ ಎದೆಯನ್ನು ಚೂರಿಯಂತೆ ಚುಚ್ಚಿ ಚುಚ್ಚಿ ಕಾಡುತಿದೆ... ಇನ್ನು ಆ ನೋವೊಂದೇ ತಾನೇ ನಿನ್ನ ನೆನಪಿನಲ್ಲಿ ನನಗೆ ಉಳಿದಿರುವ ಎಕೈಕ ಆಸ್ಥಿ...! ಅ ನೋವನ್ನಾದರೂ ಸಹಿಸಬಲ್ಲೆ ನಮಿ... ಅದರೆ ನಿನ್ನ ಪ್ರೀತಿ ಇರದೆ ಹೇಗೆ ಇರಲಿ ಚಿನ್ನಾ!!! ನಾ ತಿಳಿಯದೆ ಮಾಡಿದ ಆ ಸಣ್ಣ ತಪ್ಪಿಗೆ ಇಷ್ಟು ದೊಡ್ಡಾ ಶಿಕ್ಷೆಯಾ? ಇಲ್ಲಾ ನಾ ಇಷ್ಟು ದಿನ ನಿನ್ನ ಪ್ರೀತಿ ಮಾಡಿದ್ದರಲ್ಲಿ ಎನಾದರೂ ಕಮ್ಮಿ ಇತ್ತಾ? ನನಗೇನು ತಿಳಿಯದು ನಮಿ... ಅದರೆ ನನ್ನನ್ನ ನೀ ಒಮ್ಮೆಯಾದರೂ ಕ್ಷಮಿಸಬಹುದಿತ್ತು... ನನಗಾಗಿ ಅಲ್ಲದಿದ್ದರೂ ನನ್ನ ನಿನ್ನ ಪ್ರೀತಿಗೋಸ್ಕರವಾದರೂ ನೀ ಮಾಡಿದ್ದರೂ ಈ ನನ್ನ ಜನ್ಮ ಅಂದೇ ಸಾರ್ಥಕವಾಗುತಿತ್ತು... ನೀ ಅದರಲ್ಲಿ ಏನನ್ನೂ ಮಾಡದೆ ನನ್ನ ಬಿಟ್ಟು ಹೋದೆ... ನನ್ನ ಕಣ್ಣುಗಳಲ್ಲಿ ಕಣ್ಣೇರು ಬಸಿದು-ಬಸಿದು ಹೋಗಿ ಕೇವಲ ರಕ್ತಕಣ್ಣೇರು ಬರುವುದು ಮಾತ್ರ ಬಾಕಿ ಇದೆ. ಒಂದು ಮಾತು ನಿಜ ಕಣೇ... ನಾ ನಿನ್ನನ್ನು ಸಾಯುವವರೆಗೂ ಪ್ರೀತಿಸುತ್ತೇನೆ, ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತೇನೆ ಎಂದೆಲ್ಲಾ ಸಾರಿ-ಸಾರಿ ಈ ಜಗಕೆ ಹೇಳಬಹುದು ನಾನು, ಅದರೂ ಒಂದ ಮಾತ್ ಹೇಳ್ತೀನಿ... ನೀ ನನ್ನ ಹ್ರುದಯ ಕಾಣೇ.., ಹ್ರುದಯವಿಲ್ಲದ ಜೀವವೆಲ್ಲಿ..., ಅದಿಲ್ಲದ ಪ್ರೀತಿ ಬದುಕೋದ ಎಲ್ಲಿ??? ನೀ ನನಗೆ ಸಿಗುವುದಿಲ್ಲ ಅಂತ ಗೊತ್ತಿದ್ದರೂ ನಾ ನಿನ್ನನ್ನೇ ಬೇಡುತ್ತಿದ್ದೇನೆ ಚಿನ್ನಾ.... ಒಂದು ನಿರೀಕ್ಷೆ.., ಒಂದು ಸಣ್ಣ ಆಸೆ... ನೀ ನನ್ನ ಬಂದು ಸೇರುವೆ ಅಂತ ಒಂದು ಕಾಣದ ಹಂಬಲ..!. ಅದೆಲ್ಲಾ ಆ ಮೇಲಿನವನ ಕೈಲಿ ಬಿಟ್ಟಿದ್ದು ನಮಿ... ಅದರೂ ನಾ ನಿನ್ನನ್ನು ಕೊನೆಯಲ್ಲೂ ಕೇಳುವುದು ಒಂದೇ ಮಾತು -- ಹೇಳು ನಾ ಮಾಡಿದ ತಪ್ಪಾದರೂ ಏನು???

ನಿನ್ನ.... ರವಿ
ವಿನಯ್ ...
ಹೀಗೊಂದು ಸನ್ನಿವೇಶ....

ಗಣಿತದ ತರಗತಿ ಆಗಲೇ ಮುಗಿದಿತ್ತು. ಮುಂದಿನ ಪಿರಿಯಡ್ ಅಟೆಂಡ್ ಮಾಡಲು ಪಕ್ಕದಲ್ಲೇ ಇದ್ದ ಇನ್ನೊಂದು ಕ್ಲಾಸ್ ಗೆ ಹೋಗಲು ಇನ್ನೇನು ಎಳಬೇಕು... ಅಷ್ಟರಲ್ಲೇ ಮೂವರು ಹುಡುಗರ ಗುಂಪು ತರಗತಿಯ ಬಾಗಿಲಿನ ಎದುರು ಪ್ರತ್ಯಕ್ಷ...! ಅದರಲ್ಲಿ ಕಪ್ಪಗಿದ್ದವನು - " ಎಲ್ಲರೂ ಕುತ್ ಕೊಳ್ಳಿ.." ಎಂದು ಹೇಳಿದ. ನಂತರ 25 ನಿಮಿಷ ಹೆಸರು, ಓದಿದ ಶಾಲೆ ಎಲ್ಲದರ ಎನ್ಕ್ವಯಿರಿ....! ಕೊನೆಗೆ ಹೊರಗಿದ್ದ ಇನ್ನೊಬ್ಬನ ಸಿಗ್ನಲ್ "ಯೆ... ಆರ್.ಆರ್ ( ಒಬ್ಬ ಲೆಕ್ಚರರ್ ಹೆಸರು) ಬಂದ ಕಣೋ..". ಇದನು ಕೇಳಿದ ಕೂಡಲೇ ಒಟ್ಟಿಗೆ ಮೂವರು ಮಾಯ!!!

-- ಇದು ಯಾವುದೋ ಸಿನಿಮಾ ಸನ್ನಿವೇಶ ಅಲ್ಲ... ನಾನು ಪ್ರಥಮ ಪಿ.ಯು ತರಗತಿಗೆ ಸೇರಿ 2ನೆ ದಿನಕ್ಕೆ ನೆಡೆದ ಘಟನೆ ಇದು..! ಅಂದು ನಾವು ಒಬ್ಬ ಲೆಕ್ಚರರ್ ಅಗಮನದಿಂದ ಹೇಗೋ ಮುಂದಿನ "ಎನ್ಕ್ವೈರಿ" ಇಂದ ತಪ್ಪಿಸಿಕೊಂಡಿದ್ದವು.... ಅದು ಒಂದು ಸಣ್ಣ "ರಾಗಿಂಗ್" ದೊಡ್ಡದಾಗದೇ ಅಲ್ಲೇ ಅಂತ್ಯ ಕಂಡಿತ್ತು... ನಂತರ ಅವರು ಮತ್ತೆ ಎಂದೂ ಬರದಿದ್ದರೂ ನಮಗೆ ಅವರ ಭಯ ಸಲ್ಪ ದಿನದ ವರೆಗೆ ಇತ್ತು ಎನ್ನಿ.

ಹೀಗೆ ಇದೆಲ್ಲಾ ನೆನಪಿಗೆ ಬಂದದ್ದು ಸಲ್ಪ ದಿನದ ಹಿಂದೆ ನೆಡೆದ ಶಿಮ್ಲಾದ ಒಂದು ಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿಗಳ ಮೇಲೆ ನೆಡೆದ ಹೀನ ದೌರ್ಜನ್ಯದಿಂದ - ಇದು ಒಂದು ಉನ್ನತ ಮಟ್ಟದ "ರಾಗಿಂಗ್". ಎಲ್ಲಿಯವರೆಗೂ ಅಂದರೆ ಕೆಲವು ವಿದ್ಯಾರ್ಥಿಗಳ ಕಿವಿ ಟಮಟೆ ಹರಿದು ಹೋಗುವ ತನಕ!!!. ನಂತರದ ಬೆಳವಣಿಗೆಯಲ್ಲಿ ಅಷ್ಟು ಜನ ಶಾಲೆಯಿಂದ ಹೊರದಬ್ಬಿಸಿಕೊಂಡಿದ್ದರೂ ಸಹ ತಮಗಿರುವ "ಉನ್ನತ ಸಂಪರ್ಕ" ಗಳನ್ನು ಬಳಸಿ ಆ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಖ್ಯ ಪ್ರಾಧ್ಯಾಪಕರ ಮೇಲೆ ಒತ್ತಡ ತಂದು ತಮ್ಮ ಮಕ್ಕಳನ್ನು ಪುನ: ಸೇರಿಸಿಕೊಳ್ಳಲು ಮಾಡುತಿರುವ ಪ್ರಯತ್ನ... ( ಪುಣ್ಯಕ್ಕೆ ಆ ಮುಖ್ಯ ಪ್ರಾಧ್ಯಾಪಕರು ತಮ್ಮ ಸ್ಥಾನ ಹೋದರೂ ಚಿಂತೆ ಇಲ್ಲ ಅವರನ್ನು ಮತ್ತೆ ಶಾಲೆಗೆ ಸೇರಿಸಿಕೊಳ್ಳುವ ಮಾತೇ ಇಲ್ಲಾ ಎಂಬ ಅಶ್ವಾಸನೆ ಕೊಟ್ಟಿದ್ದಾರೆ... 1ನೇ ಮೇ ರ ಪತ್ರಿಕ ವಿವರ.. ) ಎಲ್ಲಾ ಈ "ರಾಗಿಂಗ್" ಪಿಡುಗಿಗೆ ಅ ವಿದ್ಯಾರ್ಥಿಗಳ ಕೊಡುಗೆ, ಅವರ ಪೋಷಕರ ನಿರಂತರ ಪ್ರೋತ್ಸಾಹ...! ಎಲ್ಲಾ ಈ "ರಾಗಿಂಗ್" ಪಿಡುಗನ್ನು ಇಷ್ಟು ಎತ್ತರಕ್ಕೆ ಬೆಳೆಯಲು ಮಾಡಿ ಅದೇ ಇಂದು ಹಲವು ಇತರ ವಿದ್ಯಾರ್ಥಿಗಳಿಗೆ ಕಂಟಕವಾಗಿ ಕಾಡುತಿದೆ. ಕೇವಲ ಹೊಸ ವಿದ್ಯಾರ್ಥಿಗಳ ಪರಿಚಯದ ಸಮಯದಲ್ಲಿ ಹಿರಿಯ ವಿದ್ಯಾರ್ಥಿಗಳ ನಡುವೆ ನೆಡೆಯುತ್ತಿದ್ದ ಮಾತುಕತೆ, ಕಾಲ ಕಳೆದಂತೆ ವಿಕೃತ ರೂಪ ತಾಳಿ ಇತರ ಜೀವಕ್ಕೆ ಮಾರಕವಾಗುವಂತ ಹಂತ ತಲುಪಿಬಿಟ್ಟಿದೆ. ಹಿರಿಯ ವಿದ್ಯಾರ್ಥಿಗಳು ತಮ್ಮ "ಶೋಕಿ" ಯ ತೆವಲಿಗೆ ತಮಗೆ ಕಿರಿಯರಾದ ಇತರ ವಿದ್ಯಾರ್ಥಿಗಳ ಗೋಳು ಹೊಯ್ದುಕೊಂಡು, ನಾನ ರೀತಿಯ ಕಾಟ ಕೊಟ್ಟು, ನಂತರ ಪ್ರಾಣ ತಗೆಯುವ ( ಇಲ್ಲವೆ ಪೀಡನೆಗೊಳಪಟ್ಟ ಅ ವಿದ್ಯಾರ್ಥಿ ಅತ್ಮಹತ್ಯ ಮಾಡಿಕೊಳ್ಳುವರೆಗೂ...) ಕೀಳು ಅಭಿರುಚಿಯಿಂದ ಯಾರಿಗೆ ಲಾಭ ಹೇಳಿ?

---ರಾಗಿಂಗ್ ಮಾಡಿದ ಆ ಹಿರಿಯ ವಿದ್ಯಾರ್ಥಿಗೋ?
--- ರಾಗಿಂಗ್ ಮಾಡಿಸಿಕೊಂಡು ನೊಂದ ಆ ಕಿರಿಯ ವಿದ್ಯಾರ್ಥಿಗೋ?
--- ಈ ಎಲ್ಲದಕ್ಕೂ ಸುಮನಿದ್ದು ಪ್ರೋತ್ಸಾಹಿಸಿದ ವಿದ್ಯಾಲಯಕ್ಕೋ??


ಉತ್ತರ ಖಂಡಿತವಾಗಿಯೂ ಎಲ್ಲೂ ಸಿಗುವುದಿಲ್ಲ. ಹಾಗೇ ನೊಂದ ವಿದ್ಯಾರ್ಥಿಗೆ ಎಷ್ಟೇ ಸಂತೈಸಿದರೂ ಮನಕ್ಕೆ ಆದ ನೋವು ಎಂದೂ ಮಾಯುವುದಿಲ್ಲ. ನಮ್ಮ ದೇಶದ ಉನ್ನತ ಕಾನೂನು ವ್ಯವಸ್ಥೆ ಎನಲ್ಲಾ ಕಾನೂನು ಸೌಕರ್ಯ ಕೊಟ್ಟರೂ ಸಹ ಅದರ ಮರೆಯಲ್ಲೇ ನಡೆಯುವ ಈ ಹೀನ ಕಾರ್ಯ, ಮಾಡಿದ ಮೇಲೆ ಕಾನೂನ ಪರಿಧಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ... ಹುಂ ಈ ಎಲ್ಲಾ ಬೆಳವಣಿಗೆ ನಮ್ಮ ವಿದ್ಯಾರ್ಥಿ ಸಮೂಹಕ್ಕೆ ಇಲ್ಲದ ತೊಂದರೆಯನ್ನ ಕೊಡುಗೆ ನೀಡುತ್ತಿದೆ. ಈ ಹಿಂದೆ ಎಷ್ಟೇ ಪ್ರಕರಣಗಳು ಬೆಳಕಿಗೆ ಬಂದಿದ್ದರೂ ಸಹ ಮತ್ತೊಂದು ದಿನ ಹಿಂದಿನದು ಸಲ್ಪ ಹಳೆಯದಾಯಿತೇನೋ ಎನ್ನುವಂತೆ ಹೊಸತರದ "ರಾಗಿಂಗ್" ವಿಧಾನ... ಹೆಚ್ಚುತ್ತಾ ಹೋಗುತ್ತವೇ ಹೊರತು ಇಳಿಯುವ ಸೂಚನೆಯೇ ಇಲ್ಲ!!!. ಹಾಗೇ ಈ ಪಿಡುಗು ಹಲವು ಮುಗ್ಧ ಮನಸ್ಸುಗಳ ಮೊರಟುವಿಕೆಯನ್ನ ತಡೆಯಲು ಸಾಧ್ಯವೂ ಇಲ್ಲ!

