ವಿನಯ್ ...
ಚಿತ್ರ: ರೋಬೋಟ್ - ತೆಲುಗು ಅವೃತಿ ( ತಮಿಳಿನ "ಎಂಧೀರನ್" ಡಬ್)
ತಾರಾಗಣ: ರಜನಿ, ಐಶ್ವರ್ಯ, ಡ್ಯಾನಿ, ಕಲಾಭವನ್ ಮಣಿ ಮುಂತಾದವರು
ಸಂಗೀತ: ಎ.ಅರ್.ರೆಹ್ಮಾನ್
ನಿರ್ದೇಶನ: ಶಂಕರ್



ಅನೇಕ ದಿನಗಳಿಂದ ಭಾರತದ್ಯಾಂತ (ವಿಶ್ವಾದ್ಯಂತ..) ಕುತೂಹಲ ಮೂಡಿಸಿದ್ದ ಕನ್ನಡಿಗ ರಜನಿಯವರ ಚಿತ್ರ "ರೋಬೋಟ್". ತನ್ನ ಪ್ರಚಾರ ತಂತ್ರಗಳಿಂದಲೇ ಜನರ ನಿರೀಕ್ಷೆ ಗಳಿಸಿದ್ದ ಈ ಚಿತ್ರ (ಒಟ್ಟು ಬಜೆಟ್ ೧೬೦ ಕೋಟಿ... ಗ್ರಾಫಿಕ್ಸ್ ಗೆ ಶೇಕಡ ೪೦ % ವ್ಯಯಿಸಲಾಗಿದೆ (೬೦ ಕೋಟಿ ಅಂದಾಜು..), ೧ ಅಕ್ಟೋಬರ್ ರಂದು ತೆರೆಕಂಡಿದೆ. ಉಳಿದ ಜನರಂತೆ ಕೇವಲ "ಕುತೂಹಲ" ದ ಆಧಾರದ ಮೇಲೆ ಚಿತ್ರ ನೋಡಹೊರಟ ನಾನು, ಅದನ್ನು ಮುಗಿಸಿ ಬಂದಾಗ ಚಿತ್ರದ ತುಂಬ "ಗ್ರಾಫಿಕ್ಸ್" ಮತ್ತು ಹೆಜ್ಜೆಗೊಂದು "ಹಾಡು".., ಇವೆಲ್ಲದರ ಮುಂದೆ ಕಥಾ ಭಾಗ ಏಕೋ "ಡಲ್" ಹೊಡೆದಂಗಿತ್ತು..!!!


ಡಾ || ವಶಿ (ರಜನಿ) ಒಬ್ಬ ವಿಜ್ಹಾನಿ. ಹ್ಯುಮಾನೊಯಿಡ್ ರೋಬೋಟ್ ತಯಾರಕ. ತನ್ನ ಸ್ವಾರ್ಥಸಾಧನೆಗಲ್ಲದ, ದೇಶದ ಸೈನ್ಯದ ನೆರೆವಿಗೆ ಬರುವಂತಹ ರೋಬೋಟ್ ತಯಾರಿಕೆಯಲ್ಲಿರುತ್ತಾನೆ. ಚಿತ್ರದ ಅರಂಭವೂ ಅದೇ. ತಾನು ತಯಾರಿಸಿದ ರೋಬೋಟ್ ( ಅದರ ಹೆಸರು "ಚಿಟ್ಟಿ" - ಇದನ್ನೂ ರಜನಿ ಯವರೇ ನಿರ್ವಹಿಸಿದ್ದಾರೆ..) ತನ್ನ ಅಣತಿಯಂತೆ ಆಡುವುದು, ಮಾತನಾಡುವುದು, ಕುಣಿಯುವುದು ಎಲ್ಲಾ ಮಾಡುವುದ ಅರಿತು ಅವನು ಅದನ್ನು ಒಂದು ಸಭೆಯ ಮುಂದೆ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸುತ್ತಾನೆ. ತನ್ನ ಡಾಕ್ಟರ್ ಗೆಳತಿ ಸನಾ ( ಐಶ್ವರ್ಯ ರೈ) ಸಹ ಅದರ ಕಾರ್ಯದಕ್ಷತೆಗೆ ಮರುಳಾಗಿ ತನ್ನ exam preparations ಗೆ ಸಹಾಯ ಪಡೆಯಲು ತನ್ನ ಹಾಸ್ಟಲ್ ಗೆ ಕರೆದ್ಯೊಯುತ್ತಾಳೆ. ಅಲ್ಲಿ ಎಲ್ಲರ ಮೆಚ್ಚುಗೆ ಗಳಿಸುವ "ಚಿಟ್ಟಿ" ಸನಾಳನ್ನು ತನ್ನ ವಿವಿಧ ಕರಾಮತ್ತುಗಳಿಂದ ಅಶ್ಚರ್ಯಗೊಳಿಸುತ್ತದೆ. ಇದರಲ್ಲಿ ಟ್ರೈನ್ sequence ಸಹ ಒಂದು. ಅದ್ಭುತ ಗ್ರಾಫಿಕ್ಸ್ ಮತ್ತು ಹೊಡೆದಾಟಗಳ ಹೊಂದಿರುವ ಈ ಸನ್ನಿವೇಶ ನೋಡಲು ಚನ್ನ. ಅಲ್ಲಿಂದ ಅವಳನ್ನು ಪಾರುಮಾಡುವ ಚಿಟ್ಟಿ ನಂತರ ಸನಾಳು ವೈದ್ಯಕೀಯ ಪರೀಕ್ಷೆ ಬರೆಯುವಾಗ ಸಹಾಯ ಮಾಡುವ ಪರಿಯಿದೆಯಲ್ಲಾ, ಅದನ್ನು ಬಹುಶ: ಚಿತ್ರ ನೋಡಿಯೇ ತಿಳಿಯಬೇಕು ( ಮುನ್ನ ಭಾಯಿ MBBS ನಲ್ಲಿರುವ exam ಸಂದರ್ಭಕ್ಕಿಂತ ಭರ್ಜರಿಯಾಗಿದೆ...!!).


ಮತ್ತೊಂದು ಸನ್ನಿವೇಶ ಚಿಟ್ಟಿ ಸನಾಳ ಗೆಳತಿಯ ಹೆರಿಗೆ ಮಾಡಿಸುವ ಸಂದರ್ಭ. ಇದಂತೂ ಅಚ್ಚರಿಯ ಪರಮಾವಧಿ!!. ಯಾವ ಅಂಗ್ಲ ಚಿತ್ರಗಳಲ್ಲೂ ಕಾಣದ example ಅನ್ನ ಇಲ್ಲಿ ಉಪಯೋಗಿಸಿದ್ದಾರೆ ಶಂಕರ್. ಸಸೂತ್ರವಾಗಿ ಹೆರಿಗೆ ಮಾಡಿಸುವ ಚಿಟ್ಟಿ ಅಪರೇಷನ್ ಕೊಠಡಿಯಿಂದ ಹೊರಬಂದಾಗ ಸನಾ ಅವನ ಕೆನ್ನೆಗೆ ಖುಷಿಯಿಂದ ಕೊಡುವ "ಮುತ್ತು" ಒಂದು ರೋಬೋಟ್ ಮನವ ಸ್ತ್ರೀ ಯನ್ನು ಪ್ರೀತಿಸುವಂತೆ ಪ್ರೇರೇಪಿಸುತ್ತದೆ. ( ಬಹುಶ: ರೋಬೋಟ್ ನಲ್ಲಿ ಮನವ ಗುಣಗಳನ್ನ ತುಂಬಿದ್ದ ಪರಿಣಾಮಕ್ಕೇನೋ..!!)


Intervel ಮುಗಿದ ನಂತರದ ಕಥೆ "ಚಿಟ್ಟಿ" ಸನಾಳ ಪ್ರೀತಿ ದಕ್ಕಿಸಿಕೊಳ್ಳಲು ಮಾಡುವ ಕೆಲಸ, ತನ್ನ ತಯಾರಿಸಿದ ಡಾ || ವಶಿಗೂ ಹೊಟ್ಟೆಯುರಿ ತರಿಸುವ ಮಟ್ಟಕ್ಕೆ ಹೋಗುತ್ತದೆ. ಇದೆಲ್ಲದರ ನಡುವೆ ಡಾ || ವಶಿಯ ಬಾಸ್ "ಬೋರ" (ಡ್ಯಾನಿ) ತನ್ನ ಜ್ಯೂನಿಯರ್ ತನ್ನನ್ನು ಮೀರಿಸುವ ಕಾರ್ಯ ಮಾಡಿಬಿಟ್ಟನೆಂಬ ಕ್ರೋಧ ಬೇರೆ. ಹೇಗಾದರೂ ಮಾಡಿ ಚಿಟ್ಟಿಯಲ್ಲಿ ಅಳವಡಿಸಿರುವ "neural module" ಪಡೆದೇ ತೀರಬೇಕು ಎಂಬ ಬಯಕೆ.. (ಇದಕ್ಕೆ ಕಾರಣ ತಾನು ಇತರರೊಡನೆ ಮಾಡಿಕೊಂಡಿದ್ದ ವ್ಯವಹಾರಿಕ ಒಪ್ಪಂದ...). ಇದು ಡಾ || ವಶಿಯ "ಚಿಟ್ಟಿ" ಯನ್ನು ಧ್ವಂಸಗೊಳಿಸಿ ಕಸಕ್ಕೆ ಬಿಸಾಕಿದಾಗ ಕೈಗೂಡುತ್ತದೆ.!!. ಕಸದ ಗೋದಾಮಿನಿಂದ ತುಂಡಾದ/ಮುರಿದುಹೋದ "ಚಿಟ್ಟಿ" ತನ್ನ ಲ್ಯಾಬಿಗೆ ಹೊತ್ತುತರುವ ಬೋರ ತಾನು ಅನ್ವೇಷಿಸಿದ destructive program ಅಳವಡಿಸಿ self developable and self destructive type robot ಮಾಡಿಬಿಡುತ್ತಾನೆ. ಇದು ಮುಂದೆ ಬೋರನ ಸಾವಿಗೂ ಕಾರಣವಾಗುತ್ತದೆ. ಲ್ಯಾಬಿನಿಂದ ಹೊರಬಂದ "ಚಿಟ್ಟಿ" ಡಾ



ವಶಿ ಯ ಬಾಳಸಂಗಾತಿಯಾಗಬೇಕಿದ್ದ ಸನಾಳನ್ನ ಅಪಹರಿಸಿ ಒತ್ತೆಯಿಟ್ಟುಕೊಂಡಾಗ ಡಾ || ವಶಿ ತನ್ನ ಗೆಳತಿಯನ್ನು ಬಿಡಿಸುವ ಸಂದರ್ಭದಲ್ಲಿ ಮಾಡುವ ಪ್ಲಾನೇ ಚಿತ್ರದ ಕ್ಲೈಮಾಕ್ಸ್.


ಕೊನೆಯ ೨೫-೩೦ ನಿಮಿಷದ ಈ "ಕ್ಲೈಮಾಕ್ಸ್" ಎಲ್ಲೂ ಕಾಣದ, ಯಾವ ಹಾಲಿವುಡ್ ಚಿತ್ರವನ್ನು ಮೀರಿಸುವಂತ ಮಟ್ಟದಲ್ಲಿ ಇದೆ. "ಚಿಟ್ಟಿ" ಯ ವಿವಿಧ "ಅವತಾರ" ಗಳ ನೋಡುವ ಭಾಗ್ಯ ರಜನಿಯ ಪಕ್ಕ ಅಭಿಮಾನಿಗಳಿಗೆ ದೊರೆಯುತ್ತದೆ. ಹೇಗೋ ಮಾಡಿ "ಚಿಟ್ಟಿ" ಯನ್ನು ನಿಯಂತ್ರಿಸುವ ಡಾ || ವಶಿ, ಇದಾದ ನಂತರ "ಚಿಟ್ಟಿ" ಯ ಅಂತ್ಯವೇನಾಗುತ್ತದೆ ಎಂಬುದರ ಬಗ್ಗೆ ತಿಳಿಯಬೇಕೆಂದರೆ ನೀವು ಚಿತ್ರವನ್ನ ನೋಡಬೇಕು...


ಡ್ಯಾನಿ ಅವರದು ದುರಾಸೆಗೆ ಬಿದ್ದ ಬಾಸಿನ ಪಾತ್ರ. ಐಶ್ವರ್ಯ-ರಜನಿ-ರೋಬೋಟ್ ರೂಪಿ "ರಜನಿ" ಯ ಪ್ರಭೆಯಲ್ಲಿ ಅವರ ಪಾತ್ರ ಮಸುಕಾಗಿದೆ. ಕಲಾಭವನ್ ಮಣಿಯವರ ಪಾತ್ರವಂತೂ ಇದ್ದು ಇಲ್ಲದಂತಿದೆ.. ಎಲ್ಲಾ "ರಜನಿ" ಮಹಿಮೆ!!!. ಎ.ಅರ್.ರೆಹ್ಮಾನ್ ಸಂಗೀತವಿರುವ ೭ ಹಾಡುಗಳು ಚಿತ್ರದ ಅಡಿ-ಅಡಿಗೂ ಇದ್ದು ಸುಮಧುರವಾದರೂ ಸಂಖ್ಯೆ ಹೆಚ್ಚಾಯಿತು ಅನಿಸುವಷ್ಟಿದೆ. ರತ್ನವೇಲು ರವರ ಕ್ಯಾಮರ ವರ್ಕ್ ಮತ್ತೊಂದು ಪ್ರಮುಖ ಅಂಶ. ಚಿತ್ರ ೯ ರೀಲ್ ಉದ್ದದಷ್ಟು ಇರುವುದರಿಂದ ೨ ಗಂತೆ ೫೦ ನಿಮಿಷದಷ್ಟು ಸಮಯಕ್ಕೆ ಹೋಗುತ್ತದೆ ( ಹಾಡಿನ ಪರಿಣಾಮ..). ಸೌಂಡ್ ಇಂಜಿನೀಯರಿಂಗ್ -- ರಸೂಲ್ ಪೂಕುಟ್ಟಿ -- ನಮ್ಮ ಬೆಂಗಳೂರಿನ ಟೇಟರ್ ಗಳಿಗೆ ಹಿಡಿಸುವುದಿಲ್ಲ ( ಸರಿಯಾಗಿ ಡಿ.ಟಿ.ಎಸ್ ಸೌಲಭ್ಯವಿರದ ಚಿತ್ರಮಂದಿರದಲ್ಲಿ ಸೌಂಡ್ ಇಂಜಿನೀಯರಿಂಗ್ ಇರುವ ಚಿತ್ರ ರಿಲೀಸ್ ಮಾಡಿದರೆ ಏನು ಫಲ..???). ಡ್ಯಾನ್ಸ್ ಮತ್ತು ಫೈಟ್ಸ್ ಚೆನ್ನಾಗಿವೆ ( ಡ್ಯಾನ್ಸ್: ಪ್ರಭುದೇವಾ, ರಾಜು ಮತ್ತು ರೇಮೋ...)


ಉತ್ತರಾರ್ಧದ ಕಥೆಯ ಭಾಗ ಬಿಗಿಯಿಲ್ಲದಿದ್ದರೂ ಶಂಕರ್ ಮತ್ತು ರಜನಿ ಯವರ ಪ್ರತಿಭೆಯು ಇದನ್ನು ಮಸುಕಾಗಿಸುತ್ತದೆ. ಎಕೆಂದರೆ Intervel ನಂತರದ ಭಾಗದಲ್ಲಿ ಕಥೆ ಮಾಯವಾಗಿ "ಲವ್ ಎಂಡ್ ರೋಮ್ಯಾನ್ಸ್" ತುಣುಕುಗಳೇ ತುಂಬಿದೆ..!!. ಕ್ಲೈಮಾಕ್ಸ್ ನ ದೃಶ್ಯವೈಭವದಲ್ಲಿ ಶಂಕರ್ ಗೆದ್ದಿದ್ದಾರೆ. ಇದಕ್ಕೆ ಅವರಿಗೆ ಫುಲ್ ಮಾರ್ಕ್ಸ್...


ಪಕ್ಕ ರಜನಿ ಅಭಿಮಾನಿಗಳಿಗೆ ಮತ್ತು logic ಇಲ್ಲದೆ ಮನೋರಂಜನೆ ಪಡೆಯಬಯಸುವವರಿಗೆ ಈ ಚಿತ್ರ ಸರಿಯಾದ ಅಯ್ಕೆ. ರಜನಿ ಏನೇ ಮಾಡಿದರೂ ನೀವು ತರ್ಕವಿಲ್ಲದೇ ಒಪ್ಪಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಚಿತ್ರವು ನಿಮಗೆ ಖುಷಿ ಕೊಡುವುದು. ಇದಕ್ಕಾಗೆ ತಾನೇ ರಜನಿ ಇಷ್ಟು ವರ್ಷಗಳಿಂದ ಅಭಿಮಾನಿಗಳ ಹೃದಯ ಅಲಂಕರಿಸಿರುವುದು... ನನ್ನ ಪ್ರಕಾರ entertainment - logic ಚಿತ್ರವೇ ಈ "ರೋಬೋಟ್"...





ನನ್ನ ರೇಟಿಂಗ್ : * * *
ವಿನಯ್ ...

ಚಿತ್ರ ಕೃಪೆಃ www.kannadaratna.com



30th Sep 1990...


ಸರಿಯಾಗಿ ಇಪ್ಪತ್ತು ವರ್ಷದ ಹಿಂದೆ... ಇದೇ ದಿನ...


ಅಂದು ಭಾನುವಾರ.., ಸಂಜೆಯ ವಾರ್ತೆಯ ಸಮಯ. ಆ ಸಮಯದಲ್ಲಿ ದೂರದರ್ಶನದ ಹೊರತಾಗಿ ಟಿ.ವಿ ಯ ಬೇರೆ ಮನೋರಂಜನೆ ಇರದಿದ್ದ ಕಾಲ. ವಾರ್ತೆ ನೋಡುತ್ತಿದ್ದ ನಮಗೆ ಕೆಳಗೆ ಸ್ಕ್ರಾಲಿನಲ್ಲಿ ಬಂದ ಸುದ್ದಿ ನಿಜಕ್ಕೂ ಗರಬಡಿಸಿತ್ತು. "ಪ್ರಸಿದ್ದ ಚಿತ್ರನಟ ಶಂಕರ್ ನಾಗ್ ರವರು ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಅಪಘಾತ ದಾವಣಗೆರೆಯ ಅನಾಗೋಡು ಹಳ್ಳಿಯ ಬಳಿ ನೆಡೆದಿದೆ.." ಎಂದು ಸ್ಕ್ರಾಲ್ ಆಗುತ್ತಿತು. ಇಂದು ಸಹ ನೆನಪಿದೆ... ಅಂದು ಬರಬೇಕಿದ್ದ ರಾಜ್ ರವರ ಚಲನ ಚಿತ್ರದ ಬದಲು ನಿಮ್ಮ ಚಿತ್ರ "ಆಟೋ ರಾಜಾ" ಚಿತ್ರವನ್ನ ಹಾಕಿದ್ದರು. ಮಾರನೆಯ ದಿನ "ಸಂಯುಕ್ತ ಕರ್ನಾಟಕ" ದಲ್ಲಿ ನೀವು ಚಲಿಸುತ್ತಿದ್ದ ಕಾರ್ ಅಪಘಾತದಲ್ಲಿ ಮುಂಭಾಗ ಪೂರ್ಣ ಜಜ್ಜಿ ಹೋಗಿದ್ದ ಚಿತ್ರ ನೋಡಿದಾಗ ಕೊನೆಯ ಕ್ಷಣದಲ್ಲಿ ನೀವು ಅದೆಷ್ಟು ನೋವು ಅನುಭವಿಸಿದ್ದೀರಿ ಎಂದು ಮನವು ಮರುಗಿತ್ತು. ನಿಮ್ಮ ಚಿತ್ರ "ನೋಡಿ ಸ್ವಾಮಿ ನಾವಿರೋದೆ ಹೀಗೆ" ಯ ಅಭಿಮಾನಿ ನಾನು. ಬಹುಶ: ಆ ಕಾಲದಲ್ಲಿ ನಿಮ್ಮಷ್ಟು ಪರಿಣಾಮಕಾರಿಯಾಗಿ ನಟಿಸಿದ ಸಮಕಾಲಿನ ನಟರು ಇನ್ನೊಬ್ಬರು ಇರಲಿಕಿರಲಿಲ್ಲವೇನೋ..!!. ನಿಮ್ಮ ಅಣ್ಣ ಅನಂತ್ ರವರ ಅಭಿನಯದ ಮೋಡಿಯಲ್ಲಿ ಮುಳುಗಿದ್ದ ಜನರಿಗೆ ನಿಮ್ಮ ಮೊದಲನೆ ಚಿತ್ರ "ಒಂದಾನೊಂದು ಕಾಲದಲ್ಲಿ" ದಲ್ಲೇ ಮಿಂಚಿನ ಸಂಚಲನ ಮೂಡಿಸಿದ್ದೀರಿ. ನಂತರ ನೀವು ಇಟ್ಟ ಹೆಜ್ಜೆ ಸಿಂಹ ನೆಡಿಗೆ ಯೆನ್ನಬಹುದು. ಒಂದೇ, ಎರಡೇ... ಚಿತ್ರ ನಿರ್ದೇಶನ, ನಾಟಕ, ನಟನೆ... ಹು:, ಕತ್ತಲಿನಲ್ಲಿ ಹೊಳೆಯುವ ದಿವ್ಯಜ್ಯೋತಿಯಂತೆ ಬೆಳಗಿದ್ದೀರಿ ನೀವು. ೧೨ ವರ್ಷದ ನಿಮ್ಮ ಆ ಪಯಣದಲ್ಲಿ ಕನ್ನಡಿಗರ ಮನದ ಸಾಮ್ರಾಜ್ಯವನ್ನ ಆಳಿಬಿಟ್ಟಿರಿ. ನಿಮ್ಮ ಕಾರಾಟೆ ಸ್ಟಂಟ್ಸ್, ನಿಮ್ಮ ಅಭಿನಯದ ಸ್ಟೈಲ್, ದೈಲಾಗ್ ಡೆಲಿವರಿ, ಗಡಸು ಧ್ವನಿ... ನಿಮ್ಮ ಮ್ಯಾನರಿಸ್ಮ್... ಆ ಕಾಲದ "ಕ್ಲೀನ್ ಶೇವ್ಡ್" ನಟರ ಮುಂದೆ ಒಂದು ಅಪರೂಪವೆನ್ನುವ ಮುಖ ಗುಣ... ಭವಿಷ್ಯದ ಬೆಳಕಾಗಿದ್ದೀರಿ ನೀವು. ಕನ್ನಡದ ಸಿನಿಮಾಕ್ಕಾಗಿ ನಾವು ಚೆನ್ನೈಗೆ ಹೋಗುತ್ತಿದ್ದ ಸಮಯದಲ್ಲಿ ನಿಮ್ಮ "ಸಂಕೇತ್ ಸ್ಟುಡಿಯೋ" ಕರ್ನಾಟಕದಲ್ಲಿ ಅರಂಭವಾಗಿ ಮಾಡಿದ ಕ್ರಾಂತಿ ಕನ್ನಡ ಚಿತ್ರತಂತ್ರಝಾನಕ್ಕೆ ಮುನ್ನುಡಿ. ನಿಮ್ಮ ಸದಾಭಿರುಚಿಯ ಚಿತ್ರಗಳು "ಗೀತಾ", "ಜನ್ಮಜನ್ಮದ ಅನುಬಂಧ", "ಮಿಂಚಿನ ಓಟ"..., ಚಿತ್ರದ ಜೊತೆಯಲ್ಲಿ ಇರುತ್ತಿದ್ದ ಸುಮಧುರ ಸಾಹಿತ್ಯ, ಸಂಗೀತ... ನಿಮ್ಮ ಚಿತ್ರನಿರ್ಮಾಣದ ಕಳಕಳಿಗೆ ಸಾಕ್ಷಿ. "ಜೊತೆಯಲ್ಲಿ...ಜೊತೆಯಲಿ ಇರುವೆನು ಹೀಗೆ ಎಂದೂ..." ೨೯ ವರ್ಷದ ನಂತರವೂ ಈಗಿನ ಜನರ ಬಾಯಲ್ಲಿ, ಮನದಲ್ಲಿ ಅಚ್ಚಳಿಯದೇ ಉಳಿದಿರುವುದೇ ಸಾಕ್ಷಿ.


ನಮ್ಮ ಬಾಲ್ಯದ "ಬುಕ್ ಮಾರ್ಕ್" -- "ಮಾಲ್ಗುಡಿ ಡೇಸ್" ನ ಮರೆಯಲು ಸಾಧ್ಯವುಂಟೇ...?. ಕಲ್ಪನಿಕ ಕಥೆಯನ್ನ ಮನಸ್ಸಿನಲ್ಲಿ ಅಚ್ಚೊತ್ತಿದ ಪರಿಯಿದೆಯಲ್ಲಾ... ಅದು ನಿಮ್ಮನ್ನು ಬಿಟ್ಟು ಬೇರೆ ಯಾರು ತಾನೇ ಮಾಡಿಯಾರು...!. ಅಷ್ಟೆಲ್ಲಾ ಕನಸ ಹೊತ್ತಿದ್ದ ನೀವು ಅಲ್ಪಸಮಯದಲ್ಲೇ ಬೆಳೆದ ಪರಿಯನ್ನ ನೋಡಿ ಆ ದೇವರೇ ಬೇಸರಪಟ್ಟನೇನೋ...!. ದುರಂತ ಅಂತ್ಯ ಕರುಣಿಸಿಬಿಟ್ಟ ನಿಮಗೆ. ಬದುಕಿದ್ದರೆ ಇಂದು ೫೬ ವರ್ಷದವರಾಗಿರುತ್ತಿದ್ದೀರಿ ನೀವು. ಕಣ್ಣೆದುರಿಗೆ ಇಲ್ಲದಿದ್ದರೆನಂತೆ..., ಅಭಿಮಾನಿಯ ಹೃದಯದಲ್ಲಿ, ಸ್ವಾಭಿಮಾನಿ ಹುಡುಗರ ಆಟೋದಲ್ಲಿ, ರಂಗಶಂಕರದಲ್ಲಿ, ಕನ್ನಡ ಚಿತ್ರದಲ್ಲಿ, ನಿಮ್ಮನ್ನು "ಮಿಮಿಕ್ರಿ" ಮಾಡುವ ಜನರಲ್ಲಿ ಚಿರಕಾಲ ಉಳಿದಿರುತ್ತೀರಿ ನೀವು.


ಬಹುಶ: ನಮಗೆಲ್ಲಾ ಅಶ್ಚರ್ಯ್ವೆನಿಸಬಹುದು, ನಿಮ್ಮ ಸುಂದರ ಬೆಂಗಳೂರಿನ ಮುಂದಾಲೋಚನೆ.., ಹೊರದೇಶದಲೆಲ್ಲೋ ನೋಡಿದ ರೈಲನ್ನ ಇಲ್ಲಿ ಸುರಂಗ ಮಾರ್ಗವಾಗಿ--ಅಂಡರ್ ಗ್ರೌಂಡ್ (ಮೆಟ್ರೋ ಟೈಪ್) ಓಡಿಸುವಂತೆ ಮಾಡಿದ ಪ್ಲಾನ್, ಈ ಡಿಸಂಬರ್ ನಲ್ಲಿ ಚುಕು-ಬುಕು ಎನುವ "ನಮ್ಮ ಮೆಟ್ರೋ" ನೊಡನೆ ನಿಮ್ಮ ಕನಸ್ಸು ಸಾಕಾರವಾಗಬಹುದು.... ಕನ್ನಡ ಚಿತ್ರರಂಗವನ್ನ ಇಂದು ನೀವು ನೋಡಿದ್ದರೆ ಬಹಳ ನೊಂದುಬಿಡುತ್ತಿದ್ದರೇನೋ.. ಏನು ಮಾಡೋದು, ನಾವೆಲ್ಲಾ ನಿಮ್ಮ ಕೌಶಲ್ಯತೆ, ಮಾರ್ಗದರ್ಶನ ಪಡೆಯುವ ಭಾಗ್ಯವೇ ಇರಲ್ಲಿಲ್ಲವೆನಿಸುತ್ತದೆ. ಅಂದು ನೀವು ಆ ಕಾಲದಲ್ಲಿ ಮೂಡಿಸಿದ ಆ ಹೊಸ ಅಲೆ ಬಹುಶ: ಈ ತಲೆಮಾರಿನ ಸಾವಿರಾರು ತಲೆಗಳ ಕೈಯಲ್ಲೂ ಮಾಡಲು ಸಾಧ್ಯವಿಲ್ಲ.


ನೀವೇ ಹೇಳಿದಂತೆ "ನೋಡಿ ಸ್ವಾಮಿ..., ನಾವಿರೋದೇ ಹೀಗೆ...", ನಿಮ್ಮ ಆ "ಸ್ಟೈಲ್", ನಿಮ್ಮಂತೆ ಮತ್ತೆ ಯಾರೂ ಹುಟ್ಟಿಬರಲಾರರೇನೋ...!







ಶಂಕರ್ ನಾಗ್ ಅವರ ಮಧುರ ನೆನಪಿನ ಚಿತ್ರಗಳು ಅವರದೆ ತಾಣದಲ್ಲಿ : http://www.shankarnag.in/gallery.html
ವಿನಯ್ ...
ಪ್ರೀತಿ ಕೊಂದ ಕೊಲೆಗಾತಿ... ಆದಳು ಈ ಕಥೆಗೆ ಸ್ಪೂರ್ತಿ




















ಚಿತ್ರ ಕೃಪೆಃ belleoutandabout.blogspot.com



ಅವರಿಬ್ಬರು ಒಂದೇ ಬಡಾವಣೆಯಲ್ಲಿದ್ದವರು..., ಅಷ್ಟೇಕೆ, ಅದೂ ಒಂದೇ ರಸ್ತೆಯಲ್ಲಿದ್ದ ಎರಡು ಕುಟುಂಬದವರಾಗಿದ್ದರು... ಅವನು ಟೆಕ್ಕಿ, ಇವಳು ಭಾವಿ ಲಾಯರ್. ಇಬ್ಬರು ಕುಟುಂಬದ ಹಿರಿಯರು ಒಟ್ಟಿಗೆ ಸೇರಿ ಒಂದು ದಿನ ಮದುವೆಯ ಮಾತುಕತೆ ನೆಡೆಸಲು, ಪರಸ್ಪರರಲ್ಲಿ ಒಪ್ಪಿಗೆಯಾಗಿ ನಿಶ್ಚಿತಾರ್ಥದ ದಿನವೂ ಬಂದು ಬಿಟ್ಟಿತು. ಹುಡುಗನಿಗೋ ಸಡಗರ... ಎಕೆಂದರೆ ಅಷ್ಟು ಸ್ಪೂರದೃಪಿಯಾಗಿದ್ದಳು ಆ ಹುಡುಗಿ.. ಮತ್ತೇನು, ಅಂತೂ ವಿಜ್ರಂಭಣೆಯಿಂದ ನಿಶ್ಚಿತಾರ್ಥ ಕಾರ್ಯಕ್ರಮ ನೆಡೆಯಿತು. ಹುಡುಗನಿಗೆ ಅವನ ಮನದಾಸೆಯ ಹುಡುಗಿ ಸಿಕ್ಕಿದ್ದಳು..!


