ವಿನಯ್ ...
ಒಬ್ಬ ಮನುಷ್ಯ ತನ್ನ ಕಷ್ಟಗಳ ಸರಮಾಲೆಯಿಂದ ಬಹಳ ಬೇಸತ್ತಿದ್ದನು. ಅವನು ದಿನವು ದೇವರನ್ನು ಬೇಡುತ್ತಿರಲು: " ನಾನೇ ಏಕೆ? ಎಲ್ಲರೂ ಖುಷಿಯಿಂದಿರುವಾಗ ನಾನೊಬ್ಬನೇ ಏಕೆ ಇಷ್ಟು ನರಳುತ್ತಾ ಇದ್ದೀನಿ...?" . ಒಂದು ದಿನ, ತುಂಬ ಸಂಕಟದಿಂದ ದೇವರನ್ನು ಅವನು ಬೇಡಲು - "ಬೇಕಾದರೆ ಬೇರೆಯವರ ಕಷ್ಟವನ್ನು ನನಗೆ ಕೊಡು, ನನ್ನ ಕಷ್ಟಗಳನ್ನು ಮಾತ್ರ ತಗೆದುಕೊಂಡು ಬಿಡು!". ಅದೇ ದಿನದ ರಾತ್ರಿ ಅವನಿಗೆ ಒಂದು ಕನಸು ಬಿದ್ದಿತು....

.............................

ಪ್ರಕಾಶಮಾನವಾದ ಜ್ಯೋತಿ ಆಕಾಶದಲ್ಲಿ.... ಆ ಬೆಳಕಿನಿಂದ ದೇವರು ಹೊರಬರಲು, ಅಲ್ಲಿ ನೆರೆದಿದ್ದವರನ್ನು ಕೇಳಿದನು - "ನಿಮ್ಮ ಒಬ್ಬೊಬ್ಬರ ಕಷ್ಟಗಳನ್ನು ಇಲ್ಲಿ ತನ್ನಿ...". ಎಲ್ಲರೂ ತಮ್ಮ ಕಷ್ಟಗಳಿಂದ ಅಗಲೇ ಸಾಕಷ್ಟು ಬಳಲಿದ್ದರು. ಆ ಮನುಷ್ಯನಂತೆ ಇವರು ಸಹ "ಬೇಕಾದರೆ ಬೇರೆಯವರ ಕಷ್ಟವನ್ನು ನನಗೆ ಕೊಡು, ನನ್ನ ಕಷ್ಟಗಳನ್ನು ಮಾತ್ರ ತಗೆದುಕೊಂಡು ಬಿಡು!" ಎಂಬ ನಿರ್ಧಾರಕ್ಕೆ ಬಂದಿದ್ದರು. ಹೇಗಾದರೂ ಮಾಡಿ ಅದರಿಂದ ಕೈ ತೊಳೆದು ಕೊಳ್ಳಬೇಕೆಂಬ ಹೆಬ್ಬಯಕೆ ಅಲ್ಲಿದ್ದವರದು...! ತಮ್ಮ ಕಷ್ಟಗಳ ಮೂಟೆಗಳ ಸಮೇತ ಅಲ್ಲಿ ನೆರೆದಿದ್ದರು. ಕೊನೆಗೂ ಅವರು ಕೋರಿದ ಬಯಕೆ ತೀರಿತೆಂಬ ಭಾವ ಅವರೆಲ್ಲರಲ್ಲಿತ್ತು.....

........................

ಕೊನೆಗೆ ದೇವರು "ನಿಮ್ಮೆಲ್ಲರ ಮೂಟೆಗಳನ್ನು ಆ ಗೋಡೆಯ ಮೇಲೆ ನೇತು ಹಾಕಿ...". ಎಲ್ಲಾ ಮೂಟೆಗಳನ್ನು ಗೋಡೆಯ ಮೇಲೆ ನೇತು ಹಾಕಲಾಯಿತು.
ನಂತರ ದೇವರು ಘೋಷಣೆ ಮಾಡಿದನು: " ನೀವು ಈಗ ನಿಮಗೆ ಇಷ್ಟವಾದದ್ದನ್ನ ಅಯ್ದುಕೊಳ್ಳಬಹುದು... ಯಾರು ಬೇಕಾದರೂ ತಮಗೆ ಇಷ್ಟವಾದ ಮೂಟೆ ತಗೆದುಕೊಳ್ಳಬಹುದು..."

........