ನಾವೇನೋ ಹೇಳಬಹುದು - "ಕಾಲೇಜ್ನಿಂದ ಇಂತವರ್ನ್ನ ಹೊರಗೆ ಎಸೆಯಬೇಕು.... " "ಪೋಲೀಸ್ ಸ್ಟೇಶನ್ ನಲ್ಲಿ ಹಾಕಿ ಚೆನ್ನಾಗಿ ಒದಿಸಬೇಕು..." "ಜೈಲ್ನಲ್ಲಿ ಕೊಳೆಯೋಕೆ ಬಿಡ್ಬೇಕು...". ಅದರೆ ಇದೆಲ್ಲಾ ಎಷ್ಟು ದಿನ/ಎಷ್ಟು ಕಾಲ... ಪುನ: ಸಜೆ ಮುಗಿಸಿ ಹೊರ ಬಂದ ಈ ವಿದ್ಯಾರ್ಥಿಗಳು ಇನ್ನೆಷ್ಟು ಕಂಟಕರಾಗಬಹುದೋ ದೇವರೆ ಬಲ್ಲ!!! ಇತ್ತೀಚೆಗೆ ಕಾಣಬಂದಂತೆ "ರಾಗಿಂಗ್" ಪಿಡುಗು ಕೆಲ ಕಾಲೇಜ್ ನ ವಿದ್ಯಾರ್ಥಿಗಳಿಗೆ "ಸ್ವಯಂ ಪ್ರತಿಷ್ಟೆ" ಯ ವಿಚಾರವೇ ಆಗಿಹೋಗಿದೆಯೆನೋ. "ರಾಗಿಂಗ್" ಮಾಡದಿದ್ದರೆ ನಾವು ಕಾಲೇಜ್ ನಲ್ಲಿ ಇದುದ್ದಾದರೂ ಎತಕ್ಕೆಂದು ತಿಳಿಯುವ ಹುಂಬು ಧೈರ್ಯ/ಮಾನಸಿಕೆ ಕಾಯಿಲೆಗೆ ಯಾರು ಮದ್ದು ಕೊಡುವರು? ಹೆಚ್ಚೇನು ಕೇಳಿದರೆ - " ಅಯ್ಯೋ, ನಮಗೂ ಜೂನಿಯರ್ ಅಗಿರುವಾಗ ನಮ್ಮ್ ಸೀನಿಯರ್ಸ್ ಇದೇ ಮಾಡಿದರಲ್ಲಾ, ನಾವೇನು ಈಗ ಇಲ್ಲ್ವೆನೋ?" ಎಂಬ ಉತ್ತರ ಬರುತ್ತದೆ... ಅಂದರೆ ಅರ್ಥ... ಇನ್ನೂ ಹೆಚ್ಚಾಗಿ, ಇನ್ನೂ "ರಸವತ್ತಾಗಿ" ಪರ ವಿದ್ಯಾರ್ಥಿಯ ಹಿಂಸಿಸಿ ಅವರು ಪಡುವ ನೋವಿನಲ್ಲಿ ತಾವು ವಿಕೃತ ಅನಂದ ಪಡಬೇಕೆಂದು...! ಎಂತಹ ಹುಚ್ಚಲ್ಲವೇ ಇದು...

ನಮ್ಮ ಕಾನೂನಿನ ಬಗ್ಗೆ ಹೇಳುವುದಾದರೆ ನಮ್ಮ ರಾಷ್ಟ್ರದ ಸಂವಿಧಾನ ಪ್ರಪಂಚದ ಒಂದು ಬಲಿಷ್ಟ ಸಂವಿಧಾನಗಳಲ್ಲಿ ಒಂದು. ಆದರೂ ಇನ್ನಷ್ಟು ಮಾರ್ಪಾಡುಗಳನ್ನ ತರದೆ ಹಾಗೇ ಬಿಟ್ಟರೆ ಕೊನೆಗೆ ಬಲಿ ಹೆಚ್ಚಾಗುತೇ ಹೊರತು ಸಮಾಧಾನ ಸಿಗುವ ಲಕ್ಷಣಗಳು ಕಾಣುವಂತೆ ಇಲ್ಲ. ಅದರೂ ಒಂದು ಒಳ್ಳೆಯ ಅಶಾಭಾವನೆಯೊಂದಿಗೆ ನಾವು ಬಯಸುವುದು ಒಂದೇ-- " ರಾಗಿಂಗ್ ಪಿಡುಗು ಸಂಪೂರ್ಣ ನಿರ್ಮೂಲನೆ ಅಗಲಿ, ವಿದ್ಯಾರ್ಥಿ ಸಮುದಾಯಕ್ಕೆ ವಿಜಯ ಸಿಗಲಿ..."
ವಿನಯ್ ...
ಡಾ||ರಾಜಣ್ಣನವರ "ಪ್ರೇಮದ ಕಾಣಿಕೆ" ಚಿತ್ರದ ಒಂದು ಹಾಡು....

"ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ..."

ಅದೇ ಹಾಡಲ್ಲಿ ಬರುವ ಎರಡು ಸಾಲು:

"ಆಸೆಯೆಂಬ ಬಿಸಿಲ ಕುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ..."
"ಅವನ ನಿಯಮ ಮೀರಿ ಇಲ್ಲಿ ಏನು ಸಾಗದು, ನಾವು ನೆನೆಸಿದಂತೆ ಬಾಳ ಏನು ನಡೆಯದು..."


ಈ ಎರಡು ಸಾಲುಗಳ ಅರ್ಥ ತುಂಬ ಅರ್ಥಗರ್ಭಿತವಾಗಿದೆ ಅಲ್ಲವೆ.... ತುಂಬ ಅಸೆ ಪಟ್ಟ ವಸ್ತು, ವ್ಯಕ್ತಿ ಏಕೋ ತಿಳಿಯದೆ ಬಿಟ್ಟು ಹೋದಾಗ/ಕೈ ತಪ್ಪಿದಾಗನಮ್ಮ ಮನಸ್ಸು ಎಲ್ಲೊ ಕೊರಗಿ, "ಇದು ನನ್ನದಾಗಿರಲಿಲ್ಲ..." ಅನ್ನೋ ಮಾತು ನಮ್ಮ - ನಿಮ್ಮ ಜೀವನದಲ್ಲಿ ಎಂದಾದರೂ ಬಂದೇ ಇತ್ತು ಅಲ್ಲವೇ (ಬಂದಿಲ್ಲ ಅಂದರೆ ಒಳ್ಳೆದಾಯ್ತು ಬಿಡಿ.. ). ನಾವು ನಮ್ಮ ಜೀವನದ ವಿವಿಧ ಘಟ್ಟಗಳಲ್ಲಿ ವಿವಿಧ ಹಂತವ ದಾಟಿ ಮುಂದಿನಹಂತ ತಲುಪುತ್ತೇವೆ. ನಾವು ಈ ಮೇಲಿನ ಸಾಲುಗಳನ್ನು ನಮ್ಮ ಈ ಜೀವನದ ವಿವಿಧ ಹಂತಕ್ಕೆ ಸೇರಿಸುವ ಪುಟ್ಟ ಪ್ರಯತ್ನವೇ ಈ ಲೇಖನ...

ದೃಶ್ಯ 1 : ಶಾಲೆ....

ನಾವು ಶಾಲಾ ಹಂತದಲ್ಲಿರುವಾಗ ಇತರರನ್ನು ಕಂಡು ನಾವು ಅದನು ಪಡೆಯಬೇಕೆಂಬ ಕನಸು, ಉತ್ಕ್ರುಷ್ಟ ಬಯಕೆ ನನ್ನನ್ನು/ನಿಮ್ಮನ್ನು ಸದಾ ಕಾಡದೆ ಇರದೆ ಇರಲಿಲ್ಲವೆನೋ?. ಫ್ರಂಡ್ಸ್ ತಂದ ಬಾಕ್ಸ್, ಪೆನ್, ವಿಚಿತ್ರ ಅವತಾರದ ಪೆನ್ಸಿಲ್ ಎಲ್ಲಾ ನಮ್ಮ ಕಣ್ಣು ಕುಕ್ಕದೇ ಇರುತ್ತಿದ್ದವೇ? ಆದರೆ ನೀವೇ ಯೋಚಿಸಿ..., ಮನೆಯಲ್ಲಿ ತಗೆದುಕೊಡುವುದು ಬಿಡಿ, ಅದರ ಬಗ್ಗೆ ಹೇಳುವಾಗಲೇ ನಮ್ಮ ಪೋಷಕರು " ಇಲ್ಲಾ ಪುಟ್ಟ/ಪುಟ್ಟಿ... ಈಗ ಕಾಸಿಲ್ಲಾ..." ಅಥವಾ " ಪುಟ್ಟ/ಪುಟ್ಟಿ ಇದು ನಮ್ಮಂತಹವರು ತರುವ ವಸ್ತುವಲ್ಲಾ..." ಎಂಬ ಉತ್ತರ ಹಲವಾರು ಸಲ ನಾವು ಕೇಳಿಯೇ ತೀರುತ್ತೇವೆ... ಹಟ ಮಾಡಿದ್ದೆ ಆದರೆ ಕೊನೆಗೆ ಒದೆ ತಿಂದು ಕೊನೆಮಾಡಿಕೊಂಡಿರುತ್ತೇವೆ... ಹಾಗೇ ನಮ್ಮ ಜೀವನದ ಮೊದಲ ನಿರ್ಬಂಧ (ರೆಸ್ಟ್ರಿಕ್ಷನ್ - restriction) ನಮ್ಮ ಮೇಲೆ ನಮಗೆ ಗೊತ್ತಿಲ್ಲದೆ ಬೀಳಲು ಪ್ರಾರಂಭಿಸುತ್ತದೆ. ಕೆಲವರು ಹಟ ಹಿಡಿದು ಆ ವಸ್ತುವ ಪಡೆದು ಬಿಟ್ಟರೆ, ನಮ್ಮ ನಿಮ್ಮಂತಹವರು ಬರಿ ಅಸೆಯ ಜೊತೆಯಷ್ಟೇ ತೃಪ್ತಿ ಹೊಂದು ಸುಮ್ಮನಾಗಬೇಕಾಗುತ್ತದೆ!!! ಇದು ನಿಜ ಅಲ್ಲವೇ???

ದೃಶ್ಯ 2 : ಹೈ ಸ್ಕೂಲ್....

"ಹೈ ಸ್ಕೂಲ್"... ಈ ಹಂತ ನನಗೆ ಯಾಕೋ ವಿಚಿತ್ರವೇ ಅಂತ ಅನಿಸದೇ ಬಿಡುವುದಿಲ್ಲ ( ನಿಮ್ಮ ಈ ಹಂತ ಬೇರೆಯದೇ ರೀತಿ ಇದ್ದಿರಬಹುದು ಅನ್ನಿ...!). ಹುಡುಗಾಟದ ಹಂತ ಇನ್ನೂ ಪೂರ್ಣಗೊಳಿಸದ ಸ್ಥಿತಿ. ಅಲ್ಲಿ ಬರುವ/ಸಿಗುವ ಮಿತ್ರರು ಮತ್ತು ಇತರರ ಸ್ಥಿತಿಯೂ ಬೇರೆ... ಹೈ ಸ್ಕೂಲ್ ಹೆಚ್ಚು ಕಮ್ಮಿ "ಕಾಂಪಿಟಿಷನ್" ಗಳನ್ನು ಪ್ರಾರಂಭಿಸೋ ವಯಸ್ಸು. ಅವನು ಅದು ಸೇರಿದ/ ಇದು ಮಾಡಿದ/ ಇದು ತಗೊಂಡ...! ಅವೇ ಜಾಸ್ತಿ... ಇಲ್ಲೂ ನಮ್ಮ ಹಾಡಿನ ಸಾಲುಗಳು ನಮ್ಮನ್ನು ಬಿಡದೆ ಕೆಲಸ ಮಾಡಿ ತೋರಿಸುತ್ತವೆ... ಒಬ್ಬನು ಕರಾಟೆ ಕ್ಲಾಸ್ ಸೇರಿದ ಎಂದೋ/ ಡ್ರಾಯಿಂಗ್ ಕ್ಲಾಸ್ ಸೇರಿದ ಎಂದೋ ನಾವು ಬಯಸಿ ನಮ್ಮ ಪೋಷಕರ ಬಳಿ ಹೋದಾಗ - "ಮುಂದಿನ ಸಲ ನೋಡೋಣ..." ಇಲ್ಲಾ "ಅದಕ್ಕೆ ಫಿಸ್ ಜಾಸ್ತಿ ಕಾಣೋ, ಈಗ ಸೇರ್ಸೋಕೆ ಅಗಲ್ಲಾ..." ಎಂಬ ಮಾತೇ ನೀವು ಅದರ ಬಗ್ಗೆ ಯೋಚಿಸುವುದನ್ನ ಮರೆಯಲು ಮಾಡಿಬಿಡುತ್ತದೆ. ಹುಂ..., ಮರಳಿ ಮತ್ತೆ ಅದೇ ಸ್ಥಿತಿ - "ಕಾಸಿದ್ದಾಗ... " ಇಲ್ಲಾ " ಕಾಸು ಅಡ್ಜಸ್ಟ್ ಮಾಡಿ ನೆಕ್ಷ್ಟ್ ಕ್ಲಾಸ್ ಶುರುವಾಗೋ ಟಾಯಿಮ್ಗೆ ಸೇರೋಣ ಬಿಡು...!!"

ದೃಶ್ಯ 3 : ಕಾಲೇಜ್....

ಇದು ನಮ್ಮ ಜೀವನದ ಇನ್ನಷ್ಟು ವಿಚಿತ್ರ ಹಂತದ ಭಾಗ ಎನ್ನಬಹುದು. ಅದೂ "ಲವ್" ಯಂಬ ಇನ್ನೊಂದು ವಿಚಿತ್ರ ಕಾಯಿಲೆ ಅಂಟಿಕೊಂಡರೆ ನಾವು ಯಾವ ದಿಕ್ಕಿಗೆ ಹೋಗಿ ಸೇರುತ್ತೇವೆ ಎಂಬ ಸಣ್ಣ ಸುಳಿವು ಕೊಡದ ಸಮಯ. ಇಲ್ಲಿ ಫ್ರಂಡ್ಸ್.... ಅದು ಅದಷ್ಟು ಹೆಚ್ಚು ಫ್ರಂಡ್ಸ್/ಫ್ರಂಡ್ಸ್ ಸರ್ಕಲ್ ಪಡೆಯಬೇಕೆಂಬ ಹಂಬಲವೇ ನಮ್ಮನ್ನು ಇನ್ನೂ "ಅಟ್ಟೆರ್ ಕಾಂಪಿಟಿಟಿವ್" ಸ್ಟೇಟ್ ಗೆ ತಳ್ಳಿಸಿಕೊಳ್ಳೂವ ಸ್ಥಿತಿ ಮಾಡಿಕೊಳ್ಳೂತ್ತೇವೆ. ನಾವು ಆ ಹಂತದಲ್ಲಿ ಯಾವ ಸ್ಥಿತಿ ತಲಪುತ್ತೇವೆ ಅಂದರೆ ಬೇಡ-ಬೇಡವೆಂದರೂ ಮಾಡೇ ತೀರಬೇಕೆಂಬ ಹುಚ್ಚು ಹಂಬಲ. ಆಗ ಮೇಲಿನ ಸಾಲು " ನಾವು ನೆನೆಸಿದಂತೆ..." ತಿಳಿಸದೆ ಕೆಲಸವನ್ನು ಪ್ರಾರಂಭಿಸಿರುತ್ತದೆ. ಇತರರು ನಮ್ಮ ಎದುರಿಗೆ "ಫ್ರೆಂಡ್ಸ್" ಆಗಿ ವರ್ತಿಸಿದರೂ, ಹಿಂದೆ ಇಂದ ಪರಮ ಶತ್ರುವಿಗಿಂತ ಕೆಟ್ಟದಾಗಿ ವರ್ತಿಸಿ ನೋವು ಉಂಟುಮಾಡುವುದರಲ್ಲೋ ಅಥವಾ "ಲವ್" ಮಾಡಿದ್ದರೆ ನೀವು ಇಷ್ಟಪಟ್ಟ ( ಅದು ಕೇವಲ ಮನಸ್ಸಿನಲ್ಲಿ ಮಾತ್ರ ...!) ಇನ್ನೊಬ್ಬನ ಹಿಂದೆ ಸುತ್ತಿ ನಿಮ್ಮ ಮನಸ್ಸನ್ನು ಚುcಚಿ ನೋವಿಸುವ ಹಂತದಲ್ಲೋ ಕೊನೆಗೆ " ಐ ಲವ್ ಊ..." ಎಂದು ಕೊನೆಗೆ ಕಾಣದೆ ಮಾಯವಾಗುವ ಮಾಯಮ್ರಗದಂತೆ ಹುಡುಗ/ಹುಡುಗಿ ನಿಮ್ಮ ಈ ಹಂತದಲ್ಲಿ ಕಾಣಿಸದೇ ಇರರು... ಆಗ ನಿಮಗೆ ಉಳಿದಿರುವುದು ಒಂದೇ ಒಪ್ಷನ್ - "ಹೋಗಲಿ ಬಿಡು... ನನ್ನ ನಸೀಬ್ ಚೆನ್ನಾಗಿ ಇರಲಿಲ್ಲ...!!!" ಅಥವಾ " ನನ್ನ ಅದೃಷ್ಟ ಚೆನ್ನಾಗಿರಲಿಲ್ಲ.."