ಅದರೆ, ಅವನಿಗೇನು ಗೊತ್ತಿತ್ತು ಆ ಸುಂದರ ಹುಡುಗಿ ತನ್ನ ಕಾಲೇಜಿನ ದಿನಗಳಿಂದ ಒಬ್ಬ ಹುಡುಗನ್ನ ಪ್ರೀತಿಸಿದ್ದಾಳೆ ಅಂತಾ...!!. ನಿಶ್ಚಿತಾರ್ಥ ದಿನದವರೆಗೂ ಸುಮ್ಮನೆ ಒಪ್ಪಿಗೆ ಸೂಚಿಸಿದ್ದ ಅವಳು ಆ ಕಾರ್ಯಕ್ರಮ ಮುಗಿದು ಸಲ್ಪ ದಿನವೂ ಆಗಿರಲಿಲ್ಲ.. ಒಳಗೆ ಸಂಚು ಮಸೆಯುತ್ತಿದ್ದಳು. ಪಾಪದ ಹುಡುಗ ತನ್ನ ಮನದ ಅಸೆಯನ್ನ ತನ್ನ ಹುಡುಗಿಯ ಹತ್ತಿರ ಮುಚ್ಚಿಡದೇ ತೋರ್ಪಡಿಸುತ್ತಿದ್ದ. ಅದರೆ ಆ ಹುಡುಗಿಯ ಸುಂದರ ಮೊಗದ ಹಿಂದೆ ಅಡಗಿದ್ದ ಕ್ರೌರ್ಯ ಬೆಳಕಿಗೆ ಬರಲು ಹೆಚ್ಚು ಸಮಯ ಬೇಕಾಗಿರಲಿಲ್ಲ...!


ಎಂದಿನಂತೆ ಈ ಹುಡುಗನನ್ನು ಹೊರಗೆ ಸುತ್ತಾಡಲು ಕರೆದ ಹುಡುಗಿ, ಒಂದು ಹೋಟಲಿನಲ್ಲಿ ಊಟ ಮುಗಿಸಿ ಹತ್ತಿರದಲ್ಲೇ ಇದ್ದ ಖಾಲಿ ಪ್ರದೇಶಕ್ಕೆ ಕರೆದುಕೊಂಡು ಹೋದಳು. ತನ್ನ ಬಹುದಿನದ ಆಸೆಯಾದ ವಿಮಾನ ಹಾರಾಟವನ್ನು ಹತ್ತಿರದಿಂದ ನೋಡಲು!. ಇನ್ನೇನು ಆ ಹೊತ್ತು ಬರಲು ಹುಡುಗ ಸಡಗರದಿಂದ ತಲೆ ಮೇಲೆತ್ತಿ ಆಕಾಶದತ್ತ ನೋಡುತ್ತಿರಲು.., ಆ ಹೊತ್ತಿನಲ್ಲೇ ಅವನ ತಲೆಗೆ ಹಿಂದಿನಿಂದ ಬಲವಾದ ಪೆಟ್ಟು ಬಿತ್ತು. ಸುಧಾರಿಸಿಕೊಳ್ಳುವ ಸಣ್ಣ ಅವಕಾಶವನ್ನೂ ನೀಡದೇ ಅವನ ಪ್ರಾಣವನ್ನ ಆ ಅಘುಂತಕನು ತಗೆದುಬಿಟ್ಟಿದ್ದನು..!!


ಗಾಬರಿಗೊಂಡ ಈ ಹುಡುಗಿ ತನ್ನಿಬ್ಬರ ಮನೆಯವರಿಗೂ ದರೋಡೆಕೋರರು ಲೂಟಿಮಾಡಲು ಯತ್ನಿಸಿ ಇವನನ್ನು ಕೊಲೆಮಾಡಿ ಓಡಿಹೋಗಿದ್ದಾರೆ ಎಂಬ ಅರ್ಥಬರುವಂತೆ ಸುಳ್ಳು ಕಥೆ ಸೃಷ್ಠಿಸಿ ಹೇಳಲು, ಅನುಮಾನ ಪಟ್ಟ ಹುಡುಗನ ಕಡೆಯವರು ಪೋಲೀಸರಿಗೆ ದೂರುಕೊಟ್ಟು ವಿಚಾರಣೆಕೈಗೊಳ್ಳುವಂತೆ ಮನವಿ ಮಾಡಿದರು. ಅಂತೂ ಪೋಲೀಸರ ಕಾರ್ಯಚರಣೆ ಫಲ ನೀಡೇ ಬಿಟ್ಟಿತು. ಮೊಬೈಲ್ ಕಾಲ್ ಶೀಟ್ ಅನ್ನು ದಕ್ಕಿಸಿಕೊಂಡ ಪೋಲೀಸರು ಅವಳ ಪ್ರಿಯತಮನ ಮನೆಯ ಬಾಗಿಲ ಮುಂದೆ ನಿಂತಾಗ ವಿಧಿಯಿಲ್ಲದೇ ಅವನು ಶರಣಾದ...


ಮುಂದೇನು..., ಪೋಲೀಸರ ವಿಚಾರಣೆ ವಿಸ್ತಾರವಾಗಿ ನೆಡೆದು ಎಲ್ಲಾ ವಿಷಯಗಳು ಬಯಲಾದಾಗ ಆ ಕೊಲೆಯ ಹಿಂದಿನ ಮುಖ್ಯ ಸೂತ್ರಧಾರಿಯಲ್ಲೊಬ್ಬರಲ್ಲಿ ಆ ಹುಡುಗಿಯೂ ಇದ್ದಳು.!!


ತನ್ನ ಇಷ್ಟದ ವಿರುದ್ದ ನೆಡೆಯುತ್ತಿದ್ದ ಮದುವೆಯ ಪ್ರಸ್ತಾಪವನ್ನ ತಡೆಯಲು ತನ್ನ ಕೈಯಲ್ಲಿ ಎಂದು ಆಗಲಿಲ್ಲವೋ ಅಂದೇ ಅವಳು ಒಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದಳು. ಸುಮ್ಮನೆ "ಹೆಸರಿಗೆ" ತನ್ನ ಒಪ್ಪಿಗೆಯನ್ನು ಸೂಚಿಸಿ ನಂತರ ತನ್ನ ಕಾರ್ಯಮಾಡುವ "ಐಡಿಯಾ". ತನ್ನ ಪ್ರಿಯಕರ, ಅವನ ಕಸಿನ್ ಮತು ಮತ್ತೊಬ್ಬ ರೌಡಿಯ ಸಹಾಯದಿಂದ ಒಂಡು ಮಾಸ್ಟರ್ ಪ್ಲಾನ್ ರೆಡಿಮಾಡಿಯೇಬಿಟ್ಟರು ಈ ನಾಲ್ವರು... ಕೊನೆಗೆ ಈ "ಪ್ಲಾನಿನ" ಸಹಾಯದಿಂದ ದುರಂತ ಅಂತ್ಯ ಕಂಡವನು ಅ ಮುಗ್ಧ ಯುವಕ...


-- ಈ ಘಟನೆ ನೆಡೆದದ್ದು ಏಳು ವರ್ಷದ ಹಿಂದೆ.., ಹೆಸರುಗಳ ಪ್ರಸ್ತಾಪ ಇಲ್ಲಿ ಬೇಡವಾದರೂ ತನ್ನ "ಪ್ರೀತಿಯ ಶೋಕಿಗೆ" ಬಗ್ಗದಿದ್ದ ಮನೆಯವರು ಮದುವೆ ನಿಶ್ಚಯ ಮಾಡಿದಾಗ ಸುಮ್ಮನೆ ತೆಪ್ಪಗೆ ಕುಳಿತ ಹುಡುಗಿ, ತನ್ನ ಪ್ರಿಯಕರನಿಗಾಗಿ ಮತ್ತೊಬ್ಬ ನಿಷ್ಪಾಪಿ ಹುಡುಗನ ಜೀವ ತಗೆದಳಲ್ಲಾ.. ಇದೆಂತಾ ನ್ಯಾಯ..??. ತನ್ನಗೆ ಒಲ್ಲದ ಮದುವೆಯನ್ನ ಸರಿಸಾಟಾಗಿ ತಿರಸ್ಕರಿಸಿ ತಾನು ಪ್ರೀತಿಸಿದ ಹುಡುಗನನ್ನೇ ಧೈರ್ಯವಾಗಿ ಮದುವೆಯಾಗುವ ಬದಲೋ ಅಥವಾ ತನಗೆ ಈ ಮದುವೆಯ ಪ್ರಸ್ತಾಪ ಇಷ್ಟವಿಲ್ಲ, ದಯವಿಟ್ಟು ನಮ್ಮ ಮನೆಯವರಿಗೆ ಹೇಳಿಬಿಡಿ ಎಂದು ಸೂಚಿಸುವ ಬದಲೋ ಕೊಲೆ ಮಾಡುವ ಹುನ್ನಾರ ಮಾಡಿಬಿಟ್ಟಳಲ್ಲಾ ಆ ಹುಡುಗಿ.. ಅದಕ್ಕೇನ್ನೋಣ ಹೇಳಿ. ಸರಿಸುಮಾರು ೭ ವರ್ಷ ಎಳೆದ ಈ ಕೇಸ್, ಅಂತೂ ಹುಡುಗನ ಮನೆಯವರ ಛಲ ಮತ್ತೆ ಪೋಲೀಸ್-ನ್ಯಾಯವಾದದ ನಡುವೆ ಮಂಡಿ ಊರಲೇಬೇಕಾಯಿತು. ಕೊಲೆಮಾಡಿದ ಪ್ರಮುಖ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನ ಕೋರ್ಟ್ ವಿಧಿಸಿತು. ಒಂದು ದು:ಖದ ವಿಚಾರವೆನೆಂದರೆ ತನ್ನ ಮಗನಿಗಾದ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದ ಅವನ ತಂದೆ ಕೋರ್ಟಿನ ತೀರ್ಪು ಹೊರಬರುವ ಮೊದಲೇ ಮಗನ ದುರಂತ ಸಾವಿನ ನೋವಿನಲ್ಲೇ ಇಹಲೋಕ ತ್ಯಜಿಸಿಬಿಟ್ಟರು!!


ತನ್ನ ಸುಖಕ್ಕಾಗಿ ಮುಗ್ಧ ಹುಡುಗನ ಬಾಳನ್ನ, ಅವನ ಕುಟುಂಬದ ಸಂತೋಷವನ್ನ ಬಲಿತಗೆದುಕೊಂಡ ಆ ಹುಡುಗಿಗೆ ಇದರಿಂದ ಸಿಕ್ಕಿದಾದರೂ ಏನು...? -- ಜೀವಾವಧಿ ಸೆರೆಮನೆ ವಾಸ!!!.


ತನ್ನ ಸ್ವಾರ್ಥಕ್ಕಾಗಿ ಮುಗ್ಧ ಹೃದಯಗಳನ್ನು ಕೊಲ್ಲುವ "ಘೋರ" ಜೀವಿಗಳೇ... ಕೊಲ್ಲುವ ಮುಂಚೆ ಒಮ್ಮೆ ಯೋಚಿಸಿಬಿಡಿ, ಸ್ವರ್ಗ-ನರಕ ಎಲ್ಲಾ ಈ ಭೂಮಿಯಲ್ಲೇ ಇದೆ. ನೀವು ಮಾಡುವ ತಪ್ಪಿನ ಶಿಕ್ಷೆ ಇಲ್ಲೇ ಅನುಭವಿಸಿ ತೀರಬೇಕು...



ಅದಕ್ಕೆ ಅನ್ನೊದೇನೋ... "ಪ್ರೀತಿ ಮಾಯೇ ಹುಷಾರು" ಅಂತ...!!
ವಿನಯ್ ...
"ನೆನಪಿನ ಪುಸ್ತಕದಲ್ಲಿನ ಎಲ್ಲಾ ಅಕ್ಷರಗಳು ಮಾಸಿಹೋಗಬಹುದು....
ಅದರೆ ನಿನ್ನ ನೆನಪಿದೆಯಲ್ಲಾ... ಅದನ್ನು ನನ್ನ ಮನ ಎಂದೂ ಮರೆಯುವುದಿಲ್ಲ.."



ಚಿತ್ರ ಕೃಪೆಃ thepursuitcc.typepad.com



ಕೆಲಸದ ನಿಮಿತ್ತ ಕಬರ್ಡ್ ನಲ್ಲಿ ಮಾರ್ಕ್ಸ್ ಕಾರ್ಡ್ ಹುಡುಕುತ್ತಿದ್ದ ನಾನು ಅಲ್ಲಿದ್ದ ಒಂದೊಂದೆ ಕವರಗಳನ್ನ ತಗೆದು ಹೊರಗೆ ಸಾಲಾಗಿ ಇಡುತ್ತಿದ್ದಾಗ ತಟಕ್ಕೆನೆ ಒಂದು ಕವರಿನಿಂದ ಸಣ್ಣ ಪುಸ್ತಕವೊಂದು ಉದರಿತು. ಹುಡುಕುತ್ತಿದ್ದ ವಸ್ತು ಸಿಗದ ನಿರಾಶೆಯಲ್ಲಿ ಆಗ ಕೆಳಗೇನು ಬಿದ್ದಿತ್ತು ಎಂಬ ಗೊಡವೆಗೆ ಹೋಗದೆ ಮತ್ತೆ ಹುಡುಕುವ ಪ್ರಯತ್ನ ಸಾಗಿತ್ತು. ಹಾಗೆ ಪ್ರಯತ್ನ ಸಾಗಿದ್ದಾಗ ಅಲ್ಲೇ ಮೂಲೆಯಲ್ಲಿ ಮುದರಿಕೊಂಡಿದ್ದೆ ಕವರಿನ ಒಳಗೆ ಸಿಕ್ಕಿತು ನನ್ನ ಹಳೆಯ ಮಾರ್ಕ್ಸ್ ಕಾರ್ಡ್ ಪ್ರತಿ..!. ಅದನ್ನು ಝೆರಾಕ್ಸ್ ಮಾಡಿಸಲು ಹೊರಟ ನಾನು ಹೊರಗೆ ತಗೆದಿರಿಸಿದ್ದ ಎಲ್ಲ ಕವರುಗಳನ್ನ ಮತ್ತೆ ಎತ್ತಿಡುತ್ತಿದ್ದಾಗ ನನ್ನ ಕಣ್ಣು ಏಕೋ ಮತ್ತೆ ಆ ಸಣ್ಣ ಪುಸ್ತಕದ ಮೇಲೆ ಬಿತ್ತು.

ಅರೇ.. ಅದು ನನ್ನ ದ್ವಿತೀಯ ಪಿ.ಯು.ಸಿ ಯಲ್ಲಿದ್ದಾಗಿನ ಸ್ಲಾಮ್ ಬುಕ್... ಫ್ಲಾಷ್ ಬ್ಯಾಕ್ ನೆನಪಾಗಿ ಒಂದೊಂದೇ ಪುಟ ತಿರುವಿ ಹಾಕುತ್ತಿದ್ದೆ.

ಅದರಲ್ಲಿ ಬರೆದ ಒಂದು ಸ್ಲಾಮ್ ಪುಟ ನನ್ನನ್ನ ೧೦ ವರ್ಷದ ಹಿಂದಿನ ನೆನಪಿನ ಸುರಳಿಯನ್ನ ಬಿಚ್ಚಿಸುತ್ತ ಹಾಗೇ ಕರೆದುಕೊಂಡು ಹೋಯಿತು...

-----------

೧೫ ಮೇ ೨೦೦೦

ಆಗಷ್ಟೆ ನಮ್ಮ ದ್ವಿತೀಯ ಪಿ.ಯು.ಸಿ ಯ ತರಗತಿ ಶುರುವಾಗಿತ್ತು. ನಮಗೆ ಇದು ಜೀವನದ ಪ್ರಮುಖಘಟ್ಟವೆಂದರಿತ ನಮ್ಮ ಪ್ರಾಂಶುಪಾಲರು ಮತ್ತು ಶಿಕ್ಷಕರು ನಿಗದಿಗಿಂತ ೧೫ ದಿನ ಮೊದಲೇ ಪೂರ್ವಭಾವಿ ತರಗತಿಗಳನ್ನ ಪ್ರಾರಂಭಿಸಿದ್ದರು (ನನಗೋ ಕ್ಲಾಸ್ ಅಟೆಂಡ್ ಆಗುವ ಮನಸ್ಸೇ ಇರಲಿಲ್ಲ..!!). ಅದರಲ್ಲಿ ಗಣಿತ ಪ್ರಮುಖವಾಗಿತ್ತು. ಬೆಳಗ್ಗೆ ೮.೩೦ ಗೆ ತರಗತಿ ಶುರುವಾಗುತ್ತಿತು. ನನ್ನದು ಸೈನ್ಸ್ "ಬಿ" ಸೆಕ್ಷನ್. ನಮ್ಮ ಸೈನ್ಸ್ ವಿಭಾಗದಲ್ಲೇ ಇನ್ನೊಂದು ತರಗತಿ "ಡಿ" ಸೆಕ್ಷನ್. ಅಲ್ಲಿಂದ ಸಹ ಹಲವರು ಬರುತ್ತಿದ್ದರು. ಅವರ ಗುಂಪಿನಲ್ಲಿದ್ದವಳೇ ಸ್ವಾತಿ...

ಬೆಳ್ಳಗೆ, ಸಾಮಾನ್ಯ ಎತ್ತರದ, ಉದ್ದನೆ ಕೂದಲಿನ ಹುಡುಗಿ ಸ್ವಾತಿ... ತನ್ನ ಇಬ್ಬರು ಗೆಳತಿಯರೊಡನೆ "ಡಿ" ಸೆಕ್ಷನ್ ತರಗತಿಯಿಂದ ಬರುತ್ತಿದ್ದ ಅವಳು ಮೊದಮೊದಲು ಕೇವಲ ಪಾಠ ಕೇಳುತ್ತ ಶಿಕ್ಷಕರ ಎದುರು ಅಷ್ಟೇನೂ ದೌಟ್ಸ್ ಕೇಳದೆ ಸುಮ್ಮನೆ ಕೂರುತ್ತಿದ್ದರೂ ನಂತರದ ದಿನಗಳಲ್ಲಿ ಇಂಟರಾಕ್ಷನ್ ಪ್ರಾರಂಭಿಸಿದ್ದಳು. ನನಗೆ ಮೊದಲು ಇಷ್ಟವಾಗಿದ್ದೇ ಅವಳು ಕೇಳುತ್ತಿದ್ದ ಪ್ರಶ್ನೆಗಳ ವೈಖರಿಯ ಬಗ್ಗೆ. ಬಹುಶ: ಮೊದಲೇ ಪ್ರೀಪೇರ್ ಆಗಿಯೇ ಬರುತ್ತಿದ್ದಳೇನೋ...! ಅದರಲ್ಲೂ ಅವಳಿಗೆ ಪಾಠ ತಗೆದುಕೊಳ್ಳುತ್ತಿದ್ದ ಶಿಕ್ಷಕರ ಶಹಭಾಷ್ ಗಿರಿ ಬೇರೆ...! ನಮ್ಮ ಗುಂಪಿನ ಹಲವಾರು ಹುಡುಗರಿಗೆ ಶಿಕ್ಷಕರು ಅವಳನ್ನು ಹೊಗಳುತ್ತಿದ್ದನ್ನು ನೋಡಿಯೇ ಮೈಯೂರಿ ಹತ್ತಿಕೊಳ್ಳುತ್ತಿತ್ತು..!!. ಅದರ ಸಲುವಾಗಿಯೇ ಏನೋ ಅವಳಿಗೆ "ಮಿಸ್ ಜೀನಿಯಸ್" ಎಂದು ನಾಮಕರಣ ಇವರೇ ಮಾಡಿಬಿಟ್ಟಿದ್ದರು...!

ಅವಳ ಮಾತು, ಸುಂದರ ನಗೆ... ಏನೋ ಒಂದು ಆಕರ್ಷಣೆ ನನಗೆ... ಅವಳನ್ನು ಮಾತನಾಡಿಸುವ ಹಂಬಲ... ಒಂದು ಸಣ್ಣ ಅವಕಾಶಕ್ಕಾಗಿ ಕಾಯುತ್ತಿದ್ದ ನನಗೆ ಅದು ತಾನಾಗಿಯೇ ಒದಗಿಬಂತು...

ಜ್ವರದ ಕಾರಣದಿಂದ ಎರಡು ದಿನಗಳ ಕಾಲ ರಜೆ ತಗೆದುಕೊಂಡಿದ್ದ ಅವಳು ಪುನ: ತರಗತಿಗೆ ಬಂದಿದ್ದಾಗ ಇನ್ನೂ ಪಾಠ ಶುರುವಾಗಲು ಬಹಳ ಸಮಯವಿತ್ತು. ಮಿಕ್ಕವರೆಲ್ಲರು ಇನ್ನೂ ಬರುವರಿದ್ದರು. ನಾನು ನನ್ನ ಪಾಡಿಗೆ ಹಿಂದಿನ ದಿನದ ಭೌತಶಾಸ್ತ್ರದ ನೋಟ್ಸ್ ಅಪ್ ಡೇಟ್ ಮಾಡಿಕೊಳ್ಳುತ್ತಿದ್ದಾಗ ಹಿಂದಿನಿಂದ ಕೇಳಿಬಂದಿತು ಅವಳ ದನಿ:

"ಏಕ್ಸ್ ಕ್ಯೂಸ್ ಮಿ..."

"ನೆನ್ನೆ ಪಾಠ ಮಾಡಿದ ನೋಟ್ಸ್ ಸಲ್ಪ ರೆಫರ್ ಮಾಡಿಕೊಡ್ಲಾ....?"

ನಾನು ಹುಡುಕುತ್ತಿದ್ದ ಅವಕಾಶ ಇದೇನಾ ಎಂದು ನನಗೆ ಅಶ್ಚರ್ಯವಾಯಿತು. ಅವಳೇ ನನ್ನನ್ನು ಬಂದು ಮಾತನಾಡಿಸುತ್ತಾಳೆ ಎಂದು ಮನಸ್ಸಿನಲ್ಲೂ ಯೋಚಿಸಿರಲ್ಲಿಲ್ಲ... ಅವಳ ದನಿಯೇ ನನ್ನನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸಿತ್ತು. ಸವರಿಸಿಕೊಂಡು

"ಒನ್ ನಿಮಿಷ... ಕೊಟ್ಟೆ ಇರಿ.." ಎಂದು ಹೇಳಿ ಎರಡು ದಿನದ ನೋಟ್ಸ್ ಪುಸ್ತಕ ಹುಡುಕಿ ಕೊಟ್ಟೆ...

ಅರ್ಧ-ಮೂಕ್ಕಾಲು ಘಂಟೆಯ ನಂತರ ಪುಸ್ತಕ ಹಿಂದಿರಿಗಿಸುವಾಗ:

"ರಾಹುಲ್, ತುಂಬ ಡಿಟೇಲ್ ಆಗಿ ನೋಟ್ಸ್ ಬರೆದುಕೊಂಡಿದ್ದೀರಾ ನೀವು, ಲೆಕ್ಚರರ್ ಹೇಳಿದ ಅಡಿಶ್ನಲ್ ಪಾಯಿಂಟ್ಸ್ ಸಹ ಬರೆದುಕೊಂಡಿದ್ದೀರಲ್ಲಾ..?... ದಟ್ಸ್ ಗುಡ್.."

ನಾನು: "ಹು:, ರೆಫೆರೆನ್ಸ್ ಗೆ ಬೇಕಾಗುತ್ತೆ ಅಂತ ನೋಟ್ ಮಾಡ್ಕೊಳ್ತೀನಿ..." ಎಂದು ಮುಗುಳುನಕ್ಕೆ...

ಅವಳು: "ಎನಿವೇ... ಥ್ಯಾಂಕ್ ಯೂ ವೆರಿ ಮಚ್.." ಎಂದು ನಕ್ಕು ಹೊರಟುಹೋದಳು...

ಅಂದಿನಿಂದ ಅವಳು ನಾನು ಕಾಲೇಜಿನ ಕಾರಿಡಾರಿನಲ್ಲಿ ಎದುರು-ಬದುರು ಸಿಕ್ಕಾಗ ಮಾತನಾಡಿಸುವ ಅವಕಾಶಗಳು ಬಹಳ ಸಿಗುತ್ತಿದ್ದವು. ಬಹುತೇಕ ತರಗತಿಯ ಬಗ್ಗೆ, ಲೆಕ್ಚರರ ಪಾಠದ ಬಗ್ಗೆಯಷ್ಟೆ ಮಾತು ಮೀಸಲಿರುತ್ತಿತ್ತು...!. ಬೇರೆ ವಿಷಯದ ಕಡೆ ಮಾತು ತಿರುಗಲೆತ್ನಿಸಿದರೂ ಮನಸ್ಸು ಏಕೋ ವಿನ:ಕಾರಣ ನನ್ನನು ತಡೆಯುತ್ತಿತ್ತು...!!

ಇನ್ನೊಂದು ಸುವರ್ಣ ಅವಕಾಶ ನನಗೆ ಒಮ್ಮೆ ಒದಗಿ ಬಂತು. ತರಗತಿಯ ವಾರದ ಪರೀಕ್ಷೆ ನೆಡೆಯುತ್ತಿದ್ದಾಗ ಒಮ್ಮೆ ಸ್ವಾತಿ ೧೦ ನಿಮಿಷ ತಡವಾಗಿ ಬಂದಳು. ಸೀಟಿಗಾಗಿ ತಡಕಾಡಿದರೂ ಆಗಲೇ ಎಲ್ಲಾ ಭರ್ತಿಯಾಗಿದ್ದರಿಂದ ಕೊನೆಗೆ ಉಳಿದ ಕೊನೆಯ ಬೆಂಚಿನ ಸಾಲಲ್ಲಿ ಕುಳಿತು ಬರೆಯತೊಡಗಿದಳು. ನಾನು ಆ ಬೆಂಚಿನ ಸಾಲಿನ ಪಕ್ಕದ ಬೆಂಚಿನಲ್ಲಿ ಇದ್ದೆ. ೧೦ ನಿಮಿಷವಾದ ಮೇಲೆ ಮೆಲ್ಲನೆ ನನ್ನ ಕರೆದು:

"ರಾಹುಲ್, ಸರಿಯಾಗಿ ಪ್ರೆಪೇರ್ ಆಗಿಲ್ಲ ಕಣೋ... ೨-೩ ಪ್ರಶ್ನೆ ಗೆ ಸಲ್ಪ ಆನ್ಸರ್ ಹೇಳ್ತೀಯಾ...!"

ನನಗೆ ಇದರಿಂದ ಒಮ್ಮೆ ಕಿಸಿವಿಸಿಯಾದರೂ, ಕೆಲ ನಿಮಿಷ ತಡೆಯಲು ಹೇಳಿ ನಂತರ ನನಗೆ ಗೊತ್ತಿದ್ದ ಉತ್ತರಗಳನ್ನು ಲೆಕ್ಚರರ್ ಹೊರಗೆ ಹೋಗಿ ನಿಂತಾಗ ಅವಳಿಗೆ ತೋರಿಸಿದೆ. ಅದಕ್ಕೆ ಬಹಳ ಖುಷಿಯಾದ ಅವಳು ಪರೀಕ್ಷೆ ಮುಗಿದ ನಂತರ ಹೊರಬಂದು " ಬಹಳ ಥ್ಯಾಂಕ್ಸ್ ಕಣೋ... ಫೇಲ್ ಅಗ್ಬಿಡ್ತೀನಿ ಅಂತ ಹೆದರಿಕೊಂಡಿದ್ದೆ... ನಿನ್ನ ಅನ್ಸರ್ಸ್ನಿಂದ ತುಂಬ ಹೆಲ್ಪ್ ಅಯ್ತು.." ಎಂದು ಹೇಳಿದಳು... ನನಗೆ ಮನಸ್ಸಿನಲ್ಲೇ ಹರುಷ... ಮಾತಾಡೋಣ ಎಂದು ಬಾಯಿ ತೆರೆಯುವ ಮೊದಲೇ "ಸರಿ ಕಣೋ, ನಾನು ಬರ್ತೀನಿ" ಅಂದು ಹೇಳಿ ಹೊರಟುಹೋದಳು...!

ಮತ್ತೊಮ್ಮೆ ಮನಕ್ಕೆ ಬೇಸರ.. ನೋವು...

ಮನವು ಅವಳ ಅಕರ್ಷಣೆಗೆ ಒಳಗಾಗಿದ್ದರೂ, ಅವು ನುಡಿಗಳಲ್ಲಿ ಹೊರಬಾರದೆ ಮನಸನ್ನ ಚುಚ್ಚಿ-ಚುಚ್ಚಿ ಕಾಡುತ್ತಿದ್ದವು. ಎಲ್ಲಿ ಮನದ ಮಾತು ಅವಳಿಗೆ ಹೇಳಿ ಈಗ ಮಾತನಾಡಿಸುವ ಮಟ್ಟಕ್ಕೆ ಬಂದಿರುವ ಸಂದರ್ಭವೂ ಹಾಳಾಗುವುದೋ ಎಂದು ಭಯಪಟ್ಟು ನನ್ನನ್ನ ನಾನೇ ಸುಮ್ಮನಿರಿಸಿಕೊಳ್ಳಬೇಕಾಯಿತು...!

ಒಂದೊಂದೇ ದಿನ, ತಿಂಗಳು, ಪರೀಕ್ಷೆಗಳೆಲ್ಲಾ ಕಳೆದು ಕೊನೆಯ ವಾರ್ಷಿಕ ಪರೀಕ್ಷೆಯ ಸಮಯವೂ ಹತ್ತಿರ ಬಂದುಬಿಟ್ಟಿತ್ತು. ಅವಳ ಹತ್ತಿರ ನನ್ನ ಭಾವನೆಗಳನ್ನ ಹೇಳಿಕೊಳ್ಳೋಣವೆಂದರೆ ಮನದ ತುಮುಲವೇ ನನ್ನ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತಿತ್ತು. ಬಾಯವರೆಗೂ ಬಂದ ಮಾತು ಅಲ್ಲೇ ಕರಗಿಹೋಗುಬಿಡುತ್ತಿತ್ತು... ಸ್ವಾತಿ ಹತ್ತಿರ ಬಂದು "ರಾಹುಲ್, ಎಕ್ಸಾಮ್ ಪ್ರೆಪರೆಷನ್ ಜೋರಾ...? ಹೇಗ್ ಓದ್ಕೊಂಡಿದ್ದೀಯಾ..?" ಎನಲು, ನಾನು "ಪರ್ವಾಗಿಲ್ಲ, ಓಕೆ..." ಅಂತ ಉತ್ತರಿಸಿದೆ. ಅವಳು " ನೀನು ಫರ್ಸ್ಟ್ ಕ್ಲಾಸ್ ಬಂದೇ ಬರ್ತೀಯಾ ಕಣೋ... ಬೆಸ್ಟ್ ಅಫ್ ಲಕ್... ಮುಂದಿನ ವಾರದಿಂದ ನಾನು ಕ್ಲಾಸಿಗೆ ಬರುತ್ತಿಲ್ಲ, ಮನೆಯಲ್ಲೇ ಎಕ್ಸಾಮ್ ಗೆ ಪ್ರೆಪೇರ್ ಅಗ್ತೀನಿ" ಎಂದು ಹೇಳಿ ಹೊರಡಲು ಅಣಿಯಾದಳು. ನಾನು "ಸ್ವಾತಿ, ನಿನಗೆ ಏನೋ ಹೇಳೋದಿತ್ತು.." ಎಂದು ಮಾತು ತಗೆದು ಹೇಳಹೊರಟಿದ್ದರೂ, ಅವಳು "ರಾಹುಲ್, ಒಂದ್ ನಿಮಿಷ ನನ್ನ ಫ್ರೆಂಡ್ಸ್ ನ ಮೀಟ್ ಮಾಡಿಬಂದೆ.. ಅಮೇಲೆ ಹೇಳ್ತೀಯಾ.." ಅಂತ ಅಂದು ಅಲ್ಲಿಂದ ಹೊರಟೇ ಹೋದಳು... ಮನವು ಬಹು ಆಳದ ಪ್ರಪಾತಕ್ಕೆ ಕುಸಿದಂತ ಅನುಭವವಾಯಿತು...

