ವಿನಯ್ ...
ಒಂದು ದಿನ ಗಣಿತದ ಮೇಷ್ಟರೊಬ್ಬರು ತಮ್ಮ ತರಗತಿಯ ಮಕ್ಕಳಿಗೆ ತಮ್ಮ ಇತರ ಸಹಪಾಠಿಗಳ ಹೆಸರನ್ನ ಎರಡು ಪ್ರತ್ಯೇಕ ಹಾಳೆಗಳಲ್ಲಿ ಒಂದು ಗೆರೆ ಬಿಟ್ಟು ಬರೆಯಲು ಹೇಳಿದರು. ಹಾಗೆಯೇ ತಮ್ಮ ಒಬ್ಬೊಬ್ಬರು ಸಹಪಾಠಿಗಳ ಬಗ್ಗೆ ತಮಗೆ ಇಷ್ಟವಾದ ಮಾತು/ಕಾರ್ಯದ ಬಗ್ಗೆ ಬರೆದು ಸೇರಿಸುವಂತೆ ಹೇಳಿದರು. ಮಕ್ಕಳ್ಳೆಲ್ಲರೂ ಅಂದು ತರಗತಿಯ ಇಡಿ ಸಮಯದಲ್ಲಿ ಹೆಸರು ಬರೆಯುವ ಕೆಲಸ ಮಾಡಿ ಕೊನೆಯಲ್ಲಿ ತಮ್ಮ ಹಾಳೆಗಳನ್ನು ಮೇಷ್ಟರಿಗೆ ಕೊಟ್ಟರು.

ವಾರದ ಕೊನೆಯಲ್ಲಿ, ಮೇಷ್ಟರರು ಪ್ರತಿಯೊಬ್ಬರ ಹೆಸರನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು, ಅವರ ಬಗ್ಗೆ ಇತರ ಸಹಪಾಠಿಗಳು ಕೊಟ್ಟ ವಿವರಣೆ ಪ್ರತ್ಯೇಕಿಸಿ ಸೋಮವಾರದ ದಿನ ತನ್ನ ಪ್ರತ್ಯೇಕ ವಿದ್ಯಾರ್ಥಿಗೆ ಹಾಳೆಗಳ ಕೊಟ್ಟು ಓದಲು ಹೇಳಿದರು. "ಓ, ನಾನು ಇಷ್ಟು ಬೇಕಾಗಿರುವನಾ/ಳಾ!!" ಮತ್ತು "ನನ್ನನ್ನು ನನ್ನ ಸಹಪಾಠಿಗಳು ಇಷ್ಟೊಂದು ಇಷ್ಟಪಡ್ತಾರ!" ಎಂಬ ಉದ್ಗಾರವೇ ತರಗತಿಯಲ್ಲಿ ಜಾಸ್ತಿ ಕೇಳಿಬಂದವು....
ಆ ಹಾಳೆಯಲ್ಲಿದ ಸಾರಾಂಶದ ಬಗ್ಗೆ ಮತ್ತೆಂದೂ ತರಗತಿಯಲ್ಲಿ ಮಾತು ಬರಲಿಲ್ಲ. ಮೇಷ್ಟರು ಸಹ ಆ ವಿಷಯದ ಬಗ್ಗೆ ಹೆಚ್ಚು ತಿಳಿಯಲು ಹೋಗಲಿಲ್ಲ. ಅದರೂ ಒಂದು ವಿಷಯ ಅಂದಿನಿಂದ ಬದಲಾಯಿತು, ತರಗತಿಯ ವಿದ್ಯಾರ್ಥಿಗಳು ತಮ್ಮ ಇತರ ಸಹಪಾಠಿಗಳ ಬಗ್ಗೆ ಗೌರವ-ಆದರ ತೋರಿಸಲು ಪ್ರಾರಂಭಿಸಿದ್ದರು... ಹಾಗೆಯೆ ವರ್ಷಗಳು ಕಳೆದವು....