ದೃಶ್ಯ 4 : ಕೆಲಸ (ಪ್ರೊಫೆಷನ್)....

ಇಲ್ಲಿ ಕೆಲವರು ಗ್ರಾಡ್ಜ್ಯುಯೇಟ್, ಪಿ.ಜಿ ಹಂತ ಯೆಲ್ಲ ಮಾಡಿ ಮುಗಿಸುತ್ತಾರೆ ಬಿಡಿ. ಅಲ್ಲಿಗೆ ನಾವೆಲ್ಲ ಹೋಗುವುದು ಬೇಡ. ಅದರೆ ಪ್ರತಿಯೊಬ್ಬ ತಾನು ಸಂಪಾದಿಸಬೇಕು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂಬ ಹಂಬಲ ಮೇಲಿನ ಕಾಲೇಜ್ ಹಂತದಲ್ಲೇ ಇದ್ದೇ ಇರುತ್ತದೆ... ನಮ್ಮ-ನಿಮ್ಮೆಲ್ಲರ ಹಾಗೇ. ಹಾಗೆ ನಾವು ನೀವು ಯೋಚಿಸುವ/ಮಾಡುವ ಮೊದಲ ಕಾರ್ಯ - "ಕೆಲಸ ಹುಡುಕುವುದು"...!. ಅದಕ್ಕಾಗಿ ನಾನು ಕೂಡ ಈ ಹಂತಕ್ಕೆ ಡೈರೆಕ್ಟ್ ಆಗಿ ಬರುತ್ತೇನೆ. ಕೆಲಸ ಸೇರಿದ ಹೊಸತರಲ್ಲಿ ದುಡಿದೇ ತೀರಬೇಕೆಂಬ ತವಕ/ಶಹಭಾಷಗಿರಿ ಪಡೆಯಬೇಕೆಂಬ ನಾವು ನೀವು ಸಾಮಾನ್ಯವಾಗಿ ಹೊಂದೇ ಇರುತ್ತೇವೆ. ಅದರೂ ಕೆಲವೇ ಅಯ್ದ ಜನ ( ನನ್ನ ಪ್ರಕಾರ "ಎಗ್ಸಾಮ್ಪಲ್ಸ್ (examples)" ) ಬಿಟ್ಟು ಬೇರೆ ಯಾರಿಗಿದೆ ಈ ಸೌಭಾಗ್ಯ...!?!. ನೀವು ನೆಟ್ಟಗೆ ಕೆಲಸ ಮಾಡಿದರೂ ಕೊಂಕು ಹುಡುಕುವ ನಿಮ್ಮ "ಸೀನಿಯರ್ಸ್", ಕೆದಕಿ ಕಾಲೆಳೆದಿ, "ಫಿಟ್ಟಿಂಗ್" ಇಟ್ಟು ಮಜಾ ಮಾಡುವ ಸಹೋದ್ಯೋಗಿ...! ಇದು ಲೇಟ್ ಮಾಡಿದೆ, "ಪೆರ್ಫಮೆನ್ಸೆ" ಸರಿ ಇಲ್ಲಾ... ಎನ್ನುವ ಲೇಡರ್/ಹೆಚ್.ಆರ್ ಗಳ ಸಂತೆಯೇ ತುಂಬಿ ನೀವು ಇಗೋರಿಗು ಮಾಡಿರುವುದು "ಕತ್ತೆ ಹೊರುವ" ಕೆಲಸ ಎಂದು ನಿಮ್ಮ ಮನಸ್ಸು ರೇಕಾರ್ಡ್ ಮಾಡಿಕೊಳ್ಳುತ್ತದೆ. ಬೇಡ ಎಂದರೂ "ಇದು ಇಷ್ಟೇನಾ..!" ಎಂಬ ಪ್ರಶ್ನ-ಚಿನ್ಹೆ ಮನದಲ್ಲಿ ಅcಚು ಬಿದ್ದುಬಿಡುವ ಸ್ತಿತಿ.... ಹುಂ... ಮತ್ತೆ ಅದೇ ಯೋಚನೆ... ಅದೇ ಕೊರಗು - " ನಮಗೆ ಅದ್ರುಷ್ಟವೇ ಇಲ್ಲವೆನೋ.... " ಇಲ್ಲ "ಹಣೆಯಲ್ಲಿ ಇಷ್ಟೆ ಇರೋದು ನನಗೆ...!". ಮೇಲಿನ ಸಾಲು ಕಾಡುವ ( ನಾವು ನೆನೆಸಿದಂತೆ...) ಸಮಯ...!

ಹೇಗೆ ನಾವು ಎಲ್ಲದಕ್ಕು "ಕಂಪ್ರೋಮೈಸ್" ಆಗಿ ಕಾಲ ತಳ್ಳುತ್ತ ಇರಲು.. ಹೆಂಡತಿ/ಗಂಡ... ಮನೆ/ಮಕ್ಕಳು... ಅಸ್ತಿ/ಹಣ ಏಲ್ಲ ಹಂತ ಸದ್ದಿಲ್ಲದೆ ದಾತಿ ಹೋಗುತ್ತೇವೆ... ಕೆಲವು ವಸ್ತು ಒದಗಿ ಬಂದರೆ ನಮ್ಮ ಅದೃಷ್ಟವೆಂದು, ಜಾಸ್ತಿ ನಮ್ಮ ಕೈಯಿಂದ "ಮಿಸ್" ಅಯ್ತೆಂದರೆ ನಮ್ಮ ಹಣೆ ಬರಹ ನೆಟ್ಟಗೆ ಇಲ್ಲವೆಂದೋ... ಹೇಗೆ ಎಲ್ಲದಕ್ಕು ಕೊರಗಿ/ನೊಂದಿ... "ಫೈನಲ್" ಸೀನ್ - ಸಾವಿಗೂ ಸೆಟಲ್ ಮಾಡಿಕೊಳ್ಳುವ ಜನ ನಾವು... ಎಲ್ಲಾ ಭೂಮಿಯ ಮೇಲೆ ಬಿಟ್ಟು ಬರಿಗೈ ದಾಸರಾಗಿ ಹೋಗುವಾಗ...!

ಇದು ಕೇವಲ ನನ್ನ ಅನಿಸಿಕೆ ಮಾತ್ರ... ನಿಮ್ಮ ಪ್ರಕಾರ ಜೀವನ ಬೇರೆ ರೀತಿಯೇ ಇರಬಹುದು... ಈ ಲೇಖನ "negative thinking" ಸರಕು ಅಲ್ಲಾ... ಅದರೂ ಈ ಜೀವನ ನಮಗೆ ಕೆಲವೊಮ್ಮೆ ಉತ್ತರಿಸಲಾಗದ ಪ್ರಶ್ನೆಗಳನ್ನು ಎದುರಿಗೆ ಇಡುತ್ತದೆ... ನೀವು ಎಷ್ಟೇ ಪ್ರಯತ್ನಿಸಿದರೂ ಆ ಪ್ರಯತ್ನಕ್ಕೂ ಮೀರಿ ಅಗದ ಕೆಲಸ, ಕಾರ್ಯ ನಿಮ್ಮ ಮನದಲ್ಲಿ ಒಮ್ಮೆ ಸಂಶಯ/ಸೋಲಿನ ಭಾವನೆ ತಂದಿರಬಹುದು.. ಇವಕ್ಕೆ ಎನು ಕಾರಣ ಎಂದು ನೀವು ಹೇಳಬಲ್ಲಿರಾ...!
ವಿನಯ್ ...
ಶ್ಯಾಮ್ ನನ್ನ ತಲೆ ಸವರುತ್ತಿದ್ದಾನೆ. ಮುಖದ ಮೇಲೆ ಅದೇ ಸುಂದರ ನಗೆ, ಮುಗ್ಧ ಕಣ್ಗಳು..., ಆ ಕಣ್ಣಿಗಲ್ಲವೇ ತಾನೇ ನಾನು ಮನಸೂರೆಗೊಂಡಿದ್ದು ಮತ್ತು ಅವನ ಬಾಳಸಂಗಾತಿಯಾದದ್ದು.! ನಿದ್ದೆ ಇನ್ನೊ ಕಣ್ಣ ತುಂಬ ಹಾಗೇ ತುಂಬಿಕೊಂಡಿದೆ.. ಅರೆತೆರೆದ ಕಣ್ಣುಗಳಿಂದ ಅವನ ನೋಡುತ್ತಾ ನಾ ಕನಸಿನ ಲೋಕಕ್ಕೆ ತೇಲಿ ಹೋದೆ... ಇಬ್ಬರ ಜೀವನದ ಸವಿಪಯಣದ ಹಾದಿಯ ನೆನೆಸುತ್ತಾ....

**************

ನಾನು ಮತ್ತು ರೀಟಾ, ಇಬ್ಬರು ಒಂದೇ ರೂಮಿನಲ್ಲಿದ್ದವರು, ಎಸ್.ಜೆ ಗರ್ಲ್ಸ್ ಹೊಸ್ಟೆಲ್ ನಾವು ಇದ್ದ ಜಾಗ. ಅಂದ ಹಾಗೇ ಅವಳು ನನ್ನ ಜೀವದ ಗೆಳತಿ ಕೂಡ. ಅಂದು ನಾನು ಬೆಳಗ್ಗೆ ಎದ್ದಾಗಲೇ ಸಮಯ 8:30 ಅಗಿತ್ತು.. ರಾತ್ರಿ ಟಿ.ವಿ ನೋಡುತ್ತಾ ಲೇಟ್ ಆಗಿ ಮಲಗಿ ಇಂದು ಬೆಳಗ್ಗೆ ಎಳುವ ಅಷ್ಟರಲ್ಲಿ ಒಂದು ಗಂಟೆ ಲೇಟ್ ಆಗಿ ಹೋಗಿದೆ.... ಏನು ಮಾಡುವುದು!!! ಇವತ್ತು ಚರ್ಚಾ ಸ್ಪರ್ಧೆ ನಮ್ಮ ಕಾಲೇಜ್ ನಲ್ಲಿ. ಶ್ಯಾಮ್, ನಮ್ಮದೇ ಕಾಲೇಜಿನ ಕೊನೆಯ ಸೆಮಿಸ್ಟೆರ್ ವಿದ್ಯಾರ್ಥಿ, ಇಂದು ಅವನು ಮಾತನಾಡುವನಿದ್ದ, ನಾನು ಅವನನ್ನ ಎರಡನೇ ಸೆಮ್ಮಿಂದ ನೋಡುತ್ತಿದ್ದೆ. ಚತುರ ಮಾತುಗಾರ ಅವನು, ಇವನಿಂದಲೇ ಕಾಲೇಜಿಗೆ ಡಿಬೇಟ್ ನಲ್ಲಿ ಸಾಕಷ್ಟು ಪ್ರಶಸ್ತಿ ಬಂತು ಎಂದು ನಮ್ಮ ಲೆಕ್ಚರರ್ ಆಗಾಗ್ ಹೇಳ್ತಾನೆ ಇರ್ತಾರೆ. ಹಾಗೆ ಅಂದು ಮೊದಲ ಸೆಮ್ ನಲ್ಲಿ "ಫ್ರೆಶೆರ್ಸ್ ಡೇ" ದಿನ ಅದ ನನ್ನ ಅವನ ಭೇಟಿ ಇಂದು ನಾವು ಲವರ್ಸ್ ಅಗೋ ವರೆಗು ಮುಂದುವರೆದಿದೆ. ಆವನ ಮಾತಿನ ಶೈಲಿ, ಮುಗ್ದ ನಗು, ತೀಕ್ಷ್ಣ ಕಣ್ಣು ಎಲ್ಲರ ಗಮನ ಸೆಳೆಯುತ್ತಿದ್ದವು, (ನಾನಂತೂ ಮೊದಲೇ ಅವಕ್ಕೆ ಶರಣಾಗಿದ್ದೆ ಬಿಡಿ!). ಭಾರೀ ಗೆಳೆಯರ ಗುಂಪು ಅವನ ಬಳಿ. ಚರ್ಚಾ ಸ್ಪರ್ಧೆಯಲ್ಲಿ ಅವನಾಡಿದ ಒಂದೊಂದು ಮಾತು ಅಂದು ಸಾವಿರಾರು ಚಪ್ಪಾಳೆ ಸದ್ದನ್ನು ಅಡಿಟೋರಿಯಮ್ ನಲ್ಲಿ ಮಾರ್ದನಿಸುವಂತೆ ಮಾಡಿದವು.
ಚರ್ಚ ಸ್ಪರ್ಧೆ ಮುಗಿಸಿ ನಾನು ರೀಟಾ ಕಾಲೇಜ್ ಕ್ಯಾಂಟೀನ್ ನಲ್ಲಿ ಕುಳಿತು ತಿಂಡಿ ತಿನ್ನುತಿರಲು, ಮೆಲ್ಲನೆ ಬಂದು ಪಕ್ಕದಲಿ ಕೂತ ಅವನು ನನ್ನ ಕೈ ಮುಟ್ಟಿ ಹಾಗೇ ಕಂಡು ಕಾಣದವನಂತೆ ಹೊರಟು ಹೋದನು. ಮಿಂಚಿನ ಸಂಚಾರ ನನ್ನಲ್ಲಿ, ಮನಸ್ಸಿನಲ್ಲಿ ನೂರಾರು ಚಿಟ್ಟೆ ಹಾರುತ್ತಿದ್ದರೂ, ಏನನನ್ನು ವ್ಯಕ್ತಪಡಿಸದೆ ಕೇವಲ ಮುಗುಳು ನಗೆ ನಕ್ಕೆ.

ರೀಟಾಳನ್ನು ಮಾತಿಗೆಳೆದೆ... "ರೀಟಾ, ಇವನ್ನನ್ನು ಏಲ್ಲೋ ನೋಡಿದ ಹಾಗಿದೆಯಲ್ಲಾ???"

ರೀಟಾ ನನ್ನ ಕೈ ಹಿಂಡುತ್ತಾ: "ಹುಂ, ಏಲ್ಲೋ ನೋಡಿದ ನೆನಪು, ಮಜೆಸ್ಟಿಕ್ ನಲ್ಲಿ ಭಿಕ್ಷೆ ಬೇಡ್ತಾ ಇದ್ನಲ್ಲಾ...?" ಎಂದು ಕಣ್ಣು ಹೊಡೆದಳು...

ನಾನು ಕೋಪಗೊಂದು: "ಶಟ್ ಅಪ್, ಏಲ್ಲೋ ನಿನ್ನ್ ಲವರ್ ಶಿವಾಜಿನಗರ್ ನಲ್ಲಿ ಮಾಡ್ತಾನೆ ಅಂತಾ ಇವನ್ಗೂ ಅದೇ ಗುಂಪ್ಗೆ ಸೇರಿಸ್ತಿಯೇನೇ...!".

ನಾನು ಒಂದು ಒದೆ ಕೊಟ್ಟೆ

ರೀಟಾ: "ಅಯ್ತು...ಸಾರಿ ಮೇಡಮ್, ನೀವ್ ಮಾತು ಮುಂದುವರಿಸಿ.."

ರೀಟಾಳಿಗೆ ಶ್ಯಾಮ್ ಮೊದಲೇ ಗೊತ್ತಿದ್ದ.. ಅವರಿಬ್ಬರು ಪಿ.ಯು ಒಟ್ಟಿಗೆ ಓದಿದ್ದರು

"ಹೇಗೆನ್ಸ್ತಾನೆ ಶ್ಯಾಮ್" - ನಾ ಅವಳನ್ನ ಕೇಳಿದೆ

"ಟ್ರುಲಿ ಮಾರ್ವೆಲಸ್, ಒಳ್ಳೆ ಮಾತುಗಾರ ಅವನು, ಹಿ ಇಸ್ ವೆರಿ ನೈಸ್ ಗಾಯ್ ಟೂ.." ಅಂದಳು.