ನಂತರ ಫೈನಲ್ ಪೇಪರ್ ಬರೆದ ದಿನ ಎಲ್ಲರಂತೆ ನಾನು ಒಂದು ಸ್ಲಾಮ್ ಪುಸ್ತಕ ಕೈಲಿ ಹಿಡಿದು ನನ್ನ ಮಿತ್ರರ ಹತ್ತಿರ ಸ್ಲಾಮ್ ಬರೆಸಿಕೊಳ್ಳುತ್ತಿರಲು, ಸ್ವಾತಿ ದೂರದಲ್ಲಿ ತನ್ನ ಗೆಳತಿಯರೊಡನೆ ಹರಟುತ್ತ ನಿಂತದ್ದು ಕಂಡಿತು. ಕೂಡಲೆ ಸ್ಲಾಮ್ ಪುಸ್ತಕ ಎತ್ತಿಕೊಂಡ ನಾನು ಅವಳತ್ತ ಓಡಿ " ಸ್ವಾತಿ, ನೀನು ಸ್ಲಾಮ್ ಬುಕ್ ನಲ್ಲಿ ಬರೆಯೋದಿಲ್ವಾ...?" ಅಂತ ಕೇಳಲು, "ಓಹ್, ಸಾರಿ ಕಣೋ, ಈಗ ಬರೆದೆ..." ಎಂದು ಬರೆಯಲು ಶುರುಮಾಡಿದಳು. ತನ್ನ ಕೈಲಿದ್ದ ಸ್ಲಾಮ್ ಬುಕ್ ಅನ್ನು ನನಗೆ ಕೊಟ್ಟು " ನೀನು ಬರೆದು ಬಿಡಪ್ಪ..., ದಯವಿಟ್ಟು ಅರ್ಧ-ಬರ್ಧ ಡೀಟೇಲ್ಸ್ ಬರಿಬೇಡ... ಎಲ್ಲಾ ಕಂಫ್ಲೀಟ್ ಮಾಡು ಅಯ್ತಾ...?" ಎಂದು ಹೇಳಲು ನಾನು ಗೋಣು ಆಡಿಸಿ ಅವಳ ಸ್ಲಾಮ್ ಪುಸ್ತಕದಲ್ಲಿ ಗೀಚಲು ಶುರುಮಾಡಿದೆ.

ತಕ್ಷಣ ಎನೋ ನೆನಪಾದವಳಂತೆ... " ರಾಹುಲ್, ಅವತ್ತು ಎಕ್ಸಾಮ್ ಮುಂಚೆ ನೀನು ಎನೋ ಹೇಳ್ಬೇಕಂತಿದ್ದೆ ಅಲ್ವ...? ಎನೋ ಅದು..?" ಅಂತ ಕೇಳಲು ನನಗೆ ಮೈ ಜುಮ್ಮೆಂದ ಅನುಭವ.. ತಡವರಿಸಿಕೊಳ್ಳುತ್ತ "ಅಹ.. ಎನಿಲ್ಲ... ಮರ್ತೋಯ್ತು ಕಣೆ..." ಎಂದು ಮಾತು ಬದಲಿಸಲು ಯತ್ನಿಸಿದೆ. ಅವಳು "ಇಲ್ಲಾ, ಎನಾದರೂ ಇಂಪಾರ್ಟೆಂಟ್ ವಿಷಯ ಇತ್ತಾ..?" ಅಂತ ಮತ್ತೆ ಕೇಳಲು "ಇಲ್ಲ ಕಣೆ, ಅಂತದ್ದೇನಾದರೂ ಇದ್ದಿದ್ದರೆ ನಿನ್ನ ಹತ್ತಿರ ಹೇಳುತ್ತಿರಲಿಲ್ಲವೇನೂ..." ಅಂತ ಮಾತು ತಪ್ಪಿಸಲು ಯತ್ನಿಸಿದೆ. ಅವಳು "ಅಯ್ತಪ್ಪ, ನೆನಪಿಸಿಕೊಂಡೇ ಹೇಳು ಪರ್ವಾಗಿಲ್ಲ.. ಎನಿವೇ ಕೀಪ್ ಇನ್ ಟಚ್...ಮರಿಬೇಡ..." ಅಂತ ಹೇಳಿ ತನ್ನ ಗೆಳತಿಯರತ್ತ ಮರಳಿ ಹೊರಟಳು. ಮನವು ಚಡಪಡಿಸುತ್ತಿದ್ದರೂ ಮತ್ತೊಮ್ಮೆ ಎನೂ ಹೇಳದೆ ಸುಮ್ಮನಾಗಬೇಕಾಯಿತು...

ಹೌದು, ಅಂದು ನಾನು ಅವಳಿಗೆ ಅದು ಮುಖ್ಯ ಅಲ್ಲದಿದ್ದರೂ ನನಗೆ "ಇಂಪಾರ್ಟೆಂಟ್ ವಿಷಯ" ವೆ ಅಗಿತ್ತು! ಮನದಲ್ಲಿ ಮೊಗ್ಗಾಗಿ ಅರಳಿದ್ದ ಪ್ರೀತಿ ಹೂವಾಗಿ ಅರಳುವ ಮುನ್ನ ಚಿವುಟಿಹೋಗಿತ್ತು. ಏನೋ ನನ್ನ ಸಂಕೋಚದ ಸ್ವಭಾವ ನನ್ನನ್ನು ತಡೆದುನಿಲ್ಲಿಸಿ ಅವಳಿಗೆ ನನ್ನ ಪ್ರೇಮ ನಿವೇದನೆ ಹೇಳದಂತೆ ಮಾಡಿತ್ತು.

ಅವಳು ನನ್ನ ಪುಸ್ತಕದಲ್ಲಿ ಬರೆದ ಸಾಲುಗಳತ್ತ ಒಮ್ಮೆ ಕಣ್ಣಾಡಿಸುತ್ತ ಹೋಗಲು... ಅವಳು ಬರೆದ ಒಂದು ಸಾಲು: "Friendship needs no words... but hearts to bind..." ಮಾತ್ರ ನನ್ನ ಮನವನ್ನು ಹಿಂಡಿ ನೋಯುವಂತೆ ಮಾಡಿತ್ತು. ನನ್ನ ಕುರುಡು ಪ್ರೀತಿಗೆ ಕೊನೆಗೂ "ಪ್ರೀತಿಯ" ಬೆಳಕು ಸಿಗಲಿಲ್ಲ... ( ಬಹುಶ: ಅದು ನನ್ನ ಮೊದಲ Love ಆಗಿದ್ದರಿಂದ ಅಂತಹ ಭಾವನೆಗಳು ಬಂದಿದ್ದವೇನೋ...!)

ಕೆಲ ತಿಂಗಳು ಅವಳ ಇಮೇಲ್, ಎಸ್.ಎಮ್.ಎಸ್ ಬಂದರೂ ಹೈಯರ್ ಸ್ಟಡೀಸ್ಗೋಸ್ಕರ ಯು.ಎಸ್ ಗೆ ಹೊರಟುನಿಂತ ಅವಳು ನನಗೆ ಅದರ ಬಗ್ಗೆ ಕೊನೆಯ ಮೇಸೆಜ್ ಮಾಡಿದ ಮೇಲೆ ನಂತರದ ದಿನಗಳಲ್ಲಿ ಮತ್ತೆ ಅವಳ ಇಮೇಲ್ ಅಗಲಿ ಎಸ್.ಎಮ್.ಎಸ್ ಅಗಲಿ ನನಗೆ ಬರಲಿಲ್ಲ...

*********

ಮನವು ಮತ್ತೆ ವರ್ತಮಾನಕ್ಕೆ ಮರಳಿ ಬಂತು... ಇಂದು ಅದೇ ಸ್ಲಾಮ್ ಬುಕ್ ಓದುತ್ತಿದ್ದರೆ ತನ್ನಷ್ಟಕ್ಕೆ ತಾನೇ ನಗು ಬರುತ್ತಿದ್ದರೂ ಅಂದು ಮನವು ಕಂಡ ಆ ಪ್ರೀತಿಯ ಅಸೆ ಬಹುಶ: ನಾನು ಜೀವಂತವಿರುವವರೆಗೂ ಕಾಡುತಿರುವುದೇನೋ...! ಇಂದು ನನಗೆ ಗರ್ಲ್ ಫ್ರೆಂಡ್ ಇದ್ದರೂ..., ಅದೂ ನಾವಿಬ್ಬರು ಕೆಲವೇ ತಿಂಗಳಲ್ಲಿ ಮದುವೆಯಾಗುತ್ತಿದ್ದರೂ ನಾನು ನನ್ನ ಗರ್ಲ್ ಫ್ರೆಂಡಿಗೆ ಈ ವಿಷಯ ತಿಳಿಸಿದಾಗ ಅವಳು ನನ್ನ ನೋಡಿ ನಕ್ಕು ನಕ್ಕು ಸುಸ್ತಾಗಿದ್ದಳು...!!. "ಅವಗಿನ ತರಹ ಈಗಲೂ ಸುಮ್ಮನಿದ್ದಿದ್ದರೆ ಅವತ್ತಿನ ಸ್ಥಿತಿನೇ ಮತ್ತೆ ನೋಡ್ಬೇಕಾಗಿತ್ತು ಕಣೋ..." ಎಂದು ಛೇಡಿಸಿದಳು. ಹೌದು, ನಾನು ನನ್ನ ಈ ಗರ್ಲ್ ಫ್ರೆಂಡ್ ಗೆ ಬಹುಬೇಗನೆ ಪ್ರೇಮ ನಿವೇದನೆ ಮಾಡಿಬಿಟ್ಟಿದ್ದೆ...! ಹಿಂದಿನ ಅನುಭವದ ಪಾಠದ ಫಲವೇನೋ..! ಅಂತೂ ನನ್ನವಳು ನನ್ನ ನಿವೇದನೆಯನ್ನ ಒಪ್ಪಿದ್ದಳು!!. ಅದರೂ ನನ್ನ ಮನವು ಆ "ಮೊದಲ ಪ್ರೀತಿಯ" ನೆನೆದು ಒಮ್ಮೊಮ್ಮೆ ಪುಳಕಿತಗೊಳ್ಳೂವುದಲ್ಲಾ ಅದಕ್ಕೆ ಕಾರಣ ಬಹುಶ: ನನ್ನ ಎರಡನೆ ಪ್ರೀತಿಯು (ನನ್ನ ಗರ್ಲ್ ಫ್ರೆಂಡಿಗೆ ಗೊತ್ತಾಗದಿದ್ದರೆ ಒಳಿತು...!) ನನ್ನ ಮೊದಲ ಪ್ರೀತಿಯಷ್ಟು ಸಮನಿಲ್ಲವೇನೋ...!

ಓಹ್, ತುರ್ತು ಕೆಲಸವಿದ್ದುದರ ನೆನಪಾಗಿ ನಾನು ಆ ಸ್ಲಾಮ್ ಬುಕ್ ಅನ್ನ ಮತ್ತೆ ಕಬರ್ಡ್ ನಲ್ಲಿ ಎತ್ತಿಟ್ಟಿ (ಮನದಲ್ಲೇ ಒಮ್ಮೆ ನಕ್ಕು...) ಮನೆಯಿಂದ ಜೆರಾಕ್ಸ್ ಪ್ರತಿ ಮಾಡಿಸಲು ಹೊರ ಹೊರಟೆ...
ವಿನಯ್ ...
ಅವರಿಬ್ಬರು ಒಂದು ಪುಣ್ಯಭೂಮಿಯಲ್ಲಿ ಹುಟ್ಟಿದ ಸಹೋದರರು....

ಅವರ ಭಾವನೆ, ಗುಣಗಳು... ಎಲ್ಲವು ಒಂದೇ ಆಗಿದ್ದವು....

ಬಿಡಿಸಲಾರದ ಪ್ರೀತಿ ಅವರದು...

ಆದರೆ,

ಅವರಿಬ್ಬರಲ್ಲಿ ತಮ್ಮನಿಗೆ ಸಲ್ಪ ಸಿಡುಕುಬುದ್ಧಿ..

ಇಲ್ಲ-ಸಲ್ಲದವರ ಮಾತನ್ನು ಹೆಚ್ಚು ನಂಬತೊಡಗಿದ...

ನಂತರ ಜೀವಕ್ಕೆ ಜೀವವಾದ ತನ್ನ ಸೋದರನನ್ನು ಬಿಟ್ಟು ಹೊರಟ..

ಅವನ ಪಾಲಿಗೆ ಕಂಟಕನಾಗುತ್ತಾ ಅವನ ಮನೆಗೆ ಕನ್ನ ಕೊರಯಲು ದೂರಾಲೋಚಿಸಿದ...

ಸತತ ಸೋಲುಂಡರೂ ಮತ್ತೆ-ಮತ್ತೆ ಪ್ರಯತ್ನ ಪಟ್ಟ...


.........


ಸಿನಿಮದ ಕಥೆಯಂತಿರುವ ಈ ಮೇಲಿನ ಸಾಲುಗಳು ಇಂದು ನಮ್ಮ ದೇಶವಾದ ಭಾರತ ಮತ್ತು ನಮ್ಮಿಂದಲೇ ಹುಟ್ಟಿಬಂದ ನೆರೆ ರಾಷ್ಟ್ರವಾದ ಪಾಕಿಸ್ಥಾನದ ನಡುವೆ ನೆಡೆಯುತ್ತಿರುವ ನೈಜ ಸ್ಥಿತಿಯ ದೃಶ್ಯ... ಸಿನಿಮಾ ಕೇವಲ ಎರಡುವರೆ ಗಂಟೆಗಳ ಅವಧಿಗೆ ನೆಡೆದರೆ ಈ ಎರಡು ದೇಶಗಳ ನಡುವೆ ನೆಡೆಯುತ್ತಿರುವ ಕಥಾಸಾರಾಂಶ ೬೩ ವರ್ಷಗಳಾದರೂ ನಿಲ್ಲುವ ಸೂಚನೆ ಇಲ್ಲ...! ಇಂಡಿಯನ್ ಇಂಡಿಪೆಂಡೆಂಸ್ ಆಕ್ಟ್ ೧೯೪೭ ರ ಮುಖಂತರ ಅಧಿಕೃತವಾಗಿ ವಿಭಾಜನೆಗೊಂಡ ಭಾರತ-ಪಾಕ್ ನಂತರ ಸರಿಸುಮಾರು ೫೦೦,೦೦೦ ರಿಂದ ೧,೦೦೦,೦೦೦ ಸಾವುಗಳ ನಡುವೆ ಇಲ್ಲಿನ ಮತ್ತು ಅಲ್ಲಿನ ಜನರು ತಮ್ಮ ಮೂಲನೆಲೆ ಕಳೆದುಕೊಂಡು ಬೇರೆಡೆ ಬಂದು ಇರುವಂತಾಯಿತು.

ದೇಶ ವಿಭಾಜನೆಯಾದರೂ ಇನ್ನೂ ಕಾಶ್ಮೀರ ಹಾಗೇ ಉಳಿದಿತ್ತು. ಅಲ್ಲಿ ಅನೇಕ ಮುಸ್ಲಿಮ್ ಬಾಂಧವರು ಮತ್ತು ಹಿಂದು ಬಾಂಧವರು ಸಮರಸದಿಂದ ಬಾಳ್ವೆ ಮಾಡುತ್ತಿದ್ದರು. ಪಂಜಾಬಿನ ಬಹುತೇಕ ಭಾಗವನ್ನು ಭಾರತ ವಿಭಾಜನೆಯಲ್ಲಿ ಕಳೆದುಕೊಂದರೂ ಕಾಶ್ಮೀರದ ಮೇಲಿಟ್ಟಿದ್ದ ಕಣ್ಣನ್ನು ಪಾಕ್ ಇನ್ನೂ ತಗೆದಿರಲಿಲ್ಲ... ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಕಾಶ್ಮೀರದ ರಾಜಸಂಸ್ಥಾನದವರು ಭಾರತದೊಡನೆ ಸೇರಲು ಇಶ್ಚಿಸಿದಾಗ ಅರಂಭವಾದ ಕಾಶ್ಮೀರ ಕದನ ಅಂದಿನಿಂದ ಇನ್ನೂ ಹಾಗೆ ಎಡಬಿಡದೆ ಮುಂದುವರಿದಿದೆ...

೮೦ ರ ನಂತರದ ದಶಕದವರೆಗೂ ಬೂದಿ ಮುಚ್ಚಿದ ಕೆಂಡಂತಿದ್ದ ಎರಡು ದೇಶಗಳ ನಡುವಿನ ವಾತಾವರಣ ೮೫ ರ ಹತ್ತಿರ ಬರುತ್ತಿದ್ದಂತೆ ಕಾಶ್ಮೀರ ಕಣುವೆಯ ಸೀಮಾಲೋನ್ಘನೆ ಮುಖಂತರ ಇನ್ನಷ್ಟು ಬಿಗಡಾಯಿಸತೊಡಗಿತು. ನೆರೆಯ ರಾಷ್ಟ್ರದ ಮೇಲಿನ ಗೂಮಾನಿ ಆಗಾಗ ಕಾಡುತ್ತಿದ್ದರೂ ಅದು ಆಗಷ್ಟೆ ಅಫ್ಘಾನಿಸ್ಥಾನ್ ಯುದ್ಧ ಮುಗಿಸಿದ್ದ ಮುಜಾಹಿದ್ದೀನ್ ಯೋಧರ ಕಾಶ್ಮೀರ ಗಡಿಯೊಳಗಿನ ನುಸುಳುವಿಕೆಯೊಂದಿಗೆ ತಾರಕವೇರತೊಡಗಿತು. ಇದರೊಂದಿಗೆ ಪ್ರತ್ಯೇಕತವಾದಿಗಳ ಸಮಾಗಮ ಅದಕ್ಕೆ ಇನ್ನಷ್ಟು ಬಲ ದೊರಕಿಸಿತು.

ಜಮ್ಮು ಕಾಶ್ಮೀರ ಅಸ್ಸೆಂಬ್ಲಿಯ ಅಧಿಕೃತ ಮಾಹಿತಿ ಪ್ರಕಾರ ಇವರೆಗೂ (ಜುಲೈ ೨೦೦೯ ರ ತನಕ...) ಸರಿಸುಮಾರು ೩,೪೦೦ ಕಾಣೆಯಾಗಿರುವ ಪ್ರಕರಣ ಮತ್ತು ೪೭,೦೦೦ ಜನರ ಸಾವು ಸಂಭವಿಸಿವೆ ಎಂದು ಹೇಳಿದೆ. (ಹೆಚ್ಚಿನ ಮಾಹಿತಿ: http://en.wikipedia.org/wiki/Jammu_and_Kashmir ರಲ್ಲಿ ಇದೆ...). ಭೂಲೋಕದ ಸ್ವರ್ಗದಂತಿರುವ ಕಾಶ್ಮೀರವು ಹೆಚ್ಚು-ಕಮ್ಮಿ ಆ ಕಾಲದಿಂದ ತನ್ನ ನೆಮ್ಮದಿ ಕಳೆದುಕೊಳ್ಳತೊಡಗಿತು. ಹಲವಾರು ಸಾವು-ನೋವುಗಳು ಈ ಕಣವೆಯ ಮುಖ್ಯಭಾಗವಾಗತೊಡಗಿದವು.

ನಮ್ಮ ಜನ ಹಾಗೂ ಪಾಕ್ ನ ಸಹೃದಯ ಬಂಧುಗಳು ಇವೆಲ್ಲಾ ಬಯಸದಿದ್ದರೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಜಾಹಿದ್ದೀನ್ ಮತ್ತು ಪ್ರತ್ಯೇಕತವಾದಿಗಳ ಹೂಡಿರುವ ತಂತ್ರ ಇವರಿಬ್ಬರ ನಡುವಿನಲ್ಲಿ ಬಹುದೊಡ್ಡ ಕಂದಕ ಸೃಷ್ಠಿಸಿದೆ. ಎರಡು ಗಡಿಗಳ ನಡುವೆ ನೆಡೆಯುತ್ತಿದ್ದ ವ್ಯಾಪಾರ ವಹಿವಾಟಿಗೆ ಇದು ಭಾರಿ ದಕ್ಕೆ ತಂದಿದ್ದರೂ ಇನ್ನೂ ಸಂಸ್ಕೃತಿಕ ಮತ್ತು ಕ್ರೀಡೆಯ ದಿಕ್ಕಿನಲ್ಲಿ ನೋಡಿದರೆ ಭಾರಿ ಬದಲಾವಣೆಯೇನೂ ಆಗಿಲ್ಲ. ವೀಸಾ ತೊಂದರೆ, ಪರಸ್ಪರ ವಿಚಾರವಿನಿಮಯಗಳಲ್ಲಿನ ತೊಂದರೆ, ಸಮರ್ಪಕ ಮಾಹಿತಿ ವಿನಿಮಯ ಇಲ್ಲದಿರುವುದು ಈ ಎರಡು ದೇಶದಲ್ಲಿರುವ ಪ್ರಜೆಗಳಿಗೆ ವಿನ:ಕಾರಣ ತೊಂದರೆ ಅನುಭವಿಸುವಂತೆ ಮಾಡುತ್ತಿವೆ. ಕ್ರೀಡಾ ಕಾರ್ಯಕ್ರಮಗಳು ರದ್ದಾಗುವುದು, ಸಂಸ್ಕೃತಿಕ ಕಾರ್ಯಕ್ರಮ ನೆಡೆಸುವುದಕ್ಕೆ ಪರವಾನಿಗೆ ಸಿಗದಿರುವುದು ಎಲ್ಲಾ ಇದರ ಕಾರಣವೆನ್ನಬಹುದು...

ನಾವು ಎರಡು ದೇಶಗಳ ಪ್ರಜೆಗಳ ವಿಷಯ ಬಿಟ್ಟು ಯೋಚಿಸತೊಡಗಿದರೆ ನಮಗೆ ಕಾಡುವ ಮತ್ತೊಂದು ವಿಚಾರ: ಭಯೋತ್ಪಾದನೆ. ದೇಶವಿಭಾಜನೆಯಾದ ನಂತರ ೧೯೪೭-೪೮, ೧೯೬೫ ಮತ್ತು ೧೯೭೧ ರಲ್ಲಿ ಕದನವೆರ್ಪಟ್ಟರೂ, ಜನರ ಮನಸ್ಸಿನಲ್ಲಿ ನಿರಂತರ ಭಯ ಮೂಡಿಸಲು ಭಯೋತ್ಪಾದನೆ ಎಂಬ "ಭೂತ" ಮತ್ತಷ್ಟು ಸಹಕರಿಸಿದೆ. ದೇಶದ ಅಂತರಿಕ ಭದ್ರತೆ, ವ್ಯಾಪಾರ-ಹಣಕಾಸು ಕಾರ್ಯಗಳಲ್ಲಿ ಏರು-ಪೇರು ಮಾಡಲು ಭಯೋತ್ಪಾದನ ಗುಂಪುಗಳು ಮತ್ತು ಅದರ "ಮಾಲೀಕರು" ಬಹಳಷ್ಟು ಶ್ರಮಿಸುತ್ತಲೇ ಇದ್ದಾರೆ. ಕಾಶ್ಮೀರದಿಂದ ಪ್ರಾರಂಭವಾದ ಈ "ಕಾರ್ಯ" ನಂತರ ವ್ಯವಸ್ಥಿತವಾಗಿ ಭಾರತ ದೇಶದೊಳಗೆಲ್ಲಾ ಹರಡುವಂತೆ ಮಾಡುವಲ್ಲಿ ಕೆಲಮಟ್ಟಿನ ಸಫಲತೆ ಈ ಭಯೋತ್ಪಾದನ ಸಂಘಟನೆಗಳು ಪಡೆದವು. ನಮ್ಮ ರಾಷ್ಟ್ರದ ಯುವಕರನ್ನೇ ಅಲ್ಲಿಗೆ ಕರೆದುಕೊಂಡು ಹೋಗಿ, ಯುದ್ಧ ತರಬೇತಿ ನೀಡಿ ಮತ್ತೆ ನಮ್ಮಲ್ಲಿಗೆ ಕಳುಹಿಸಿ, ನಮ್ಮ ಜನರನ್ನೇ ಸಾಯಿಸುವ "ಷಡ್ಯಂತ್ರ"...! ಎಂತಹ ದುರಾದೃಷ್ಟ ನೋಡಿ ನಮ್ಮ ತಾಯಿ ಭಾರತಮಾತೆಗೆ. ತನ್ನದೇ ಭಾಗವಾಗಿದ್ದ ನೆರೆರಾಷ್ಟ್ರದ "ಗುಂಪುಗಳು" ತನಗೆ ಬೆಂಕಿಯಿಡಲು ಬರುತ್ತಿರುವುದು ಭಾರತಕ್ಕೆ ಸಿಕ್ಕ ಶಾಪವೆನ್ನಬಹುದು.

ನಮ್ಮ ದೇಶದ ಸುರಕ್ಷತ ವ್ಯವಸ್ಥೆ ಎಷ್ಟೇ ಬಿಗಿಯಾಗಿದ್ದರೂ ಹಲವು "ಮೂಲ" ಗಳನ್ನು ಹೊಂದಿರುವ ಈ "ಗುಂಪುಗಳು" ಎಂತಹ ಚತುರತೆಯಿಂದ ಕಾರ್ಯನಿರ್ವಹಿಸುತ್ತಿದೆ ಅಂದರೆ ವರ್ಷದ ಹಿಂದೆ ನೆಡೆದ ಮುಂಬಯಿ ಉಗ್ರರ ಅಟ್ಟಹಾಸ ಮತ್ತು ಇತ್ತೀಚಿಗಿನ ಪುಣೆ ಬಾಂಬ್ ಸ್ಪೋಟಗಳೇ ಉದಾಹರಣೆ. ಮುಂಬಯಿ ಉಗ್ರರ ಅಟ್ಟಹಾಸವಂತೂ ಕೆಲವು ವರ್ಷಗಳ "ಪ್ಲಾನಿಂಗ್" ಯೊಂದಿಗೆ ಒಂದು ಬಹಳ ರಹಸ್ಯಮಯ ಕಾರ್ಯಚರಣೆಯೂ ಸಹ ಆಗಿತ್ತು. ನಮ್ಮಲ್ಲಿನ ಎನ್.ಎಸ್.ಜಿ ಕಾಮಾಂಡೋಗಳಿಗಿದ್ದ ಜಾಗದ ಮಾಹಿತಿಗಿಂತ ಹೆಚ್ಚು ಮಾಹಿತಿ ಅವರ ಬಳಿ ಅಂದು ಇತ್ತು. ಅದರ ಸಹಾಯದಿಂದ "ಕಂಟ್ರೋಲರ್ಸ್" ಹೇಗೆ ಕಾರ್ಯನಿರ್ವಹಿಸಿದೆಂದರೆ ಅವರು ಮಾಡಿದ "ಸಂಶೋಧನೆ" ಬಗ್ಗೆ ನೀವೇ ಒಮ್ಮೆ ಯೋಚಿಸಿ...!!!.


ದಿಗಿಲಾಗುತ್ತದೆಯಲ್ಲವೇ...?


ನಮ್ಮ ಭಾರತದ ಬಳಿ ಎಂತಹ ಶಕ್ತಿಯಿದ್ದರೂ "ಹೊರ ದೇಶ" ಗಳ "ಒತ್ತಡ" ದಿಂದ ಪ್ರತಿಕಾರ್ಯಚರಣೆ ಮಾಡದೆ ಸುಮ್ಮನಿರಬೇಕಾಗಿದೆ. ಇದರಿಂದ ನಮ್ಮ ಜನ ಇನ್ನಷ್ಟು ಸಾವು-ನೋವುಗಳನ್ನ ನೋಡಬೇಕಾಗಿದೆ.... ಬಾಂಧವ್ಯದ ಬಗ್ಗೆ ಅಲ್ಲದಿದ್ದರೂ ದೇಶ ರಕ್ಷಣೆಗೋಸ್ಕರವಾದರೂ ನಮ್ಮ ಭಾರತವು ಎಂದು ತಿರುಗಿ ಉತ್ತರಕೊಡುವುದೋ ಎಂಬುದು ಆ ಕಾಲವೇ ನಿರ್ಣಯಿಸಬೇಕು...! ಏಕೆಂದರೆ ದೂರದ ಅಫ್ಘಾನಿಸ್ಥಾನದಲ್ಲಿ ನೆಡೆದ ಸಂಚಿಗೆ ಅಮೆರಿಕ ಭೂಮಿ ಕದುಲಿದಾಗ ಅವರು "ತಾಲಿಬಾನಿ"ಗಳನ್ನು ಮೆಟ್ಟಿ ನಿಂತಂತೆ ನಾವು ನಮ್ಮ ನೆರೆಯ ದೇಶದಲ್ಲಿ ಬೀಡು ಬಿಟ್ಟಿರುವ ಆ "ಗುಂಪುಗಳ" ವಿರುದ್ಧ ಕಾರ್ಯಚರಣೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಅಲ್ಲಿಯವರೆಗೂ ನಾವೆಲ್ಲ ಇನ್ನೆಷ್ಟು ದಿನ ಭೀತಿಯ ನೆರಳಿನಲ್ಲಿ ಇರಬೇಕೋ ಆ ದೇವರೇ ಬಲ್ಲ...!!
ವಿನಯ್ ...
ಜೀವನವೆಂಬ ಝರಿಯಲ್ಲಿ

ಹರಿದ ನೀರೆಷ್ಟೋ...,

ಸವೆದ ಕಲ್ಲೆಷ್ಟೋ...,

ಸಾಗಿದ ದಾರಿಯೆಷ್ಟೋ...,

ನೋಡಿದ ತಿರುವೆಷ್ಟೋ...!

ತುಂಬಿ ಹರಿದಾಗ ಅನಂದಿಸಿದವರು ಹಲವರು,

ಸೊರಗಿದಾಗ ಕಂಡು ಹಲುಬಿದವರು ಇನ್ನುಳಿದವರು...

ನೀರ ಹರಿವು ನೋಡಲು ಸೊಗಸು,

ಅದರ ಝುಳು-ಝುಳು ನಾದವ ಕೇಳಲು

ಮನಕೆ ಹುರುಪು...

ನೀರು ನಿಂತರೆ ಇಲ್ಲದು ಸೊಬಗು..,

ಕಾಣಸಿಗದು ಜೀವ ವೈವಿಧ್ಯದ ಅನಂದವು...

ಹೋಲಿಸಿದರೆ ಇವರಿಬ್ಬರಿಗಿರುವ ಸೌಮ್ಯತೆ,

ಕಾಣುವುದು ಉದಾಹರಣೆ ನಮಗೆ ಹಲವೆಡೆ...

ತಾನು ಹರಿಯುತ, ಹಾದಿ ಸವಿಸುತಾ,

ಝರಿ ಸೇರುವುದು ನೀಲ ಕಡಲು...

ಹಾಗೆ ತಾನು ಸವೆಸುವ ಹಾದಿಯಲಿ,

ಮನುಜ ಕಾಣುವನು ಹಲವಾರು ತಿರುವು...

ಸ್ವಲ್ಪ ನಲಿವು, ಹೆಚ್ಚು ನೋವು...

ಕ್ಷಣ-ಕ್ಷಣಕ್ಕೂ ನಿರೀಕ್ಷಿಸದ ಕುತೂಹಲ-ನಿಗೂಢತನವು....!

