ವಿನಯ್ ...
ಈ ಕಥೆ ನಮ್ಮ ಗುಂಡಣ್ಣನಿಂದ ಪ್ರಾರಂಭವಾಗುತ್ತದೆ. ಅವನಿಗೊ ತನ್ನ ಹೆಂಡತಿ ಗುಂಡಮ್ಮ ಸದಾ ಕಾಲ ಮನೆಯಲ್ಲಿದ್ದು ತಾನು ಮಾತ್ರ ಕತ್ತೆಯ ಹಾಗೆ ದುಡಿಯುವ ಪ್ರಾರಬ್ಧತೆಯ ಮನಗೊಂಡು, ಬಳಲಿ.., ಬೆಂಡಾಗಿ ( ಮನಸ್ಸಿನಲ್ಲಿ ದುಖಿಯಾಗಿಯೂ ಸಹಾ...! )ತನ್ನ ಕಷ್ಟವೇನೆಂದು ತನ್ನ ಹೆಂಡತಿಗೆ ತಿಳಿಯಲಿ ಅಂತ ಒಂದು ದಿನ ದೇವರ ಸಾಕ್ಷಾತ್ಕಾರಕ್ಕಾಗಿ "ಬೇವಿನ ಮರದ" ಕೆಳಗೆ ತಪಸ್ಸನ್ನು ಆಚರಿಸುತ್ತಾನೆ ( ಬೇವಿನ ಮರ ಏಕಂದರೆ ಆದು ಅವನ ಪತ್ನಿ ನೆಟ್ಟಿದ್ದು, ಅದನ್ನು ನೋಡಿಯಾದರೂ ದೇವರು ಬೇಗ ವರ ಕೊಡಲಿ ಅಂತಾ...!)

............................

ದೇವರು ತನ್ನ ಭಕ್ತನ ಮನೋಭಿಲಾಶೆಯ ಪೂರೈಸಲೆಂದು ಧರೆಗೆ ಓಡೋಡಿ ಬಂದಿರಲು, ಗುಂಡನ ಎದುರು ಪ್ರತ್ಯಕ್ಷನಾದನು...ಗುಂಡ: " ಓ ದೇವಾ, ಸದಾ ಕಾಲ ನಾನೇ ಕತ್ತೆಯ ಹಾಗೆ ದುಡಿಯುತ್ತಾ ನನ್ನ ಹೆಂಡತಿ ಮನೆಯಲ್ಲಿ ಸುಮ್ಮನೆ ಕುಳಿತಿರುವುದನ್ನು ನೋಡಲು ನನಗೆ ಸಾಧ್ಯವಿಲ್ಲ , ಅದಕ್ಕೆ ನಮ್ಮ ಇಬ್ಬರ ದೇಹವನ್ನು ಒಂದು ದಿನಕೋಸ್ಕರ ಅದಲು-ಬದಲು ಮಾಡಿಬಿಡು...!"ದೇವನು ಗುಂಡನ ಈ ವಿಚಿತ್ರ ಕೋರಿಕೆಗೆ ನಕ್ಕು..."ಹುಂ ... ತಥಾಸ್ತು" ಎಂದು ಅಂತರ್ಧಾನನಾದನು....!

ಮರುದಿನ............................

ಗುಂಡ ಗುಂಡಮ್ಮನಾಗಿದ್ದಳು....!

4ಕ್ಕೆ ಎದ್ದು, ತನ್ನ ಗಂಡ ( ಇಲ್ಲಿ ಗುಂಡಮ್ಮ!!) ನಿಗೆ ತಿಂಡಿ ತಯಾರಿಸಿ, ತನ್ನ ಮಕ್ಕಳನ್ನು ಎಬ್ಬಿಸಿ, ಶಾಲೆಗೆ ಕಳಿಸಲಿಗೋಸ್ಕರ ಅವರ ಬಟ್ಟೆ ಇಸ್ತ್ರಿ ಮಾಡಿ, ಡಬ್ಬಿ ತುಂಬಿಸಿ, ಪ್ಯಾಕ್ ಮಾಡಿ, ಶಾಲೆಗೆ ಬಿಟ್ಟು ಬಂದಳು.