ನಾನು : "ರೀಟಾ, ನೀನು ಅವನನ್ನು ನನಗಿಂತಲು ಮುಂಚೆ ನೋಡಿದವಳಳವೆನೇ... ನೀನು ಅವನ ಬಗ್ಗೆ ಸಲ್ಪ ಅಪ್-ಡೇಟ್ಸ್ ಇಟ್ಟ್ಕೊಂಡಿರ್ತಿಯಾ ಅಲ್ವಾ..?"

ರೀಟಾ: "ಹುಂ..ಮೇಡಮ್, ಸಲ್ಪ ಏನು, ಜಾಸ್ತಿನೇ ಹೇಳ್ತೀನಿ ಕೇಳು... ಶ್ಯಾಮ್ ಅವನ್ ತಂದೆ ತಾಯಿಗೆ ಒಬ್ಬನೇ ಮಗ, ಸಿಮ್ಪಲ್ ಅಂದ್ರೆ ಸಿಮ್ಪಲ್
ಕ್ಯಾರೆಕ್ಟರ್. ವೆಜಿಟೆರ್ಯನ್ ಬೇರೆ. ಸ್ಮಾರ್ಟ್, ಹ್ಯಾಂಡ್ಸಮ್.., ಅದ್ರೆ ಅವನ ೞ್ಯಾಮಿಲಿ ಅಷ್ಟು ಸ್ಥಿತಿವಂತರಲ್ಲಾ ಕಣೇ... ಯಾಕಂದ್ರೆ ಅವನ ತಂದೆ ಪ್ರೈವೇಟ್ ಕಂಪನಿನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡ್ತಾಯಿದ್ದಾರೆ... ಅದ್ರು ತುಂಬಾ ಕಷ್ಟ ಪಟ್ಟು ಇಲ್ಲಿ ವರೆಗೂ ಓದಿಸಿದ್ದಾರೆ ಅವನ ತಂದೆ.."

ನನಗೂ ಗೊತ್ತು ಹುಡುಗ ಸಿಮ್ಪಲ್ ಅದ್ರೂ ಅವನ ನಂಬಿಕೆ-ನಿರ್ಧಾರಗಳು ಮಾತ್ರ ಎಂದೂ ಅಚಲವಾಗೇ ಇರುತ್ತಿದವು, "ನೆವೆರ್ ಬೋ ಡೌನ್ ಎಟಿತ್ಯುಡ್" -- ನನ್ನ ಹುಡುಗನದು...

ರೀಟಾ ಮಾತು ಮುಂದುವರಿಸುತ್ತಾ - "ಏನಮ್ಮಾ, ನಿಮ್ಮ್ ಹುಡುಗನ್ ಬಗ್ಗೆ ಅಷ್ಟೊಂದು ಫ್ಹೀಲಿಂಗ್ಸ್ಸು... ಊಂ.. ಲವ್ ಏನೋ ಡೀಪ್ ಆಗೇ ಇರೋ ತರಾ ಕಾಣುತ್ತೆ. ಅವನ್ನನ್ನ ಲವ್ ಮಾಡುದ್ರೆ ಏನು ಅಗುತ್ತೆ ಗೊತ್ತ?"

"ಎನ್ನಮ್ಮ ನೀಲಾ... ಏಲ್ಲೋ ಕಲ್ಪನಾ ಲೋಕಕ್ಕೆ ಹೋದಂಗಿದೆ.., ಭೂಮಿ ಮೇಲೆ ಇದ್ದೀರಾ ಏನು?? ಇಲ್ಲಾ ಅವನ್ ಜೊತೇನೇ ಫ್ಲಯ್ಲ್ಯಿಂಗ್ ಗಾ..?. ನನ್ನ್ ಮಾತ್ ಕೇಳ್ಸ್ ಕೊಳ್ಳ್ತಾಯಿದಿರಾ ತಾನೇ?"

ನಾನು: "ಅವನ್ನನ್ ಲವ್ ಮಾಡದ್ರೆ ಏನು ಅಗುತ್ತೆ ಗೊತ್ತಾ ಅಂತಾ ಕೇಳ್ದೆ ತಾನೇ ನೀನು..?"

ರೀಟಾ: "ಹುಂ.. ಹೌದು"

ನಾನು: "ಏಕೆ..? ಏಕಾಗ್ಬಾರ್ದು..?"

ರೀಟಾ: "ಹೌದಮ್ಮ, ಹೇಳೋದ್ಕೇನು ಸುಲಭನೇ ಏಲ್ಲಾ, ಅದ್ರೆ ನಿಜ ಎದುರಿಗೆ ಬಂದಾಗ ಫ್ಯಾಕ್ಟ್ಸ್ ಅಕ್ಸೆಪ್ಟ್ ಮಾಡೋದು ತುಂಬ ಕಷ್ಟ ಕಾಣೇ.. ಅವನ ಮನೆಯ ಸ್ಥಿತಿ ಈಗ ಅಷ್ಟು ಒಳ್ಳೇದಿಲ್ಲ.. ನಿನ್ನ ತಂದೆ ಬೆಂಗಳೂರು ಸ್ಟೀಲ್ ನ ಬಿಗ್ ಶೊಟ್ ಬೇರೆ.. ಹೇಗೆ ಅಗುತ್ತೆ ಇದಲ್ಲಾ..?"

ನಾನು: "ಅದಲ್ಲ ಬೇಧ-ಭಾವ ಮುಂಚೆ ಇತ್ತು ರೀಟಾ, ಇಗಿಲ್ಲಾ... ಅದನ್ನ ನಂಬ್ಕೊಂಡು ಇರೋಕಾಗುತ್ತ...?"

ರೀಟಾ: "ಆದ್ರೆ ಅದು ಅಷ್ಟು ಸುಲಭ ಅಲ್ಲ ನೀಲಾ, ಎಲ್ಲರನ್ನ ಎದಿರು ಹಾಕಿಕೊಳ್ಳಬೇಕಾಗುತ್ತೆ ನಿನಗೆ... ಅವನ ಮನೆಯವರಿಗೂ, ನಿನ್ನ್ ಮನೆಯವರಿಗೂ ಇರೋ ಸಿರಿತನದ ವ್ಯತ್ಯಾಸನೇ ನಿಮ್ಮ ಪ್ರೀತಿನಾ ಹೊಸಕಿ ಹಾಕಬಲ್ಲದು... ನೀವಿಬ್ಬರು ಅಷ್ಟು ಸುಲಭವಾಗಿ ಬಾಳೋಕೆ ಅಗಲ್ಲಾ ಕಣೇ.."

ನಾನು: "ಅಲ್ವೇ ರೀಟಾ, ನೀನೆನೋ ಹೇಳ್ತೀಯಾ ಸಾಹುಕಾರರು ಸಾಹುಕಾರರಲ್ಲೇ ಸಂಬಂಧ ಮಾಡ್ಬೇಕು ಅಂತಾ.. ಅದ್ರೇ ನೀನೇ ಹೇಳು... ಯಾವನೊ ಗೊತ್ತಿಲ್ಲದವನ ಜೊತೆ ಸಂಸಾರ ಮಾಡುವುದಕ್ಕಿಂತ ಪ್ರೀತಿಸಿದವನ್ನನ್ನಾ, ಅದೂ ನಿನ್ನ ಕಷ್ಟ ಸುಖ ಅರಿತವನನ್ನ ಮದುವೆ ಅಗುವುದೇ ಒಳ್ಳೆದಲ್ವೆನೇ..? ಇಲ್ಲ್ದಿದ್ರೆ ಯಾವನನ್ನೋ ಕಟ್ಕೊಂದು ಜೀವಂತ ಹೆಣದ ತರಾ ಇದ್ದುಬಿರ್ಲೆನು...?"

ರೀಟಾ: "ಅದ್ರೂ ನೀಲಾ...!"

ನಾನು: "ರೀಟಾ... , ನೋಡು ನಾನ್ ಹೇಳೋದು ಇಷ್ಟೇ, ಮದುವೆಯಾದೋನು ನಿನ್ನ ಬಾಳ್ಸೋದ್ಕಿಂತಾ ನಿನ್ನ ಪ್ರೀತ್ಸೋದೇ ಮೇಲು ಗೊತ್ತಾ.. ಎಷ್ಟ್ ಕಾಸ್ ಇದ್ರೆ ಏನು..? ಕೊನೆಗೆ ಏಲ್ಲಾ ಬಿಟ್ಟು ಹೋಗ್ಬೇಕು ತಾನೇ...?"

ರೀಟಾ: 'ನೀನು ಅವನ್ತರಾನೇ ಕಾಣೇ.., ಮಾತಲ್ಲಿ ಸೋಲ್ಸೋಕೆ ಅಗಲ್ಲಾ, ನಿಜ ಹೇಳು ನೀನು ಅವನನ್ನ ತುಂಬಾ ಇಷ್ಟ ಪಡ್ತಾಇದ್ದೀಯಾ..?"

ನಾನು: "ಹುಂ, ನಿಜವಾಗಲು ತುಂಬಾ ಇಷ್ಟ ಪಡ್ತಾಇದ್ದೀನಿ... ಜೀವಕ್ಕಿಂತ ಮಿಗಿಲಾಗಿ..."

ರೀಟಾ: 'ಅಷ್ಟೊಂದಾ??"

ನಾನು: "ಯಾಕೆ...?"

ರೀಟಾ: "ನೋಡು ನೀಲಾ, ನಿನಗೆ ಗೊತ್ತಿದೆ ಈ ಕ್ರೂರ ಜಗತ್ತು ಏನು ಅಂತಾ, ಸಾಹುಕಾರರ ಹುಡುಗಿ ನೋಡೋಕೆ ಚೆನ್ನ, ಮಾತಾಡ್ಸೋಕೆ ಚೆನ್ನ..., ಅದ್ರೂ ಈ ಸಮಾಜ ಸುಮ್ಮನಿರುತ್ತೇನೇ...? ಅವನ ಮನೆಯರಿಗೂ ಕಿರಿಕಿರಿ, ನಿಮ್ಮ ಮನೆನಲ್ಲೂ ನೆಮ್ಮದಿ ಇರೋಲ್ಲಾ ಕಣೇ... ನಿನ್ ಯಾವತ್ತಾದ್ರೂ ಅವನ್ ತಂದೆ ತಾಯಿ ನಾ ಮೀಟ್ ಅಗೊಕೆ ನಿನ್ನ ತಂದೆ ತಾಯಿ ನಾ ಕರ್ಕೊಂಡ್ ಹೋಗಿದ್ಯಾ?"

ನಾನು: "ನಾ ಅದರ್ ಬಗ್ಗೆ ಇನ್ನೂ ಯೋಚಿಸಿಲ್ಲಾ ಕಣೇ..."

ರೀಟಾ: "ನನಗೂ ಅರ್ಥ ಅಗುತ್ತೆ ನೀಲಾ, ಅದ್ರೂ ಲವ್ ಮಡ್ಬೇಕಂದ್ರೆ ಇರೋ ಜೋಶ್, ಮದುವೆ ಅಗಿದ್ ಮೇಲೆ ಇರೋಲ್ಲಾ ಕಣೇ, ನಮಗೇನು ಗೊತ್ತು ಭವಿಷ್ಯದಲ್ಲಿ ನಮಗೇನು ಬರೆದಿದೆ ಅಂತಾ"

ನಾನು : "ನಾನೇನು ಸ್ಪೆಷಲ್ಲೂ, ಎಲ್ಲರಿಗೂ ಅದೇ ರೀತಿ ತಾನೇ? ಯಾರಾದ್ರೂ ಮುಂಚೆನೇ ಎಲ್ಲಾ ತಿಳ್ಕೊಂಡಿರ್ತಾರೇನು... ?"

ರೀಟಾ: "ಹುಂ... ಮದುವೆಯಾಗಿದ್ ಮೇಲೆ ಮಕ್ಕಳು, ಸಂಸಾರ..?"

ನಾನು: "ನನಗೆ ಅದೆಲ್ಲದರ ಚಿಂತೆ ಈಗಿಲ್ಲ, ಸದ್ಯಕ್ಕೆ ಅವನ ಕಣ್ಣು, ಅವನ ನಗು ಮಾತ್ರ ನನ್ನ ಕಣ್ ಮುಂದಿರೋದು..."

ರೀಟಾ: “ನಿನ್ನ ಬಗ್ಗೆ ಅಲ್ದಿದ್ರೂ ಮಕ್ಕಳ್ ಬಗ್ಗೆ ಯೋಚ್ನೆ ಮಾಡ್ಲೇಬೇಕು ಕಣೇ, ಮುಂದೆ ಅವರ ಭವಿಷ್ಯ...?

ನಾನು: "ಮಕ್ಕಳಾದ್ರೇನು ರೀತೂ, ಅವರಿಗೂ ನಾವು ಒಂದು ಗೌರವಯುತ್ತಾ ಬಾಳನ್ನೇ ಕೊಡುತ್ತೀವಿ. ಸಿರಿತನ ಬಡತನವೆಂಬ ಬೇಧ ಬರದ ಹಾಗೇ ಸಾಕುತ್ತೇನೆ. ಅವರು ಸಹಾ ಎಲ್ಲರ ಸಮಾನರಾಗಿ ನಿಂತುಕೊಳ್ಳುವಂತೆ ಮಾಡುತ್ತೇನೆ. ಅವನ ತಂದೆ ವಾಚ್ ಮ್ಯಾನ್ ಅಗಿದ್ರೆನಂತ, ಅವರು ಬಡವರಂತೆ ಇದ್ರೆ ನಮ್ಮ ಮಕ್ಕಳು ಅದೇ ರೀತಿ ಇರ್ಬೆಕಂತ ಎಲ್ಲೂ ಬರ್ದಿಲ್ಲಾ, ಶ್ಯಾಮ್ ಕಳ್ಳ ಅಲ್ಲಾ ತಾನೇ? ಗುಣವಂತ ಅವನು... ಚಿನ್ನದಂತ ಗುಣ ಅವನದು ಗೊತ್ತ? ನೋಡು ಹೇಗ್ ಬೆಳ್ಸ್ತೀನಿ ನನ್ನ ಮಕ್ಕಳನ್ನ. ಇಡಿ ಊರಿಗೆ ಊರೇ ಹೆಮ್ಮೆ ಪಡಬೇಕು ಅವರನ್ನ ನೋಡಿ. ನಮ್ಮನ್ನ ಕೀರ್ತಿಯೆತ್ತರಕ್ಕೆ ತಗೆದ್ಕೊಂಡ್ ಹೋಗ್ತಾರೆ ಅವರು"
ನೋಡ್ತಾ ಇರು.. ಮುಂದಿನ ಬೆಂಗಳೂರು ಜಿಲ್ಲಾಧಿಕಾರಿ ನನ್ನ ಮಗನೋ/ಮಗಳೋ ಅಗಿರ್ತಾರೆ.. ಇದು ನನ್ನು ನಿನ್ನ ಮೇಲೆ ಹಾಕ್ತಾಯಿರೋ ಚಾಲೆಂಜ್... ರೀಟಾ!

***********

ಹಾಗೆ ನಾನು ಇಷ್ಟ ಪಟ್ಟಂತೆ, ದೇವರ ಆಶಿರ್ವಾದದೊಂದಿಗೆ ನಮ್ಮ ಮದುವೆ ಬೇಗ ಅಗಿಹೊಯ್ತು, ನನ್ನ ಅಪ್ಪ ನನ್ನನು ಬೇರೆ ಮಾಡಿದರೂ ಸಹಾ, ಅವನ ತಂದೆ ತಾಯಿ ನಮ್ಮಿಬ್ಬರ ಕೈ ಬಿಡಲ್ಲಿಲ್ಲ... ಶ್ಯಾಮ್ ತಾಯಿಯಂತೂ ನನ್ನನ್ನು ಅವರ ಸ್ವಂತ ಮಗಳಂತೆ ನೋಡಿಕೊಂಡರು. ಸ್ವಾತಿ, ನನ್ನ ಮಗಳು ನಮ್ಮ ಜೀವನದಲ್ಲಿ ಬಂದ ಮೇಲಂತೂ ನನ್ನ ಬಾಳು ಇನ್ನೂ ಸುಂದರವಾಯ್ತು, ಸಂಸಾರ ಸುಖದ ಸಾಗರವಾಯ್ತು...