ಜೀವನ ಎಷ್ಟು ದಿನ ಸಾಗಿ ಉರುಳಿತು ಎಂಬುದಕ್ಕೆ ಇರದು ಸಂಬಂಧ...,

ತಾನು ಇಲ್ಲಿ ಇದ್ದ ದಿನದೊಳು ಪರರು ತನ್ನಿಂದ ಪಡೆದ ಸುಖವ, ನೆನೆದ ಸಂತೋಷವಷ್ಟೆ ಸಾಕು..,

ಅವನ ಜೀವನವಾಗಲು ಪಾವನ...
ವಿನಯ್ ...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೩

ಇಲ್ಲಿಯವರೆಗೂ ನೀವು ಕೂರ್ಮನ ಕಥೆಯ ಓದಿದಿರಿ, ಬನ್ನಿ ಮುಂದಿನ ಭಾಗವಾದ ಕಪ್ಪೆ ಮತ್ತು ಸುಂದರ ಮಹಿಳೆಯ ನೀತಿ ಕಥೆಯನ್ನು ಓದೋಣ...

ಕಪ್ಪೆಗಳು...

ಒಬ್ಬ ರೈತನು ತನ್ನೂರಿನಿಂದ ಪಟ್ಟಣಕ್ಕೆ ಬಂದು ಅಲ್ಲಿದ್ದ ಒಂದು ಉಪಹಾರ ಗೃಹದ ಮಾಲೀಕನ ಹತ್ತಿರ: "ನಾನು ನಿಮಗೆ ನೂರಾರು ಕಪ್ಪೆಯ ಕಾಲನ್ನು ಕೊಡುವೆನು... ನೀವು ಅದನ್ನು ಕೊಳ್ಳುವಿರಾ?" ಅನ್ನಲು, ಅದನ್ನು ಕೇಳಿದ ಉಪಹಾರ ಗೃಹದ ಮಾಲೀಕನಿಗೆ ಅಘಾತ! ತನ್ನನ್ನು ತಾನೇ ಸವರಿಸಿಕೊಂಡು "ನೀನು ಅಷ್ಟು ಕಪ್ಪೆಯ ಕಾಲನ್ನು ಎಲ್ಲಿಂದ ತರುವೆ?" ಎಂದು ಆ ರೈತನನ್ನು ಕೇಳಲು, ರೈತನು ಹೀಗೆ ಉತ್ತರಿಸಿದನು: "ನನ್ನ ಮನೆಯ ಹತ್ತಿರ ಒಂದು ಕೊಳವಿದೆ, ಅದರಲ್ಲಿ ಲಕ್ಷಾಂತರ ಕಪ್ಪೆಗಳಿವೆ... ಅವು ರಾತ್ರಿಯೆಲ್ಲಾ ಕೂಗುವುದರಿಂದ ನನ್ನ ನಿದ್ದೆ/ನೆಮ್ಮದಿ ಹಾಳಾಗಿದೆ.., ಅದಕ್ಕೆ ನಾ ಅವುಗಳನ್ನ ಹಿಡಿದು ತಂದು ನಿಮಗೆ ಮಾರುವೆ, ನೀವು ಯೋಗ್ಯ ಬೆಲೆ ನೀಡಿ ಕೊಂಡುಕೊಳ್ಳಿ..." ಎಂದನು. ಉಪಹಾರ ಗೃಹದ ಮಾಲೀಕನಿಗೆ ಆ ರೈತ ಹೇಳಿದ್ದು ಸರಿಯೆನಿಸಿ ೫೦೦ ರ ಲೆಕ್ಕದಲ್ಲಿ ಮುಂದಿನ ಹಲವು ವಾರಗಳ ಕಾಲ ತನ್ನ ಉಪಹಾರ ಗೃಹಕ್ಕೆ ಕಪ್ಪೆಗಳನ್ನು ಸರಬರಾಜು ಮಾಡಬೇಕು ಎಂಬ ಕರಾರು ಇಟ್ಟನು. ರೈತನು ಮಾಲೀಕನ ಮಾತಿಗೆ ಒಪ್ಪಿ ತನ್ನ ಊರಿಗೆ ಮರುಳಿದನು.


ಮುಂದಿನ ವಾರ ಮತ್ತೆ ಆ ಉಪಹಾರ ಗೃಹದ ಬಳಿ ಬಂದ ರೈತನ ಮುಖ ತೀರಾ ಸೆಪ್ಪಗಾಗಿತ್ತು. ನೂರಾರು ಕಪ್ಪೆಗಳನ್ನು ಹೊತ್ತು ತರುವೆ ಎಂದು ಹೇಳಿಹೋಗಿದ್ದ ಅವನ ಕೈಯಲ್ಲಿ ಕೇವಲ ಎರಡು "ಸೊಣಕಲು" ಕಪ್ಪೆಗಳು ಮಾತ್ರ ಇದ್ದವು. ಆ ಉಪಹಾರ ಗೃಹದ ಮಾಲೀಕನು ಕೂತುಹಲದಿಂದ "ಎನಪ್ಪಾ, ಏನೋ ರಾಶಿ-ರಾಶಿ ಕಪ್ಪೆಗಳನ್ನು ತರುತ್ತೇನೆ ಅಂದೆಯೆಲ್ಲಾ... ಎಲ್ಲಿ ನಿನ್ನ ಕಪ್ಪೆಗಳು..?" ಅಂತ ಕೇಳಲು, ರೈತನು "ಇಲ್ಲ ಸ್ವಾಮಿ, ನನ್ನ ಲೆಕ್ಕಚಾರ ತಪ್ಪಾಗಿತ್ತು, ಕೇವಲ ಎರಡು ಕಪ್ಪೆಯ ಶಬ್ದವನ್ನು ನಾನು ನೂರಾರು ಕಪ್ಪೆಗೆ ಹೋಲಿಸಿಬಿಟ್ಟಿದ್ದೆ.." ಎಂದು ಪೆಚ್ಚಾಗಿ ಹೇಳಿದನು....!


[ನೀತಿ: ನಿಮ್ಮ ಬಗ್ಗೆ ಹಲವು ಜನರು ಕೊಂಕು ಮಾತು ಅಥವಾ ನಿಂದನೆ/ಜರಿಯುವ ಕೆಲಸ ಮಾಡುತ್ತಿದ್ದರೆ, ಬಹುಶ: ಮೇಲಿನಂತೆ ಅವರು ಕೇವಲ "ಕೆಲವು" ಒಟಗುಟ್ಟುವ ಕಪ್ಪೆಗಳಾಗಿರಬಹುದು...!!!. ನಿಮ್ಮಲ್ಲಿರುವ ಕಷ್ಟಗಳನ್ನು ಸ್ವತ: ಹೋಲಿಕೆ ಮಾಡತೊಡಗಿದರೆ ಅದು ಒಂದು ಕತ್ತಲೆ ಕೋಣೆಯ ಮಧ್ಯದಲ್ಲಿ ಏನು ಕಾಣದೆ ನಿಂತಿರುವಂತೆ ನಿಮಗೆ ಭಾಸವಾಗಬಹುದು... ಕತ್ತಲು ಕೇವಲ ಆ ಕೋಣೆಯ ಭಾಗವಾದರೂ ಆ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಆದರ ಸ್ಪಷ್ಠತೆ ಹೇಗೆ ಗೊತ್ತಾಗುವುದಿಲ್ಲವೋ ಹಾಗೆಯೇ ನಮ್ಮ ಮನದ ಯೋಚನೆ ನಮ್ಮನ್ನು ನಿಂದಿಸುವ ಆ ನಿಂದಕರ ಮೇಲೆ ಇರುತ್ತದೆ.. ನಾವು ಮಾನಸಿಕವಾಗಿ ಅದರಲ್ಲಿ ಎಷ್ಟು ಬೆರೆತುಹೋಗಿರುತ್ತೇವೆ ಅಂದರೆ ಅದು ನಮ್ಮ ದಿನನಿತ್ಯದ ಕಾರ್ಯ, ಕೆಲವೊಮ್ಮೆ ನಮ್ಮ ನಿದ್ದೆಯನ್ನು ಸಹ ಬಿಡುವುದಿಲ್ಲ!!!. ಕೇವಲ ಕತ್ತಲಲ್ಲಿದ್ದೇ ಎಲ್ಲಾ ವಿರ್ಮರ್ಶಿಸುವ ನಾವು ಆ ಕತ್ತಲಿನಿಂದಾಚೆ ಬೆಳಕಿನ ಅಸ್ತಿತ್ವ ಇದೆ ಎಂಬುದನ್ನು ಮರೆತುಬಿಡುತ್ತೇವಲ್ಲಾ, ಎಂತಹ ವಿಪರ್ಯಾಸ ನೋಡಿ!!. ಕತ್ತಲಲ್ಲಿ ಇಜ್ಜಲಿಗೆ ಹುಡುಕಾಡುವ ನಾವು ನಮ್ಮ ನಿಂದಕರ ವಿಷಯದಲ್ಲೂ ಹಾಗೇ ಮಾಡದೇ ಬೆಳಕಿನ ಹಾಗೆ ನಿಜ ವಿಷಯ ಅರಿತು ಅದಕ್ಕೆಲ್ಲಾ ಕಿವಿಗೊಡದಿದ್ದರೆ ಎಷ್ಟು ಚೆನ್ನ ಅಲ್ಲವೇ..?]


----------------------------------------


ಸುಂದರ ಮಹಿಳೆ

ಒಮ್ಮೆ ಬೌದ್ಧ ಧರ್ಮದ ಭಿಕ್ಷುಗಳಿಬ್ಬರು ನೆಡೆಯುತ್ತ ಸಾಗುತ್ತಿರಲು, ಅವರು ನೆಡೆಯುತ್ತಿದ್ದ ಹಾದಿಯಲ್ಲಿ ಒಂದು ಒಡೆದುಹೋದ ಸೇತುವೆ ಕಾಣಿಸಿತು. ತಮ್ಮ ಮುಂದಿನ ಹಾದಿ ಆ ಸೇತುವೆ ದಾಟಿಯೇ ಹೋಗಬೇಕಾಗಿದ್ದರಿಂದ ಅವರು ಮೆಲ್ಲನೆ ಅದರ ಮೇಲೆ ಸಾಗುತ್ತಿರಲು ಮಧ್ಯದಲ್ಲಿ ಅವರಿಗೆ ಒಬ್ಬ ಸುಂದರ ಮಹಿಳೆ ಕಾಣಿಸಿದಳು. ಅವಳು ಸಹ ಆ ಸೇತುವೆಯ ದಾಟಲು ಪ್ರಯತ್ನಪಡುತ್ತಿರಲು, ಅದು ಸಾಧ್ಯವಾಗದೆ ಮಧ್ಯದಲ್ಲೇ ಸಿಲುಕಿಬಿಟ್ಟಿದ್ದಳು... ಆ ಭಿಕ್ಷುಗಳಲ್ಲಿ ಒಬ್ಬರಾದ ಹಿರಿಯ ಭಿಕ್ಷುವು ಅವಳನ್ನು ಸ್ವತ: ಹೊತ್ತುಕೊಂಡೊಯ್ಯುವುದಾಗಿ ವಿನಂತಿಸಲು ಅವಳು ಸಮ್ಮತಿಸಿ, ಆ ಹಿರಿಯ ಭಿಕ್ಷುವು ಅವಳನ್ನು ಸುರಕ್ಷಿತವಾಗಿ ಇನ್ನೊಂದು ದಡ ಸೇರಿಸಿದರು. ಇದನ್ನು ನೋಡಿದ ಕಿರಿಯ ಭಿಕ್ಷುವಿಗೆ ಮನದಲ್ಲೇ ಉರಿಯ ಅನುಭವವಾಯಿತು. ತನ್ನ ಧರ್ಮದಲ್ಲಿ ಪರಸ್ತ್ರೀಯರನ್ನು ಮುಟ್ಟುವುದನ್ನ, ಸ್ನೇಹ ಬೆಳೆಸುವುದನ್ನ ವಿರೋಧಿಸಿರುವಾಗ ಈ ಹಿರಿಯ ಭಿಕ್ಷುವು ಅವಳನ್ನ ಹೊತ್ತೊಯ್ಯುವುದಾಗಿ ಕೇಳಿದ್ದಲ್ಲದೇ ಅವಳನ್ನು ಸ್ಪರ್ಶಿಸಿ, ಮುಟ್ಟಿ, ತನ್ನ ದೇಹದ ಮೇಲೆ ಹೊತ್ತು ಇನ್ನೊಂದು ದಡ ಸೇರಿಸಿದ್ದು ಏಕೆ ಎಂಬ ಪ್ರಶ್ನೆ ಮನದಲ್ಲಿ ಕಾಡುತ್ತಿದ್ದರೂ ಹಿರಿಯ ಭಿಕ್ಷುವಿಗೆ ಗೌರವ ನೀಡಬೇಕು ಎಂಬ ನಿಯಮದಲ್ಲಿ ಮರುಮಾತನಾಡದೆ ಸುಮ್ಮನೆ ಅವರೊಂದಿಗೆ ಹೊರಟನು. ಆ ಮಹಿಳೆ ಅವರಿಗೆ ಧನ್ಯವಾದ ಹೇಳಿ ತನ್ನ ಪಯಣ ಮುಂದುವರಿಸಲು, ಈ ಕಿರಿಯ ಭಿಕ್ಷುವಿನ ಮನ ಆಗಲೇ ಕುದಿಯಲು ಪ್ರಾರಂಭಿಸಿಯಾಗಿತ್ತು. ಅವನ ಮನವು ಈ ಹಿರಿಯ ಭಿಕ್ಷುವಿನ ಬಗ್ಗೆ ಇಲ್ಲದ ಕಲ್ಪನೆ ಮಾಡತೊಡಗಿತು, ಬೇಡದ ಭಾವನೆಗಳು ಬರತೊಡಗಿದವು... ಇವೆಲ್ಲದರ ನಡುವೆ ಆ ಹಿರಿಯ ಭಿಕ್ಷುವು ಸುಮ್ಮನೆ ನೆಡೆಯುತ್ತಿರಲು, ಇತ್ತ ಸಹನೆಯ ಕಟ್ಟೆಯೊಡೆದ ಕಿರಿಯ ಭಿಕ್ಷುವು "ನೀವು ನನಗೆ ಅಷ್ಟೆಲ್ಲಾ ಉಪದೇಶ ಮಾಡುತ್ತಿರಲ್ಲಾ, ಅದೇ ನಿಮಗೆ ಒಂದು ಸುಂದರ ಮಹಿಳೆ ಕಾಣಿಸಿದಾಗ ತಮ್ಮ ಧರ್ಮದ ತತ್ವವೆಲ್ಲಾ ಬಿಟ್ಟು, ತಾವೇ ಮೊದಲು ಹೋಗಿ ಅವಳನ್ನು ಮುಟ್ಟಿ, ಹೊತ್ತೊಯ್ದು ಆ ದಡ ಸೇರಿಸಿದರಲ್ಲ..., ಎಲ್ಲೊಯ್ತು ನಿಮ್ಮ ನಿಷ್ಠೆ, ಧರ್ಮ, ಅಚಾರಗಳೆಲ್ಲಾ...? ನಿಮ್ಮಿಂದ ಕಲಿಯಬೇಕಾದದ್ದು ಇದನ್ನೇನಾ...?" ಎಂದು ಹೇಳಲು, ಹಿರಿಯ ಭಿಕ್ಷುವು ಅದೇ ಸೌಮ್ಯಭಾವದಿಂದ ಈ ಕಿರಿಯ ಭಿಕ್ಷುವನ್ನು ಕೇಳಿದರು: "ನಾನೇನೋ ಹಲವು ಗಂಟೆಗಳ ಹಿಂದೆಯೇ ಅವಳನ್ನು ಇನ್ನೊಂದು ದಡ ಸೇರಿಸಿಬಿಟ್ಟು ಬಂದಿದ್ದೆ. ಆದರೆ ಅವಳು ಅಲ್ಲಿಂದ ನಿನ್ನ ಹೆಗಲ ಮೇಲೆ ಇನ್ನೂ ಪ್ರಯಾಣ ಮುಂದುವರಿಸಿರುವಂತೆ ಕಾಣಿಸುತ್ತಿದೆಯಲ್ಲಾ...?!!"


[ನೀತಿ: ಚೀನಾ ದೇಶದ ಹಳೆಯ ನೀತಿ ಕಥೆಯಾದ ಇದು ಪ್ರಸ್ತುತ ಕಾಲದಲ್ಲಿನ ನಮ್ಮ ಯೋಚನಾ ಲಹರಿಗಳ ಬಗ್ಗೆ (ಅಯಾ ಸಂದರ್ಭಕ್ಕನುಗುಣವಾಗಿ...) ಸವಿವರವಾಗಿ ಹೇಳುತ್ತಿದೆ. ನಾವು ಅನೇಕ ಸಲ ಕಿರಿಕಿರಿ ಮತ್ತು ಮನದ ನೆಮ್ಮದಿ ಕೆಡಿಸುವ ಸಂದರ್ಭಗಳನ್ನು/ಜನರನ್ನು ನೋಡುತ್ತಲೇ ಇರುತ್ತೇವೆ. ಒಮ್ಮೆ ಅವರು ನಮ್ಮ ನೆಮ್ಮದಿ ಕೆಡಿಸಿದರೆ, ಮತ್ತೊಮ್ಮೆ ನಮ್ಮ ಮನದಲ್ಲಿ ದ್ವೇಷ-ಅಸೂಯೆ ತರುವ ಮಟ್ಟಕ್ಕೂ ಹೋಗುತ್ತಾರೆ. ಆದರೆ ಈ ಕಥೆಯಲ್ಲಿ ಆ ಕಿರಿಯ ಭಿಕ್ಷು ಮಾಡಿದಂತೆ ನಾವು ಸಹ ಅ ಬೇಡದ ವಿಷಯ/ಯೋಚನೆಯನ್ನು ಮರೆಯದೇ/ಅಲ್ಲಿಯೇ ಬಿಟ್ಟುಬಿಡದೆ "ಸುಂದರ ಮಹಿಳೆ" ಯನ್ನು ಅವನು ಹೊತ್ತಂತೆ ನಾವು ಸಹ ನಮ್ಮ ಹೆಗಲ ಮೇಲೆ ಹೊತ್ತು ಕೊಂಡೊಯ್ಯುತ್ತಿರುತ್ತೇವೆ...!!!. ನಮ್ಮನ್ನು ಅವರು ಅನೇಕ ಸಲ ಅವಮಾನಿಸಿದರೂ, ಮಾನಸಿಕವಾಗಿ ಹಿಂಸಿಸಿದರೂ ಅದರಿಂದ ಹುಟ್ಟುವ ದ್ವೇಷ-ಅಸೂಯೆಯಂಬ "ಸುಂದರ ಮಹಿಳೆ" ಯ ಭಾರವನ್ನು ಹೆಗಲ ಮೇಲೆಯೇ ಕುಳಿಸಿಕೊಂಡಿರುತ್ತೇವೆ...! ಕಾರಣವೆನೆಂದರೆ ನಮಗೆ ಆ "ಸುಂದರ ಮಹಿಳೆ" ಯ ಭಾರವನ್ನು ಕೆಳಗೆ ಇಳಿಬಿಡುವ ಮನಸ್ಸು ಆ ಹೊತ್ತಿನಲ್ಲಿ ಬಂದಿರುವುದಿಲ್ಲವೇನೋ...!!. ನಮ್ಮ ಮನದಲ್ಲಿರುವ ಆ ದ್ವೇಷ-ಅಸೂಯೆ-ಕೋಪಕಾರಕ ವಸ್ತುವನ್ನ ನಾವು ಇನ್ನೊಂದು ದಡದಲ್ಲಿ ಇಳಿಸಿ ನಮ್ಮ ಜೀವನದ ಪಯಣ ಮುಂದುವರಿಸಿದರೆ ನಮ್ಮ ಮನ ಆ ನಿರುಪಯುಕ್ತ ಭಾರವ ಸುಮ್ಮನೆ ಹೊರುವುದನ್ನ ತಪ್ಪಿಸಬಹುದಲ್ಲವೇ...! ನಿಂದನೆ, ದ್ವೇಷ..., ಅವು ಸಮಯ ಮೀರಿದ ಮೇಲೂ ಮನದಲ್ಲಿ ಪೋಷಿಸುವುದರಿಂದ ಯಾರಿಗೆ ತಾನೇ ಲಾಭ ಹೇಳಿ...! ವಿನ: ಕಾರಣ ತಲೆಬಿಸಿ ಮಾಡಿಕೊಂಡಿದ್ದ ಬಿಟ್ಟು..!!]
ವಿನಯ್ ...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- 2

ನಾವು ನಮ್ಮ ಜೀವನವನ್ನ ಅನುಭವಗಳಿಂದಲೇ ರಚಿಸಿಕೊಳ್ಳುತ್ತೇವೆ....

ಕೂರ್ಮ, ಕಪ್ಪೆ ಮತ್ತು ಒಬ್ಬ ಸುಂದರ ಮಹಿಳೆ... ಈ ಕೆಳಗಿನ ಕಥೆಗಳ ಮೂಲಕ ನಮಗೆ ಜೀವನದ ಪಾಠ ತಿಳಿಸುತ್ತಾರೆ.

ಬನ್ನಿ, ಅವರಲ್ಲಿ ಕೂರ್ಮನ ಕಥೆಯನೊಮ್ಮೆ ಓದೋಣ...


ಕೂರ್ಮನ ಕಥೆ...

ಒಂದು ಕೂರ್ಮ ಪರಿವಾರವು ತಮ್ಮ ಎಲ್ಲಾ ಜನರೊಡಗೂಡಿ ಸಂಚಾರಕ್ಕೆ ಹೊರಟವು. ಬಹಳ ಮಂದ ಸಂಚಾರಿಗಳಾದ ಕೂರ್ಮಗಳು ಹೊರಡುವ ಸಿದ್ದತೆ ಮಾಡಿಕೊಳ್ಳೂವುದಕ್ಕೇ ೭ ವರುಷ ತೆಗೆದುಕೊಂಡವು! ಎಲ್ಲಾ ಸಿದ್ಧತೆಯಾದ ಮೇಲೆ ಕೂರ್ಮ ಪರಿವಾರವು ಸಂಚಾರಕ್ಕೆ ಹೊರಟಿತು. ಅಂತೂ ತಮ್ಮ ಸಂಚಾರದ ಎರಡನೆ ವರ್ಷದಲ್ಲಿ ಕೊನೆಗೂ ಒಂದು ಸೂಕ್ತ ಸ್ಥಳವನ್ನು ಹುಡುಕಿಕೊಂಡವು!!!

ಸುಮಾರು ೬-೭ ತಿಂಗಳು ಸ್ಥಳವನ್ನ ಸ್ವಚ್ಛಗೊಳಿಸಲು, ತಾವು ತಂದಿದ್ದ ಎಲ್ಲಾ ಸಾಮಾನು ಪೆಟ್ಟಿಗೆಯನ್ನು ತೆರೆದಿಡಲು ತಗೆದುಕೊಂಡವು. ಎಲ್ಲ ಜೋಡಿಸಿಡುತ್ತಿದ್ದ ವೇಳೆಯಲ್ಲಿ ತಾವು ಉಪ್ಪಿನ ಪೊಟ್ಟಣವ ತರುವುದನ್ನ ಮರೆತಿದ್ದನ್ನು ಆ ಕೂರ್ಮ ಗುಂಪಿನಲ್ಲಿದ್ದ ಹಿರಿಯ ಕೂರ್ಮನಿಗೆ ಹೊಳೆಯಿತು. ಮತ್ತೇನು..., ತಮ್ಮ ಸಂಚಾರವು ಆ ಉಪ್ಪಿನ ಪೊಟ್ಟಣವಿಲ್ಲದೆ ಏನು ಉಪಯೋಗವಿಲ್ಲ ಎಂದು ಅರಿತ ಆ ಪರಿವಾರವು ಬಹು ದೀರ್ಘ ಸಮಾಲೋಚನೆ ನೆಡೆಸಿ ತಮ್ಮ ಕುಟುಂಬದಲ್ಲಿದ್ದ ಸಣ್ಣ ಕೂರ್ಮ ಸದಸ್ಯನಿಗೆ ಉಪ್ಪಿನ ಪೊಟ್ಟಣವನ್ನು ತರುವ ಜವಬ್ದಾರಿಯನ್ನು ಕೊಡಲಾಯಿತು. ಆ ಸಣ್ಣ ಕೂರ್ಮನು ಆ ಪರಿವಾರದಲ್ಲೇ ಬಹುಬೇಗ ನೆಡೆಯಬಲ್ಲವನಾಗಿದ್ದರೂ ಹ್ಯಾಪು ಮೋರೆ ಹಾಕಿಕೊಂಡು, ಕಣ್ಣು ತುಂಬ ನೀರು ತುಂಬಿಸಿಕೊಂಡು, ತನ್ನ ಚಿಪ್ಪಿನೊಳಗೆ ಮುದುರಿಕೊಂಡನು. ನಂತರ ಎಲ್ಲರು ಪುಸುಲಾಯಿಸಿದ ಮೇಲೆ ಒಂದು ಷರತ್ತಿನ ಮೇಲೆ ಹೋಗಿ ಬರಲು ಆ ಸಣ್ಣ ಕೂರ್ಮನು ಒಪ್ಪಿಕೊಂಡನು. ಅದೇನೆಂದರೆ: ಅವನು ಹಿಂದಿರುಗಿ ಬರುವವರೆಗೂ ಯಾರು ಏನನ್ನು ತಿನ್ನಬಾರದು...! ಕೊನೆಗೂ ಎಲ್ಲರು ಈ ಷರತ್ತಿಗೆ ಒಪ್ಪಿದ ಮೇಲೆ ಆ ಸಣ್ಣ ಕೂರ್ಮನು ಅಲ್ಲಿಂದ ಉಪ್ಪು ತರಲು ಹೊರಟನು.

ಮೂರು ವರುಷ, ೪.., ೫.., ೬.., ಆ ಸಣ್ಣ ಕೂರ್ಮನ ಸುಳಿವೇ ಇಲ್ಲ!!! ೭ನೇ ವರ್ಷ ಅಗುತ್ತಿದ್ದಂತೆ ಕೂರ್ಮ ಪರಿವಾರದ ಹಿರಿಯ ಸದಸ್ಯನು ಹಸಿವು ತಾಳಲಾರದೇ, ಅಲ್ಲಿದ್ದ ಉಳಿದ ಸದಸ್ಯರಿಗೆ ತಾನು ಈಗ ಅಹಾರವನ್ನು ತಿನ್ನುವುದಾಗಿ ಹೇಳಿ, ಅಲ್ಲಿದ್ದ ಆಹಾರದ ಪೊಟ್ಟಣವನ್ನು ತೆರೆಯಲು, ಧಟ್ಟನೆ ಒಂದು ಮರದ ಹಿಂಬದಿಯಲ್ಲಿದ್ದ ಆ ಸಣ್ಣ ಕೂರ್ಮನು ಕಿರುಚುತ್ತ ಹೊರಬಂದು: "ನೋಡಿ, ನಾ ಹೇಳ್ಲಿಲ್ವೇನು! ನೀವ್ಯಾರೂ ನನಗೆ ಕಾಯೋದಿಲ್ಲಾ ಅಂತಾ...!. ಹೋಗಿ ನಾನು ಉಪ್ಪು ತರಲು ಹೋಗುವುದಿಲ್ಲ..." ಅಂತ ಹೇಳಿತು. ಆಗ ತಲೆ ತಿರುಗಿ ಬೀಳಬೇಕಾದ ಸ್ಥಿತಿ ಉಳಿದ ಕೂರ್ಮಗಳದಾಗಿತ್ತು!!


[ನೀತಿ: ನಮ್ಮಲ್ಲಿ ಅನೇಕರು ಇತರರು ಸಹ ನಮ್ಮಂತೆ ಇರಬೇಕು...ನಾವು ಬಯಸಿದಂತೆ ಇರಬೇಕು/ಕೇಳಬೇಕು ಎನ್ನುವ ಭಾರದಲ್ಲಿ ತಮ್ಮ ಸಮಯ/ಸಹನೆಯನ್ನು ವಿನ: ಕಾರಣ ವ್ಯರ್ಥ ಮಾಡಿಕೊಳ್ಳುತ್ತಿರುತ್ತಾರೆ. ಉಪಯೋಗವಿಲ್ಲದ ಕಾರ್ಯವಾದ ಈ ಬೇರೆಯವರ ಬಗೆಗಿನ ಆಲೋಚನೆ ನಮ್ಮ ಬಗ್ಗೆ ಸ್ವತ: ನಾವೇ ಮಾಡಿಕೊಂಡರೆ ಸ್ವಯಂ-ಉದ್ಧಾರವಾದರೂ ಆಗಬಹುದಲ್ಲವೇ...?]
ವಿನಯ್ ...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೧

ನೆಬ್ರಸ್ಕ ಊರಿನ ರೈತರೊಬ್ಬರು ಆ ಊರಿನಲ್ಲೇ ಪ್ರಸಿದ್ಧ ಬೆಳೆಗಾರರಾಗಿದ್ದರು. ಅವರು ತಮ್ಮ ಹೊಲದಲ್ಲಿ ಬೆಳೆಯುತ್ತಿದ್ದ ಉತ್ತಮ ಬೆಳೆಗೆ ಹಲವು ವರ್ಷಗಳಿಂದ ಪ್ರಶಸ್ತಿ ಸಹ ಬರುತಿತ್ತು.

ಒಮ್ಮೆ ಒಬ್ಬ ಪತ್ರಕರ್ತರು ಅವರ ಬೇಸಾಯದ ಯಶಸ್ಸಿನ ಹಿಂದಿನ ಕಾರಣ ತಿಳಿಯಲು ಸಂದರ್ಶಿಸಿದಾಗ ಒಂದು ಕೂತುಹಲಕಾರಿ ಅಂಶ ಆ ಪತ್ರಕರ್ತರಿಗೆ ತಿಳಿಯಿತು... ಅದೆನೆಂದರೆ ಈ ರೈತರು ತನ್ನ ಅಕ್ಕ ಪಕ್ಕದ ರೈತರೊಡನೆ ಆ ಬೆಳೆಯ ಉತ್ತಮ ಕಾಳುಗಳನ್ನು ಹಂಚಿಕೊಳ್ಳುತ್ತಿದದ್ದು....!

"ನೀವು ನಿಮ್ಮ ಉತ್ತಮ ಕಾಳುಗಳನ್ನು ಅವರೊಡನೆ ಏನೋ ಹಂಚಿಕೊಳ್ಳುತ್ತಿದ್ದೀರಿ, ಆದರೆ ಅವರು ನಿಮ್ಮ ಪ್ರತಿಸ್ಪರ್ಧಿಗಳಾಗಿ ನಿಮ್ಮೆದುರಿಗೆ ಪ್ರತಿ ವರ್ಷ ನಿಲ್ಲುತ್ತಾರಲ್ಲಾ...! ಅದಕ್ಕೆ ನೀವೇನು ಹೇಳುತ್ತೀರಿ...?" ಎಂದು ಆ ಪತ್ರಕರ್ತರು ಕೇಳಲು, ಇವರು:

"ಸರ್, ಅದೇಕೆ ಹಂಗ್ ಹೇಳ್ತಿದ್ದೀರಿ...!, ನಿಮಗೆ ಗೊತ್ತಿಲ್ಲವೇ, ಸಾಮಾನ್ಯವಾಗಿ ತೆನೆ ಬೆಳೆಯುವಾಗ ತನ್ನ ಪರಾಗವನ್ನು ಗಾಳಿಯಲ್ಲಿ ತೇಲಿಬಿಡುತ್ತದೆ. ಅದು ಹೊಲದಿಂದ ಹೊಲಕ್ಕೆ ಹಾರುತ್ತ ತೇಲುತ್ತಿರುತ್ತದೆ. ನನ್ನ ಪಕ್ಕದ ಹೊಲದಲ್ಲಿರುವ ರೈತರು ಕಡಿಮೆ ಗುಣಮಟ್ಟದ ಬೇಜ ನೆಟ್ಟರೆ ಅಲ್ಲಿಂದ ಹಾರಿ ಬರುವ ಪರಾಗವು ನನ್ನ ಫಸಲಿನ ಬೆಳೆಯ ಗುಣಮಟ್ಟವನ್ನ ಕಡಿಮೆ ಮಾಡುವುದಿಲ್ಲವೇ? ಅದಕ್ಕೆ ನಾನು ಉತ್ತಮ ಮಟ್ಟದ ಬೆಳೆ ಬೆಳೆಯಬೇಕೆಂದರೆ ನನ್ನ ಅಕ್ಕ ಪಕ್ಕ ಹೊಲದಲ್ಲಿರುವ ರೈತರು ಸಹ ನನ್ನಂತೆ ಉತ್ತಮ ಬೆಳೆ ಬೆಳೆಯಲೇಬೇಕು..."