ನಂತರ ಮನೆಗೆ ಬಂದು, ಕಸ ಗುಡಿಸಿ, ನೀರು/ ಫೆನಾಯಲ್ ಹಾಕಿ ಮನೆಯನ್ನು ಸಾರಿಸಿ, ತರಕಾರಿ ತರಲು ದೂರದ ಮಾರ್ಕೆಟ್ ಗೆ ಹೊರಟಳು, ಹಾಗೆ ದಾರೀಲಿ ತಿಂಗಳ ಸಾಲದ ಕಂತನು ಗಿರವಿ ಅಂಗಡಿಯಲ್ಲಿ ಕಟ್ಟಿ, ಮನೆಗೆ ಬಂದು ನಾಯಿ "ಟಾಮಿ" ಮತ್ತು ಬೆಕ್ಕು "ಕಿಟ್ಟಿ" ಅನ್ನು ಚೆನ್ನಾಗಿ ತೊಳೆದು ಹೊರಗೆ ಅವುಗಳನ್ನು ಒಣಗಲು ಬಿಟ್ಟಳು...,

ಗಡಿಯಾರ 2 ಗಂಟೆ ಹೊಡೆದ ಸದ್ದು....

ಮಕ್ಕಳು ಮಲಗಿ ಅಸ್ತವ್ಯೆಸ್ತ ಮಾಡಿದ್ದ ಬೆಡ್-ಶೀಟ್ಸ್ ನ ಸರಿಮಾಡಿ, ಅಡುಗೆ ಮನೆಯ ಅಷ್ಟು ಕೊಳಕನ್ನಾ ಸಾರಿಸಿ, ಚೊಕ್ಕಟ್ಟ ಮಾಡಿದಳು....
ಮಕ್ಕಳ ಶಾಲೆ ಬಿಡುವ ಸಮಯವಾಯ್ತೆಂದು ಶಾಲೆಯ ಹತ್ತಿರ ಓಡುತ್ತಾ ಅವರನ್ನು ಕರೆದುಕೊಂಡು ಮನೆಗೆ ಬಂದು, ಹೋಂವರ್ಕ್ ಮಾಡಿಸಿ ತಿಂಡಿ ಕೊಟ್ಟು ತನ್ನ ಪತಿ ( ಈಗ ಗುಂಡಮ್ಮ) ನ್ ಬಟ್ಟೆ ಇಸ್ತ್ರಿ ಮಾಡುತ್ತಿರಲು, ತನ್ನ ಪತಿರಾಯ ಆರಾಮಾಗಿ ಟಿವಿ ನೋಡುತ್ತಿದ್ದನು ... !

ಐದು ಗಂಟೆಗೆ.... ರಾತ್ರಿಯ ಊಟಕ್ಕೆ ತಯಾರಿ ಮಾಡಲು ಟೊಮಾಟೋ, ಇರುಳ್ಳಿ ಕತ್ತರಿಸಿ ಮಸಾಲೆ ಅರೆದು ಸಂಬಾರ್ ತಯಾರಿಸಿದಳು.. ಊಟ ಮುಗಿದ ನಂತರ ( ಪತಿರಾಯಾ ಅಗಲೇ ಶಯನಗ್ರಹ ಸೇರಿಯಾಗಿತ್ತು .... !) ಅಷ್ಟು ಮುಸರೆ ಪಾತ್ರೆ ತೊಳೆದು, ಮಕ್ಕಳನ್ನು ಮಲಗಿಸಿ ಇನ್ನೇನು ಬಂದು ಮಲಗಬೇಕೆಂದು ನಿರ್ಧರಿಸಿದಾಗ, ತನ್ನ ಗಂಡ 'ಕೀಟಲೆ'ಗಳನ್ನು ಸಹಿಸಬೇಕಾಯಿತು...!