**********

ಹುಂ... ಮರ್ತೆ ಹೊಯ್ತು ನೋಡಿ, ಇವತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಇದೆ ಅಲ್ವಾ.. ಶ್ಯಾಮ್ ತುಂಬ ಸಂಭ್ರಮದಿಂದ ಓಡಾಡ್ತಾ ಇದ್ರು.. ನಾನು ಅಷ್ಟೆ ಎಲ್ಲರಿಗೂ ಫೋನ್ ಮಾಡಿ ಅಮಂತ್ರಿಸುವ ಕೆಲಸ ಬೇರೆ ಬಾಕಿ ಇದೆ, ಎಲ್ಲಾ ರೆಡಿ ಅಗ್ಬೇಕು ಬೇರೆ. ಮಗಳು ಸ್ವಾತಿ ಇಂದು ದ್ಯೂಟಿ ರಿಪೋರ್ಟ್ ಅಗ್ತಾ ಇದ್ದಾಳ್ ಅಲ್ವಾ! ನಾನು ಕಂಡ ಕನಸು ನನಸಾಯ್ತು. ಸ್ವಾತಿ ಇವತ್ತು ಜಿಲ್ಲಾಧಿಕಾರಿಯಾಗಿ ಪ್ರಮಾಣವಚನ ತಗೋಳ್ತಲಲ್ವ, ಆ ಕ್ಷಣನಾ ಹೇಗ್ ಮಿಸ್ಸ್ ಮಾಡ್ಕೋಳ್ಳೋದು.!

ಶ್ಯಾಮ್ ಒಳಗಿನಿಂದ ಕೂಗಿದರು: "ಲೇ ಮಾರಾಯ್ತಿ, ಜಲ್ದಿ ಬಾರೇ, ಲೇಟ್ ಅಗ್ತಾಯಿದೆ. ಏನ್ ಮಗಳು ಮನೆಗೆ ಬಂದ್ ಮೇಲೆ ಪ್ರೋಗ್ರಾಮ್ ಗೆ ಹೋಗ್ತೀಯೇನು...? ಯಾವಗ್ಲೂ ಲೇಟ್ ಕಾಣೇ ನಿನ್ದು..."

"ಹುಂ... ರೀ ಬಂದೆ" ಅಂದಳು ನೀಲಾ.

*********************

ಹೀಗೆ ನೀಲಾ ಶ್ಯಾಮ್ ನ ಜೊತೆಗೂಡಿ ಮನೆಯಿಂದ ಹೊರ ನೆಡೆದು ಕಾರ್ ಹತ್ತಿದಳು. ತಾವು ತಮ್ಮ ಮಗಳ ಮೂಲಕ ಪಡೆದ ಯಶಸ್ಸನ್ನು ನೋಡಲು, ರವೀಂದ್ರ ಕಲಾಕ್ಷೇತ್ರದ ಕಡೆಗೆ ಹೊರಟರು...
ವಿನಯ್ ...
ಒಬ್ಬ ಮನುಷ್ಯ ತನ್ನ ಕಷ್ಟಗಳ ಸರಮಾಲೆಯಿಂದ ಬಹಳ ಬೇಸತ್ತಿದ್ದನು. ಅವನು ದಿನವು ದೇವರನ್ನು ಬೇಡುತ್ತಿರಲು: " ನಾನೇ ಏಕೆ? ಎಲ್ಲರೂ ಖುಷಿಯಿಂದಿರುವಾಗ ನಾನೊಬ್ಬನೇ ಏಕೆ ಇಷ್ಟು ನರಳುತ್ತಾ ಇದ್ದೀನಿ...?" . ಒಂದು ದಿನ, ತುಂಬ ಸಂಕಟದಿಂದ ದೇವರನ್ನು ಅವನು ಬೇಡಲು - "ಬೇಕಾದರೆ ಬೇರೆಯವರ ಕಷ್ಟವನ್ನು ನನಗೆ ಕೊಡು, ನನ್ನ ಕಷ್ಟಗಳನ್ನು ಮಾತ್ರ ತಗೆದುಕೊಂಡು ಬಿಡು!". ಅದೇ ದಿನದ ರಾತ್ರಿ ಅವನಿಗೆ ಒಂದು ಕನಸು ಬಿದ್ದಿತು....

.............................

ಪ್ರಕಾಶಮಾನವಾದ ಜ್ಯೋತಿ ಆಕಾಶದಲ್ಲಿ.... ಆ ಬೆಳಕಿನಿಂದ ದೇವರು ಹೊರಬರಲು, ಅಲ್ಲಿ ನೆರೆದಿದ್ದವರನ್ನು ಕೇಳಿದನು - "ನಿಮ್ಮ ಒಬ್ಬೊಬ್ಬರ ಕಷ್ಟಗಳನ್ನು ಇಲ್ಲಿ ತನ್ನಿ...". ಎಲ್ಲರೂ ತಮ್ಮ ಕಷ್ಟಗಳಿಂದ ಅಗಲೇ ಸಾಕಷ್ಟು ಬಳಲಿದ್ದರು. ಆ ಮನುಷ್ಯನಂತೆ ಇವರು ಸಹ "ಬೇಕಾದರೆ ಬೇರೆಯವರ ಕಷ್ಟವನ್ನು ನನಗೆ ಕೊಡು, ನನ್ನ ಕಷ್ಟಗಳನ್ನು ಮಾತ್ರ ತಗೆದುಕೊಂಡು ಬಿಡು!" ಎಂಬ ನಿರ್ಧಾರಕ್ಕೆ ಬಂದಿದ್ದರು. ಹೇಗಾದರೂ ಮಾಡಿ ಅದರಿಂದ ಕೈ ತೊಳೆದು ಕೊಳ್ಳಬೇಕೆಂಬ ಹೆಬ್ಬಯಕೆ ಅಲ್ಲಿದ್ದವರದು...! ತಮ್ಮ ಕಷ್ಟಗಳ ಮೂಟೆಗಳ ಸಮೇತ ಅಲ್ಲಿ ನೆರೆದಿದ್ದರು. ಕೊನೆಗೂ ಅವರು ಕೋರಿದ ಬಯಕೆ ತೀರಿತೆಂಬ ಭಾವ ಅವರೆಲ್ಲರಲ್ಲಿತ್ತು.....

........................

ಕೊನೆಗೆ ದೇವರು "ನಿಮ್ಮೆಲ್ಲರ ಮೂಟೆಗಳನ್ನು ಆ ಗೋಡೆಯ ಮೇಲೆ ನೇತು ಹಾಕಿ...". ಎಲ್ಲಾ ಮೂಟೆಗಳನ್ನು ಗೋಡೆಯ ಮೇಲೆ ನೇತು ಹಾಕಲಾಯಿತು.
ನಂತರ ದೇವರು ಘೋಷಣೆ ಮಾಡಿದನು: " ನೀವು ಈಗ ನಿಮಗೆ ಇಷ್ಟವಾದದ್ದನ್ನ ಅಯ್ದುಕೊಳ್ಳಬಹುದು... ಯಾರು ಬೇಕಾದರೂ ತಮಗೆ ಇಷ್ಟವಾದ ಮೂಟೆ ತಗೆದುಕೊಳ್ಳಬಹುದು..."

........

ಅಶ್ಚರ್ಯವಾದ ಘಟನೆ ಅಲ್ಲಿ ನೆಡೆಯಿತು.... ಯಾವ ಮನುಷ್ಯ ತನ್ನ ಕಷ್ಟಗಳು ಬೇಗ ತೊಲಗಿಹೋಗಲಿ ಎಂದು ಬೇಡುತ್ತಾ ಅಲ್ಲಿ ತನ್ನ ಮೂಟೆಯನ್ನು ಇಟ್ಟಿದನೋ ಅವನೇ ಮೊದಲು ಹೋಗಿ ತಾನೆ ನೇತು ಹಾಕಿದ್ದ ಮೂಟೆಯನ್ನೆ ಎತ್ತುಕೊಂಡನು....!

ನೋಡುತ್ತಿದ್ದಂತೆ ಎಲ್ಲರೂ ಗೋಡೆಯ ಕಡೆಗೆ ಧಾವಿಸಲು... ತಮ್ಮ ಮೂಟೆಗಳನ್ನು ಮಾತ್ರ ಎತ್ತಿಕೊಂಡು ಬಂದರು...! ಎಲ್ಲರೂ ತಮ್ಮ ಮೂಟೆಗಳನ್ನು ಅಷ್ಟೇ ಇಷ್ಟದಿಂದ ವಾಪಸ್ ತೆಗೆದುಕೊಂಡರು... ಎಕೆಂದರೆ ಮೊದಲ ಬಾರಿ ಅವರೆಲ್ಲರೂ ಇತರರ ಕಷ್ಟ ನೋಡಿದ್ದರು. ಅಷ್ಟು ದಿನದಿಂದ ಆ ಜನ ಬೇಡಿದ್ದು ಇದಕ್ಕೇನಾ ಎಂಬ ಭಾವನೆ ಅಲ್ಲಿ ಬಂದಿತ್ತು....!

......................

ಇನ್ನೊಂದು ತೊಂದರೆ ಏನಾಗಿತ್ತೆಂದರೆ ಎಲ್ಲರೂ ತಮ್ಮ ತಮ್ಮ ಕಷ್ಟಗಳಿಗೆ ಆಗಲೇ ಹೊಂದಿಕೊಳ್ಳಲು ತೊಡಗಿದ್ದರು, ಅದರಿಂದ ಅವರಿಗೆ ತಮ್ಮ ಕಷ್ಟಗಳು ಎನೆಂಬುದರ ಸ್ಪಷ್ಟ ಅರಿವಿತ್ತು. ಬೇರೆ ಯಾರದೋ ಕಷ್ಟ ತಗೆದುಕೊಳ್ಳುವ ಬದಲು ತಮ್ಮ ಕಷ್ಟಗಳೇ ಮೇಲೆಂಬ ಭಾವನೆ ಅವರಲ್ಲಿ ಬಂದಿತ್ತು...!

......................

ಎಲ್ಲರು ಸಂತೋಷದಿಂದ ತಮ್ಮ ಮನೆಯೆಡೆಗೆ ನಡೆದರು... ಏನು ಅಂದು ಬದಲಾಗಲಿಲ್ಲ... ಎಲ್ಲrU ತಮ್ಮ ಕಷ್ಟಗಳನ್ನೇ ಮರಳಿ ತಮ್ಮ ಮನೆಗೆ ತಂದಿದ್ದರು... ಆದರೂ ಎಲ್ಲರ ಮುಖದಲ್ಲಿ ತಮ್ಮ ಮೂಟೆಯೆ ತಮಗೆ ಸಿಕ್ಕಿತೆಂಬ ಸಂತಸದ ಭಾವನೆ ಇತ್ತು!

..................

ಮರುದಿನ ಆ ಮನುಷ್ಯನು ಪುನಃ ದೇವರನ್ನು ಬೇಡಿದನು....

"ಆ ಕನಸಿನ ಮುಖಾಂತರ ನನಗೆ ತಿಳುವಳಿಕೆ ಮೂಡಿಸಿದ್ದಕ್ಕೆ ಧನ್ಯವಾದಗಳು... ನಾನೆಂದು ಮತ್ತೆ ನಿನ್ನನ್ನು ಈ ರೀತಿ ಬೇಡುವುದಿಲ್ಲ... ನನಗಾಗಿ ನೀನು ಏನು ಕೊಟ್ಟಿರುವೆಯೋ ಅದೇ ಚೆನ್ನ ನನಗೆ... ಅದೇ ಚೆನ್ನಾಗಿದೆ ಎಂದು ನಾ ನಂಬುವೆ... ಅದಕ್ಕಾಗೇ ಅಲ್ಲವೇ ನೀನು ನನಗೆ ಅವನ್ನು ಕೊಟ್ಟಿದ್ದು....!"
ವಿನಯ್ ...
ಒಂದು ದಿನ ಗಣಿತದ ಮೇಷ್ಟರೊಬ್ಬರು ತಮ್ಮ ತರಗತಿಯ ಮಕ್ಕಳಿಗೆ ತಮ್ಮ ಇತರ ಸಹಪಾಠಿಗಳ ಹೆಸರನ್ನ ಎರಡು ಪ್ರತ್ಯೇಕ ಹಾಳೆಗಳಲ್ಲಿ ಒಂದು ಗೆರೆ ಬಿಟ್ಟು ಬರೆಯಲು ಹೇಳಿದರು. ಹಾಗೆಯೇ ತಮ್ಮ ಒಬ್ಬೊಬ್ಬರು ಸಹಪಾಠಿಗಳ ಬಗ್ಗೆ ತಮಗೆ ಇಷ್ಟವಾದ ಮಾತು/ಕಾರ್ಯದ ಬಗ್ಗೆ ಬರೆದು ಸೇರಿಸುವಂತೆ ಹೇಳಿದರು. ಮಕ್ಕಳ್ಳೆಲ್ಲರೂ ಅಂದು ತರಗತಿಯ ಇಡಿ ಸಮಯದಲ್ಲಿ ಹೆಸರು ಬರೆಯುವ ಕೆಲಸ ಮಾಡಿ ಕೊನೆಯಲ್ಲಿ ತಮ್ಮ ಹಾಳೆಗಳನ್ನು ಮೇಷ್ಟರಿಗೆ ಕೊಟ್ಟರು.

ವಾರದ ಕೊನೆಯಲ್ಲಿ, ಮೇಷ್ಟರರು ಪ್ರತಿಯೊಬ್ಬರ ಹೆಸರನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು, ಅವರ ಬಗ್ಗೆ ಇತರ ಸಹಪಾಠಿಗಳು ಕೊಟ್ಟ ವಿವರಣೆ ಪ್ರತ್ಯೇಕಿಸಿ ಸೋಮವಾರದ ದಿನ ತನ್ನ ಪ್ರತ್ಯೇಕ ವಿದ್ಯಾರ್ಥಿಗೆ ಹಾಳೆಗಳ ಕೊಟ್ಟು ಓದಲು ಹೇಳಿದರು. "ಓ, ನಾನು ಇಷ್ಟು ಬೇಕಾಗಿರುವನಾ/ಳಾ!!" ಮತ್ತು "ನನ್ನನ್ನು ನನ್ನ ಸಹಪಾಠಿಗಳು ಇಷ್ಟೊಂದು ಇಷ್ಟಪಡ್ತಾರ!" ಎಂಬ ಉದ್ಗಾರವೇ ತರಗತಿಯಲ್ಲಿ ಜಾಸ್ತಿ ಕೇಳಿಬಂದವು....
ಆ ಹಾಳೆಯಲ್ಲಿದ ಸಾರಾಂಶದ ಬಗ್ಗೆ ಮತ್ತೆಂದೂ ತರಗತಿಯಲ್ಲಿ ಮಾತು ಬರಲಿಲ್ಲ. ಮೇಷ್ಟರು ಸಹ ಆ ವಿಷಯದ ಬಗ್ಗೆ ಹೆಚ್ಚು ತಿಳಿಯಲು ಹೋಗಲಿಲ್ಲ. ಅದರೂ ಒಂದು ವಿಷಯ ಅಂದಿನಿಂದ ಬದಲಾಯಿತು, ತರಗತಿಯ ವಿದ್ಯಾರ್ಥಿಗಳು ತಮ್ಮ ಇತರ ಸಹಪಾಠಿಗಳ ಬಗ್ಗೆ ಗೌರವ-ಆದರ ತೋರಿಸಲು ಪ್ರಾರಂಭಿಸಿದ್ದರು... ಹಾಗೆಯೆ ವರ್ಷಗಳು ಕಳೆದವು....

ಹಲವಾರು ವರ್ಷಗಳ ನಂತರ ಆ ಗುಂಪಿನಲ್ಲಿದ್ದ ಒಬ್ಬ ವಿದ್ಯಾರ್ಥಿ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಲು, ಮೇಷ್ಟರಿಗೆ ಅಂತಿಮ ಯಾತ್ರೆಯಲ್ಲಿ ಭಾಗವಹಿಸಲು ಅಮಂತ್ರಣ ಹೋಯಿತು. ಅವರು ಎಂದೂ ಒಬ್ಬ ಯೋಧನ ಅಂತಿಮ ಯಾತ್ರೆಯನ್ನು ನೋಡಿರಲಿಲ್ಲ. ಪೆಟ್ಟಿಗೆ ಯಲ್ಲಿ ಮಲಗಿದ್ದ ಅವನು ದೃಡ ದೇಹಿ, ನೋಡಲು ಸುಂದರನಾಗಿದ್ದನು. ಆ ಅವರಣ ತುಂಬ ಅವನ ಮಿತ್ರರ ಗುಂಪೇ ತುಂಬಿತ್ತು. ಒಬ್ಬೊಬರಾಗಿ ತಮ್ಮ ಗೆಳೆಯನ ಅಂತಿಮ ದರ್ಶನ ಪಡೆಯಲು ಸಾಲುಗಟ್ಟಿ ಹೋದರು. ಮೇಷ್ಟರರು ಅದರಲ್ಲಿ ಕೊನೆಯವರಾಗಿದ್ದರು.