ಹಲವಾರು ವರ್ಷಗಳ ನಂತರ ಆ ಗುಂಪಿನಲ್ಲಿದ್ದ ಒಬ್ಬ ವಿದ್ಯಾರ್ಥಿ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಲು, ಮೇಷ್ಟರಿಗೆ ಅಂತಿಮ ಯಾತ್ರೆಯಲ್ಲಿ ಭಾಗವಹಿಸಲು ಅಮಂತ್ರಣ ಹೋಯಿತು. ಅವರು ಎಂದೂ ಒಬ್ಬ ಯೋಧನ ಅಂತಿಮ ಯಾತ್ರೆಯನ್ನು ನೋಡಿರಲಿಲ್ಲ. ಪೆಟ್ಟಿಗೆ ಯಲ್ಲಿ ಮಲಗಿದ್ದ ಅವನು ದೃಡ ದೇಹಿ, ನೋಡಲು ಸುಂದರನಾಗಿದ್ದನು. ಆ ಅವರಣ ತುಂಬ ಅವನ ಮಿತ್ರರ ಗುಂಪೇ ತುಂಬಿತ್ತು. ಒಬ್ಬೊಬರಾಗಿ ತಮ್ಮ ಗೆಳೆಯನ ಅಂತಿಮ ದರ್ಶನ ಪಡೆಯಲು ಸಾಲುಗಟ್ಟಿ ಹೋದರು. ಮೇಷ್ಟರರು ಅದರಲ್ಲಿ ಕೊನೆಯವರಾಗಿದ್ದರು.

ಹಾಗೆ ಅವರು ಒಂದು ಮೂಲೆಯಲ್ಲಿ ನಿಂತಿರಲು, ಆ ಸೈನಿಕರ ಗುಂಪಿನಲ್ಲಿ ಇದ್ದವರೊಬ್ಬರು ಮುಂದೆ ಬಂದು ಮೇಷ್ಟರನ್ನು ಕೇಳಿದರು: "ನೀವು ನಮ್ಮ ಸಂಜಯಾ ಗಣಿತದ ಮೇಷ್ಟರಲ್ಲವೇ?". "ಹುಂ.." ಅಂದರು ಮೇಷ್ಟರು. ಆಗ ಅ ಸೈನಿಕ ಸಂಜಯ್ ನಿಮ್ಮ ಬಗ್ಗೆ ತುಂಬ ಮಾತನಾಡುತ್ತಿದ್ದ ಎಂದು ಹೇಳಿದ. ಅಂತಿಮ ಯಾತ್ರೆಯ ನಂತರ ಸಂಜಯ ಎಲ್ಲಾ ಸ್ನೇಹಿತರು, ಅವನ ತಂದೆ-ತಾಯಿ ಮೇಷ್ಟರರ ಹತ್ತಿರ ಮಾತನಾಡಲು ಕಾಯುತ್ತಿದ್ದರು.
"ನಾನು ನಿಮಗೆ ಎನನ್ನೋ ತೋರಿಸಬೇಕೆಂದಿದ್ದೇನೆ.. " ಎಂದು ಸಂಜಯ್ ತಂದೆ ತಮ್ಮ ಪರ್ಸ್ ಹೊರತಗೆದರು. " ಇದು ಸಂಜಯ್ ತನ್ನ ಕೊನೆಯುಸಿರು ಎಳೆಯುವಾಗ ತನ್ನ ಕೈಯಲ್ಲಿ ಇಟ್ಟಿಕೊಂಡಿದ್ದನಂತೆ..., ನೀವು ಇದನ್ನು ಗುರುತಿಸಬಲ್ಲಿರೆಂದು ನಾ ಅಂದುಕೊಳ್ಳುತ್ತೇನೆ...". ಮೇಷ್ಟರರು ಆ ಹರಿದ ಎರಡು ತುಂಡು ಹಾಳೆ ಮೆಲ್ಲಗೆ ತರೆದರು. ಅದು ಹಲವು ಸಲ ಟೇಪ್ ಹಾಕಿ ಹಲವಾರು ಸಲ ಮಡಿಚಲಾಗಿತ್ತು. ಅದನ್ನು ನೋಡುತ್ತಲೇ ಅವರಿಗೆ ಅಂದು ಹಲವು ವರ್ಷಗಳ ಹಿಂದೆ ತಾವು ಬರೆಸಿದ ಕೆಲಸ ನೆನಪಿಗೆ ಬಂತು.

"ನೀವು ಅಂದು ಮಾಡಿದ ಕೆಲಸಕ್ಕೆ ತುಂಬ ಧನ್ಯವಾದಗಳು ಸರ್..." ಸಂಜಯ್ ಅಮ್ಮ ಹೇಳಿದರು. "ನೀವೇ ನೋಡಿದರೆಲ್ಲ, ಸಂಜಯ್ ಈ ಏರಡು ತುಂಡು ಹಾಳೆಯನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ನೋಡಿಕೊಂಡಿದ್ದ...". ಸಂಜಯ ಯ ಇತರ ಮಿತ್ರರು ಆಗ ಓಬೊಬ್ಬರಾಗಿ ಸೇರತೊಡಗಿದರು. ಅರ್ಜುನ್ ಮೆಲುದನಿಯಲ್ಲಿ ಹೇಳಿದ: "ಸರ್, ನನ್ನ ಹಾಳೆ ಇನ್ನೂ ಹಾಗೇ ಇದೆ... ನನ್ನ ಕಪಾಟಿನ ಮೊದಲ ಬಾಕ್ಸ್ ನಲ್ಲಿ..." ಪೃಥ್ವಿಯ ಹೆಂಡತಿ: "ಪೃಥ್ವಿ ಅವರ ಹಾಳೆಯನ್ನು ನಮ್ಮ ವಿವಾಹದ ಫೋಟೊ ಅಲ್ಬಮ್ ನಲ್ಲಿ ಹಾಕಿಸಿಟ್ಟಿದ್ದಾರೆ..."