... ಆ ರೈತನಿಗೆ ಸಹಜೀವನದ ಮಹತ್ವ ಗೊತ್ತಿತ್ತು. ಅದಕ್ಕೆ ಅವನು ತನ್ನ ಬೆಳೆ ಉತ್ತಮಗೊಳ್ಳಲು ತನ್ನ ಪಕ್ಕದ ಹೊಲದಲ್ಲಿರುವ ಇತರ ರೈತ ಬಾಂಧವರ ಬೆಳೆಯು ಉತ್ತಮಮಟ್ಟದಾಗಿರುಬೇಕು ಎಂದು ಅಶಿಸುತ್ತಿದ್ದನು...

....ಹಾಗೆಯೇ ಅದನ್ನ ನಮ್ಮ ಬಾಳಿಗೆ ಅನ್ವಯಿಸುದಾದರೆ, ನಮ್ಮ ನೆಮ್ಮದಿ/ನಮ್ಮ ಸಂತೋಷ ನಮ್ಮ ನೆರೆ ಹೊರೆಯವರ/ಮಿತ್ರರು-ಬಾಂಧವರ ಜೊತೆಗಿರುವ ಉತ್ತಮ ಬಾಂಧವ್ಯದಲ್ಲಿದೆ. ನಾವು ನಮ್ಮ ಸಂತೋಷಕ್ಕೆ ಎಷ್ಟು ಪ್ರಯತ್ನಪಡುತ್ತೇವೇಯೋ ಅಷ್ಟೇ ನಾವು ಇವರ ನಡುವೆಯೂ ಸಹ ಸಂತಸ ತರಲಿಕ್ಕೆ ಪ್ರಯತ್ನಪಡಲೇಬೇಕು. ಎಕೆಂದರೆ ಜೀವನದ ಮಹತ್ವವೇ ಅದು. ಎಷ್ಟು ದಿನ ನಾವು ಬಾಳಿ ಬದುಕಿದೆವು ಎನ್ನುವುದಕ್ಕಿಂತ ನಮ್ಮ ಜೀವನ ಎಷ್ಟು ಜನರನ್ನು ತಲುಪಿತು ಎಂಬುದರಲ್ಲಿ ಅರ್ಥ ಇದೆ. ನಮ್ಮ ಸಂತೋಷದೊಡನೆ ನಮ್ಮ ಜೊತೆ ಬಾಳುತ್ತಿರುವ ಇತರರ ಸಂತೋಷಕ್ಕೂ ನಾವು ಪ್ರಯತ್ನ ಪಟ್ಟರೆ ಅದಕ್ಕಿಂತ ಉತ್ತಮವಾದ ಕಾರ್ಯ ಯಾವುದಿದೆ ಹೇಳಿ....?


ನೀತಿ ಇಷ್ಟೇ: ನಾವು ಸಂತೋಷದಿಂದಿರಬೇಕೆಂದರೆ ನಾವು ನಮ್ಮ ಪ್ರೀತಿಪಾತ್ರರಲ್ಲೂ ಸಹ ಸಂತೋಷವನ್ನು ಬಯಸಬೇಕು....
ವಿನಯ್ ...
ಹನಿಯಲಿ ಮೂಡಿದೆ ಒಂದು ಕವಿತೆ,

ಚಿಗುರೆಲೆಯ ಮೇಲೆ....

ಮರಿ ಸೂರ್ಯನಂತೆ ಪಳ-ಪಳನೆ ಹೊಳೆಯುತಿದೆ,

ತಾವರೆ ಪುಷ್ಪದ ಮೇಲೆ....

ನಮ್ಮ ಮನೆಯ ಮಗುವಿನ ಮುಗ್ಧ ನಗುವಿನಲ್ಲಿ,

ಸಣ್ಣಗೆ ಅಡಗಿ ಕುಳಿತಿದೆ....

ಅಣ್ಣನ ತುಂಬು ಪ್ರೀತಿಯಲ್ಲಿ,

ನಿಶ್ಕಲ್ಮಶ ವಾಗಿ ಬೆಳಗುತಿದೆ....

ತಂದೆ-ತಾಯಿಯ ಆರೈಕೆಯಲ್ಲಿ,

ತೇಲಿ ಸಾಗುತಿದೆ....

ಗೆಳೆಯರ ಜೀವದ ಗೆಳೆತನದಲ್ಲಿ,

ಬಂಧವಾಗಿ ಕೂಡಿದೆ....

ನಲ್ಲೆಯ ಸವಿ ಪಿಸುಮಾತಿನಲ್ಲಿ,

ಹೃದಯದ ವೀಣೆ ಮೀಟುತಿದೆ....

ಅಂತೂ ಈ ಎಲ್ಲಾ ವಿಶ್ವವೇ,

ಒಂದು ಸುಂದರ ಕವಿತೆಯಂತೆ ಅನಿಸುತಿದೆ....
ವಿನಯ್ ...
ಬರೆಯದೆ ಮೂಡಿದ ಕವಿತೆಯೊಂದು

ಮನದಲ್ಲಿ ಮನೆ ಮಾಡಿ ಕೂತಿದೆ....

ಭಾವನೆಗಳ ತಂತಿ ಮೇಟುತ

ಅಕ್ಷರವಾಗಿ ಹೊರ ಬರಲು ಕಾದಿದೆ....

ಸ್ಪೂರ್ತಿಯ ಸೆಲೆಯೊಂದು ಎದೆಯಾಳದಲ್ಲಿ ಮೊಳೆತು

ಕವನದ ಸಾಲಾಗಿ ಹುಟ್ಟಲು ಹೊರಟಿದೆ....

ನನಗೇನು ತಿಳಿಯದು ನನ ಗೆಳೆಯ.... ನಿನ್ನ ಮಧುರ ಹೊಗುಟ್ಟುವಿಕೆಗೆ ಈ ನನ್ನ ಹೃದಯ ಕಾದಿದೆ....
ವಿನಯ್ ...
ನನ್ನ ಪ್ರೇಯಸಿಗೆ..,

ನಿನ್ನ ಕಣ್ಣಿನಲಿ ಕಾಣುವುದು ಏನಗೆ,
ಆ ಸುಂದರ ಹೊಳಪಿನ ಕಾಂತಿ...
ಕಣ್ಣ್ ಮುಚ್ಚಿ ಕುಳಿತರೂ ಕೂಡ,
ಇದ್ದೇ ಇರುವುದು ನಿನ್ನ ಇರುವಿಕೆಯ ಅನುಭೂತಿ...
ಈ ಇಹಲೋಕದ ಅಷ್ಟೈಶ್ವರ್ಯವೂ ಬೇಡ,
ನಿನ್ನ ನೋಟವೊಂದೇ ಸಾಕು ಏನಗೆ...
ಸದಾ ಇರುವುದು ನನ್ನ ನಿಷ್ಕಲ್ಮಷ ಪ್ರೀತಿ,
ಕೊಂಚವು ಕಮ್ಮಿಯಾಗದೇ ನಿನ್ನೆಡೆಗೆ...

ನಿನ್ನ ದೈವಂಶ ಕಣ್ಣುಗಳ
ಆ ದಿವ್ಯವಾದ ಬೆಳಕು...
ಬೇಡುವುದು ನನ್ನ ಹ್ರದಯ,
ಸದ ತುಂಬಿರಲಿ ಎಂದೆಂದು...
ನೀ ಸ್ಪರ್ಶಿಸು ಎನ್ನ ಕೊನೆಬಾರಿಗೊಮ್ಮೆ,
ವಿನಯ್ ...
ದುಂಬಿಯ ತಳಮಳವು ಹೂವಿಗೇಕೆ ತಿಳಿಯದು,
ದುಂಬಿಯ ತಳಮಳವು ಹೂವಿಗೇಕೆ ತಿಳಿಯದು....?
ಹೂ ತಿಳಿಯದಿದ್ದರೆ ಏನಂತೆ, ಇದ್ದಾನಲ್ಲಾ ಋತುಗಳ ರಾಜ ವಸಂತ,
ನಾವ್ ಅವನಿಗೆ ಹೇಳಿ ಕಳಿಸೋಣ... ದುಂಬಿಯ ಮನದ ಆಸೆ,
-- ಹೇಳಲಿಕ್ಕೆ ಆ ಚಂದದ ಹೂವಿಗೆ....!

ಅರ್ಪಣೆಃ ನನ್ನ ಮಿತ್ರನಿಗೆ
ವಿನಯ್ ...
ಅಂದು ನೀ ಇದ್ದಾಗ ನನ್ ಎದುರಲ್ಲಿ,

ಜೀವನವಾಗಿತ್ತು ಸುಂದರ ಕನಸ್ಸು, ಉಲ್ಲಸದ ಸಾಗರ....

ನನಗೆ ಜೀವನವೆನಿಸುತಿತ್ತು ಧನ್ಯ....

ಅದರೆ ಇಂದು ಹೇಳದೆ ನೀ ಬಿಟ್ಟು ಹೋದ ಮೇಲೆ....

ಎಕೆ ಚೂರಾಗಿದೆ ಒಡೆದು ಮನಸ್ಸು, ಜೀವನವೆಲ್ಲಾ....???
ವಿನಯ್ ...
ಸೀತೆಗೂ ಶಾಕುಂತಲೆಗೂ ಸಿಕ್ಕಿತೇನು

ಪ್ರೀತಿಯಿಂದ??

ಪಡುವಂತಾಯಿತೇ ಇಲ್ಲದ ನೋವಿನ ಉರಿ...

ಪತಿ ರಾಮ - ದ್ಯುಷಂತರು ಏನು ಕಳೆದರು ಇದರಿಂದ?

ಕಳೆದುದು ಎಲ್ಲಾ ಈ ಎರಡು ಹೆಣ್ಣಿಗೆ...

ಪತಿಯ ಮಾತನ್ನು ಮನ್ನಿಸಿ ನೆಡೆದಳು

ಒಬ್ಬಳು,

ಪತಿಯು ಬಿಟ್ಟು ಹೋದ ಪ್ರೇಮದ ನೆನಪಲಿ ಕಾಲವ ಕಳೆದಳು

ಮತ್ತೊಬ್ಬಳು...

ಪತಿಯ ಏಲ್ಲಾ ಕಷ್ಟಗಳಿಗೆ ಹೆಗಲಾದಳು ಒಬ್ಬಳು,

ಪತಿಯ ಪ್ರೇಮಕ್ಕಾಗಿ ಹಾತೊರೆದಳು ಇನ್ನೊಬ್ಬಳು...

ಅಂತು ಕೊನೆ ಬಂದಾಗ, ಒಳಪಟ್ಟರು ಇಬ್ಬರು ಕಾಲದ ಸತ್ವಪರೀಕ್ಷೆಗೆ,

ಪರೀಕ್ಷೆಯೇನೋ ಗೆದ್ದು ಬಂದರು, ಅದರೂ ಏನಾಯಿತು ಇದರಿಂದ ಅವರ ಪತಿದೇವರಿಗೆ!!!

ಒಬ್ಬಳ ಪತಿ ತನ್ನ ಮರೆವನ್ನು ಬಿಟ್ಟು, ಬಂದು ಒಪ್ಪಿದ ಮರಳಿ ಇವಳನ್ನು...

ಅದರೆ... ಮತ್ತೊಬ್ಬಳ ಪತಿ, ಇನ್ನೊಮ್ಮೆ ಇವಳನ್ನು ಬಿಟ್ಟನು... ಹೋಗಲು ಕಾಡಿಗೆ,

ಮತ್ತೊಬ್ಬನ ಇಲ್ಲ-ಸಲ್ಲದ ಮಾತು ಕೇಳಿ....!

ಹೋಗಿ ಸೇರಿದಳೊಬ್ಬಳು ತನ್ನ ಪತಿಯ ತೋಳ ತಕ್ಕೆಯಲ್ಲಿ,

ಮತ್ತೊಬ್ಬಳು ಸೇರಿದಳು ಬೇಸರಹೊಂದಿ ತನ್ನ ತಾಯಿ ಭೂದೇವಿಯ ಒಡಲಿನಲ್ಲಿ...

ಹೀಗೆ ಕೊನೆಯಾಯಿತು ಇಬ್ಬರ ಕಥೆ,

ಒಬ್ಬಳಿಗೆ ದಕ್ಕಿತು ಪ್ರೇಮ...,

ಮತ್ತೊಬ್ಬಳಿಗೆ ದಕ್ಕಿ, ನಂತರ ಇಲ್ಲದೆ ದೊರವಾಯಿತು ಪ್ರೇಮ...!
ವಿನಯ್ ...
ಮನಸ್ಸೆಂಬ ಕೊಳದಲ್ಲಿ ಬಿದ್ದಿದೆ,

ಒಂದು ಸಣ್ಣ ಹನಿ...!

ಆ ಹನಿಯೆಂಬುದು ಸಂಶಯ, ಖುಷಿ, ಅಳು, ನಗು ಎಂಬ ಚಿಕ್ಕ ಹನಿ...!

ಹನಿ ಎಷ್ಟೇ ಗಾತ್ರವಿದ್ದರೂ ಸರಿ,

ಬಿದ್ದ ಕೊಳದಲಿ ಮೂಡದೆ ಬಿಡದು ಅಲೆಗಳ ಸುರಳಿ...

ಸುರಳಿ ಅದಷ್ಟು ದೊಡ್ಡದು,

ಕಲಕುವುದು ಕೊಳದ ನೀರು ಹೆಚ್ಚು-ಹೆಚ್ಚು!

ಹಾಗೇ ನಮ್ಮ ಮನದ ಕೊಳದಲಿ ಬಿದ್ದರೆ ದುಃಖದ/ಕಷ್ಟದ ಹನಿ...

ಆಗ ಏಳುವವವು ನೋವಿನ ಬ್ರುಹತ್ ಅಲೆಗಳು ಏತ್ತರದಿ ಏರಿ..ಏರಿ.!

ಇಲ್ಲದೆ ಕೊರಗುವುದು ಈ ಮನಸ್ಸು...ಸಲ್ಲದ ನೋವಿನ ದುಗದಿಯಲಿ.

ಆದರೂ...

ಎಂದಾದರೂ ಇರದಿರುವುದೇ ಈ ಬಾಳಿನಲ್ಲಿ ಸವಿ ಕ್ಷಣದ ಸಿಹಿ...

ಕೆಲವೇ ಹನಿ ಬಿದ್ದರೂ ಸಾಕು...

ಅದು ಮಾಡುವುದು ಮನಸ್ಸನ್ನ ತಿಳಿ-ತಿಳಿ....
ವಿನಯ್ ...
ಬರೆದೆ ನಾನು ಒಂದು ಕವಿತೆ,

ನನ್ನ ಹುಡುಗಿಯ ಹೆಸರಿಗೆ...!

ಹೆಸರೆನೆಂದು ತಲೆಗೆ ತಿಳಿಯದೆ,

ಬರೆದೆ ಅವಳ ಮನಸ್ಸಿಗೆ...

ಅವಳ ಮನಸ್ಸಿನ ಭಾವವಾ ಅರಿಯದೆ,

ಬರೆದೆ ಅವಳ ಕಣ್ಣಿಗೆ...

ಅವಳ ಕಣ್ಣನ ದೋಷವ ತಿಳಿದು,

ಬರೆದೆ ಅವಳ ರೂಪಕೆ...

ಅವಳ ರೂಪ ಕಪ್ಪೆಂದು ಅರಿತು,

ಬರೆದೆ ಅವಳ ನಗುವಿಗೆ...

ಅವಳ ನಗು ಬಹಳ ಜುಗ್ಗವೆಂದು ನೆನೆದು,

ಬರೆಯಲು ಹೊರಟೆ, ತಲೆಕೆರೆದು ಯೋಚಿಸುತ ಮತ್ತೊಂದಿಗೆ...!!!

**************

ಹೇಗೆ ಬರೆದು, ಒಡೆದು, ಇನ್ನೊಮ್ಮೆ ಬರೆದು ಹಾಕಿದ ಸಾಲುಗಳೇ ಆಯ್ತು ಹಲವಾರು...!

ನಂತರ ಪತ್ರದ ರೂಪವೇ ಚೆನ್ನಿಲ್ಲವೆಂದು ತಿಳಿದು,

ಹರಿದು ಹಾಕಿ, ಮಾಡಿದೆ ಅದನ.... ಕಸದ ಬುಟ್ಟಿಯ ಪಾಲು....!!!
ವಿನಯ್ ...
ಪಾತರಗತ್ತಿಯು ಹಾರುತಿದೆ,

ಹೂವಿಂದ ಹೂವಿನ ಮೇಲೆ.........

ಬೀಸುತ ರೆಕ್ಕೆಯ, ಕಾಣುತ ಪುಷ್ಪವ,

ಸವಿಯಲು ಮಕರಂದವ ಅದು ಹೊರಟಿದೆ....

ಹೂವು ಯಾವುದಾದರೇನು, ಅದಕೆ ಬೇಕು ಕೇವಲ ಮಕರಂದ,

ಹಾಗೇ ಹೂವಿಗೆ ಕೇವಲ ಸಾಕು ಪತರಗತ್ತಿ ತರುವ ಪರಾಗದ ಸವಿಮಿಲನದ ಅನುಬಂಧ....

ಅಂತು ಒಂದು ಪಾತರ, ಮತ್ತೊಂದು ಹೊವಿನ ಮಧ್ಯ ಇದೆ..,

ಕಾಣದ ಒಂದು ಮಧುರ ಮಿಲನ,

ತಾವಿಬ್ಬರು ಸ್ರುಷ್ಟಿಯಲ್ಲಿ ಬೇರೆ-ಬೇರೆಯಾದರು ಸಹ,

ಒಬ್ಬರ ಬಿಟ್ಟರೆ ಇನ್ನೊಬ್ಬರಿಗಿರದು ಜೀವನ....
ವಿನಯ್ ...
ಬೆಳೆದ ಮಗನೊಬ್ಬನು

ತನ್ನ ಅಮ್ಮನಿಗೆ ಪತ್ರ ಬರೆದು ಕೇಳಲು...:

ನಾ ಮಾಡಿದೆ ಆ ಕೆಲಸ,

ಅದಕಷ್ಟು ರುಪಾಯಿ...

ನಾ ಮಾಡಿದೆ ಈ ಕೆಲಸ,

ಅದಕಿಷ್ಟು ರುಪಾಯಿ...

ನಾ ತಂದೆ ಆ ಕಾಯಿ,

ಅದಕಷ್ಟು ರುಪಾಯಿ...

ನಾ ತಂದೆ ಈ ವಸ್ತು,

ಅದಕ್ಕಾಯಿತಿಷ್ಟು ರುಪಾಯಿ...

ಹೇಳು ನೀ ಕಳಿಸಿ ಕೊಡುವೆಯಾ ನನಗೆ ರುಪಾಯಿ...?

.............................

ಅದಕ್ಕೆ ಬರೆದಳು ಅಮ್ಮ ಉತ್ತರ....:

ನಿನ್ನ ಹೊತ್ತಾ ಆ ಒಂಬತ್ತು ತಿಂಗಳಿಗೆ ಕೊಡುವೆಯಾ ರುಪಾಯಿ...?

ನಿನ್ನ ಸೌಕ್ಯಕೋಸ್ಕರ ದೇವರ ಬೇಡಿದನಲ್ಲಾ,

ಕೊಡುವೆಯಾ ಅದಕೆ ರುಪಾಯಿ...?

ನಿನ್ನ ಏಲ್ಲಾ ಕಷ್ಟಗಳಿಗೆ ಸ್ಪಂದಿಸಿದೆನ್ನಲ್ಲಾ... ಕೊಡುವೆಯಾ

ಅದಕೆ ರುಪಾಯಿ...?

ಊಟ - ಬಟ್ಟೆ, ನಿನಗೊಂದು ಅಸ್ತಿತ್ವ ಕೊಟ್ಟನಲ್ಲಾ,

ಕೊಡುವೆಯಾ ಅದಕೆ ರುಪಾಯಿ...?

ಅದೆಲ್ಲ ಬಿಡು, ನನ್ನ ಅಷ್ಟು ಪ್ರೀತಿಗೆ ಸರಿಯಾಗಿ ಕಟ್ಟಲು ಸಾಧ್Yಅವೇ ನಿನಗೆ ರುಪಾಯಿ...!!!

..............................

ಓದಿ ಮುಗಿಸಿದ ಮಗನಿಗೆ ತಿಳಿಯಿತು ಒಂದು ನಿಜ ಉತ್ತರ...

ಹೋಗಿ ಕಣ್ಣೇರು ಹರಿಸುತಾ ಹೇಳಿದ ಅವನು ಈ ತರಾ...

"ನಿನ್ನ ತುಂಬು ಪ್ರೀತಿಯ ಕಾಣದ ಈ ಕುರುಡು ಕಣ್ಣನ ಕ್ಷಮಿಸು,

ನಾ ಮಾಡಿದ ತಪ್ಪನಾ.... "

ಬೇಸರ ಪಡದೆ ಕ್ಷಮಿಸು ನನ್ನ,

ಓ ನನ್ನ ಮುದ್ದಿನ ಅಮ್ಮ, ನಿನ್ನ ಪ್ರೀತಿ ಇರಲಿ...

ನನ್ನ ಮೇಲೆ ಸದಾ ನಿರಂತರ...
ವಿನಯ್ ...
ನನಗೊಬ್ಬಳು ಗೆಳತಿ ಇದ್ದಳು, ನಮ್ಮಿಬ್ಬರದು ತುಂಬ ಒಳ್ಳೆಯ ಗೆಳೆತನ...


ಒಮ್ಮೆ ನಾನು ಅವಳು ಒಂದು ಸರೋವರದ ಹತ್ತಿರ ಕುಳಿತಿದ್ದಾಗ ಅವಳು ತನ್ನ ಬೊಗಸೆಯಲ್ಲಿ ನೀರು ಹಿಡಿದು ನನ್ನೆಡೆಗೆ ತೋರಿಸಿ ಹೀಗಂದಳು:


"ನಿ ಈ ನೀರನ್ನು ಸೂಕ್ಷ್ಮವಾಗಿ ಗಮನಿಸು..., ಇದು ಪ್ರೀತಿಯನ್ನು ಸೂಚಿಸುತ್ತದೆ.."


ಆದರೆ ನಾ ಅದನ್ನು ಹೀಗೆ ವಿಶ್ಲೇಷಿಸಿದೆ:


"ನಾವು ನೀರನ್ನು ಬೊಗಸೆಯಲ್ಲಿ ಹಗುರವಾಗಿ ಇಟ್ಟು ನೀರನ್ನು ತನ್ನ ಪಾಡಿಗೆ ಇರಲು ಬಿಟ್ಟರೆ ಅದು ಹೆಚ್ಚು ಹೊರಹೋಗದೆ ಅಲ್ಲೇ ಇರುತ್ತದೆ,


ಅದೇ ನಾವು ಬೊಗಸೆಯಲ್ಲಿನ ನೀರನ್ನು ಬಿಗಿಯಾಗಿ ಹಿಡಿಯಲು ಹೋಗಿ ನಮ್ಮ ಹತೋಟಿಯಲ್ಲಿ ಇಡಲು ಪ್ರಯತ್ನ ಪಟ್ಟರೆ ಅದು(ನೀರು) ಕೈ ಬದಿಯಲ್ಲಿ ಅದಷ್ಟು ಹೊರಚಲ್ಲಿ ಹೋಗಲು ಪ್ರಯತ್ನಿಸುತ್ತದೆ.


ಇದೇ ನನ್ನ ಪ್ರಕಾರ ಜನರು ಪರಸ್ಪರ ಭೇಟಿಯಾದಾಗ/ನೋಡಿದಾಗ ಮಾಡುವ ದೊಡ್ಡ ತಪ್ಪು...:


ಪ್ರೀತಿ: ತಮ್ಮ ವಶಕ್ಕೆ ಪಡೆಯಲು/ತಮಗೆ ಆಗಲಿ ಎಂದು ಬಯಸುವುದು, ಅವರ ಆಕಾಂಕ್ಷೆ, ಅವರ ಬಯಕೆ.... ಬೊಗಸೆಯಲ್ಲಿನ ನೀರು ಕೈಯಿಂದ ಚಲ್ಲಿ ಹೊರಹೋಗುತ್ತಿರುವ ಹಾಗೆ....

ಪ್ರೀತಿಯೂ ಅದೇ ತರಹ..., ಅದು ಎಂದೆಂದೂ ಸ್ವತಂತ್ರ... ನಮಗೆ ಅದರ ಗುಣವನ್ನು ಎಂದೂ ಬದಲಾಯಿಸಲಾಗುವುದಿಲ್ಲ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದೀರಾ ಅಂದರೆ ನೀವು ಅವರನ್ನು ಅದಷ್ಟು ಮುಕ್ತವಾಗಿ/ಸ್ವತಂತ್ರವಾಗಿ ಇರಲು ಬಿಡಿ...


ನಿಮ್ಮಿಂದಾದಷ್ಟು ಅವರಿಗೆ ಕೊಡಿ/ಸಹಾಯ ಮಾಡಿ.., ಅದರೆ ಅವರಿಂದ ಹೆಚ್ಚು ಬಯಸಬೇಡಿ....


ಅವರಿಗೆ ಸಲಹೆ ನೀಡಿ.., ಅದರೆ ಅವರ ಮೇಲೆ ಅಧಿಕಾರ ತೋರಿಸಬೇಡಿ....


ಕೇಳಿ.., ಅದರೆ ಬೇಡ ಬೇಡಿ...


ಇದು ಕೇಳುವುದಕ್ಕೆ/ಹೇಳುವುದಕ್ಕೆ ಸುಲಭವನಿಸಬಹುದು... ಅದರೆ ಪ್ರಯತ್ನ ಪಟ್ಟು ಅನುಸರಿಸಲು ಹೊರಟರೆ ನಿಮ್ಮ ಜೀವಮಾನವೇ ಸಾಕಾಗದಿರಬಹುದು... ಅದರೆ ಇದೇ ನಿಜವಾದ ಪ್ರೀತಿಯ ಗುಣ ಲಕ್ಷಣ... ಇದನ್ನ ನೀವು ಅನುಭವಿಸಬೇಕಂದರೆ ನೀವು ನಿಮ್ಮ ಪ್ರೀತಿ ಪಾತ್ರರಲ್ಲಿ ಹೆಚ್ಚನ್ನು ಬಯಸಬಾರದು.


ನಿಜ ಪ್ರೀತಿಗೆ ನಿಮ್ಮ ನಿಶ್ಕಲ್ಮಷ ಹೃದಯ, ನೀವು ತೋರುವ ಆ ಬೆಚ್ಚಗಿನ ಆರೈಕೆಯಷ್ಟೇ ಸಾಕು.., ಎಲ್ಲರ ಹೃದಯ ಗೆಲ್ಲಲು..."


-------------------******------------------------


--- ಇದು ಸ್ವಾಮಿ ವಿವೇಕಾನಂದರು ಹೇಳಿದ ಒಂದು ಸುಂದರವಾದ ಕಥೆ... ನಮ್ಮ ಬಾಳಿಗೆ ನಿಜವಾದ ದಾರಿದೀಪ. ಕಲ್ಕತ್ತ ದಲ್ಲಿನ ಒಂದು ಸಂಪ್ರದಾಯಸ್ಥ ಕಾಯಾಸ್ತ ಕುಟುಂಬದಲ್ಲಿ ೧೨ ಜನವರಿ ೧೮೬೩ ರಂದು ಹುಟ್ಟಿದ ಸ್ವಾಮಿ ವಿವೇಕಾನಂದರು ತಮ್ಮ ಅತಿ ಕಡಿಮೆ ಜೀವಿತಾವಧಿಯಲ್ಲಿ ಮಾಡಿದ ಕಾರ್ಯ ಅವರನ್ನು ಇಂದೂ ಸಹ ಭಾರತದ ಶ್ರೇಷ್ಠ ಪುತ್ರರಲ್ಲಿ ಒಬ್ಬರೆಂದು ಪೂಜಿಸಲಾಗುತ್ತದೆ. ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಅವರು ವೇದಗಳ ಅಧ್ಯಯನ ಮಾಡಿ, ದೇಶದ ಉದ್ದಗಲಕ್ಕೂ ಸುತ್ತಿ, ನಮ್ಮ ದೇಶದ ಪರಮೋತ್ತಮ ಪ್ರತಿನಿಧಿಯಾಗಿ ೧೮೯೩ ರಲ್ಲಿ ನೆಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ವೇದಾಂತ, ಯೋಗ ಮತ್ತು ಹಿಂದುತ್ವದ ಬಗ್ಗೆ ಅಮೇರಿಕದಲ್ಲಿ ಪ್ರವಚನ ಮತ್ತು ಭಾಷಣಗಳನ್ನ ಮಾಡಿದರು. ೧೮೯೭ ರಲ್ಲಿ ಅವರು ಸ್ಥಾಪಿಸಿದ "ರಾಮಕೃಷ್ಣ ಮಠ" ಮತ್ತು "ರಾಮಕೃಷ್ಣ ಮಿಷನ್" ಇಂದೂ ಸಹ ವಿಶ್ವದ ಉದ್ದಗಲಕ್ಕೂ ಭಾರತ ಧರ್ಮದ ಐತಿಹ್ಯದ ಬಗ್ಗೆ ಪ್ರಚಾರ ಮಾಡುತ್ತಿದೆ, ಲಕ್ಷಾಂತರ ಅನುಯಾಯಿಗಳನ್ನು ಪಡೆದಿದೆ...


12 ಜನವರಿ, ಅಂದು ಅವರ ೧೪೭ ನೇ ಜನ್ಮದಿನ... ಭಾರತ ಕಂಡ ಈ ಶ್ರೇಷ್ಠ "ಸಂತ" ನಿಗ ನಮ್ಮೆಲ್ಲರ ನಮನ....
ವಿನಯ್ ...
ಭಾರತ ಹಲವು ಸಂಸ್ಕೃತಿಗಳ ನೆಲೆವೀಡು... ಹಲವು ವೈವಿಧ್ಯಗಳ ಸಂಗಮ.... ಜಗತ್ತಿನ ಹಲವು ಪ್ರಾಚೀನ ಸಂಸ್ಕೃತಿಗಳಲ್ಲಿ ಶ್ರೇಷ್ಠವಾದದ್ದು ಭಾರತೀಯ ಸಂಸ್ಕೃತಿ. ಈ ಪುಣ್ಯಭೂಮಿಯಲ್ಲಿ ಆಚರಿಸುವ ಉತ್ಸವಗಳು ಅನೇಕ. ಇದರಲ್ಲಿ ಆನಾದಿಕಾಲದಿಂದ ಆಚರಣೆಯಲ್ಲಿರುವ/ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಕುಂಭ ಮೇಳವೂ ಒಂದು...