ಹಾಗೆ ಅವರು ಒಂದು ಮೂಲೆಯಲ್ಲಿ ನಿಂತಿರಲು, ಆ ಸೈನಿಕರ ಗುಂಪಿನಲ್ಲಿ ಇದ್ದವರೊಬ್ಬರು ಮುಂದೆ ಬಂದು ಮೇಷ್ಟರನ್ನು ಕೇಳಿದರು: "ನೀವು ನಮ್ಮ ಸಂಜಯಾ ಗಣಿತದ ಮೇಷ್ಟರಲ್ಲವೇ?". "ಹುಂ.." ಅಂದರು ಮೇಷ್ಟರು. ಆಗ ಅ ಸೈನಿಕ ಸಂಜಯ್ ನಿಮ್ಮ ಬಗ್ಗೆ ತುಂಬ ಮಾತನಾಡುತ್ತಿದ್ದ ಎಂದು ಹೇಳಿದ. ಅಂತಿಮ ಯಾತ್ರೆಯ ನಂತರ ಸಂಜಯ ಎಲ್ಲಾ ಸ್ನೇಹಿತರು, ಅವನ ತಂದೆ-ತಾಯಿ ಮೇಷ್ಟರರ ಹತ್ತಿರ ಮಾತನಾಡಲು ಕಾಯುತ್ತಿದ್ದರು.
"ನಾನು ನಿಮಗೆ ಎನನ್ನೋ ತೋರಿಸಬೇಕೆಂದಿದ್ದೇನೆ.. " ಎಂದು ಸಂಜಯ್ ತಂದೆ ತಮ್ಮ ಪರ್ಸ್ ಹೊರತಗೆದರು. " ಇದು ಸಂಜಯ್ ತನ್ನ ಕೊನೆಯುಸಿರು ಎಳೆಯುವಾಗ ತನ್ನ ಕೈಯಲ್ಲಿ ಇಟ್ಟಿಕೊಂಡಿದ್ದನಂತೆ..., ನೀವು ಇದನ್ನು ಗುರುತಿಸಬಲ್ಲಿರೆಂದು ನಾ ಅಂದುಕೊಳ್ಳುತ್ತೇನೆ...". ಮೇಷ್ಟರರು ಆ ಹರಿದ ಎರಡು ತುಂಡು ಹಾಳೆ ಮೆಲ್ಲಗೆ ತರೆದರು. ಅದು ಹಲವು ಸಲ ಟೇಪ್ ಹಾಕಿ ಹಲವಾರು ಸಲ ಮಡಿಚಲಾಗಿತ್ತು. ಅದನ್ನು ನೋಡುತ್ತಲೇ ಅವರಿಗೆ ಅಂದು ಹಲವು ವರ್ಷಗಳ ಹಿಂದೆ ತಾವು ಬರೆಸಿದ ಕೆಲಸ ನೆನಪಿಗೆ ಬಂತು.

"ನೀವು ಅಂದು ಮಾಡಿದ ಕೆಲಸಕ್ಕೆ ತುಂಬ ಧನ್ಯವಾದಗಳು ಸರ್..." ಸಂಜಯ್ ಅಮ್ಮ ಹೇಳಿದರು. "ನೀವೇ ನೋಡಿದರೆಲ್ಲ, ಸಂಜಯ್ ಈ ಏರಡು ತುಂಡು ಹಾಳೆಯನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ನೋಡಿಕೊಂಡಿದ್ದ...". ಸಂಜಯ ಯ ಇತರ ಮಿತ್ರರು ಆಗ ಓಬೊಬ್ಬರಾಗಿ ಸೇರತೊಡಗಿದರು. ಅರ್ಜುನ್ ಮೆಲುದನಿಯಲ್ಲಿ ಹೇಳಿದ: "ಸರ್, ನನ್ನ ಹಾಳೆ ಇನ್ನೂ ಹಾಗೇ ಇದೆ... ನನ್ನ ಕಪಾಟಿನ ಮೊದಲ ಬಾಕ್ಸ್ ನಲ್ಲಿ..." ಪೃಥ್ವಿಯ ಹೆಂಡತಿ: "ಪೃಥ್ವಿ ಅವರ ಹಾಳೆಯನ್ನು ನಮ್ಮ ವಿವಾಹದ ಫೋಟೊ ಅಲ್ಬಮ್ ನಲ್ಲಿ ಹಾಕಿಸಿಟ್ಟಿದ್ದಾರೆ..."

"ನನ್ನದು ಸಹ..." ಅಂದಳು ರಷ್ಮಿ. " ಅದು ನನ್ನ ತುಂಬ ಇಷ್ಟಪಡುವ ಡೈರಿಯಲ್ಲಿದೆ...." ಅಂದಳು. ದೀಪಾ, ಮತ್ತೊಬ್ಬ ವಿದ್ಯಾರ್ಥಿನಿ ತನ್ನ ಪರ್ಸನ್ನ ಹೊರತೆಗೆಯುತ್ತಾ ಮೆತ್ತಗಾಗಿದ್ದ ಹಾಳೆಯನ್ನು ಅಲ್ಲಿದ್ದ ತನ್ನ ಇತರ ಮಿತ್ರರಿಗೆ ತೋರಿಸುತ್ತ " ನಾ ಇದನ್ನು ಯಾವ ಹೊತ್ತು ಬಿಟ್ಟಿರೊಲ್ಲ... ಎಲ್ಲ ಸಮಯ ಇದು ನನ್ನೊಂದಿಗೆ ಇರುತ್ತೆ...", ಕಣ್ಣು ಮಿಟುಕಿಸದೆ ಹೇಳಿದಳು. ಮತ್ತೆ ಮಾತು ಮುಂದುವರಿಸುತ್ತ : " ನಮ್ಮೆಲ್ಲರ ಹತ್ತಿರ ಅಂದು ಬರೆದ ಚೀಟಿ ಹಾಗೇ ಇದೆ ಸರ್..."

............................................

ಆಗ ಮೇಷ್ಟರರು ಬಿಕ್ಕಿ-ಬಿಕ್ಕಿ ಅಳಲು ಶುರುಮಾಡಿದರು. ವೀರಮರಣ ಅಪ್ಪಿದ ಸಂಜಯ್ ಗೆ, ಹಾಗೆ ತನಗೆ ಇಷ್ಟು ಆದರ ಕೊಟ್ಟ ತನ್ನ ಎಲ್ಲ ವಿದ್ಯಾರ್ಥಿಗಳ ಪ್ರೀತಿಗೆ ಅತ್ತರು......

............................................

ಈ ಬರಹ ಬರೆಯಲು ನಿಜವಾದ ಕಾರಣ..., ನೀವು ನಿಮ್ಮ ಜೀವನದಲ್ಲಿ ಯಾರನ್ನಾದರೂ ತುಂಬ ಇಷ್ಟಪಡ್ತಾ ಇದ್ದೀರಾ ಅಂದರೆ ನೀವು ಮಾಡಬೇಕಾಗಿರುವುದು ಒಂದೇ ಕೆಲಸ... ಅದನ್ನು ಆದಷ್ಟು ಬೇಗ ಅವರಿಗೆ ತಿಳಿಸಿ.... ಎಕೆಂದರೆ ಅವರು ನಿಮ್ಮ ಜೀವನದಲ್ಲಿ ಬಹಳ ಮುಖ್ಯರಾಗಿರಬಹುದು... ಇನ್ನೊಂದು ಮಾತು, ಕಳೆದು ಹೋದ ಸಮಯ ಮತ್ತೆಂದು ಬರುವುದಿಲ್ಲ..... ನಮ್ಮ ಭಾವನೆಗಳನ್ನ ಆ ಸಮಯಕ್ಕೆ ಸರಿಯಾಗಿ ವ್ಯಕ್ತಪಡಿಸುವುದೇ ನಾವು ಮಾಡಬೇಕಾದ ಮೊದಲ ಕೆಲಸ.... ಎಕಂದರೆ ಆ ಭಾವನೆಗಳೇ ಯಾರನ್ನ ಹೇಗೆ ಬದಲಿಸಬಲ್ಲದು...ಯಾರು ತಿಳಿಯರು...!
ವಿನಯ್ ...
ಈ ಪ್ರೀತಿ ಒಂಥರಾ... ಕಚಗುಳಿ...! ಇಬ್ಬರ ಹೃದಯದ ನಡುವೆಯ ಮಧುರ ಪಿಸುಮಾತು. ಆದರೆ ಇದೇ ಪಿಸುಮಾತು... ಕೇವಲ ಒಬ್ಬರ ದನಿಯಾದಾಗ...

............................

ನನ್ನ ಹೆಸರು ಪ್ರೀತಮ್, ನನ್ನ ಹುಡುಗಿ ನಿಶಾ ಮತ್ತು ನಾನು ಒ೦ದೇ ಶಾಲೆಯಲ್ಲಿ ಓದಿ ಬೆಳೆದವರು. ನ೦ತರ ಪಿಯು ಬೇರೆ ಬೇರೆಯಾದರೂ ನನ್ನ ಕಾಲೇಜ್ ಅವಳ ಕಾಲೇಜಿನ ಪಕ್ಕದಲ್ಲೇ ಇದ್ದಿದರಿಂದ ಸದಾ ಇಬ್ಬರ ನಡುವೆ ಹರಟೆ ಸಾಮಾನ್ಯವಾಗಿ ಇರುತ್ತಲೇ ಇತ್ತು. ಹೀಗಿರುವಾಗ ಒ೦ದು ದಿನ ಅವಳ ಮತ್ತು ನನ್ನ ಕೆಲವು ಸ್ನೇಹಿತರ ಜೊತೆ ಮೈಸೊರು ಪ್ರವಾಸಕ್ಕೆ ಹೊರಟೆವು. ಸದಾ ಚಟಪಟ ಮಾತನಾಡುತ್ತಿದ್ದ ಆವಳು ಅಂದು ಮೌನವಾಗಿ ಮಾತಿಲ್ಲದೆ ಕಾರಿನ ಕಿಟಕಿಯ ಹೊರಗೆ ನೋಡುತ್ತ ಯೋಚನ ಮಗ್ನಳಾಗಿದ್ದಳು. ನಾನು ಅದರ ಕಡೆ ಪರಿವಿಲ್ಲದೆ ನನ್ನ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಲ್ಲಿದ್ದೆ. ಆದರೆ ನಾವು ಶ್ರೀರಂಗಪಟ್ಟಣದ ಹತ್ತಿರ ಬ೦ದಾಗ ಅವಳು ನನಗೆ ಇಳಿಯದ೦ತೆ ಹೇಳಿದಳು, ನಾನೇನೊ ತೊ೦ದರೆ ಇರಬೇಕೆ೦ದು ಹತ್ತಿರ ಹೋದಾಗ ನನ್ನ ಕೈ ಹಿಡಿದುಕೊ೦ಡು ಹೆದರಿದವಳ೦ತೆ ಹೇಳಿದಳು " ನಾನು ಇಷ್ಟು ದಿನ ನಿನ್ನ ಹತ್ತಿರ ಹೇಳಬೇಕೆ೦ದಿದ್ದರೂ ನನ್ನ ಮನಸ್ಸು ಇದನ್ನ ತಡೆಯುತ್ತಲೇ ಇತ್ತು, ಅದರೆ ಇ೦ದು ನಾ ಇದನ್ನು ಹೇಳದೆ ಬೇರೆ ವಿಧಿ ಇಲ್ಲ, ನಿನಗೆ ನಮ್ಮಿಬ್ಬರ ಈ ಮಾತುಕತೆ ಬರೀ ಸ್ನೇಹವೆನಿಸಬಹುದು, ಅದರೆ ಇ೦ದು ಒ೦ದು ಮಾತು ನಾ ನಿನ್ನ ಹತ್ತಿರ ಹೇಳಲೇಬೇಕು... ಅದು.... ನಾ ನಿನ್ನ ಪ್ರೀತಿಸ್ತಾ ಇದ್ದೀನಿ....

ನನಗೊ ದೊಡ್ಡ ಶಾಕ್ ಹೊಡೆದ೦ಗಾಯಿತು... ಅದರೂ ಸಾವರಿಸಿಕೊ೦ಡು...

ಸರಿ....ಆಯಿತು...

ಅ೦ತ ಹೂ೦ಗುಟ್ಟಿದೆ... ನ೦ತರದ ದಿನದಲ್ಲಿ ಅವಳು ನನ್ನ ಭೇಟಿಯಾಗುವ ಕಾರಣಗಳೇ ಇಲ್ಲದಾಯಿತು.... ಸಣ್ಣ ಸಣ್ಣ ವಿಷಯಕ್ಕೂ ನನ್ನ ಹತ್ತಿರ ಬರುವುದು, ಮಾತನಾಡುವುದು ಎಲ್ಲ ನಿತ್ಯ ದಿನಚರಿಯೇ ಆಗಿಹೋಯ್ತು... ಆದರೆ ನಾನು ಎಲ್ಲದಕ್ಕೂ ಹೂ೦ ಗುಡುತ್ತಿದ್ದನೇ ಹೊರತು ಮನಸ್ಸು ಬೇರೇಲ್ಲೋ ಹೋಗಿರುತ್ತಿತ್ತು... ಅ೦ತೂ ನಮ್ಮ ಒನ್ ವೆ ಟ್ರಾಫಕ್ ಪ್ರೀತಿಯೂ ಹೀಗೇ ಮು೦ದುವರಿಯುತ್ತಾ ಸಾಗುತಿತ್ತು... ನಾನು ಅವಳನ್ನು ಒ೦ದು ಸ್ನೇಹಿತಳಾಗಿಯೇ ಕ೦ಡನೇ ಹೊರತು ಪ್ರೇಮಿಯಾಗಿ ಕಾಣಲು ಸಾಧ್ಯವಾಗಲೇ ಇಲ್ಲ... ಅದರೆ ಅವಳು ನನ್ನ ಪ್ರೀತಿಯೇ ಜೀವ ಹಾಗೂ ಅದೇ ಅವಳ ಉಸಿರು ಎ೦ದು ಭಾವಿಸಿದ್ದಳು....

ದಿನಗಳು ಹಾಗೇ ಕಳೆಯುತ್ತ ಹೋಗುತ್ತಲಿದ್ದವು, "ಲವ್" ವೆನ್ನುವ ಶಬ್ದ ಅವಳ ಬಾಯಿ೦ದ ಬರುತ್ತಿತ್ತೇ ಹೊರತು ನನ್ನ ಮನಸ್ಸಿನಿ೦ದ ಮುಖಾ೦ತರ ಇಲ್ಲವಾಯಿತು...

ಒ೦ದು ದಿನ ಅವಳು ಕೇಳಿದಳು..."ಇವತ್ತು ಫಿಲ್ಮ್ಗೆ ಹೋಗೋಣವಾ?" ...

"ಇಲ್ಲಾ, ಇವತ್ತು ಆಗಲ್ಲಾ"

ಅವಳು - "ಯಾಕೆ, ಟೆಸ್ಟ್ ಗೆ ಓದೋದೆನಾದ್ರು ಬಾಕಿ ಇದಿಯಾ...?" .....ಅವಳ ದನಿ ಸಣ್ಣದಾಯಿತು...

"ಹಾಗೇನು ಇಲ್ಲ, ನನ್ನ ಫ್ರೆಂಡ್ ಬರ್ತಾಯಿದ್ದಾನೆ..."

ನನಗೆ ಸ್ನೇಹಿತರ ಜೊತೆ ಇರುವುದು, ಅವರ ಜೊತೆ ಕಾಲ ಕಳೆಯುವುದು ಮಾಮೂಲಿಯೇ... ಅದರೆ ಅವಳಿಗೆ ನನ್ನ ಮಾತು ಅವಳ ಮನಸ್ಸನ್ನು ನೋಯಿಸಿತ್ತು....