"ನನ್ನದು ಸಹ..." ಅಂದಳು ರಷ್ಮಿ. " ಅದು ನನ್ನ ತುಂಬ ಇಷ್ಟಪಡುವ ಡೈರಿಯಲ್ಲಿದೆ...." ಅಂದಳು. ದೀಪಾ, ಮತ್ತೊಬ್ಬ ವಿದ್ಯಾರ್ಥಿನಿ ತನ್ನ ಪರ್ಸನ್ನ ಹೊರತೆಗೆಯುತ್ತಾ ಮೆತ್ತಗಾಗಿದ್ದ ಹಾಳೆಯನ್ನು ಅಲ್ಲಿದ್ದ ತನ್ನ ಇತರ ಮಿತ್ರರಿಗೆ ತೋರಿಸುತ್ತ " ನಾ ಇದನ್ನು ಯಾವ ಹೊತ್ತು ಬಿಟ್ಟಿರೊಲ್ಲ... ಎಲ್ಲ ಸಮಯ ಇದು ನನ್ನೊಂದಿಗೆ ಇರುತ್ತೆ...", ಕಣ್ಣು ಮಿಟುಕಿಸದೆ ಹೇಳಿದಳು. ಮತ್ತೆ ಮಾತು ಮುಂದುವರಿಸುತ್ತ : " ನಮ್ಮೆಲ್ಲರ ಹತ್ತಿರ ಅಂದು ಬರೆದ ಚೀಟಿ ಹಾಗೇ ಇದೆ ಸರ್..."

............................................

ಆಗ ಮೇಷ್ಟರರು ಬಿಕ್ಕಿ-ಬಿಕ್ಕಿ ಅಳಲು ಶುರುಮಾಡಿದರು. ವೀರಮರಣ ಅಪ್ಪಿದ ಸಂಜಯ್ ಗೆ, ಹಾಗೆ ತನಗೆ ಇಷ್ಟು ಆದರ ಕೊಟ್ಟ ತನ್ನ ಎಲ್ಲ ವಿದ್ಯಾರ್ಥಿಗಳ ಪ್ರೀತಿಗೆ ಅತ್ತರು......

............................................

ಈ ಬರಹ ಬರೆಯಲು ನಿಜವಾದ ಕಾರಣ..., ನೀವು ನಿಮ್ಮ ಜೀವನದಲ್ಲಿ ಯಾರನ್ನಾದರೂ ತುಂಬ ಇಷ್ಟಪಡ್ತಾ ಇದ್ದೀರಾ ಅಂದರೆ ನೀವು ಮಾಡಬೇಕಾಗಿರುವುದು ಒಂದೇ ಕೆಲಸ... ಅದನ್ನು ಆದಷ್ಟು ಬೇಗ ಅವರಿಗೆ ತಿಳಿಸಿ.... ಎಕೆಂದರೆ ಅವರು ನಿಮ್ಮ ಜೀವನದಲ್ಲಿ ಬಹಳ ಮುಖ್ಯರಾಗಿರಬಹುದು... ಇನ್ನೊಂದು ಮಾತು, ಕಳೆದು ಹೋದ ಸಮಯ ಮತ್ತೆಂದು ಬರುವುದಿಲ್ಲ..... ನಮ್ಮ ಭಾವನೆಗಳನ್ನ ಆ ಸಮಯಕ್ಕೆ ಸರಿಯಾಗಿ ವ್ಯಕ್ತಪಡಿಸುವುದೇ ನಾವು ಮಾಡಬೇಕಾದ ಮೊದಲ ಕೆಲಸ.... ಎಕಂದರೆ ಆ ಭಾವನೆಗಳೇ ಯಾರನ್ನ ಹೇಗೆ ಬದಲಿಸಬಲ್ಲದು...ಯಾರು ತಿಳಿಯರು...!
ವಿಭಾಗ: edit post
0 Responses

Post a Comment