ಅಂತೂ ಆ ರಾತ್ರಿ ಕಳೆದು, ಗುಂಡ ದೇವರನ್ನು ಮತ್ತೆ ಬೇಡಿದನು.....

"ದೇವರೇ, ನಾ ತಿಳಿದಂತೆ ನಾ ಮಾಡಿದ ಅಷ್ಟು ಕೆಲಸವು ನನ್ನ ಹೆಂಡತಿಯ ಎದುರು ಒಂದು ಹಿಡಿಗೂ ಸಮಾನವಲ್ಲ... ಅವಳ ಬಗ್ಗೆ ನಾನು ಪಟ್ಟ ಅಷ್ಟು ಅಸೂಯೆ..., ಅವಳು ಸುಮ್ಮನೆ ಮನೆಯಲ್ಲಿ ಕುಳಿತಿರುತ್ತಾಳೆ ಅಂತಾ ನಾ ಕಂಡ ಕನಸು - ಎಲ್ಲಾ ಸರಿಯಾಗಿ ಅರ್ಥವಾಯಿತು.., ದಯವಿಟ್ಟು ಅದಷ್ಟು ಬೇಗ ನನ್ನ ಮೊದಲಿನ ದೇಹ ನನಗೆ ಕೊಟ್ಟು ಬಿಡು...!"

.....................

ದೇವರು ಮತ್ತೊಮೆ ನಕ್ಕು, ಗುಂಡನಿಗೆ ಹೇಳಿದ....

"ಮಗೂ, ನಿನಗೇನೋ ತಿಳಿಯಿತು ನಿನ್ನ ಹೆಂಡತಿ ನಿನಗೋಸ್ಕರ ಮತ್ತು ನಿನ್ನ ಕುಟುಂಬಕೋಸ್ಕರ ಎಷ್ಟು ದುಡಿಯುತ್ತಿದ್ದಾಳೆ ಅಂತಾ, ನಿನ್ನ ಕೆಲಸ ಅವಳ ಕೆಲಸದ ಮುಂದೆ ಎನೇನೂ ಇಲ್ಲ ಅಂತ ನನಗೆ ನಿನಗಿಂತ ಮುಂಚೆಯೇ ತಿಳಿದಿತ್ತು, ಅದರೆ ನೀ ಬಯಸಿದ ಅಸೆ ನೆರವೇರಿಸದೇ ಬಿಟ್ಟರೆ ನಾಳೆ ನೀನು ನನ್ನ ಹೆಸರನ್ನೇ "ಚೇಂಜ್" ಮಾಡುವ ಅಪಾಯದಿಂದ ನಾ ನಿನ್ನ ಕೋರಿಕೆ ಮನ್ನಿಸಿದೆ... ಅದರೆ..."

ಗುಂಡ: "ಅದರೆ ಇನ್ನೇನು?" ಅಂದ....

ದೇವರು: ನಿನ್ನ ದೇಹ ಮತ್ತೆ ಮರಳಿ ಬೇಕೆಂದರೆ ಇನ್ನು ಒಂಬತ್ತು ತಿಂಗಳು ಕಾಯಬೇಕು ....!

ಗುಂಡ: "ಏಕೆ.... ಅಷ್ಟು ಸಮಯ ಯಾಕೆ...?"

ದೇವರು: "ನಿನಗೆ ಗೊತ್ತಿರಬೇಕಲ್ಲಾ, ನೆನ್ನೆ ರಾತ್ರಿ ಏನಾಯ್ತಂತಾ...? ನೀನೀಗಾ ಗರ್ಭಿಣಿ....!"

ಗುಂಡ: !!!????!!!!!?????......ಆಆಆಆಆಆಆಆಆಆಆಆಆಆಆಆಆಆಆ!!!!!

.................................................................................
ವಿಭಾಗ: edit post
0 Responses

Post a Comment