ಹೀಗೇ ಎಲ್ಲಾ ಪ್ರೇಮಿಗಳು ಅವರ ಕಲ್ಪನಾ ಲೋಕದಲ್ಲೇ ವಿಹರಿಸುತ್ತಿದ್ದರೆ ನಾವು ಮಾತ್ರ ಹೆಸರಿಗೆ ಪ್ರೇಮಿಗಳು...!

ದಿನ...10 ದಿನ ... 20... 50... ಹಾಗೇ ಕಳೆಯುತಲಿದ್ದವು ದಿನಗಳು...

ಆದರೆ ಒ೦ದು ಮಾತು ನನಗೆ ದಿನವೂ ಆಶ್ಚರ್ಯ ತರುತಿತ್ತು, ಅದು ಅವಳು ದಿನದ ಕೊನೆಯಲ್ಲಿ ....ನಾವಿಬ್ಬರು ಹೊರಡುವ ವೇಳೆಯಲ್ಲಿ ಒ೦ದು ಪುಟ್ಟ ಕೆಂಪನೆಯ ಪ್ಲಾಸ್ಟಿಕ್ ಹೃದಯದ ಆಕ್ರತಿ ನನ್ನ ಕೈಯಲ್ಲಿ ಇಡುತ್ತಿದ್ದಳು... ನಾನು ಅದನ್ನು ಏತಕ್ಕೆ೦ದು ಏ೦ದೂ ಕೇಳಿರಲಿಲ್ಲ.. ಆದರೂ ದಿನವೂ ಮರೆಯದೆ ಅವಳು ಕೊಡುತ್ತಿದ್ದ ಒ೦ದೊ೦ದೇ ಹೃದಯ ನನ್ನ ಬಳಿ ಜೊತೆಯಾಗ ತೊಡಗಿದವು...

ಒ೦ದು ದಿನ ....ಪುಟ್ಟ ಪ್ಲಾಸ್ಟಿಕ್ ಹೃದಯವನ್ನು ಕೈಗೆ ಇಡುತ್ತ ನಿಶಾ....:

ಹೂ೦... ಪ್ರೀತಮ್...ನಾನು

"ಹೇಳು... ಸುಮ್ಮನೆ ಹೂ೦ ಅ೦ತ ರಾಗ ಏಳೆಯಬೇಡ... "

"ಐ ಲವ್ ಯು"

ನಾನು: ನಿಶಾ.....ನೀನೀಗ ಇದನ್ನು ತಗೆದುಕೊ೦ಡು ಮನೆಗೆ ಹೋಗು...

ಅವಳ ಕಣ್ಣಲ್ಲಿ ನೀರು ಜಿನುಗುತಿತ್ತು...

ಹಿ೦ದಿರುಗಿ ನೋಡದೆ ನಡೆಯತೊಡಗಿದಳು....

ಆದರೂ...

ಅವಳು ಕೊಡುತಿದ್ದ ಆ ಪುಟ್ಟ ಹೃದಯಗಳು ಒ೦ದೊ೦ದಾಗೇ ನನ್ನ ಅಲ್ಮಾರಿ ತು೦ಬತೊಡಗಿತ್ತು... ಹಲವು ಹೃದಯಗಳ ಪುಟ್ಟ ಸ೦ಗ್ರಹಾಗಾರ!!!

ಹಾಗೆ ನನ್ನ 17ನೇ ಹುಟ್ಟುಹಬ್ಬ ಕೂಡ ಸಹಾ..................

ಅ೦ದು ನನ್ನ ಮೊಬೈಲಲ್ಲಿ ಸಾಕಷ್ಟು ಮೆಸ್ಸೆಜ್ ತು೦ಬಿ ಹೋಗಿದ್ದವು... "ಹಾಪಿ ಬರ್ತ್ಥ್ ಡೇ ಟು ಯು... " ಮೆನೀ ಮೆನೀ ಹಾಪಿ ರೀಟರ್ನ್ಸ್... "

ಹೂ೦... ಒ೦ದೊ೦ದೇ ನೋಡುತ್ತಾ, ರಿಪ್ಲ್ಯೆ ಮೆಸ್ಸೆಜ್ ಕಳಿಸುತ್ತಲಿದ್ದೆ ... ಆಗ ನಿಶಾಳಾ ನ೦ಬರ್ ಸ್ಕ್ರೀನ್ ಮೇಲೆ ಡಿಸ್ಪ್ಲೈ ಆಯಿತು...

ಆ ಕಡೆಯಿ೦ದ " ಪ್ರೀತಮ್... ನಾ ನಿನ್ನನು ಈಗ ನೋಡಬೇಕು, ಸಲ್ಪ ಬರ್ತಿಯಾ..."

ಹೂ೦ ಸರಿ, ಆ ಪಾರ್ಕ್ ಹತ್ರ ಇರು, ಹತ್ತ್ ನಿಮಿಷದಲ್ಲಿ ಇರ್ತಿನಿ...ಒಕೆ ನಾ...?"

"ಹೂ೦.... ಸರಿ"

ಪಾರ್ಕ್ ಹತ್ತಿರ ಬ೦ದಾಗ ಅವಳು ಅಗಲೇ ಅಲ್ಲಿ ಕಾಯುತಲಿದ್ದಳು... ಅದೇ ಅ ಪುಟ್ಟ ಪ್ಲಾಸ್ಟಿಕ್ ಹೃದಯದೊಡನೆ...

ಅದೇ ನಿನ್ನೆ ನಿನಗೆ ಕೊಡಲಾಗಲಿಲ್ಲಾ, ಎಲ್ಲೋ ಹೋಗಿದ್ದೆ, ಇವತ್ತು ತಗೋ...

ನಾನ೦ದೆ... "ಸರಿ, ನಾ ಮನೆಗೆ ಹೋಗ್ತೀನಿ... ಬೈ"

"ಪ್ರೀತಮ್.... ಹೂ೦...."

ನಾನು : " ಏನು ಹೇಳೋದಿದೆಯಾ... ಬೇಗ ಹೇಳು.. ನನ್ನ್ ಫ್ರೆ೦ಡ್ಸ್ ಗೆ ಪಾರ್ಟಿ ಕೊಡೊದಿದೆ..."

" ಐ ಲವ್ ಯು..." ಎ೦ದು ಹೇಳುತ್ತಾ ಬ೦ದು ಅವಳು ನನ್ನ ಹೆಗಲ ಮೆಲೆ ಕೈ ಹಾಕಿದಳು...

"ನೀನು ನನ್ನನ್ನು ಲವ್ ಮಾಡ್ತಾಯಿದ್ದೀಯಾ ತಾನೇ... ಪ್ಲೀಸ್ ಇಲ್ಲಾ ಅನ್ನಬೇಡ"

ನಾನು: "ನೋಡು ನಿಶಾ... ನಾನು ಅಷ್ಟು ಸುಲಭವಾಗಿ ಯಾರನ್ನೂ ಲವ್ ಮಾಡ್ತೀನಿ ಅ೦ತಾ ನೀನು ತಿಳ್ಕೋಬೇಡಾ... ಅದು ಅಷ್ಟು ಸುಲಭಾನೂ ಅಲ್ಲಾ...ಅದ್ರು ಒ೦ದ್ ಮಾತ್ ಹೇಳ್ತೀನಿ ಕೇಳು... ನೀನು ನಿಜವಾಗ್ಲು "ಐ ಲವ್ ಯು" ಅ೦ತ ಕೇಳಬೇಕ೦ದ್ರೆ ಬೇರೆ ಯಾರನ್ನಾದ್ರು ಲವ್ ಮಾಡು ಹೋಗು...!

ಅವಳು ಜೋರನೆ ಅಳತೊಡಗಿದಳು... ನನಗೆ ಅಲ್ಲಿ ನಿಲ್ಲುವ ಮನಸ್ಸೂ ಇರಲಿಲ್ಲ... ಅವಳು ಹಿಂತಿರುಗಿ ನಡೆಯತೊಡಗಿದಳು... ನಡೆಯುತ್ತಾ ಹಾಗೇ ದೂರದಲ್ಲಿ ಮರೆಯಾದಳು...

ನಾನು ಅವಳಿಗೆ ಅ೦ದು ಸಾರಿ ಕೂಡ ಹೇಳುವ ಗೋಜಿಗೆ ಹೋಗಲಿಲ್ಲ...

ಅದ್ರೂ... ಅವಳು ಮರೆಯದೆ ನನ್ನ ಮನೆಯ ಹತ್ತಿರ ಬ೦ದು ಆ ಪುಟ್ಟ ಹೃದಯ ಕೊಡುತ್ತಲೆ ಇದ್ದಳು.. ಅದು ಅಲ್ಮಾರಿಯಲ್ಲಿ ಸೇರುತ್ತಲೆ ಹೋದವು...

ಹೂ೦..., ಹಾಗೆ ಕಾಲೇಜ್ ಗೆ ಸಲ್ಪ ದಿನದಿ೦ದ ರಜಾ ಹಾಕಿದ್ದರಿ೦ದ ನೋಟ್ಸ್ ತಗೆದುಕೊಳ್ಳೋಕೆ ರಿಯಾಳ ಜೊತೆ ರಸ್ತೆಯಲಿ ಹೋಗುತ್ತ ಇದ್ದೆ... ನಿಶಾ ದೂರದಿ೦ದ ನನ್ನನು ಕ೦ಡಳು... ನಾನು ಮುಖದ ಮೇಲೆ ಬಲವ೦ತದ ನಗೆ ತೋರಿಸುತ್ತಾ ಅವಳೆಡೆಗೆ ನೋಡಿ ನಕ್ಕೆ...

ಮರುದಿನ...

ನನ್ನ ಕಾಲೇಜ್ ಹತ್ತಿರದ ಬಸ್ ಸ್ಟಾ೦ಡ್ ನಲ್ಲಿ ಒ೦ದು ದೊಡ್ಡ ಕವರ್ ಹಿಡಿದುಕೊ೦ಡು ನಿ೦ತಿದ್ದಳು.. ದೂರದಿ೦ದಲೇ ಕೈ ಅಲ್ಲಾಡಿಸುತ್ತಾ "ಹೈ" ಅ೦ದಳು... ನಾನು ಹತ್ತಿರ ಹೋದಾಗ ಕವರಿನಿ೦ದ ಮೆತ್ತಗೆ ದೊಡ್ಡ ಪ್ಲಾಸ್ಟಿಕ್ ಹೃದಯವನ್ನು ತೆಗೆಯುತ್ತ ನನ್ನ ಕೈಗಿತ್ತು " ಐ ಲವ್ ಯು" ಅ೦ತ ಮತ್ತೆ ಹೇಳಿದಳು...

ಏಲ್ಲೋ ಇದ್ದ ಕೋಪ ತಕ್ಷಣ ಅವರಿಸಿಬಿಟ್ಟಿತು.... "ನಿಶಾ, ನೋಡು ನನಗೆ ಬೇರೇನು ಕೆಲಸ ಇಲ್ಲಾ ಅ೦ದ್ಕೊ೦ಡೆಯಾ... ನೋಡು ಬಲವ೦ತದಿ೦ದ ನನ್ನ ಪಡೆಯಲು ಹೋಗಬೇಡ. ಅದು ಸಾಧ್ಯಾನೂ ಅಗಲ್ಲಾ" .. ನಾ ಕಿರುಚಾಡಿದೆ

"ಐ ಯಮ್ ಸಾರಿ...ಪ್ರೀತಮ್"

ಅವಳು ಕೊಟ್ಟ ಆ ಹೃದಯವನ್ನು ನಾ ರಸ್ತೆಗೆ ಏಸೆದೆ...

"ನಿಶಾ...ನೀನು ನನ್ನನ್ನು ಮಾತನಾಡಿಸಬೇಡ.. ನಿನ್ನ೦ತವಳನ್ನು ನೋಡುವುದಕ್ಕೂ ನನಗೆ ಇಷ್ಟವಿಲ್ಲ... ನಿ ಇಲ್ಲಿ೦ದ ಹೊರಟು ಹೋಗು..."

ಕಣ್ಣೇರು ಸುರಿಸುತ್ತಾ ಅವಳು ರಸ್ತೆಯಲ್ಲಿ ಬಿದ್ದಿದ ಆ ಹೃದಯವನ್ನು ಏತ್ತಲು ಹೋದಳು...

ಆಗ....................

"ಹೊ೦ಕ್... ಹೊ೦ಕ್..." ಜೋರು ಶಬ್ದ... ಬಸ್ ಅವಳ ಕಡೆ ಧಾವಿಸಿ ಬರುತ್ತಲಿತ್ತು

"ನಿಶಾ... ಆಕಡೆ ಹೋಗು... ಹೋಗು..."

ಅದರೆ ಅವಳಿಗೆ ಅದರ ಪರಿವೆಯೇ ಇಲ್ಲದೆ ಬಿದ್ದ ಹೃದಯದ ಕಡೆ ಗಮನವಿತ್ತು...

"ನಿಶಾ.......!!!" - ನಾ ಕಿರುಚಿದೆ

"ಡಡ್ಡ್ಡ್ಡ್......" ಕರ್ಣ ಕಠೋರವಾದ ಶಬ್ದ....

ನ೦ತರ...

ನಿಶಾ ರಸ್ತೆಯಲ್ಲಿ...

ಹೆಣವಾಗಿ ಮಲಗಿದ್ದಳು....

ಏದುರಿಗೆ ಇದ್ದರೂ... ನಾ ಅವಳನ್ನು ಉಳಿಸಲಾರದೇ ಹೋದೆ...

ನ೦ತರದ ದಿನಗಳಲ್ಲಿ ಅವಳ ಮುಖ ನನ್ನನ್ನು ಸದಾ ಕಾಡುತ್ತಲೇ ಇತ್ತು... ಆ ಮುಗ್ಧ ಪ್ರೀತಿಯನ್ನು ತಿರಸ್ಕರಿಸಿದ ಪಶ್ಚಾತಾಪದ ಜೊತೆಗೂಡಿ..

ಹೀಗೆ ಕೆಲ ದಿನ ಹಾಗೇ ಕಳೆದವು....

.....................

ಅವಳು ಕೊಟ್ಟ ಆ ಪುಟ್ಟ ಹೃದಯಗಳನ್ನ ಒ೦ದ್-ಒ೦ದಾಗಿ ಅಲ್ಮಾರದಿ೦ದ ನೋಡಲು ತಗೆದೆ

ಈಗ ಉಳಿದಿರುವುದು ಕೇವಲ ಇದೇ ಮಾತ್ರ ತಾನೇ... ಅವಳಿಲ್ಲದಿದ್ದರೂ...!

ಹಾಗೇ ಮನಸ್ಸಿನಲ್ಲೆ ಎಣಿಸುತ್ತಾ ಹೋದೆ... "ಒ೦ದು..ಏರಡು...ಮೂರು... ಎಣಿಸುತ್ತಲೇ ಹೋದೆ.....

...........................

ನೂರಾ ನಲ್ವತ್ ಒ೦ದು, ನೂರಾ ನಲ್ವತ್ ಏರಡು..."

ಸರಿಯಾಗಿ ನೂರಾ ನಲ್ವತ್ ಮೂರ್ ಗೆ ಬ೦ದು ನಿ೦ತಿತು...!

ಏಕೋ ಗೊತ್ತಿಲ್ಲ, ಕಣ್ಣೀರ ಧಾರೆ ನನ್ನ ಕಣ್ಣಲ್ಲಿ... ಆ ಪುಟ್ಟ ಹೃದಯಗಳು ಮಸುಕು ಮಸುಕಾಗಿ ಕಾಣತೊಡಗಿದವು...

.................................

ಅವಳು ಕೊಟ್ಟಿದ್ದ ಅ ಪುಟ್ಟ ಹೃದಯವನ್ನ ಗಟ್ಟಿಯಾಗಿ ಎದೆಗೆ ಓತ್ತಿಕೊ೦ಡು ಅಳತೊಡಗಿದೆ....

ಆಗ....

"ಐ ಲವ್ ಯು... ಐ ಲವ್ ಯು..."

ನನಗೆ ನಾ ನಿ೦ತಿದ್ದ ನೆಲವೇ ಬಿರಿದ೦ಗಾಯಿತು...

ಕೈಯಲ್ಲಿ ಇದ್ದ ಹೃದಯ ಕೈ ಜಾರಿ ಕೆಳಗೆ ಬಿತ್ತು...