ಬಹುಶ: ಲಕ್ಷಾಂತರ ಜನರು ಸೇರುವ... ಎಲ್ಲರೊಳು ಒಂದಾಗಿ ನದಿಯಲ್ಲಿ ಪುಣ್ಯಸ್ನಾನಗೈಯುವ ಉತ್ಸವ ಜಗತ್ತಿನಲ್ಲಿ ಇದೊಂದೇ ಇರಬಹುದು ಅನಿಸುತ್ತದೆ. ನಾಗ ಬಾಬಾ, ಸಾಧು-ಸಂತರು, ಮಂತ್ರ ಪಠಿಸುವ ಪುರೋಹಿತರು, ಯೋಗಿಗಳು, ವಿದೇಶಿಯರು, ಬಡವ-ಶ್ರೀಮಂತರು...., ಹು: ಯಾರಾರು ಬೇಕು ಹೇಳಿ..... ಎಲ್ಲರ ಗಮನ "ಮೋಕ್ಷ ಸಾಧನೆ" ಗಾಗಿ... ಬಹುಜನ್ಮದ ಬಂಧನದಿಂದ ಮುಕ್ತಿಗಾಗಿ...

ನದಿ ಮೂಲಗಳು ನಮ್ಮ ಸಂಸ್ಕೃತಿಯಲ್ಲಿ ಬಹಳ ಮಹತ್ವ ಸ್ಥಾನ ಪಡೆದಿವೆ... ಎಲ್ಲರ ಜೀವನಾಡಿಯಾಗಿರುವುದಲ್ಲದೇ ಜನರ ಪಾಪ ತೊಳೆಯುವ ಪಾಪನಾಶಿಣಿಗಳಾಗಿಯೂ ಅವುಗಳ ಅಸ್ತಿತ್ವವಿದೆ.... ಜನರ ಅಸ್ತಿಕತನ, ನಂಬಿಕೆ, ಭಕ್ತಿ-ಭಾವಗಳು ಸಹ ಇದರಲ್ಲಿ ಸೇರಿಕೊಂಡಿವೆ. ನೀರು ಹೇಗೆ ಜೀವಸತ್ವವೋ, ಹಾಗೆಯೇ ನಮ್ಮ ಜನಕ್ಕೆ ಸರ್ವವೂ ಸಹ..., ಅದಕ್ಕೆ ನೀರಿಗೆ ಪಂಚಸತ್ವಗಳಲ್ಲಿ ಬಹಳ ಮುಖ್ಯಸ್ಥಾನವಿದೆ.

ನಮ್ಮ ಭಾರತ ಪುಣ್ಯಭೂಮಿಯಲ್ಲಿ ಇರುವ ಹಲವು ನದಿಗಳಲ್ಲಿ ಗಂಗಾ ನದಿಗೆ ನದಿಗಳಲ್ಲೇ ಶ್ರೇಷ್ಟ ಸ್ಥಾನ. ಅಜನ್ಮ ಪಾಪನಾಶಿನಿ ಗಂಗೆಯ ಮಹಿಮೆಯ ಬಗ್ಗೆ ಆನಾದಿ ಕಾಲದಿಂದಲೂ, ಹಲುವು ವೇದಗಳ ಬರಹಗಳಲ್ಲೂ ಉಲ್ಲೇಖವಿದೆ. ಈ ತಾಯಿ ಎಲ್ಲೆಲ್ಲಿ ಹರಿದಳೋ ಅಲ್ಲೆಲ್ಲಾ ಪುಣ್ಯಸ್ಥಾನಗಳ ಉಗಮವಾಗಿದೆ... ಅಸ್ತಿಕ ಭಕ್ತರಿಗೆ ಮುಕ್ತಿಯ ತಾಣವಾಗಿವೆ....

ಕುಂಭ ಮೇಳದ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ: ಪಾಪಗಳನು ತೊಳೆದು, ಜನ್ಮ ಬಂಧನಗಳಿಂದ ಮುಕ್ತಿಪಡೆಯುವ "ಪುಣ್ಯ ಮೇಳ"...

ಏನಿದು "ಕುಂಭ ಮೇಳ"...?

ಕುಂಭ -- ಸಂಸ್ಕೃತದಲ್ಲಿ ಕಳಶಕ್ಕೆ ಹೋಲಿಸಲಾಗುತ್ತದೆ. ನಮ್ಮ ಜೋತಿಷ್ಯ ಶಾಸ್ತ್ರದಲ್ಲಿ ಕುಂಭ/ಕಳಶವು ಕುಂಭ ರಾಶಿಗೆ ಸಂಬಂಧಿಸಿದೆ. ಅದಕ್ಕೆ ಏನೋ ಈ ರಾಶಿಯಲ್ಲಿನ ಗ್ರಹಗಳ ಸಂಯೋಗದಲ್ಲೇ ಈ ಉತ್ಸವ ಬರುವುದರಿಂದ "ಕುಂಭ ಮೇಳ" ಎಂಬ ಹೆಸರು ಬಂದಿರುವುದು.

ಸಮುದ್ರಮಥನ ನೆಡೆದು ಅಮೃತ ಪ್ರಪ್ತಿಯಾದಾಗ ದೇವತೆಗಳು-ರಾಕ್ಷಸರ ನಡುವ ಆ ಅಮೃತ ಪಡೆಯಲು ಭೀಕರ ಯುದ್ಧವೇ ನೆಡೆದಿತ್ತು. ಆದು ೧೨ ದಿನ ಮತ್ತು ೧೨ ರಾತ್ರಿಗಳವರೆಗೂ ವಿಸ್ತರಿಸಿತ್ತು... ( ಮನುಷ್ಯ ಜನ್ಮದ ೧೨ ವರ್ಷಕ್ಕೆ ಇವು ಸಮ). ಆ ಸಮಯದಲ್ಲಿ ಅಮೃತ ಕಳಶವನ್ನು ಹೊತ್ತ ದೇವತೆಗಳು ಅದನ್ನು ರಾಕ್ಷಸರ ಹಿಡಿತದಿಂದ ಉಳಿಸಲು ಹೊತ್ತೊಯುತ್ತಿದ್ದಾಗ ಆ ಕಳಶದಿಂದ ಕುಲುಕಿದ ಹಲವು ಅಮೃತದ ಬಿಂದುಗಳು ಪ್ರಯಾಗ, ಹರಿದ್ವಾರ, ಉಜ್ಜೈನಿ ಮತ್ತು ನಾಸಿಕ್ ಎಂಬ ಕ್ಷೇತ್ರಗಳಲ್ಲಿ ಬಿದ್ದವೆಂದು ಪ್ರತೀತಿ. ಈ ನಾಲ್ಕು ಕ್ಷೇತ್ರಗಳಲ್ಲೇ ಈಗ ಕುಂಭ ಮೇಳ ನೆಡೆಯುವುದು...

ನಾಗ ಬಾಬಗಳು:


"ಕುಂಭ ಮೇಳ" ಪ್ರಮುಖರೆಂದೇ ಹೇಳಲ್ಪಡುವ, ಸಾಧುಗಳಲ್ಲೇ ಬಹಳ ಕೋಪಿಷ್ಟರು, ಭಯಂಕರ ರೂಪದವರು ಮತ್ತು ಆಕ್ರಮಣಶಾಲಿಗಳು. ಯಾವಗಲೂ ತಪ ಸಾಧನಗಳಲ್ಲೇ ತಮ್ಮ ಜೀವನ ಕಳೆಯುವ ಇವರು "ಕುಂಭ ಮೇಳ" ಹೊತ್ತಿಗೆ ಜಾಗೃತರಾಗಿ, ತಮ್ಮ ಆವಾಸಸ್ಥಾನವಾದ ಗುಹೆ, ಬೆಟ್ಟಗಳಿಂದ ಹೊರಬಂದು ನದಿಯಲ್ಲಿ ಪ್ರಥಮರಾಗಿ ಪುಣ್ಯಸ್ನಾನಗೈಯುತ್ತಾರೆ. ಸದಾ ನಗ್ನರಾಗಿರುವ, ದೇಹದ ತುಂಬಾ ಅಗ್ನಿಕುಂಡದ/ಚಿತಾಬಸ್ಮದ ಲೇಪನ ಮಾಡಿಕೊಂಡಿರುವ ಇವರು ಶಿವ ಸಾಕ್ಷಾತ್ಕಾರಕ್ಕಾಗಿ ತಮ್ಮ ಜೀವನ ಮುಡಿಪಿಡುವವರು. ಇವರ ಸ್ನಾನದ ನಂತರವೇ ಇತರರ ಪುಣ್ಯಸ್ನಾನ ನೆಡೆಯುವುದು ಇಲ್ಲಿಯವರೆಗಿನ ವಾಡಿಕೆ.



"ಕುಂಭ ಮೇಳ" ನಡೆಯುವ ಸಮಯ:


ಕುಂಭ ರಾಶಿಯಲ್ಲಿ ಗುರು ಗ್ರಹದ ಪ್ರವೇಶವಾದಾಗ ಮತ್ತು ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ "ಕುಂಭ ಮೇಳ" ಘಟಿಸುತ್ತದೆ. ಈ ಸಂಯೋಗ ಎಲ್ಲಾ ವರ್ಷಗಳಲ್ಲೂ ಘಟಿಸುವುದಿಲ್ಲ. ಇದರ ಸಂಯೋಗ ಪುಣ್ಯನದಿಗಳ ನೀರನ್ನು ಅಮೃತವಷ್ಟೇ ಪುಣ್ಯವನ್ನಾಗಿ ಮಾಡುವ ಶಕ್ತಿ ಹೊಂದಿವೆ.


ಸ್ಥಳ ಮತ್ತು ಗ್ರಹ ಕೂಟ ಸಂಯೋಗ:

ಗುರು ಗ್ರಹ, ಸೂರ್ಯ, ಚಂದ್ರಗಳ ಸಮ್ಮಿಲನದಲ್ಲಿ "ಕುಂಭ ಮೇಳ" ಈ ಸ್ಥಳಗಲ್ಲಿ ನೆಡೆಯುತ್ತವೆ:

ಹರಿದ್ವಾರ: ಕುಂಭ, ಮೇಷ, ಧನು

ಪ್ರಯಾಗ: ವೃಷಭ, ವೃಶ್ಚಿಕ.

ನಾಸಿಕ್: ಸಿಂಹ, ಕರ್ಕಾಟಕ

ಉಜ್ಜೈನಿ: ಸಿಂಹ, ಮೇಷ


"ಶಾಹಿ ಸ್ನಾನ" ನೆಡೆಯುವ ದಿನಗಳು:


೧೪ ಜನವರಿ ೨೦೧೦: ಮಕರ ಸಂಕ್ರಾಂತಿ

೧೫ ಜನವರಿ ೨೦೧೦: ಮೌನಿ ಅಮಾವಾಸ್ಯೆ ಮತ್ತು ಸೂರ್ಯ ಗ್ರಹಣದ ದಿನ

೨೦ ಜನವರಿ ೨೦೧೦: ವಸಂತ ಪಂಚಮಿ

೩೦ ಜನವರಿ ೨೦೧೦: ಮಾಘ ಪೂರ್ಣಿಮೆಯ ದಿನ

೧೨ ಮತ್ತು ೧೩ ಫೆಬ್ರವರಿ ೨೦೧೦: ಮಹಾಶಿವರಾತ್ರಿ ಯಂದು

೧೫ ಮಾರ್ಚ್: ಸೋಮವತಿ ಅಮಾವಾಸ್ಯ

೨೪ ಮಾರ್ಚ್: ರಾಮ ನವಮಿಯ ದಿನ

೩೦ ಮಾರ್ಚ್: ಚೈತ್ರ ಪೂರ್ಣಿಮೆಯ ದಿನ

೧೪ ಎಪ್ರಿಲ್: ಅಮಾವಾಸ್ಯ - ಕೃಷ್ಣ ಪಕ್ಷ

೨೮ ಎಪ್ರಿಲ್: ವೈಶಾಖ ಪೂರ್ಣಿಮೆಯ ದಿನ

ಇದರಲ್ಲಿ ೧೨-೧೩ ಫೆಬ್ರವರಿ, ೧೫ ಮಾರ್ಚ್, ೧೪ ಮತ್ತು ೨೮ ಎಪ್ರಿಲ್ ಮುಖ್ಯ ಸ್ನಾನದ ದಿನಗಳು...


ಓದುಗರೆ, ನಿಮ್ಮಲ್ಲಿ ಆನೇಕರು ಈ ಮಹಮೇಳದಲ್ಲಿ ಭಾಗವಹಿಸಲು ಈ ಸ್ಥಳಗಳಿಗೆ ಹೋಗಬಹುದು... ನಿಮ್ಮೆಲ್ಲರ ಪಯಣ ಸುಖಕರವಾಗಿರಲಿ ಎಂದು ಬಯಸುವೆ
ವಿನಯ್ ...
ನಮ್ಮ ಸಂಜು ಅಲಿಯಾಸ್ ಸಂಜಯ್ ನಂಜಪ್ಪ ಬಡಾವಣೆ ಕಂಡ ಅತ್ಯಂತ ಸೋಮಾರಿ ಹುಡುಗರಲ್ಲಿ ಒಬ್ಬ. ಹೇಗೋ ಕಷ್ಟಪಟ್ಟು ಬಿ.ಕಾಂ ಅನ್ನ ೩ನೇ ಕ್ಲಾಸ್ ನಲ್ಲಿ ಪಾಸ್ ಮಾಡಿಕೊಂಡನೋ ಆ ದೇವರಿಗೆ ಗೊತ್ತು!! ಕಾಲೇಜಿಗೆ ಹೋಗಿದ್ದಿಕ್ಕಿಂತ ಹೆಚ್ಚಾಗಿ ಟೇಟರ್ ಮತ್ತು ಪಾರ್ಕ್ ನಲ್ಲೇ ಜಾಸ್ತಿ ಸಮಯ ಕಳೆದ ಅವನು. ಕಾಲೇಜ್ ಮುಗಿದ ಮೇಲೆ ಹೆಚ್ಚೇನು ಮಾಡದೆ ಮನೆಯಲ್ಲೇ ಅರಾಮಾಗಿ ಕಾಲ ಕಳೆಯತೊಡಗಿದ. ಅಪ್ಪ ಕೆಲಸ ಸೇರು ಅಂತ ಕೂಗಿ-ಕೂಗಿ ಹೇಳಿದರೂ ಆದು ತನಗೆ ಹೇಳಿಯೇ ಇಲ್ಲವೇನೋ ಅನ್ನುವಂತೆ ತನ್ನ ಎಮ್.ಪಿ-೩ ಪ್ಲೇಯರ್ ಅನ್ನು ಕಿವಿಗೆ ಹಾಕಿಕೊಂಡು ತನ್ನದೇ ಲೋಕದಲ್ಲಿ ಇದ್ದು ಬಿಡುತ್ತಿದ್ದ. ಅಮ್ಮ ಇವನಿಗೆ ಊಟ ಹಾಕುವಾಗ "ಲೇ ಸಂಜಯಾ, ಇನ್ನ್ ಎಷ್ಟ್ ದಿನ ಹೀಗೆ ಸುಮ್ಮನೆ ತಿಂದ್ಕೊಂಡ್ ಬಿದ್ದಿರ್ತೀಯೋ?" ಅಂತಾ ದೊಡ್ಡ ದನಿಯಲ್ಲಿ ಹೇಳ್ತಾಯಿದ್ದರೆ, ಅವನು "ನೋಡೋಣ, ಮನೆಯಲ್ಲಿ ರೇಷನ್ ಖಾಲಿಯಾಗುವರೆಗೂ...!" ಅಂತ ಪಟ್ಟನೆ ಉತ್ತರಿಸುತ್ತಿದ್ದ. ಅಮ್ಮ "ಇದಕ್ಕಷ್ಟೇ ಲಾಯಕ್ಕು ನೀನು...!" ಅಂತ ಗೊಣಗಿ ಸುಮ್ಮನಾಗುವುದಷ್ಟೇ ಬಾಕಿ!. ಬೆಳಗಿನ ಸೂರ್ಯ ಮೇಲೇರಿ ಮಧ್ಯಾಹ್ನ ಹೊತ್ತಿಗೆ ನೆಡೆಯುತ್ತಿದ್ದರೂ ಇವನು ಏಳುವುದು ಕಷ್ಟ..! ಅಮ್ಮನ "ನೀರ್ ಪ್ರೋಕ್ಷಣೆ" ಆಗದಿದ್ದರೆ ಹಾಗೇ ಬೆಡ್ ಅಲ್ಲೇ ಇದ್ದುಬಿಡುತ್ತಿದ್ದನೇನೊ! ಅಂತೂ ಎದ್ದ ಮೇಲೆ ಏನೂ ಹೇಳಿಕೊಳ್ಳುವಂತ ಕೆಲಸ ಮಾಡದಿದ್ದ ಅವನು, ಬರಿ ತಿಂಡಿ ತಿಂದಿ, ತನ್ನ ಬೈಕ್ ಹತ್ತಿ ಸುತ್ತಲು ಹೋಗುತ್ತಿದ್ದದ್ದೇ ಅವನು ಮಾಡುತ್ತಿದ್ದ ಘನ: ಕಾರ್ಯ...!

ಹೀಗಿದ್ದ ನಮ್ಮ ಸೋಮಾರಿ ಸಂಜು, ಅದ್ ಹೇಗೆ ಗೀತಾಳ ಪ್ರೇಮ ಪಾಶದಲ್ಲಿ ಸಿಕ್ಕಿ ಬಿದ್ದನೋ ಆ ಭಗವಂತನೇ ಬಲ್ಲ...

.....................................................

ತನ್ನ ಎದುರಿನ ಮನೆಯಲ್ಲಿ ಅಂದು ಹೊಸ ನೆರೆಮನೆಯವರಾಗಿ ಒಂದು ಕುಟುಂಬ ಬಂದಿತ್ತು. ಮಹಾ ಸೋಮಾರಿಯಾದ ನಮ್ಮ ಸಂಜು ಅಂದೂ ಸಹ ಗಡದ್ ನಿದ್ದೆ ಸವಿಯುತ್ತಿರಲು, "ಡಂ" ಅಂತ ಜೋರಾದ ಶಬ್ದಕ್ಕೆ ಎದ್ದು ಕುಳಿತುಕೊಂಡನು. ಕಣ್ಣುಜ್ಜಿಕೊಂಡು ಎನಾಯಿತೆಂದು ಹೊರ ಬಂದು ನೋಡಲು, ಪಾತ್ರೆಯೊಂದನ್ನು ತಗೆದುಕೊಂಡು ಹೋಗುವಾಗ ಕೆಲಸದವರು ಕೆಳಗೆ ಬೀಳಿಸಿದ್ದರು. ಹೊಸದಾಗಿ ಬಂದಿದ್ದ ಆ ಕುಟುಂಬದ ಮಧ್ಯವಯಸ್ಸಿನ ವ್ಯಕ್ತಿ "ಏ ಅಪ್ಪ, ಸಲ್ಪ ಹುಷಾರು ಕಣ್ರೋ..." ಅನ್ನಲು, ಅವರ ಹಿಂದೆ ಒಬ್ಬ ಹಾಲು ಬಣ್ಣದ ಚಲುವೆ "ಅಪ್ಪ, ಒಂದ್ ನಿಮಿಷ ಇಲ್ಲಿ ಬಾ" ಅಂತ ಕರೆಯಲು, ನಮ್ಮ ಸಂಜುದು ಹಾಗೇ ಕಣ್ಣ್ ಬಿಟ್ಟ ಸ್ಥಿತಿ...! ನೀವೇನಾದರೂ ಅವನನ್ನ ನೋಡಿದ್ದರೆ "ಇವನಿಗೆ ಸಲ್ಪ ಲವ್ ಅಗಿರ್ ಬೇಕು ಅನಿಸ್ಸುತ್ತೆ..." ಅಂತಿದ್ದಿರೇನೊ!!! ಅದರೆ ನಮ್ಮ ಹುಡುಗ "ಸಲ್ಪ" ಎನು "ಪೂರ್ತಿ" ನೇ ಲವ್ ಎಂಬ ಹಳ್ಳದಲ್ಲಿ ಅವಳ ಕಂಡ ಮೊದಲ ನೋಟದಲ್ಲೇ(ದಿನದಲ್ಲೇ!!) ಬಿದ್ದಿದ್ದ!!

ಅದರ ಪರಿಣಾಮವೇ ಏನೋ...!

ಬೆಳಗ್ಗೆ ( ಸಾರಿ ಮಧ್ಯಾಹ್ನ:...) ಕ್ಕೆ ಕಷ್ಟಪಟ್ಟು ಏಳುತ್ತಿದ್ದ ಅವನಿಗೆ... ಬೆಳಗ್ಗೆ ೬ರ ಕ್ಕೆ ಟಪಕ್ ಅಂತ ಎಚ್ಚರಾಗಿಬಿಡುವುದೇ..!!

ಅಮ್ಮನಿಗೋ ಅಶ್ಚರ್ಯವೋ ಅಶ್ಚರ್ಯ!! "ಎನೋ, ಇಷ್ಟ್ ಬೇಗ ಎದ್ದಿ...?" ಅನ್ನಲು... "ಇಲ್ಲಾ, ಎನೋ ಕೆಲಸ ಇದೆ..." ಅಂತ ಎದ್ದವನೇ ಮನೆಯ ಹೊರಬಂದು, ಕೊಂಡು ತಂದಾಗಿನಿಂದ ಎಂದೂ ತೊಳೆಯದಿದ್ದ ತನ್ನ ಬೈಕ್ ಅನ್ನು ಸೋಪ್ ಹಾಕಿ ಸ್ವಚ್ಚವಾಗಿ ತೊಳೆಯತೊಡಗಿದನು!!!

ಅಂತೂ ಗಾಡಿ ಕ್ಲೀನ್ ಆಗಿದ ಮೇಲೆ 'ಜುರ್ರ್' ಅಂತ ಹೊರಟಿದ್ದೇ ಸಿಗರೇಟ್ ಸೇದಲು ಗಿರಿಯಪ್ಪ ಅಂಗಡಿ ಬಸ್ ಸ್ಟಾಪ್ ಹತ್ತಿರ ನಿಂತಿದ್ದ... (ಸಿಗರೇಟಿಗಿಂತ ಅವನಿಗೆ ಆ ಹಾಲು ಬಣ್ಣದ ಚಲುವೆ ಎಲ್ಲಿ ಹೋಗುತ್ತಾಳೆ ಎಂದು ತಿಳಿಬೇಕಾಗಿತ್ತು!!!). ಇದು ಅವನ ಮನೆಯ ಹತ್ತಿರ ಇದ್ದ ಏಕೈಕ ಬಸ್ ಸ್ಟಾಪ್. ಅಲ್ಲಿನ ಜನ ಯಾವ ಸ್ಥಳಕ್ಕೆ ಹೋಗಬೇಕಾದರೂ ಇಲ್ಲೇ ಬಂದು ಬಸ್ ಹಿಡಿಯಬೇಕು. ಅಲ್ಲಿಂದ ಸಲ್ಪ ದೂರದಲ್ಲಿ ಬೈಕ್ ನಿಲ್ಲಿಸಿ ಕಾದು ಕೂತಿದ್ದ ಅವನಿಗೆ ತನ್ನ ಬೈಕ್ ಟಾಯರ್ "ಟುಸ್ಸ್" ಆಗಿದ್ದು ಅಗಲೇ ಗೊತ್ತಾಗಬೇಕೇ!!. ಅಲ್ಲೇ ಹತ್ತಿರದಲ್ಲಿ ಇದ್ದ ಟೈರ್ ರಿಪೇರಿ ಅಂಗಡಿಯಲ್ಲಿ ಪಂಚರ್ ಹಾಕಿಸಿಕೊಳ್ಳುವಷ್ಟರಲ್ಲಿ ಬಸ್ ಮತ್ತು ಆ "ಹಾಲು ಬಣ್ಣದ ಚಲುವೆ" ನಿಲ್ದಾಣಕ್ಕೆ ಬಂದಿದ್ದರು. ದಡಬಡನೆ ಬೈಕ್ ಸ್ಟಾರ್ಟ್ ಮಾಡಿ ಬಸ್ ಫಾಲೋ ಮಾಡಹತ್ತಿದ ಸಂಜಯ್.. ಬಸ್ ನಿಂತಾಗ ಆ "ಹಾಲು ಬಣ್ಣದ ಚಲುವೆ" ಇಳಿದು ಇನ್ನೇನು ಹೊರಡಬೇಕು, ಅವಳ ಗೆಳತಿ ಅನಿಸುತ್ತೆ... "ಗೀತಾ, ಒಂದ್ ನಿಮಿಷ ನಾನು ಬಂದೆ..." ಅಂತ ಹಿಂದಿನಿಂದ ಕೂಗಲು, ಇವಳು ತಿರುಗು ನಿಂತು ಅವಳ ಸ್ನೇಹಿತೆಯೆಡೆಗೆ ನೋಡಿ ನಕ್ಕಳು. ಸಂಜಯ್ ನೋಡುತ್ತಿದಂತೆ ಅವರಿಬ್ಬರು ನೆಡೆದು ಹೋದದ್ದು ಅಲ್ಲೆ ಹತ್ತಿರದಲ್ಲಿ ಇದ್ದ "ಅರ್.ಟಿ ಕಾಲೇಜ್" ರ ಒಳಗೆ.

ಅಡ್ರಸ್ ಮತ್ತು ಹೆಸರು ಪತ್ತೆಯಾದ ಮೇಲೆ ಇನ್ನೇನು ಬಾಕಿ ಇದೆ ಹೇಳಿ...? ಕಾಲೇಜ್ ಹತ್ತಿರ ಕೂತು ಆ "ಹಾಲು ಬಣ್ಣದ ಚಲುವೆ" ಬರುವವರೆಗೂ ಕಾದು, ಲೈನ್ ಹೊಡೆದು (ಒಂದು ಸಾಲ ಕೆನ್ನೆಗೆ ಒಂದು "ಚಟ್" ಅಂತ ತಿಂದು..!), ಹೇಗೋ ಆ "ಹಾಲು ಬಣ್ಣದ ಚಲುವೆ" ಯನ್ನ ಓಪ್ಪಿಸಿ, ಅವಳ ಹತ್ತಿರ "ಹು:.. ಐ ಲವ್ ಯೂ" ಅನ್ನಿಸಿಕೊಂಡೇ ಬಿಟ್ಟ ನಮ್ಮ ಸಂಜಯ್...!

ಇನ್ನೇನು... ಮನೆ ಬೇರೆ ಎದುರು-ಬದುರಿನಲ್ಲಿ ಇತ್ತಲ್ಲಾ!!! ಬೆಳಗ್ಗೆ ಎದ್ದವನೇ (ಈಗ ಅವನು ಬೆಳಗಿನ ಸೂರ್ಯನನ್ನು ಸರಿಯಾಗಿ ಕಾಣಲು ಶುರುಮಾಡಿದ್ದು..) ತನ್ನ ರೂಮಿನ ಕಿಟಕಿ ಹತ್ತಿರ ಬರುವುದು, ಅಲ್ಲೇ ಇದ್ದ ತನ್ನ ರೇಡಿಯೋ ಆನ್ ಮಾಡುವುದು...!, ನಮ್ಮ ಹುಡುಗಿ ಇವನು ಎದ್ದು ಎಚ್ಚರವಾಗಿದ್ದಾನೆ ಎಂಬ ಸಿಗ್ನಲ್ ಸಿಕ್ಕಿ.. ಕಿಟಕಿ ಹತ್ತಿರ ಬಂದು "ಹಲೋ.. ಗುಡ್ ಮಾರ್ನಿಂಗ್" ಅಂತ ಕಣ್ಣಲ್ಲೇ ಹೇಳಿ... ಸಣ್ಣಗೆ ಒಂದು "ಫ್ಲಾಯಿಂಗ್ ಕಿಸ್ಸ್" ಹಾರಿಬಿಡುವುದು...! ನಮ್ಮ ಹುಡುಗ ಈ ಕಡೆ ಅದನ್ನ ಹಿಡಿದು "ಪುನೀತನಾಗುವುದು"...! ದಿನ ಮರೆಯದೇ ನೆಡೆಯುತ್ತಿದ್ದ ದಿನಚರಿ ಆದು...

-------------------

ಕಾಲೇಜ್ ಹತ್ತಿರದ ಪಾರ್ಕ್ ಅವರ "ಮೀಟಿಂಗ್ ಸ್ಪಾಟ್". ಅಲ್ಲೂ ಬೇರೇನೂ ನೆಡೆಯುತ್ತಿರಲಿಲ್ಲ.. ಸುಮ್ಮನೇ ಒಬ್ಬರೊನೊಬ್ಬರು ನೋಡುವುದು, ಸಣ್ಣನೇ ನಕ್ಕು ಸುಮ್ಮನಾಗಿಬಿಡುವುದು...! ಅವಳು "ಐಸ್ ಕ್ರೀಮ್ ತಿನ್ನೋಣ ಬಾ..." ಅಂದರೆ ಇವನು "ಬೇಡ ಬಿಡು" ಅನ್ನುವುದು, ಇವನು "ಬಾ, ಫಿಲ್ಮ್ ಗೆ ಹೋಗೋಣಾ.." ಅಂದರೆ ಇವಳು "ಇಲ್ಲ, ಟೈಮ್ ಇಲ್ಲಾ ಕಣೋ.." ಅಂತ ಉತ್ತರ!. ಕೊನೆಗೆ ಇಬ್ಬರ "ಇಲ್ಲ" ಗಳ ನಡುವೆ ಸಮಯ ಕಳೆದು ಹೋಗಿ ಸುಮ್ಮನೆ ಅವರವರ ಮನೆಗೆ ಹೊರಡಬೇಕಿತ್ತು...!

ಇದರ ನಡುವೆ ನಮ್ಮ ಸಂಜಯನಿಗೆ ಕೆಲಸ ಸಿಕ್ಕಿ, ಅವನು ತನ್ನ ಮಿತ್ರರಿಗೆಲ್ಲಾ ಪಾರ್ಟಿ ಕೊಡಿಸಿ ಕಳಿಸಿದ ಮೇಲೆ ೭ ಗಂಟೆ ಯಾಗಿಬಿಟ್ಟಿತು. ಅಲ್ಲೇ ಹತ್ತಿರದಲ್ಲಿ ಇದ್ದ "ಕಾಫಿ ಡೇ" ನಲ್ಲಿ ಗೀತಳ ಜೊತೆ ಸಮಯ ಕಳೆಯುತ್ತಿದ್ದಾಗ ಅವಳ ಅಪ್ಪ ಅಲ್ಲಿಗೆ ಬಂದು ಬಿಡುವುದೇ!

ಸುಮ್ಮನೆ ಅವರನ್ನ ಒಮ್ಮೆ ನೋಡಿದ ಅವಳ ಅಪ್ಪ ಮರುಮಾತನಾಡದೇ ಅಲ್ಲಿಂದ ಹೊರಡಲು, ಗೀತಾ "ನಾನ್ ಬರ್ತೀನಿ ಕಣೋ..." ಅಂತ ಅಲ್ಲಿಂದ ಎದ್ದು ಹೊರಟಳು. ಸಂಜಯ್ ಗೆ ತನ್ನ ತಲೆ ಕೆರೆದುಕೊಂಡು ಸುಮ್ಮನೆ ಕೂರದೇ ಬೇರೇನು ಉಳಿದಿರಲಿಲ್ಲ!!!