ಅಶ್ಚರ್ಯವಾದ ಘಟನೆ ಅಲ್ಲಿ ನೆಡೆಯಿತು.... ಯಾವ ಮನುಷ್ಯ ತನ್ನ ಕಷ್ಟಗಳು ಬೇಗ ತೊಲಗಿಹೋಗಲಿ ಎಂದು ಬೇಡುತ್ತಾ ಅಲ್ಲಿ ತನ್ನ ಮೂಟೆಯನ್ನು ಇಟ್ಟಿದನೋ ಅವನೇ ಮೊದಲು ಹೋಗಿ ತಾನೆ ನೇತು ಹಾಕಿದ್ದ ಮೂಟೆಯನ್ನೆ ಎತ್ತುಕೊಂಡನು....!

ನೋಡುತ್ತಿದ್ದಂತೆ ಎಲ್ಲರೂ ಗೋಡೆಯ ಕಡೆಗೆ ಧಾವಿಸಲು... ತಮ್ಮ ಮೂಟೆಗಳನ್ನು ಮಾತ್ರ ಎತ್ತಿಕೊಂಡು ಬಂದರು...! ಎಲ್ಲರೂ ತಮ್ಮ ಮೂಟೆಗಳನ್ನು ಅಷ್ಟೇ ಇಷ್ಟದಿಂದ ವಾಪಸ್ ತೆಗೆದುಕೊಂಡರು... ಎಕೆಂದರೆ ಮೊದಲ ಬಾರಿ ಅವರೆಲ್ಲರೂ ಇತರರ ಕಷ್ಟ ನೋಡಿದ್ದರು. ಅಷ್ಟು ದಿನದಿಂದ ಆ ಜನ ಬೇಡಿದ್ದು ಇದಕ್ಕೇನಾ ಎಂಬ ಭಾವನೆ ಅಲ್ಲಿ ಬಂದಿತ್ತು....!

......................

ಇನ್ನೊಂದು ತೊಂದರೆ ಏನಾಗಿತ್ತೆಂದರೆ ಎಲ್ಲರೂ ತಮ್ಮ ತಮ್ಮ ಕಷ್ಟಗಳಿಗೆ ಆಗಲೇ ಹೊಂದಿಕೊಳ್ಳಲು ತೊಡಗಿದ್ದರು, ಅದರಿಂದ ಅವರಿಗೆ ತಮ್ಮ ಕಷ್ಟಗಳು ಎನೆಂಬುದರ ಸ್ಪಷ್ಟ ಅರಿವಿತ್ತು. ಬೇರೆ ಯಾರದೋ ಕಷ್ಟ ತಗೆದುಕೊಳ್ಳುವ ಬದಲು ತಮ್ಮ ಕಷ್ಟಗಳೇ ಮೇಲೆಂಬ ಭಾವನೆ ಅವರಲ್ಲಿ ಬಂದಿತ್ತು...!

......................

ಎಲ್ಲರು ಸಂತೋಷದಿಂದ ತಮ್ಮ ಮನೆಯೆಡೆಗೆ ನಡೆದರು... ಏನು ಅಂದು ಬದಲಾಗಲಿಲ್ಲ... ಎಲ್ಲrU ತಮ್ಮ ಕಷ್ಟಗಳನ್ನೇ ಮರಳಿ ತಮ್ಮ ಮನೆಗೆ ತಂದಿದ್ದರು... ಆದರೂ ಎಲ್ಲರ ಮುಖದಲ್ಲಿ ತಮ್ಮ ಮೂಟೆಯೆ ತಮಗೆ ಸಿಕ್ಕಿತೆಂಬ ಸಂತಸದ ಭಾವನೆ ಇತ್ತು!

..................

ಮರುದಿನ ಆ ಮನುಷ್ಯನು ಪುನಃ ದೇವರನ್ನು ಬೇಡಿದನು....

"ಆ ಕನಸಿನ ಮುಖಾಂತರ ನನಗೆ ತಿಳುವಳಿಕೆ ಮೂಡಿಸಿದ್ದಕ್ಕೆ ಧನ್ಯವಾದಗಳು... ನಾನೆಂದು ಮತ್ತೆ ನಿನ್ನನ್ನು ಈ ರೀತಿ ಬೇಡುವುದಿಲ್ಲ... ನನಗಾಗಿ ನೀನು ಏನು ಕೊಟ್ಟಿರುವೆಯೋ ಅದೇ ಚೆನ್ನ ನನಗೆ... ಅದೇ ಚೆನ್ನಾಗಿದೆ ಎಂದು ನಾ ನಂಬುವೆ... ಅದಕ್ಕಾಗೇ ಅಲ್ಲವೇ ನೀನು ನನಗೆ ಅವನ್ನು ಕೊಟ್ಟಿದ್ದು....!"
ವಿಭಾಗ: edit post
0 Responses

Post a Comment