ಐ.. ಲ..ವ್ ಯು..."

ನಾನು ಒ೦ದೊ೦ದಾಗಿ ಎಲ್ಲಾ ಹೃದಯಗಳನ್ನು ಕೈಯಲ್ಲಿ ಹಿಡಿದುಕೊ೦ಡು ಒತ್ತ ತೊಡಗಿದೆ...

"ಐ ಲವ್ ಯು... ಐ ಲವ್ ಯು..."

ಸಾಧ್ಯ ಇಲ್ಲ... ಇದು ಸಾಧ್ಯಾವೇ ಇಲ್ಲ... !

ಎಲ್ಲಾ ಹೃದಯಗಳಲ್ಲೂ ಅದೇ ಶಬ್ದ ಬರುತಿತ್ತು...

"ಐ ಲವ್ ಯು... ಐ ಲವ್ ಯು..."

ನಿರ೦ತರವಾಗಿ....

"ಐ ಲವ್ ಯು... ಐ ಲವ್ ಯು..."

ನಾನೇಕೆ ಇದನ್ನು ಅರಿಯದೇ ಹೋದೆ... ಅವಳ ಆ ಹೃದಯ ಕೇವಲ ನನಗಾಗಿ ಮಿಡಿಯುತಲ್ಲಿತ್ತು ಅ೦ತಾ...

ಅವಳು ತ೦ದಿದ್ದ ಅ ಕೊನೆಯ ಹೃದಯ ಅಲ್ಲೇ ಟೇಬಲ್ ಮೇಲೆ ಇತ್ತು, ಅವಳ ರಕ್ತದ ಕಲೆ ಇನ್ನು ಅದರ ಮೇಲೆ ಹಾಗೇ ಉಳಿದಿತ್ತು...

ಅದರ ತುದಿಯಲ್ಲಿ ಒ೦ದು ಚೀಟಿ... ನಾ ಅ೦ದು ಅದನ್ನು ಗಮನಿಸಿರಲಿಲ್ಲ...

ತೆರೆದು ಓದಿದೆ...

"ಪ್ರೀತಮ್... ನಿನಗೆ ಗೊತ್ತಾ... ಇವತ್ತು ಯಾವ ದಿನಾ ಅ೦ತಾ...? ನಾ ನಿನ್ನನು ಪ್ರೀತಿಸಲು ಶುರುಮಾಡಿ ಇ೦ದಿಗೆ ೧೪೩ ದಿನಗಳಾಯಿತು..
ನಿನಗೆ ೧೪೩ರ ಅರ್ಥ ಗೊತ್ತಿರಬೇಕಲ್ವಾ?"


ನಾನು ನಿನ್ನನು ನನ್ನ ಉಸಿರಿರುವರೆಗೂ ಪ್ರೀತಿಸುತ್ತೇನೆ.. ಪ್ರತಿ ಕ್ಷಣ.. ಪ್ರತಿ ದಿನ... ನನ್ನ ಕೊನೇ ಉಸಿರಿನ ತನಕಾ.. ಅದರ ನ೦ತರವೂ... ಏ೦ದೆ೦ದೂ...

.......................

ಕಾಲ ಮೀರಿ ಹೋಗಿತ್ತು...

ಈಗೇನೂ ಆಗದು... ಏನು ಮಾಡಲಾಗದ ಸ್ಥಿತಿ...!

ನನ್ನ ಬಳಿ ಕಣ್ಣೀರ ಬಿಟ್ಟರೆ ಬೇರೇನು ಉಳಿದಿರಲಿಲ್ಲ....

ನಿರ೦ತರ ಕಣ್ಣೀರ ಧಾರೆ... ನಿಲ್ಲದೆ ಹರಿಯುತ್ತಲಿತ್ತು..

... ಓ ದೇವರೆ... ನನ್ನನು ಇ೦ಥಾ ಪರಿಸ್ಥಿತಿಯಲ್ಲಿ ಏಕೆ ನೂಕಿದೆ... ಅವಳ ಮನಸ್ಸನ್ನ ತಿಳಿಯೋ ಶಕ್ತಿಯನ್ನ ಏಕೆ ಕೊಡದೆ ಹೋದೆ...

.............................

ಶೂನ್ಯ .... ಕೇವಲ ಶೂನ್ಯ ಮಾತ್ರ ಉಳಿದಿತ್ತು..... ಏಲ್ಲಾ ಶೂನ್ಯ....

....................

ದೂರದಲ್ಲಿದ ರೇಡಿಯೊ ಹಾಡುತಲಿತ್ತು...

"ಕಣ್ಗಳು ತು೦ಬಿರಲು ಕ೦ಬನಿ ಧಾರೆಯಲಿ.. ಹೃದಯವು ನೊ೦ದಿರಲು ನೋವಿನ ಜ್ವಾಲೆಯಲ್ಲಿ...."

*********************************

( ಈ ಕಥೆಗೆ ಸ್ಪೂರ್ತಿ: ನನ್ನ ಮಿತ್ರ ಕಳಿಸಿದ ಒ೦ದು ಈಮೈಲ್.... )
ವಿನಯ್ ...
ಈ ಕಥೆ ನಮ್ಮ ಗುಂಡಣ್ಣನಿಂದ ಪ್ರಾರಂಭವಾಗುತ್ತದೆ. ಅವನಿಗೊ ತನ್ನ ಹೆಂಡತಿ ಗುಂಡಮ್ಮ ಸದಾ ಕಾಲ ಮನೆಯಲ್ಲಿದ್ದು ತಾನು ಮಾತ್ರ ಕತ್ತೆಯ ಹಾಗೆ ದುಡಿಯುವ ಪ್ರಾರಬ್ಧತೆಯ ಮನಗೊಂಡು, ಬಳಲಿ.., ಬೆಂಡಾಗಿ ( ಮನಸ್ಸಿನಲ್ಲಿ ದುಖಿಯಾಗಿಯೂ ಸಹಾ...! )ತನ್ನ ಕಷ್ಟವೇನೆಂದು ತನ್ನ ಹೆಂಡತಿಗೆ ತಿಳಿಯಲಿ ಅಂತ ಒಂದು ದಿನ ದೇವರ ಸಾಕ್ಷಾತ್ಕಾರಕ್ಕಾಗಿ "ಬೇವಿನ ಮರದ" ಕೆಳಗೆ ತಪಸ್ಸನ್ನು ಆಚರಿಸುತ್ತಾನೆ ( ಬೇವಿನ ಮರ ಏಕಂದರೆ ಆದು ಅವನ ಪತ್ನಿ ನೆಟ್ಟಿದ್ದು, ಅದನ್ನು ನೋಡಿಯಾದರೂ ದೇವರು ಬೇಗ ವರ ಕೊಡಲಿ ಅಂತಾ...!)

............................

ದೇವರು ತನ್ನ ಭಕ್ತನ ಮನೋಭಿಲಾಶೆಯ ಪೂರೈಸಲೆಂದು ಧರೆಗೆ ಓಡೋಡಿ ಬಂದಿರಲು, ಗುಂಡನ ಎದುರು ಪ್ರತ್ಯಕ್ಷನಾದನು...ಗುಂಡ: " ಓ ದೇವಾ, ಸದಾ ಕಾಲ ನಾನೇ ಕತ್ತೆಯ ಹಾಗೆ ದುಡಿಯುತ್ತಾ ನನ್ನ ಹೆಂಡತಿ ಮನೆಯಲ್ಲಿ ಸುಮ್ಮನೆ ಕುಳಿತಿರುವುದನ್ನು ನೋಡಲು ನನಗೆ ಸಾಧ್ಯವಿಲ್ಲ , ಅದಕ್ಕೆ ನಮ್ಮ ಇಬ್ಬರ ದೇಹವನ್ನು ಒಂದು ದಿನಕೋಸ್ಕರ ಅದಲು-ಬದಲು ಮಾಡಿಬಿಡು...!"ದೇವನು ಗುಂಡನ ಈ ವಿಚಿತ್ರ ಕೋರಿಕೆಗೆ ನಕ್ಕು..."ಹುಂ ... ತಥಾಸ್ತು" ಎಂದು ಅಂತರ್ಧಾನನಾದನು....!

ಮರುದಿನ............................

ಗುಂಡ ಗುಂಡಮ್ಮನಾಗಿದ್ದಳು....!

4ಕ್ಕೆ ಎದ್ದು, ತನ್ನ ಗಂಡ ( ಇಲ್ಲಿ ಗುಂಡಮ್ಮ!!) ನಿಗೆ ತಿಂಡಿ ತಯಾರಿಸಿ, ತನ್ನ ಮಕ್ಕಳನ್ನು ಎಬ್ಬಿಸಿ, ಶಾಲೆಗೆ ಕಳಿಸಲಿಗೋಸ್ಕರ ಅವರ ಬಟ್ಟೆ ಇಸ್ತ್ರಿ ಮಾಡಿ, ಡಬ್ಬಿ ತುಂಬಿಸಿ, ಪ್ಯಾಕ್ ಮಾಡಿ, ಶಾಲೆಗೆ ಬಿಟ್ಟು ಬಂದಳು.

ನಂತರ ಮನೆಗೆ ಬಂದು, ಕಸ ಗುಡಿಸಿ, ನೀರು/ ಫೆನಾಯಲ್ ಹಾಕಿ ಮನೆಯನ್ನು ಸಾರಿಸಿ, ತರಕಾರಿ ತರಲು ದೂರದ ಮಾರ್ಕೆಟ್ ಗೆ ಹೊರಟಳು, ಹಾಗೆ ದಾರೀಲಿ ತಿಂಗಳ ಸಾಲದ ಕಂತನು ಗಿರವಿ ಅಂಗಡಿಯಲ್ಲಿ ಕಟ್ಟಿ, ಮನೆಗೆ ಬಂದು ನಾಯಿ "ಟಾಮಿ" ಮತ್ತು ಬೆಕ್ಕು "ಕಿಟ್ಟಿ" ಅನ್ನು ಚೆನ್ನಾಗಿ ತೊಳೆದು ಹೊರಗೆ ಅವುಗಳನ್ನು ಒಣಗಲು ಬಿಟ್ಟಳು...,

ಗಡಿಯಾರ 2 ಗಂಟೆ ಹೊಡೆದ ಸದ್ದು....

ಮಕ್ಕಳು ಮಲಗಿ ಅಸ್ತವ್ಯೆಸ್ತ ಮಾಡಿದ್ದ ಬೆಡ್-ಶೀಟ್ಸ್ ನ ಸರಿಮಾಡಿ, ಅಡುಗೆ ಮನೆಯ ಅಷ್ಟು ಕೊಳಕನ್ನಾ ಸಾರಿಸಿ, ಚೊಕ್ಕಟ್ಟ ಮಾಡಿದಳು....
ಮಕ್ಕಳ ಶಾಲೆ ಬಿಡುವ ಸಮಯವಾಯ್ತೆಂದು ಶಾಲೆಯ ಹತ್ತಿರ ಓಡುತ್ತಾ ಅವರನ್ನು ಕರೆದುಕೊಂಡು ಮನೆಗೆ ಬಂದು, ಹೋಂವರ್ಕ್ ಮಾಡಿಸಿ ತಿಂಡಿ ಕೊಟ್ಟು ತನ್ನ ಪತಿ ( ಈಗ ಗುಂಡಮ್ಮ) ನ್ ಬಟ್ಟೆ ಇಸ್ತ್ರಿ ಮಾಡುತ್ತಿರಲು, ತನ್ನ ಪತಿರಾಯ ಆರಾಮಾಗಿ ಟಿವಿ ನೋಡುತ್ತಿದ್ದನು ... !

ಐದು ಗಂಟೆಗೆ.... ರಾತ್ರಿಯ ಊಟಕ್ಕೆ ತಯಾರಿ ಮಾಡಲು ಟೊಮಾಟೋ, ಇರುಳ್ಳಿ ಕತ್ತರಿಸಿ ಮಸಾಲೆ ಅರೆದು ಸಂಬಾರ್ ತಯಾರಿಸಿದಳು.. ಊಟ ಮುಗಿದ ನಂತರ ( ಪತಿರಾಯಾ ಅಗಲೇ ಶಯನಗ್ರಹ ಸೇರಿಯಾಗಿತ್ತು .... !) ಅಷ್ಟು ಮುಸರೆ ಪಾತ್ರೆ ತೊಳೆದು, ಮಕ್ಕಳನ್ನು ಮಲಗಿಸಿ ಇನ್ನೇನು ಬಂದು ಮಲಗಬೇಕೆಂದು ನಿರ್ಧರಿಸಿದಾಗ, ತನ್ನ ಗಂಡ 'ಕೀಟಲೆ'ಗಳನ್ನು ಸಹಿಸಬೇಕಾಯಿತು...!

ಅಂತೂ ಆ ರಾತ್ರಿ ಕಳೆದು, ಗುಂಡ ದೇವರನ್ನು ಮತ್ತೆ ಬೇಡಿದನು.....

"ದೇವರೇ, ನಾ ತಿಳಿದಂತೆ ನಾ ಮಾಡಿದ ಅಷ್ಟು ಕೆಲಸವು ನನ್ನ ಹೆಂಡತಿಯ ಎದುರು ಒಂದು ಹಿಡಿಗೂ ಸಮಾನವಲ್ಲ... ಅವಳ ಬಗ್ಗೆ ನಾನು ಪಟ್ಟ ಅಷ್ಟು ಅಸೂಯೆ..., ಅವಳು ಸುಮ್ಮನೆ ಮನೆಯಲ್ಲಿ ಕುಳಿತಿರುತ್ತಾಳೆ ಅಂತಾ ನಾ ಕಂಡ ಕನಸು - ಎಲ್ಲಾ ಸರಿಯಾಗಿ ಅರ್ಥವಾಯಿತು.., ದಯವಿಟ್ಟು ಅದಷ್ಟು ಬೇಗ ನನ್ನ ಮೊದಲಿನ ದೇಹ ನನಗೆ ಕೊಟ್ಟು ಬಿಡು...!"

.....................

ದೇವರು ಮತ್ತೊಮೆ ನಕ್ಕು, ಗುಂಡನಿಗೆ ಹೇಳಿದ....

"ಮಗೂ, ನಿನಗೇನೋ ತಿಳಿಯಿತು ನಿನ್ನ ಹೆಂಡತಿ ನಿನಗೋಸ್ಕರ ಮತ್ತು ನಿನ್ನ ಕುಟುಂಬಕೋಸ್ಕರ ಎಷ್ಟು ದುಡಿಯುತ್ತಿದ್ದಾಳೆ ಅಂತಾ, ನಿನ್ನ ಕೆಲಸ ಅವಳ ಕೆಲಸದ ಮುಂದೆ ಎನೇನೂ ಇಲ್ಲ ಅಂತ ನನಗೆ ನಿನಗಿಂತ ಮುಂಚೆಯೇ ತಿಳಿದಿತ್ತು, ಅದರೆ ನೀ ಬಯಸಿದ ಅಸೆ ನೆರವೇರಿಸದೇ ಬಿಟ್ಟರೆ ನಾಳೆ ನೀನು ನನ್ನ ಹೆಸರನ್ನೇ "ಚೇಂಜ್" ಮಾಡುವ ಅಪಾಯದಿಂದ ನಾ ನಿನ್ನ ಕೋರಿಕೆ ಮನ್ನಿಸಿದೆ... ಅದರೆ..."

ಗುಂಡ: "ಅದರೆ ಇನ್ನೇನು?" ಅಂದ....

ದೇವರು: ನಿನ್ನ ದೇಹ ಮತ್ತೆ ಮರಳಿ ಬೇಕೆಂದರೆ ಇನ್ನು ಒಂಬತ್ತು ತಿಂಗಳು ಕಾಯಬೇಕು ....!

ಗುಂಡ: "ಏಕೆ.... ಅಷ್ಟು ಸಮಯ ಯಾಕೆ...?"

ದೇವರು: "ನಿನಗೆ ಗೊತ್ತಿರಬೇಕಲ್ಲಾ, ನೆನ್ನೆ ರಾತ್ರಿ ಏನಾಯ್ತಂತಾ...? ನೀನೀಗಾ ಗರ್ಭಿಣಿ....!"

ಗುಂಡ: !!!????!!!!!?????......ಆಆಆಆಆಆಆಆಆಆಆಆಆಆಆಆಆಆಆ!!!!!

.................................................................................