ಅಲ್ಲಿಂದ ಮನೆಗೆ ಬಂದ ಅವನಿಗೆ ತನ್ನ "ಎದುರು ಮನೆಯಲ್ಲಿ" ( ಐ ಮೀನ್ ಗೀತಾಳ ಮನೆಯಲ್ಲಿ...) ರಂಪ ರಾಮಾಯಣ ಸುಮಾರು ಹೊತ್ತು ಕೇಳುತ್ತಲೇ ಇತ್ತು. ಇಲ್ಲಿ ಇವನು ರೇಡಿಯೋ ಆನ್ ಮಾಡಿದರೆ "ಏನಿದಿ ಗ್ರಹಚಾರವೋ, ಏನಿದಿ ವನವಾಸವೋ.." ಅಂತ ಹಾಡತೊಡಗಿತು. ಇವನಿಗೆ ತಲೆ ಕೆಟ್ಟು ರೇಡಿಯೋ ಆಫ್ ಮಾಡಿ ಬೆಡ್ ಮೇಲೆ ತಲೆಯವರೆಗೂ ರಗ್ ಎಳೆದು ಮಲಗಲು ಯತ್ನಿಸಿದನು (ನಿದ್ದೆ ಎಲ್ಲಿ ಬರುತ್ತದೆ ಅವನಿಗೆ..!)

ಇತ್ತ ನಮ್ಮ ಗೀತಾ ಕಿಟಕಿಯ ಹತ್ತಿರ ಬರುವುದನ್ನ ನಿಲ್ಲಿಸಿ ಸುಮಾರು ದಿನಗಳಾಗತೊಡಗಿತು. ಹೊರಗೆ ಸಿಕ್ಕರೂ ಮಾತನಾಡುವ ಸುಳಿವಿಲ್ಲ...! ಇತ್ತ ನಮ್ಮ ಸಂಜಯ್ ಗೆ ಅಲ್ಲಿ ಕೆಲಸದಲ್ಲಿ ಆಸಕ್ತಿ ಇಲ್ಲ. ಇತ್ತ ಮನೆಗೆ ಬಂದು ಕುಳಿತರೂ ಅವನ ರೇಡಿಯೋ ಅವನನ್ನೇ ಅಣಕಿಸುವಂತೆ "ಗೀತಾ, ಸಂಗೀತಾ... ಏಕೆ ಹೀಗೆ ದೂರವಾದೆ, ಎಲ್ಲಿ ಹೋದೆ...?" ಅಂತ ಹಾಡತೊಡಗಿದರೆ ಅವನಿಗೆ ಆ ರೇಡಿಯೋ ಅನ್ನೇ ಎತ್ತಿ ಹೊರಗೆಸೆಯುವಷ್ಟು ಕೋಪ..! ಮತ್ತೇನು ಮಾಡುವುದು, ತನ್ನ ಕರ್ಮ ಎಂದು ತಾನೇ ತೆಪ್ಪಗೆ ಕುಳಿತುಬಿಡುತ್ತಿದ್ದ...

ಅಂತೂ ಒಂದು ದಿನ ಹೇಗೊ ನಮ್ಮ ಸಂಜಯ್ ಗೀತಾಳನ್ನು ಒಪ್ಪಿಸಿ, ನಾವು ಇಲ್ಲಿಂದ ಬೇರೆ ಊರಿಗೆ ಹೋಗಿಬಿಡೋಣ, ಇಲ್ಲಾ ಅಂದರೆ ನಾನು ನಿನ್ನ ಬಿಟ್ಟು ಇರಲಾರೆ ಅಂತ ಕಾಡಿ-ಬೇಡಿ ಕೋರಿದನು. ಇಬ್ಬರು ರೆಡಿಯಾಗಿ ರೈಲ್ವೆ ಸ್ಟೇಷನ್ ಗೆ ಬಂದು ಇನ್ನೇನು ರೈಲು ಹತ್ತಬೇಕು ಅಷ್ಟರಲ್ಲಿ ಮತ್ತೆ ಗೀತಾಳ ಅಪ್ಪ ಅಲ್ಲೂ ಪ್ರತ್ಯಕ್ಷವಾಗಿ ಬಿಡುವುದೇ...!?!

ಸಂಜಯ್ ಗೆ ಈಗ ಹುಚ್ಚು ಹಿಡಿಯುವುದೊಂದೇ ಬಾಕಿ...!

ಇನ್ನೇನು ಅವನು ಅವರ ಕಾಲು ಹಿಡಿದು "ಸರ್, ತಪ್ಪಾಯಿತು... ಕ್ಷಮಿಸಿ ಬಿಡಿ, ಈ ಜನ್ಮದಲ್ಲಿ ಮತ್ತೆ ಈ ಕೆಲಸ ಮಾಡುವುದಿಲ್ಲಾ..." ಅಂತ ಹೇಳುವ ಮೊದಲೇ ಅವಳ ಅಪ್ಪ...:

"ನೋಡಪ್ಪಾ, ನೀನು ಎಲ್ಲಾ ಬಿಟ್ಟು ಈ ರೀತಿ ಓಡಿಹೋದರೆ ಮುಂದೆ ಆರಾಮಾಗಿರಬಹುದು ಅನ್ಕೊಂಡಿದ್ದಿಯೇನು? ಅಲ್ಲಯ್ಯ, ಲವ್ ಮಾಡೋಕೆ ಧೈರ್ಯ ಇರುತ್ತೆ, ಅದರೆ ಎಲ್ಲರನ್ನು ಓಪ್ಪಿಸಿ ಮದುವೆಯಾಗೋಕೆ ಎನ್ ಭಯ ನಾ...? ನೀವ್ ಹೋಗೋದಲ್ದೆ ನಿಮ್ಮ ಮನೆಯವರಿಗೂ ತಲೆ ನೋವು ತರ್ಸ್ತಿರಲ್ಲಾ ಕಣಯ್ಯಾ...!" ಅಂತ ಹೇಳಿದಾಗ ನಮ್ಮ ಸಂಜಯ್ ತನ್ನ ಮೈ ಚಿವುಟಿಕೊಂಡು ತಾನು ಕನಸು ಕಾಣುತಿಲ್ಲಾ ತಾನೇ ಅಂತ ತನ್ನನ್ನು "ಚೆಕ್" ಮಾಡಿಕೊಂಡ!! ಅವನಿಗೆ ಈ ವಿಷಯ ಇಷ್ಟು ಸುಲಭವಾಗಿ "ಸಾಲ್ವ್" ಆಗುತ್ತೆ ಅಂತಾ ಕನಸಿನಲ್ಲಿ ಅಂದುಕೊಂಡಿರಲಿಲ್ಲವೇನೋ! "ರೋಗಿ ಬಯಸಿದ್ದು ಹಾಲು ಅನ್ನ, ಡಾಕ್ಟರ್ ಹೇಳಿದ್ದು ಹಾಲು ಅನ್ನ..." ಅಂತೆ ತನ್ನ "ಡೊಡ್ಡ ಸಮಸ್ಯೆ" ಸಾಲ್ವ್ ಅಯ್ತು ಎಂಬ ಸಂಭ್ರಮದಲ್ಲಿ ಮನೆಗೆ ಬಂದು ಗೀತಳ ತಂದೆಯ ಜೊತೆಗೂಡಿ ತನ್ನ ತಂದೆ-ತಾಯಿಯ ಹತ್ತಿರ ಮದುವೆಯ ವಿಷಯದ ಮಾತನಾಡಲು ಹೋದನು. ಸಂಜಯ್ ಯ ತಂದೆ-ತಾಯಿ ಇವನ ಪ್ರೇಮ ಕಥಾ ಮತ್ತು "ಎಸ್ಕೇಪ್" ಕಥಾ ತಿಳಿದು ಸಲ್ಪ "ಶಾಕ್" ಹೊಡೆದರೂ ಮುಂದೆ ಇನ್ನೇನಾದರೂ "ಡೊಡ್ಡ ಕೆಲಸ" ಮಾಡಿಬಿಟ್ಟರೆ ನಮಗೇನು ಗತಿ ಅಂತ ಹೆದರಿ ತನ್ನ ಮಗ ಸುಖವಾಗಿದ್ದರೆ ಸಾಕು ಎಂಬ ಅಸೆಯೊಂದಿಗೆ ಮದುವೆಗೆ ಓಪ್ಪಿದರು. ಅಂತೂ ಆಗಸ್ಟ್ ೧೫ ರಂದು ಸಂಜಯ್ ತನ್ನ "ಬ್ಯಾಚಲರ್" ಡಿಗ್ರಿ ಕಳೆದುಕೊಂಡು "ಮ್ಯಾರೇಜ್" ಎಂಬ "ಮಾಸ್ಟರ್" ಡಿಗ್ರಿ ಪಡೆದ ( ಸಂಸಾರ ಬಂಧನದ ಜೈಲಿಗೆ ಹೋದದ್ದು ಅವನಿಗೆ ಮರೆತುಹೋಯಿತು ಅನಿಸುತ್ತೆ..!).

ಅದರೆ ಅವನ ಮದುವೆಯ ದಿನ ವಾಲಗದವರು ಒಂದು ಹಾಡು ನುಡಿಸಿದ್ದು, ಆ ಹಾಡನ್ನು ಕೇಳಿದ ಸಂಜಯ್ ಗೀತಾಳ ಜೋಡಿಗೆ ಕಾಕತಳೀಯ ಅನಿಸಲಿಲ್ಲವೇನೋ...!! ಎಕೆಂದರೆ ಆ ಹಾಡು:

"ಜೊತೆಯಲಿ, ಜೊತೆ-ಜೊತೆಯಲಿ ಇರುವೆನು ಹೀಗೆ ಎಂದೂ..."

ಆಗಿತ್ತು!!!!
ವಿನಯ್ ...
೧೯೩೪ ರ ಟಾಕಿ ಚಿತ್ರ "ಸತಿ ಸುಲೋಚನ" ಚಿತ್ರದಿಂದ ಪ್ರಾರಂಭವಾದ ನಮ್ಮ ಕನ್ನಡ ಚಿತ್ರರಂಗದ ಪಯಣ ಹಲವು ಏಳು- ಬೀಳುಗಳ ನಡುವೆ ೭೫ ವರ್ಷಗಳ ಮೈಲಿಗಲ್ಲು ದಾಟಿಬಿಟ್ಟಿದೆ. ಅಂದು ಸಿನೆಮಾ ತಂದ ಕುತೂಹಲ, ಇಂದು ಅದ್ಭುತ ತಂತ್ರಜ್ಞಾನದ ಜೊತೆಯೊಂದಿಗೆ ಪ್ರೇಕ್ಷಕರ ಮನ ತಣಿಸುತಿದೆ. ಅದರೆ ಇತ್ತೀಚಿಗಿನ ದಿನಗಳಲ್ಲಿ ನಮಗೆ ಕಾಣುತಿರುವ ದೃಶ್ಯ ನಿಜಕ್ಕೂ ನಮ್ಮಲ್ಲೇ ಒಂದು ಪ್ರಶ್ನೆ ಮೂಡಿಸದೇ ಇರದು, ಅದುವೇ... "ನಮ್ಮ ಕನ್ನಡ ಚಿತ್ರರಂಗ ಎತ್ತ ಸಾಗುತಿದೆ...?"

೧೯೩೪ ರಿಂದ ೫೦ ರ ದಶಕದಲ್ಲಿ ಹಲವು ವಾಕ್ ಚಿತ್ರಗಳು ನಿರ್ಮಾಣಗೊಂಡು ಪ್ರದರ್ಶಿಸಲ್ಪಟ್ಟರೂ, ಚಿತ್ರರಂಗದ ನಿಜವಾದ ಸುವರ್ಣ ಪರ್ವ ಪ್ರಾರಂಭಗೊಂಡಿದ್ದೇ ೧೯೫೦ ರಲ್ಲಿ. ಗುಬ್ಬಿ ವೀರಣ್ಣನವರ ಕಂಪನಿ ಸೇರಿದಂತೆ ಕೆಲವು ಕಂಪನಿಗಳಲ್ಲಿ ತಮ್ಮ ನಾಟಕಗಳಿಂದಲೇ ಹೆಸರು ಪಡೆದಿದ್ದ "ಮುತ್ತುರಾಜ್", ಎಚ್,ಎಲ್.ಎನ್ ಸಿಂಹ ರವರ "ಬೇಡರ ಕಣ್ಣಪ್ಪ" ಚಿತ್ರದ ಮುಖಾಂತರ "ರಾಜ್ ಕುಮಾರ್" ಆಗಿ ಚಿತ್ರರಂಗದಲ್ಲಿ ಕಾಲಿಟ್ಟ ವರ್ಷ ವದು. ಕನ್ನಡದ "ನಟಸಾರ್ವಭೌಮ" ನ ಚಿತ್ರರಸಿಕರ ಹೃದಯ ಸಿಂಹಾಸನರೋಹಣದ ಶುಭ ಕಾಲ.

ನರಸಿಂಹರಾಜು ಮತ್ತು ಜಿ.ವಿ ಐಯ್ಯರ್ ರವರು ಪಾದಾರ್ಪಣೆ ಮಾಡಿದ್ದ ಈ ಸಿನೆಮಾದಲ್ಲಿ ಅಂದು "ಉದ್ದ ಮೂಗಿನ" (ಇದನ್ನು ಎಚ್,ಎಲ್.ಎನ್ ಸಿಂಹ ರವರೇ ರಾಜ್ ರವರನ್ನು ಮೊದಲು ನೋಡಿದಾಗ ಹೇಳಿದ್ದರಂತೆ...!, "ಉಬ್ಬು ಹಲ್ಲು" ಎಂದು ನರಸಿಂಹರಾಜು ಅವರಿಗೆ...!) ಯುವಕ ತನ್ನ ಅಭಿನಯದಿಂದಲೇ ಮುಂದೆ ಎಲ್ಲರ "ಮುತ್ತಿನ ರಾಜ" ನಾಗುವನೆಂಬ ಕನಸು ಸ್ವತ: ಸಿಂಹರವರೇ ಕಂಡಿರಲಿಲ್ಲವೇನೋ...! ಈ ಚಿತ್ರ ಅಂದು ಯಶಸ್ವಿ ಪ್ರದರ್ಶನ ಕಾಣುವುದೊಂದಿಗೆ ನವ "ತಾರೆ" ಯ ಜನನವಾಗಿತ್ತು.

ಮುಂದೆ ಹಲವು ಚಿತ್ರಗಳು ಬಂದಿದ್ದರೂ ನಿರ್ಮಾಣದ ಪ್ರಮಾಣ ಅಷ್ಟು ಏರುಗತಿಯಲ್ಲೂ ಸಹ ಇರಲಿಲ್ಲ... ಕಾರಣ: ನಮ್ಮ ಚಿತ್ರಗಳಿಗೆ ಬಂಡವಾಳ ಹೂಡಿಕೆ, ತಂತ್ರಜ್ಞಾರ ಸಹಾಯ, ನಿರ್ಮಾಣ ಸಲಕರಣೆ ನಮ್ಮ ನಾಡಿನಲ್ಲಿ ಹೆಚ್ಚಾಗಿ ದೊರೆಯದೇ ದೂರದ ಮದರಾಸಿನಲ್ಲಿ (ಈಗಿನ ಚೆನ್ನೈ...) ನಲ್ಲಿ ಚಿತ್ರ ನಿರ್ಮಾಣ ಮಾಡುವಂತಾಯಿತು. ಇದರ ಕಾರಣದಿಂದಲೇ ನಮ್ಮ ಹಲವು ನಟರು ಮತ್ತು ನಿರ್ದೇಶಕರು, ಚಿತ್ರ ಉದ್ಯಮದವರು ಮದರಾಸನ್ನೇ ತಮ್ಮ ವಾಸಸ್ಥಾನವಾಗಿ ಮಾಡಿಕೊಂಡಿದ್ದರು. ಎಲ್ಲಾ "ಮದರಾಸ್" ಅವಲಂಬನೆ ಯಾಗುತ್ತಿದ್ದ ಹೊತ್ತಿನಲ್ಲೇ ಐಯ್ಯರ್, ರಾಜ್ ಮತ್ತು ನರಸಿಂಹರಾಜು ಮುಂತಾದವರು ಇದನ್ನ ಮನಗೊಂಡು ತಮ್ಮ ಸ್ನೇಹಿತರ ಜೊತೆಗೂಡಿ "ರಣಧೀರ ಕಂಠೀರವ" ಚಿತ್ರ ಮಾಡಿ ಅದರಲ್ಲಿ ಯಶಸ್ಸು ಪಡೆದಾಗಲೇ ಕನ್ನಡ ಚಿತ್ರ "ಮದರಾಸ್" ನ ಬಂಧನದಿಂದ ಕಳುಚಿ ಬಂದು ಕಾರುನಾಡಿನಲ್ಲಿ ಸ್ಥಾಪಿತವಾದದ್ದು....

ನಂತರ ಹಲವು ದಶಕಗಳ ಕಾಲ ರಾಜ್ ಕುಮಾರ್ ಕನ್ನದ ಚಿತ್ರರಂಗವನ್ನು ಆಳಿದರೂ, ಇವರ ಜೊತೆ ಉದಯ್ ಕುಮಾರ್, ಕಲ್ಯಾಣ್ ಕುಮಾರ್ ಪಂಡರಿ ಬಾಯಿ, ಲೀಲಾವತಿ, ಸರೋಜದೇವಿ ಹಾಗೂ ಇತರ ನಟ/ನಟಿಯರು ಸಹ ತಮ್ಮ ಚಾಪನ್ನು ಕನ್ನಡ ಚಿತ್ರಜಗತ್ತಿನ ಮೇಲೆ ಮೂಡಿಸಿದರು. ಖಳ ನಟನೆಯಿಂದಲೇ ಪ್ರಸಿದ್ದರಾದ ವಜ್ರಮುನಿ, ತೂಗುದೀಪ ಶ್ರೀನಿವಾಸ್ ಮತ್ತು ದಿನೇಶ್ ರವರು ಸಹ ಇದೇ ಸಮಯದಲ್ಲೇ ಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ್ದರು. ಕನ್ನಡ ಚಿತ್ರ ರಸಿಕರಿಗೂ ಸಹ ಇದರಿಂದ ಹಲವು ಸದಭಿರುಚಿಯ ಚಿತ್ರಗಳು ನೋಡಲು ದೊರೆತವು. ಇವರೆಲ್ಲರ ಜೊತೆ ಕನ್ನದ ಸಿನೆಮದಲ್ಲಿ ತೆರೆಯ ಹಿಂದಿನ ಜನರ ಕೊಡುಗೆ ಸಹ ಬಹಳವಿತ್ತು. ಕು.ರಾ.ಸೀ ಇವರೆಲರಲ್ಲಿ ಮೊದಲಿಗರು. ಅವರು ಉತ್ತಮ ನಿರ್ದೇಶಕರು ಅಲ್ಲದೇ ಉತ್ತಮ ಗೀತೆ ರಚನಕಾರರು, ಚಿತ್ರಕಥೆ ಮತ್ತು ಅದಕ್ಕೆ ಸಂಬಂಧಿಸಿದ್ದ ಹಲವು ಕೆಲಸದಲ್ಲಿ ಎತ್ತಿದ ಕೈ. ಇವರು ಚಿತ್ರಜಗತ್ತಿಗೆ ಹಲವು ಖ್ಯಾತನಮರ ಅಗಮನಕ್ಕೂ ಸಹ ಕಾರಣರಾಗಿದ್ದರು. ಕನ್ನಡ ಚಿತ್ರಗಳಲ್ಲದೇ ದೂರದ ಮಲಯ ಚಿತ್ರ ನಿರ್ದೇಶಿಸಿ ಅಂತರ್ ರಾಷ್ಟ್ರೀಯ ಪ್ರಶಸ್ತಿ ಸಹ ಪಡೆದಿದ್ದರು.

ರಾಜ್ ರವರ ಸದಾಭಿರುಚಿ ಚಿತ್ರಗಳು ೭೦ ರ ದಶಕದ ವರೆಗೂ ಹೆಚ್ಚಾಗಿ ಬರುತ್ತಿರಲು, ಅವರು ಜನರ ಮನದಲ್ಲಿ ಸ್ಥಾಪಿತವಾಗುತ್ತಾ ಹೋದರು. ಈ ನಡುವೆ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಓಬ್ಬರಾದ ಪುಟ್ಟಣ್ಣ ಕಣಗಾಲ್ ಸಂಪತ್ ಕುಮಾರ್ ಮತ್ತು ಅಮರನಾಥ್ ರವರನ್ನು "ವಿಷ್ಣುವರ್ಧನ್" ಮತ್ತು "ಅಂಬರೀಷ್" ಆಗಿ "ನಾಗರಹಾವು" ಚಿತ್ರದಲ್ಲಿ ೧೯೭೨ ರಲ್ಲಿ ಪರಿಚಯಿಸುವುದರೊಂದಿಗೆ ರಾಜ್ ಗೆ ಪ್ರತಿಸ್ಪರ್ಧಿಗಳು ಹುಟ್ಟಿದರು! "ನಾಗರಹಾವು" ವಿನ "ರಾಮಚಾರಿ" ಯ ಪಾತ್ರಕ್ಕೆ ಜನರು ಅಷ್ಟು ಮರುಳಾಗಿದ್ದರೆಂದರೆ ಆ ಚಿತ್ರ ತೆರೆಕಂಡ ಚಿತ್ರಮಂದಿರಗಳಲ್ಲಿ ದಾಖಲೆ ಪ್ರದರ್ಶನವನ್ನೇ ಕಂಡವು. ಅಂದು ಆ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದ ಅಂಬರೀಷ್ ರವರು ಮುಂದೆ "ರೆಬೆಲ್ ಸ್ಟಾರ್" ಆಗಿ ಪ್ರಸಿದ್ಧಿಯಾಗಿದ್ದು ಇತಿಹಾಸ. ಪುಟ್ಟಣ್ಣ ಕಣಗಾಲ್ ರವರು ಇತರ ಪ್ರಸಿದ್ಧ ನಟರಾದ ರಾಮಕೃಷ್ಣ, ಶ್ರೀಧರ್, ಪದ್ಮ ವಾಸಂತಿ ಮುಂತಾದವರನ್ನು ಸಹ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದರು...

೮೦ ರ ದಶಕದ ಮತ್ತೊಂದು ನೆನಪಿಡಬೇಕಾದ ಹೆಸರು ಶಂಕರ್ ನಾಗ್, ಮೂಲತ: ಕನ್ನಡದ ಕರಾವಳಿ ಕ್ಷೇತ್ರದಿಂದ ಬಂದ ಶಂಕರ್ ತಮ್ಮ ವಿದ್ಯಾಭ್ಯಾಸ/ಕಾರ್ಯಕ್ಷೇತ್ರ ಮುಂಬೈ ಮಾಡಿಕೊಂಡಿದ್ದರೂ ನಂತರ ತಮ್ಮ ಅಣ್ಣ ಅನಂತ್ ನಾಗ್ ರವರೊಟ್ಟಿಗೆ ಕನ್ನಡದ ಚಿತ್ರರಂಗದಲ್ಲಿ ನೆನಪಿನಲ್ಲಿಯುಳಿಯುವ ಕಾರ್ಯ ಮಾಡಿದರು. ಅನಂತ್ ನಾಗ್ ಶಂಕರ್ ರವರಿಗಿಂತ ಮೊದಲೇ ಬಹಳ ಪ್ರಸಿದ್ಧಿಯನ್ನು ಪಡೆದಿದ್ದರು. ಶಂಕರ್ ಮುಂಬೈಯಲ್ಲಿ ನಾಟಕವಾಡುತ್ತಿದ್ದಾಗಲೇ ಗಿರೀಶ್ ಕಾರ್ನಾಡರ ಅಹ್ವಾನದಿಂದ "ಒಂದಾನೊಂದು ಕಾಲದಲ್ಲಿ" ಚಿತ್ರದಲ್ಲಿ ನಟಿಸಿ ಮೊದಲ ಯತ್ನದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದು ಸಂಚಲನ ಮೂಡಿಸಿದ್ದರು. ಚಿತ್ರದ ತಾಂತ್ರಿಕತೆಯ ಕಡೆಗೆ ಹೆಚ್ಚು ಗಮನ ಹರಿಸಿದ್ದ ಶಂಕರ್ ಅದನ್ನು ಇನ್ನೂ ಹೆಚ್ಚು ಉತ್ತಮಪಡಿಸಲು "ಸಂಕೇತ್ ಸ್ಟುಡಿಯೋ" ಅನ್ನು ಕರ್ನಾಟಕದಲ್ಲಿ ಪ್ರಾರಂಭಿಸಿದ್ದರು. ಆ ಕಾಲದಲ್ಲಿ ಈ ಸ್ಟುಡಿಯೋ ಬಹಳ ಹೆಸರು ಪಡೆದಿತ್ತು ಸಹ.. ಕೆಲವು ಉತ್ತಮ ಚಿತ್ರಗಳನ್ನು ಕನ್ನಡ ಜನತೆಗೆ ನೀಡಿದ್ದ ಶಂಕರ್ ತಮ್ಮ ಪೂರ್ಣ ಪ್ರಭೆ ಬೀರುವ ಮೊದಲೇ ೧೯೯೦ ರಲ್ಲಿ ನಮ್ಮನೆಲ್ಲ ಬಿಟ್ಟು ಕಲಾದೇವಿಯಲ್ಲಿ ಲೀನವಾಗಿಹೋದರು.

೭೦ ಮತ್ತು ೮೦ ರ ಸಾಲಿನಲ್ಲಿ ಬಂದ ಹಲವು ಚಿತ್ರಗಳು ಗೆಲ್ಲಲು ಸಾಧ್ಯವಾಗಿಸಿದ್ದು ಆ ಚಿತ್ರಗಳ ಮಧುರ ಸಂಗೀತ... ನಾವು ಇಲ್ಲಿ ನೆನೆಯಬೇಕಾಗಿದ್ದು ಚಿತ್ರಬ್ರಹ್ಮ "ಚಿ. ಉದಯಶಂಕರ" ರವರನ್ನು. ಡಾ|| ರಾಜ್ ಚಿತ್ರಗಳ ಬೆನ್ನೆಲುಬು ಆಗಿದ್ದ ಅವರು ಸಂಭಾಷಣೆ ಮಾತ್ರವಲ್ಲದೇ ಹಾಡುಗಳನ್ನು ಸಹ ಬರೆಯುತ್ತಿದ್ದರು. ಅವರ ಹಾಡು ಮತ್ತು ರಾಜನ್-ನಾಗೇಂದ್ರ, ಉಪೇಂದ್ರ ಕುಮಾರ್, ಎಂ. ರಂಗರಾವ್ ಮುಂತಾದ ಹಲವು ಸಂಗೀತಗಾರರ ಬಲದಿಂದ ಕನ್ನಡ ಚಿತ್ರಜಗತ್ತು ಎಂದೂ ಮರೆಯದ ಹಾಡುಗಳನ್ನ ತನ್ನ ಭಂಡಾರದಲ್ಲಿ ಪಡೆದಿದೆ

ಶಂಕರ್ ಬಂದ ಸಮಯದಲೇ ದೇವರಾಜ್, ಜಗ್ಗೇಶ್, ಅವಿನಾಶ್ ರಂತಹ ನಟರು ತಮ್ಮ ಪಾತ್ರಗಳಿಂದ ಗಮನಸೆಳೆದಿದ್ದರು. ಇದರಲ್ಲೂ ರವಿ ಮತ್ತು ಹಂಸಲೇಖರ ಜೋಡಿ "ಪ್ರೇಮ ಲೋಕ" ಮತ್ತು "ರಣಧೀರ" ಮುಂತಾದ ಚಿತ್ರಗಳಿಂದ ಯುವ ಜನರ ಮನಸ್ಸಿಗೆ ಕಿಚ್ಚು ಹಿಡಿಸಿದ್ದರು. ರವಿಯವರ "ಕನಸು" ಮತ್ತು ಹಂಸ್ ರವರ "ಗಾನ" ಕನ್ನಡ ಚಿತ್ರರಂಗದಲ್ಲಿ "ಅದ್ಭುತ ಮಾಯಲೋಕ" ವನ್ನೇ ಸೃಷ್ಠಿ ಮಾಡಿತ್ತು. ಇವರಿಬ್ಬರಲ್ಲದೇ ನಿರ್ದೇಶಕರಾಗಿ ಕಾಲಿಟ್ಟ ರಾಜೇಂದ್ರಸಿಂಗ್ ಬಾಬು, ರಾಜೇಂದ್ರ ಬಾಬು, ನಾಗಭರಣ, ಗಿರೀಶ್ ಕಾಸರವಳ್ಳಿ, ದಿನೇಶ್ ಬಾಬು ಸಹ ಪ್ರಮುಖರು. ಗಿರೀಶ್ ಕಾಸರವಳ್ಳಿ ತಮ್ಮ ವಿಭಿನ್ನ ರೀತಿಯ ಚಿತ್ರಗಳಿಂದ ಪ್ರಸಿದ್ಧರಾದರಲ್ಲದೇ ಹಲವಾರು ರಾಷ್ಟ್ರಪ್ರಶಸ್ತಿಗಳನ್ನು ಸಹ ಪಡೆದರು. ಹಲವು ನವ ನಟರ/ನಟಿಯರ ಅಗಮನಕ್ಕೆ ದಾರಿ ಕೊಟ್ಟ ಈ ದಶಕ "ಕನಸಿನ ರಾಣಿ" ಮಾಲಾಶ್ರೀ ರವರನ್ನು ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರನ್ನು "ನಂಜುಂಡಿ ಕಲ್ಯಾಣ" ಚಿತ್ರದ ಮೂಲಕ ಚಿತ್ರಲೋಕಕ್ಕೆ ಕಾಲಿರಿಸುವಂತೆ ಮಾಡಿದವು.

೮೦ ರ ದಶಕದಲ್ಲಿ ಇನ್ನೊಂದು ಪ್ರಸಿದ್ಧಿಯಾದ ಹೆಸರು ಶಿವರಾಜ್ ಕುಮಾರ್. "ಅನಂದ್" ಚಿತ್ರದಲ್ಲಿ ಸುಧಾ ರಾಣಿ ಯವರೊಂದಿಗೆ ಪದಾರ್ಪಣೆ ಮಾಡಿದ ಶಿವು, ಮುಂದೆ ಅವರ ೨ನೇ ಮತ್ತೆ ೨ನೇ ಚಿತ್ರ ’ರಥಸಪ್ತಮಿ’ ’ಮನ ಮೆಚ್ಚಿದ ಹುಡುಗಿ’ ಬಾಕ್ಸ್ ಆಫೀಸ್ ಗೆಲವು ಕಂಡಾಗ "ಹ್ಯಾಟ್ರಿಕ್ ಹೀರೋ" ಆಗಿಬಿಟ್ಟರು. ತಮ್ಮ ತಂದೆ ಡಾ|| ರಾಜ್ ಅವರ ನೆರಳಿನಲ್ಲಿ ನೆಡೆಯದೆ ತಮ್ಮದೇ ವಿಭಿನ್ನ ಅಭಿನಯ ಕೌಶಲ್ಯದಿಂದ ಅನೇಕ ಅಭಿಮಾನಿಗಳನ್ನು ಇಂದು ಪಡೆದಿದ್ದಾರೆ. ಸುನೀಲ್ ಅವರಂತಹ ನಟರು ಸಹ ಇದೇ ಸಮಯದಲ್ಲಿ ಚಿತ್ರರಂಗಕ್ಕೆ ಅಗಮಿಸಿದ್ದರು. ಭರವಸೆ ಮೂಡಿಸಿದ ನಟರು ಕೂಡ ಅಗಿದ್ದ ಅವರು ನಮ್ಮ ಕನ್ನಡದ ಪ್ರೇಕ್ಷಕರಿಗೆ ತಮ್ಮ ಅಭಿನಯದಿಂದ ಇನ್ನಷ್ಟು ಮೋಡಿ ಮಾಡುವ ಮೊದಲೇ ಶಂಕರ್ ರವರಂತೆ ರಸ್ತೆ ಅಪಘಾತದಲ್ಲಿ ಮೃತಪಟ್ಟು ದೈವಧೀನರಾದರು.

ಈಗಿನ ಪ್ರಸಿದ್ಧ ನಟರು/ನಿರ್ದೇಶಕರು ಆದ ಉಪೇಂದ್ರ ಮತ್ತು ರಮೇಶ್ ಸಹ ಇದೇ ಕಾಲಕ್ಕೆ ಸೇರಿದವರೇ. ತಮ್ಮ ಮ್ಯಾನರಿಸಮ್ ಇಂದ "ಎ" ಮತ್ತು "ಉಪೇಂದ್ರ" ಚಿತ್ರಗಳನ್ನು ಗೆಲ್ಲಿಸಿಕೊಟ್ಟ ಉಪೇಂದ್ರರವರು ಅಭಿಮಾನಿಗಳ ಪಾಲಿಗೆ "ರಿಯಲ್ ಸ್ಟಾರ್" ರಾದರು. ಅವರ "ಓ೦" ಮತ್ತು "ಶ್.." ಸಹ ಭರವಸೆ ಮೂಡಿಸಿದ ಚಿತ್ರಗಳು. ನಟಿಯರಲ್ಲಿ ಭವ್ಯ, ಮಹಲಕ್ಷ್ಮಿ, ತಾರಾ, ವನಿತಾ ವಾಸು, ಪ್ರೇಮಾ ಸಹ ತಮ್ಮ ಅಭಿನಯ ಸಾಮರ್ಥ್ಯ ತೋರಿಸಿದರು. ಇವರೆಲ್ಲರು ನಾಯಕ ನಟರಷ್ಟು ದೀರ್ಘ ಕಾಲ ಚಿತ್ರರಂಗದಲ್ಲಿ ಇರಲು ಸಾಧ್ಯವಾಗಲಿಲ್ಲ.

"ಅರಗಿಣಿ" ಮತ್ತು "ಓ ಮಲ್ಲಿಗೆ" ಚಿತ್ರಗಳಿಂದ ಪ್ರಸಿದ್ಧರಾದ ರಮೇಶ್ ತಮ್ಮ ಅಭಿನಯದಿಂದಲೇ ಪ್ರಸಿದ್ಧರಾಗಿದ್ದರು. "ತ್ಯಾಗರಾಜ" ಬಿರುದೇ ಅದಕ್ಕೆ ಸಾಕ್ಷಿ... ಇವರು ಮುಂದೆ "ಆಕ್ಸಿಡೆಂಟ್" ಮತ್ತು ಹಲವು ಚಿತ್ರಗಳನ್ನು ಸಹ ನಿರ್ದೇಶಿಸಿದರು.

ಡಾ|| ರಾಜ್ ಕುಟುಂಬದಲ್ಲಿ ಮೂರನೆಯವರಾಗಿ ಚಿತ್ರೋದ್ಯಮಕ್ಕೆ ಕಾಲಿಟ್ಟವರೇ ಅಪ್ಪು -- ಪುನೀತ್ ರಾಜ್ ಕುಮಾರ್. ತಮ್ಮ "ಅಪ್ಪು" ಚಿತ್ರದಿಂದ ಎಲ್ಲರ ಹೃದಯ ಗೆದ್ದ ಅಪ್ಪು ರವರು ಈಗಲೂ ಬಹುಬೇಡಿಕೆಯ ನಟ.

ತೂಗುದೀಪ ಶ್ರೀನಿವಾಸ್ ರವರ ಪುತ್ರರಾದ ದರ್ಶನ್ ಕಿರುತರೆ ಮತ್ತು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳನ್ನು ನಿರ್ವಹಿಸಿ "ಮೆಜೆಸ್ಟಿಕ್" ಚಿತ್ರದಿಂದ ಜನಪ್ರಿಯರಾದರು. "ಕರಿಯ" ಚಿತ್ರ ಅವರನ್ನು ಅಭಿಮಾನಿಗಳಿಗೆ "ಚಾಲೆಂಜಿಂಗ್ ಸ್ಟಾರ್" ಮಾಡಿಸಿತು. ಇಂದೂ ಸಹ ಅವರ ಅಕ್ಷನ್ ಚಿತ್ರಗಳೆಂದರೆ ಅಭಿಮಾನಿಗಳಿಗೆ ಪಂಚಪ್ರಾಣ. ಹಲವು ನಟರ/ನಟಿಯರ ಮಕ್ಕಳು ಚಿತ್ರರಂಗಕ್ಕೆ ಬಂದರೂ ದರ್ಶನ್ ಅವರಷ್ಟು ಜನಪ್ರಿಯ ಅವರಾಗಲಿಲ್ಲ.

೯೫ ರ ನಂತರದ ಸಮಯದಲ್ಲಿ ನಮ್ಮ ಚಿತ್ರರಂಗ ಕೆಳಮುಖದ ಹಾದಿ ಹಿಡಿ ಹಿಡಿಯಿತು. ಚಿ. ಉದಯಶಂಕರರ ಅಕಾಲಿಕ ಸಾವು, ಹಲವು ಪ್ರಸಿದ್ಧರನ್ನ ಕಳೆದುಕೊಂಡ ನಮ್ಮ ಕನ್ನಡ ಚಿತ್ರರಂಗ ಬಡವಾಗತೊಡಗಿತು. "ಸಂತೆ ಗೆ ಮೂರು ಮಾರು" ನೇಯುವ ಕೆಲಸವು ಸಹ ಇಲ್ಲಿಂದಲೇ ಪ್ರಾರಂಭವಾಯಿತು. ಹಲವು ಟೇಕ್ ಗಳ ನಿರಂತರ ಪ್ರಯತ್ನದಿಂದ ಅಂದು ಒಂದು ಹಾಡು ಸಿದ್ದವಾಗುತ್ತಿದ್ದ ಆ ಸಮಯ ಹೋಗಿ "ಬಿಟ್ ಬೈ ಬಿಟ್" ಕಾರ್ಯ ಪ್ರಾರಂಭವಾಯಿತು. ದಿನಕ್ಕೊಂದು ಸಂಗೀತ/ ಚಿತ್ರ ನಿರ್ದೇಶಕರು ಬರತೊಡಗಿದರು. "ಇತರ ಮೂಲಗಳ" ಹಣ ಹರಿದು ಬಂದು ಎಲ್ಲಾ ಜನರು "ನಿರ್ಮಾಪಕರು" ರಾಗತೊಡಗಿದರು. ಅವರ ಮಕ್ಕಳು ಮತ್ತು ಹತ್ತಿರದ ಸಂಬಂಧಿಗಳು ಚಿತ್ರದ ಪ್ರಮುಖ ಪಾತ್ರ ಮಾಡತೊಡಗಿದರು. ಕೆಲವರು ಕೇವಲ ಪ್ರಚಾರಕ್ಕೆ ಮಾತ್ರ ಚಿತ್ರ ಮುಹೂರ್ತ ಮಾಡಿಸಿ ಅಮೇಲೆ "ಸುದ್ಧಿ" ಇಲ್ಲದೇ ಹೋಗುತ್ತಿದ್ದರು. "ನಮ್ಮ ಚಿತ್ರ ವಿಭಿನ್ನ ಕಥೆ ಹೊಂದಿದೆ" ಅಂತ ಹೇಳಿದ ಹಲವು ಚಿತ್ರಗಳು ಟೇಟರಿಗೆ ಬಂದ ಒಂದು ವಾರದ ಒಳಗೆ "ಮಾಯವಾಗತೊಡಗಿತು". ೬೦ ರ ದಶಕದಿಂದ ೮೦ ರ ಕೊನೆವರೆಗೂ ಹಲವು ಕಾದಂಬರಿ ಅಧಾರಿತ ಚಿತ್ರಗಳು ಬಂದರೂ ನಂತರ "ಒಳ್ಳೆ ಕಥೆ" ಸಿಗಲಿಲ್ಲ ಎಂಬ ಕಾರಣಕ್ಕೆ ನಮ್ಮ ಚಿತ್ರ "ಪಂಡಿತರು" -- ಪಕ್ಕದ "ಮನೆಯ" "ಕದ್ದ ಸರಕು" ಗಳನ್ನು ಬಳಸತೊಡಗಿದರು... ಹೆಸರಿಗೆ ಕೆಲವು "ಹಿಟ್" ಆಯಿತಾದರೂ, ಬಹುತೇಕ ಚಿತ್ರಗಳು "ಮಣ್ಣು" ಮುಕ್ಕಿದ್ದೇ ಆಯಿತು ಅಷ್ಟೆ...!

ಪರಭಾಷ ನಟಿಯರ "ಆಮದು" ಕಾರ್ಯ "ನಮ್ಮ ನಾಡಿನಲ್ಲಿ ಪಾತ್ರಕ್ಕೆ ಸೂಟ್ ಆಗೋ ನಾಯಕಿ ಸಿಗ್ತಾ ಇಲ್ಲ" ಎಂಬ "ಪಿಳ್ಳೆ ನೆವ" ಇಂದ ಹೆಚ್ಚತೊಡಗಿತು. ಅವರಿಗೋ ನಮ್ಮ ಭಾಷೆ ಬರದು, ಯಾರೋ ಹೇಳಿದಂತೆ "ಉಲಿಯುವ" ಅವರು ನಮ್ಮ ಚಿತ್ರಗಳಿಗೆ ಎನು ತಾನೇ ಮಾಡಬಲ್ಲರು..? ಅಂತೂ ಈ "ಘನ ಕಾರ್ಯ" ದಿಂದ ನಮ್ಮ ನಾಡಿನ ನಟಿಯರು ಮೂಲೆಗುಂಪಾಗದೇ ಮತ್ತೇನು ಮಾಡಿಯಾರು!

ಕೇವಲ ಹಣದ "ವ್ಯಾಪಾರಕ್ಕೆ" ಬಂದಂತಿರುವ ಈ ಜನ ನಮ್ಮ ಚಿತ್ರ ರಂಗಕ್ಕೆ ಏನು ಕೊಡುವರೋ ಗೊತ್ತಿಲ್ಲ. ಅಂತು ಸರಕು "ಸುತ್ತಿ-ಸುತ್ತಿ" ಹಾಕುವ "ಚಾಳಿ" ಯಿಂದ ನಮ್ಮ ಕನ್ನಡ ಚಿತ್ರಕ್ಕೆ ಭಾರಿ ನಷ್ಟವಾಗುತ್ತಿರುವುದು ಮಾತ್ರ ಕಂಡಿತ. ಕೆಲವನ್ನು ಬಿಟ್ಟರೆ ( ಮುಂಗಾರು ಮಳೆ, ದುನಿಯಾ ಮತ್ತು ಇತ್ತೀಚಿಗಿನ "ಮನಸಾರೆ"...) ಇತರ ಚಿತ್ರಗಳು ತಾವು ಸೋಲುವುದಲ್ಲದೇ ತಮ್ಮ ಕೆಟ್ಟ ಕಥಾ ಸರಕಿನಿಂದ ಪ್ರೇಕ್ಷಕರು ಮತ್ತೆ ಚಿತ್ರಮಂದಿರದ ಹತ್ತಿರ ಸುಳಿಯದಂತೆ ಮಾಡುತ್ತಿವೆ.

ಹಾಗೇ ನಟರ ಸಂಭಾವನೆ, ನಿರ್ಮಾಪಕ-ಪ್ರದರ್ಶಕರ ನಡುವಿನ "ಒಳ ಕಿತ್ತಾಟ", ನಟರ ನಡುವಿನ "ವೈಮನಸ್ಸು" ನಮ್ಮ ಚಿತ್ರರಂಗದ ಬೇರುಗಳನ್ನು ಗೆದ್ದಲ ಹುಳುಗಳಂತೆ ಕೊರೆಯತೊಡಗಿವೆ. ಅದರಿಂದ ನಮ್ಮ ಭವ್ಯ ಇತಿಹಾಸದ ಕನ್ನಡ ಚಿತ್ರರಂಗದ ತಳಪಾಯ ಅಲುಗಾಡತೊಡಗಿದೆ. ನಮ್ಮ ನೆರೆರಾಜ್ಯದಲ್ಲಿ ಮಾಡುವ ಸದಾಭಿರುಚಿಯ ಚಿತ್ರಗಳು ಇಲ್ಲಿ ಕಮ್ಮಿಯಾಗುತ್ತಾ ಹೋಗುತ್ತಿವೆ. ಹೀಗೆ ಆದರೆ ಬಹುಶ್: ನಮ್ಮ ಮುಂದಿನ ಪೀಳಿಗೆಗೆ ಕೇವಲ ಹಳೆಯ ಚಿತ್ರಗಳನ್ನೇ ನೋಡಿಸಿ ನಾವೆಲ್ಲರು ಸಂತೋಷಪಡಬೇಕೇನೋ..?
ವಿನಯ್ ...
ಅಂತೂ " ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ..." ಅನ್ನುವ ನುಡಿಯಂತೆ ನಮ್ಮ ಬಿ.ಜೆ.ಪಿ ಸರ್ಕಾರದ "ಅಂತರಿಕ ಜಗಳ..." "ದಿಲ್ಲಿಗೆ ಹೋಗಿ ಗಣಿದೊರೆಗಳ ಜೊತೆ ರಾಜಿಯಾಗುವ ತನಕ..." ಎಂಬಂತಾಗಿದೆ...! ಸರಿ ಸುಮಾರು ಕೆಲವು ವಾರಗಳ ವರೆಗೆ ನೆಡೆದ "ಅಂತರಿಕ ಯುದ್ಧ" ಅಂತೂ ಅಡ್ವಾಣಿಯರ ಹುಟ್ಟುಹಬ್ಬದ ದಿನ ಸಮಾಪ್ತಿಗೊಂಡಿದ್ದು ( ನಮಗೆ ಕಾಣಿಸುವಂತೆ...!) ಪಾಪ ಅಡ್ವಾಣಿ ಯವರಿಗೆ "ಅಮೃತ" ಕುಡಿದಷ್ಟೇ ಸಂತೋಷವಾಗಿರಬಹುದು...! ಬಹಳ ದಿನ ನಮ್ಮ ರಾಜ್ಯದ ಮು.ಮ ಮತ್ತು ಬಿ.ಜೆ.ಪಿ ಯ ಅಧ್ಯಕ್ಷರು/ಹಿರಿಯ ನಾಯಕರು ತಮ್ಮ ತಲೆ ಕೆರೆದು-ಕೆರೆದು...(ಮುಂಗಾರು ಮಳೆಯ ಗಣೇಶ್ ಹೇಳಿದಂತೆ ಅದು ಹುಣ್ಣಾಗಿ ಮತ್ತೇನೋ ಅಗಲಿಲ್ಲ... ಅವರ ಪುಣ್ಯ...!) ಎಲ್ಲಿ ಕಮಲ ಗಣಿಯ ಆಳದಲ್ಲಿ ಹುದುಗಿಹೋಗುವುದೋ ಎಂಬ ಭಯ ತಾತ್ಕಲಿಕವಾಗಿ ಸಲ್ಪ ಕಮ್ಮಿಯಾಗಿದೆ ಎನಿಸಿ ಸರ್ವ ಬಿ.ಜೆ.ಪಿ "ಬಂಧು" ಗಳು ಮಾಧ್ಯಮದವರ ಮುಂದೆ ಕೇಕ್ ಸವಿಯುವದೊಂದಿಗೆ ( ಅದರಲ್ಲಿ ಮೊಟ್ಟೆ ಇತ್ತೋ, ಅಥವಾ ಪ್ಯೂರ್ ವೆಜಿಟೇರ್ಯನ್ ಕೇಕೊ ನನಗಂತೂ ಗೊತ್ತಿಲ್ಲ ಪ... ) ಮುಕ್ತಾಯಗೊಳಿಸಿದರು...!

ಪರಸ್ಪರ ಕೈ ಮೇಲೆತ್ತಿ ಹಿಡಿದು "ಹಮ್ ಸಾತ್ ಸಾತ್ ಹೇ.." (ಅಲ್ಲಿ ಕೇವಲ ೪-೫ ಜನ ಇದ್ದರಷ್ಟೇ...!) ಎಂದು ಮುಗುಳ್ನಕ್ಕರು.... ನಮ್ಮ ಮು.ಮ ಅವರ ಮುಖದ ಮೇಲಿನ ನಗು ನೋಡಿ ಬಿ.ಜೆ.ಪಿ ಯ ನಿಷ್ಟಾವಂತ ಜನರಿಗಿಂತ ನಮ್ಮ ಬಡಪಾಯಿ ಕರುನಾಡು ಜನರು ತುಂಬ ಸಂತಸಪಟ್ಟಿರುವರು ಎಂದು ನನ್ನ ಅನಿಸಿಕೆ...! ಏಕೆಂದರೆ ಕೆಲವು ದಿನಗಳಿಂದ ತೀರ್ಥಕ್ಷೇತ್ರಗಳಿಗೆ ತೆರಳಿ, ಎಲ್ಲಾ ದೇವರನ್ನು "ನನ್ನನ್ನು ಕಾಪಾಡಪ್ಪ" ಎಂದು ಬೇಡಿ, ಇತ್ತ ಮಾಧ್ಯಮದವರ ಮುಂದೆ ಕಣ್ಣಲ್ಲಿ ನೀರು ತರಿಸಿಕೊಂಡು ತಮ್ಮ ದುರ್ದಿನಗಳ ಬಗ್ಗೆ ನೆನೆದು ದುಖಿ:ಸುತ್ತಿದ್ದಾಗ ಅಂತೂ ೭ನೇ ತಾರೀಕಿನ ಭಾನುವಾರ ( ಅದರಲ್ಲೂ ಬಿ.ಜೆ.ಪಿ ಯ ಹಿರಿಯ ನಾಯಕನ ಜನ್ಮದಿನದಂದು...) ಅವರಿಗೆ "ಶುಭ ಭಾನುವಾರ" ವಾಗಿ ಪರಿಗಮಿಸಿದ್ದು ಎನೋ ನಮ್ಮ ಮು.ಮ ಅವರು ಇಂದಿನ ಜನ್ಮದಲ್ಲಿ ( ಸಾರಿ, ಹಿಂದಿನ ಜನ್ಮದಲ್ಲಿ...) ಮಾಡಿದ ಯಾವುದೋ ಸತ್ಕಾರ್ಯದ ಫಲವಿರಬಹುದು...! ಹಾಗೇ ನಮ್ಮ ಬಡಪಾಯಿ ಕನ್ನಡಿಗರು ತಮ್ಮ ಯಾವುದೋ ಪುಣ್ಯದ ಫಲದ ಮಹಿಮೆಯಿಂದಲೇನೋ ಮತ್ತೊಮ್ಮೆ ಮತಗಟ್ಟೆಯ ಮುಂದೆ ನಿಂತು ವೋಟ್ ಹಾಕುವ ದುರ್ದಶೆ ಕಳೆದುಕೊಂಡರು...! ರಾಜ್ಯ ಸರ್ಕಾರದ ಬೊಕ್ಕಸವಂತೂ "ಅಯ್ಯೋ ನಾ ಉಳಿದೆ ಮಹದೇವಾ..." ಅಂತ ತನ್ನ ಇಷ್ಟದೇವರಲ್ಲಿ ಮೊರೆಇಟ್ಟಿರಬಹುದು... ನಮ್ಮ ಚುನಾವಣಾ ಕಾರ್ಯಕರ್ತಂತೂ "ಉಸ್ಸಪ್ಪ... ನಾವು ಬದುಕಿದೆವೋ..!" ಅಂತ ನಿಟ್ಟುಸಿರು ಬಿಟ್ಟಿರಬಹುದು...! ಪುಡಾರಿಗಳಂತೂ " ಅಯ್ಯೋ, ಹೋಯ್ತಲ್ಲಯ್ಯ ತಿನ್ನುವ ಚಾನ್ಸ್.." ಅಂತ ಸಿಕ್ಕಪಟ್ಟೆ ಮನದಲ್ಲೇ ಕೊರಗಿರಬಹುದು...!!!

ಅಂತೂ ಬಹಳ "ತಂತ್ರ" - "ಪ್ರತಿತಂತ್ರ" ಗಳ ನಡುವೆ ಸೊರಗಿ ಸಣ್ಣಗಾಗಿರುವ ನಮ್ಮ ಮು.ಮ "ಈಗಿನಿಂದ ನಾವೆಲ್ಲರು ಅಣ್ಣ-ತಮ್ಮಂದಿರಂತೆ ಪಕ್ಷಕ್ಕಾಗಿ ದುಡಿಯುತ್ತೇವೆ" ಅಂತ ಸಾರಲು... ಏಕೋ ಮನದಲ್ಲಿ ಡವ ಡವ...! ಎಕೆಂದರೆ ಎಲ್ಲಿ "ಗಣಿ" ಸ್ಪೋಟ ಸಂಭವಿಸಿ "ಕಮಲ" ಅದರ "ಧೂಳಿ" ನಲ್ಲಿ ಎಲ್ಲಿ ನಲುಗಿಹೋಗಬಹುದೋ ಎಂಬ ಭಯ ನಮ್ಮ ಬಡಪಾಯಿ ಮತಗಾರನನ್ನ ಕಾಡದೆ ಇರುವುದಿಲ್ಲವೇನೋ??? ಎಕೆಂದರೆ ಆ "ಹಮ್ ಸಾತ್ ಸಾತ್ ಹೇ.." ಯ ದೃಶ್ಯವಳಿಯಲ್ಲಿ ಕೆಲವು "ಅತೃಪ್ತ ಮುಖಗಳು" ಕಾಣಿಸಿಕೊಂಡಿದಕ್ಕೆ ಸಾಕ್ಷಿ... ಎಲ್ಲಿ ಆ "ಅತೃಪ್ತ ಮುಖಗಳು" ಮತ್ತೊಂದು ದಿನ ತಮ್ಮ "ದುಂಡಿನೊಡಿಗೆ" ಮತ್ತೆ "ದಿಲ್ಲಿ ಚಲೋ" ಕಾರ್ಯಕ್ರಮ ಶುರುವಚ್ಚಿಕೊಳ್ಳುವರೋ ಆ ದೇವರೇ ಬಲ್ಲ...!

ಭಾರಿ "ಚಿದಂಬರ ರಹಸ್ಯ" ವಾಗಿ ಉಳಿದ "ಆತೃಪ್ತರ" ಓಲೈಸುವ ಕಾರ್ಯ ಏನ್ನೆಲ್ಲಾ ಸ್ವಾಹ: ಮಾಡಿದೆಯೋ ಅದು ಮುಂದಿನ ದಿನಗಳಲ್ಲೇ ಗೊತ್ತಾಗಬೇಕು... ( ಕೆಲವು ಬಂಡಾಯ ಶಾಸಕರಿಗೆ "ಮಂತ್ರಿಗಿರಿಯ" ಕನಸು ಇಷ್ಟರಲ್ಲೇ ಬೀಳಲೂ ಶುರುವಾಗಿರಬಹುದು...!) "ನಾವು ರಾಜ್ಯದ ಜನರಲ್ಲಿ ಕ್ಷಮೆ ಬೇಡುತ್ತೇವೆ.. ನಮ್ಮಿಂದಾದ ತಪ್ಪನ್ನು ಮನ್ನಿಸಿ, ನಾವು ಈಗ ನೆರೆಸಂತ್ರಸ್ತ ಜನರ ನೋವು ಅರಿತು ಅವರಿಗೆ ಸಹಾಯವಿಡಬೇಕು" ಅಂತ ನಮ್ಮ ಮು.ಮ ಅವರು ಹೇಳುತ್ತಿದ್ದಾಗ ಬಹುಶ: ಇದನ್ನು ನಮ್ಮ ನೆರೆಸಂತ್ರಸ್ತ ಜನರು ಟಿ.ವಿ ಯಲ್ಲಿ ನೋಡಿದ್ದರೆ (ಸದ್ಯಕ್ಕೆ ಅವರ ಮನೆ-ಮಠ ಕಳೆದುಕೊಂಡು ತೊಂದರೆಯಲ್ಲಿ ಇರುವಾಗ ಟಿ.ವಿ ನೋಡಿ ಇನ್ನೂ ಮಂಡೆ ಬಿಸಿ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಬಿಡಿ..!) ಇವರು ನಮ್ಮ ಮನೆ ಉದ್ದರಿಸುವುದಕ್ಕಿಂತ ತಮ್ಮ "ಮನೆ" ಯನ್ನು ಉದ್ದರಿಸಿಕೊಳ್ಳುವುದೇ ಒಳಿತು ಎಂದು ಮನದಲ್ಲೇ ಅಂದುಕೊಂಡು ನಿಟ್ಟುಸಿರುಬಿಡಬಹುದು...!

ಕಮಲ ಇಂತಹ ಸಂದರ್ಭದಲ್ಲೇ ಈ ರೀತಿ ನಲುಗಲ್ಪಟ್ಟರೆ ಪಾಪ ತಮ್ಮನ್ನು ವಿಧಾನ ಸಭೆಗೆ ಅರಿಸಿದ ಜನ ಮುಂದೆ ಕರ್ನಾಟಕದಲ್ಲಿ "ಅರಳಲು" ಬಿಡುವರೇ...?, ನಮ್ಮ ಮು.ಮ ಸಲ್ಪ ಮತದಾರರ ಮೇಲೆ ಕರುಣೆ ಇಟ್ಟು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ತ್ವರಿತ ರೀತಿಯಲ್ಲಿ ಮಾಡಿದರೆ ಜನರು ಖುಷ್... ಎಲ್ಲರೂ ಖುಷ್....
ವಿನಯ್ ...
ನೆನ್ನೆ ( 21 ಅಕ್ಟೋಬರ್ 2009) ೨೪ ಗಂಟೆ ನಿರಂತರ ಪ್ರಸಾರವಾಗುವ ಸುದ್ಧಿ ಚಾನಲೊಂದನ್ನು ವೀಕ್ಷಿಸುತ್ತಿದ್ದಾಗ ಟಿ.ವಿ ಸುದ್ಧಿ ಸ್ಕ್ರೊಲ್ ನಲ್ಲಿ "ಭಗ್ನ ಪ್ರೇಮಿಗಳ ದಿನ.." ಅಂತ ಸುದ್ಧಿ ಸಾಲು ಕಾಣಿಸಿಕೊಳ್ಳಲು, ಕುತೂಹಲಗೊಂಡ ನಾನು ಚಾತಕ ಪಕ್ಷಿಯಂತೆ ಆ ಸುದ್ಧಿಗಾಗಿ ಕೆಲ ಹೊತ್ತು ಕಾದು ನೋಡಿ, ಕೊನೆಗೂ ನನ್ನ ಕಾಯುವಿಕೆ ಕೊನೆಗೊಂಡು ಆ ಟಿ.ವಿ ವಾಚಕ ಕೊಟ್ಟ (ಓದಿದ) ಮಾಹಿತಿಯೇ ಈ ಕೆಳಗಿನ ಕಿರು ಲೇಖನ...

....................

ಬನ್ನೇರುಘಟ್ಟದ ಪಾಲಿಟೆಕ್ನಿಕ್ ಕಾಲೇಜೊಂದರ ವಿದ್ಯಾರ್ಥಿಗಳು ಅಚರಿಸಿದ ಈ "ಭಗ್ನ ಪ್ರೇಮಿಗಳ" ದಿನ ಪ್ರಾರಂಭವಾದದ್ದೇ ಅವರದೇ ಒಬ್ಬ ಸ್ನೇಹಿತನಿಂದ ವಂತೆ. ಅವನು ಯಾರೋ ಒಬ್ಬಳನ್ನು ಪ್ರೀತಿಸಿ... ಅವಳು ಕೈಕೊಟ್ಟು... ಅವನಿಗೆ ಅದು ತಿಳಿದು... ಅವನ ಹೃದಯ ಭಗ್ನವಾಗಿ... ಈ ವಿಷಯವನ್ನು ಅವನ ಮಿತ್ರರಿಗೆ ಹೇಳಿದಾಗ ಅವರು ಈ ದಿನವೇ ನಿನಗೆ ಜೀವನದ ಹೊಸ ದಿನ ( ಅಂದರೆ 21 ಅಕ್ಟೋಬರ್...) ಎಂದು ಪಾರ್ಟಿ ಕೊಟ್ಟು ಪ್ರೇಮ ವೈಫಲ್ಯವನ್ನು ಆಚರಿಸಿದರಂತೆ. ಅಂದಿನಿಂದ ಎಲ್ಲಾ ವರ್ಷ ಅಕ್ಟೋಬರ್ 21 ರಂದು ಅವರಿಗೆ ( ಅಂದರೆ ಪ್ರೇಮ ಭಗ್ನಗೊಂಡವರಿಗೆ...! ) " ಭಗ್ನ ಪ್ರೇಮಿಗಳ ದಿನ "!!

ಆ ಸುದ್ಧಿಯಲ್ಲೇ ತೋರಿಸಿದಂತೆ ಅವರೊಂದು ಡೊಡ್ಡ ಕೇಕ್ ಕತ್ತರಿಸಿ, ಎಲ್ಲರಿಗೂ ಹಂಚಿ (ಕೊನೆಗೆ ಉಳಿದ ಚೂರುಗಳನ್ನು ಮುಖಕ್ಕೆ ಬಳಿದು...!. ಟಿ.ವಿ ಯಲ್ಲಿ ನೋಡಿದಂತೆ ಅವರದೇ ಒಂದು ಡೊಡ್ಡ ಸಂಘ ಇತ್ತು ಅನ್ನಿ! ) ನಂತರ ಒಬ್ಬೊಬ್ಬ ಯುವಕನು ಟಿ.ವಿ ಯ ಪ್ರತಿನಿಧಿಗೆ " ಓದುವ ಸಮಯದಲ್ಲಿ ಪ್ರೀತಿ ಮಾಡಬೇಡಿ, ಅದನ್ನು ನಂಬಿ ಹಾಳಾಗಬೇಡಿ..." "ಪ್ರೀತಿಯಿಂದ ನಿಮ್ಮ ಜೀವನದ ಅಮೂಲ್ಯ ಸಮಯ ವ್ಯರ್ಥಮಾಡಿಕೊಳ್ಳಬೇಡಿ.." ಅಂತ ತನ್ನದೇ ಧಾಟಿಯಲ್ಲಿ ಹೇಳುತ್ತಿದ್ದಾಗ ನಿಜಕ್ಕೂ ಸೋಜಿಗ ಅನಿಸಿದ್ದು ಅವರು ಇದನ್ನ ಮೊದಲೇ ಯೋಚಿಸಬಾರದಿತ್ತೇ ಎಂದು...?. ಅವರ ಮುಖದ ಮೇಲಿದ್ದ ಕುರುಚಲು ಗಡ್ಡ, ಪಟಾಕಿ ಹೊಡೆದು ಸಂಭ್ರಮಿಸಿದ ಪರಿ, ಪರಸ್ಪರ ಸಿಹಿ ಹಂಚುತ್ತಿದ್ದಾಗ ಇದ್ದ ಉತ್ಸಾಹ ಪ್ರೀತಿ ಮಾಡುವ ಮೊದಲು ಇದ್ದಿದ್ದರೆ ಬಹುಶ: ಈ ದಿನ ಅವರು ಅಚರಿಸುವ ಅಗತ್ಯವೇ ಬರುತ್ತಿರಲಿಲ್ಲವೇನೋ...!

ಸುಮ್ಮನೆ ಕನಸುಗಳನ್ನು ಹೊತ್ತು (!?!) ಪ್ರೀತಿಯೆಂಬ ಕಾಣದ ಮಾಯಾಜಿಂಕೆಯ ಹಿಂದೆ ಓಡುವ ನಮ್ಮ ಯುವಕರು ನಂತರ ಪ್ರೇಮ ವೈಫಲ್ಯದಲ್ಲಿ ಸಿಲುಕಿ ನೊಂದು, ಬೆಂದು, ಜೀವನವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಸಲ್ಪ ಯೋಚಿಸಿ ಹೆಜ್ಜೆ ಇಡುವುದು ಒಳಿತಲ್ಲವೇ...?